ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಕ್ಷಿತ್.ಜಿ.ಎನ್ ಪ್ರಾಯ 29 ವರ್ಷ, ತಂದೆ: ನೀಲಪ್ಪ ಗೌಡ, ವಾಸ: 2-164, ಗಜ್ಜಲ್ಮೆ ಮನೆ, ಚಾರ್ವಾಕ ಗ್ರಾಮ ಮತ್ತು ಅಂಚೆ, ಕಡಬ ಎಂಬವರ ದೂರಿನಂತೆ ದಿನಾಂಕ 06-12-2021 ರಂದು 18-00 ಗಂಟೆಗೆ ಆರೋಪಿ ಕಾರು ಚಾಲಕ ರಾಜೇಶ ಎಂಬವರು KA-03-MB-0737 ನೇ ನೋಂದಣಿ ನಂಬ್ರದ ಓಮ್ನಿ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಣಿ ಕಡೆಯಿಂದ ಮೈಸೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ತೆಂಕಿಲ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ರಕ್ಷಿತ್ ಜಿ ಎನ್ ಎಂಬವರು ಪುತ್ತೂರು ಪೇಟೆ ಕಡೆಯಿಂದ ತೆಂಕಿಲ ಕಡೆಗೆ ಚಲಾಯಿಸಿಕೊಂಡು ಹೋಗಿ ತೆಂಕಿಲ ಎಂಬಲ್ಲಿ ಹೆದ್ದಾರಿಗೆ ಸೇರಿ ಬಪ್ಪಳಿಗೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EB-3237 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ ಗುದ್ದಿದ ಒಳನೋವಿರುವ ಗಾಯ, ಬಲದವಡೆಗೆ ಗುದ್ದಿದ ಒಳನೋವಿರುವ ಗಾಯ, ಎಡಮೊಣ ಕೈ ಗಂಟಿಗೆ ಮತ್ತು ಬಲಪಾದದಲ್ಲಿ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  150/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

ಹಲ್ಲೆ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೀತಾರಾಮ ಬಿ, (58) ತಂದೆ: ದಿ, ಕೃಷ್ಣಪ್ಪ ಗೌಡ ವಾಸ: ಬಲ್ಕಾಡಿ ಮನೆ, ಮರ್ಕಂಜ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 06.12.2021 ರಂದು ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಬಲ್ಕಾಡಿ ಎಂಬಲ್ಲಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸಮಾರು 17:45 ಗಂಟೆಗೆ ಅಪಾಧಿತ ಪಿರ್ಯಾದುದಾರರ ಅಣ್ಣನ ಮಗ ಶ್ರೀನಿವಾಸ ಎಂಬಾತನು ಆತನ  ಬಾಬ್ತು ಜಾಗದಲ್ಲಿ ಮಾವಿನ ಗಿಡವನ್ನು ನೆಡುತ್ತ  ಕ್ಷುಲ್ಲಕ ಕಾರಣಕ್ಕೆ ಪಿರ್ಯಾದುದಾರರನ್ನು ಉದ್ದೇಶೀಸಿ ಅವ್ಯಾಚವಾಗಿ ಬೈಯುತ್ತಿರುವ ಸಮಯ ಪಿರ್ಯಾದುದಾರರು ನನ್ನನ್ನು ಏಕೆ ಬೈಯುತ್ತಿಯಾ ಎಂದು ಹೇಳಿದಾಗ  ಇಬ್ಬರಲ್ಲಿ ಮಾತಿನ ಚಕಮಕಿ ಆಗುತ್ತಿರುವ ಸಮಯ ಆತನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದುದಾರರ ಕಡೆಗೆ ಬೀಸಿದಾಗ ಕತ್ತಿಯು ಪಿರ್ಯಾದುದಾರರು ಭುಜಕ್ಕೆ ತಾಗಿ ರಕ್ತಗಾಯವಾಗಿರುವುದಾಗಿ ನಂತರ ಪಿರ್ಯಾದುದಾರರ ತಮ್ಮ ಧನಂಜಯ ಎಂಬವರ ಜೀಪಿನಲ್ಲಿ  ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಬಂದಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 95/2021 ಕಲಂ: 504.324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀನಿವಾಸ (45) ತಂದೆ: ದಿ,ಚಕ್ರಪಾಣಿ ವಾಸ: ಬಲ್ಕಾಡಿ ಮನೆ, ಮರ್ಕಂಜ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 06.12.2021 ರಂದು ತಮ್ಮ ಮನೆಯಾದ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಬಲ್ಕಾಡಿ ಎಂಬಲ್ಲಿ ತಮ್ಮ ಬಾಬ್ತು ಜಾಗದಲ್ಲಿ ಮಾವಿನ ಗಿಡಗಳನ್ನು ನೆಡುತ್ತಿರುವ ಸಮಯ ಸಮಾರು 17:45 ಗಂಟೆಗೆ ಆಪಾಧಿತ ಪಿರ್ಯಾದುದಾರರ ಚಿಕ್ಕಪ್ಪ ಸೀತಾರಾಮ ಗೌಡ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಪಿರ್ಯಾದುದಾರರನ್ನು ಉದ್ದೇಶೀಸಿ ನನ್ನನ್ನು ಏಕೆ ಬೈಯುತ್ತಿಯಾ ಎಂದು ಹೇಳಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳುತ್ತ ಆತನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದುದಾರರ ಕಡೆಗೆ ಬೀಸಿದಾಗ ಪಿರ್ಯಾದುದಾರರು ಕತ್ತಿಯನ್ನು ಹಿಡಿದುಕೊಂಡು ಎಳೆದಿದ್ದು, ಇದ್ದರಿಂದ ಕೋಪಗೊಂಡ ಸೀತಾರಾಮ ಪಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಅಲೇ ಇದ್ದ ಒಂದು ದೊಣ್ಣೆಯಿಂದ ಪಿರ್ಯಾದುದಾರರ ತಲೆಗೆ ಮತ್ತು ಬಲಕಾಲಿಗೆ ಹೊಡೆದು ರಕ್ತಗಾಯಗೊಳಿಸಿರುವುದಾಗಿ ನಂತರ ಸದ್ರಿ ಸ್ಥಳಕ್ಕೆ ಪಿರ್ಯಾದುದಾರರ ಹೆಂಡತಿ ರಮ್ಯಳು ಬಂದಿದ್ದು ಸದ್ರಿಯವರ ಮೇಲೆ ಆಪಾಧಿತ ಬಲ ಕೈಗೆ ಮತ್ತು ಬೆನ್ನಿಗೆ ಅದೇ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ಬಳಿಕ ಪಿರ್ಯಾದುದಾರರು ಹಲ್ಲೆಗೆ ಒಳಗಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಬಂದಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 94/2021 ಕಲಂ: 504.506.323.324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಕಡಬ ಪೊಲೀಸ್ ಠಾಣೆ : ಪಿರ್ಯಾದಿ ಜೇಕಬ್ ಸಿ  ಪ್ರಾಯ 45 ವರ್ಷ, ಎಂಬವರು ನೀಡಿದ ದೂರಿನಂತೆ ಪಿರ್ಯದುದಾರರು ತನ್ನ ತಂದೆ ಮತ್ತು ತಾಯಿಯವರ  ಯೋಗಕ್ಷೇಮ  ನೋಡಿಕೊಡಿದ್ದು  ತಂದೆಯಾದ  ಮೃತ ತಂಗಚ್ಚನ್ ಪ್ರಾಯ 86 ವರ್ಷ ಎಂಬುವರು ಕೆಲವು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಹೃದಯಘಾತಗೊಂಡವರನ್ನು ಚಿಕಿತ್ಸೆ ನೀಡಿ ಅರೋಗ್ಯವಾಗಿದ್ದು. ಇತ್ತಿಚಿನ ದಿನಗಳಲ್ಲಿ  ಆರೋಗ್ಯದಲ್ಲಿ ಏರುಪೇರು ಉಂಟಾಗಿ  ಮಾನಸಿಕವಾಗಿ ನೊಂದುಕೊಂಡಿದ್ದು  ದಿನಾಂಕ 07-12-2021 ರಂದು ಪಿರ್ಯಾದಿಯು ಮದ್ಯಾಹ್ನ 1-30 ಗಂಟೆಗೆ ವಿಶ್ರಾಂತಿಯಲ್ಲಿ ಮನೆಯಲ್ಲಿ ಇರುವ ಸಮಯ ಪಿರ್ಯಾದಿಯ ಬಾವ ಅಲೆಕ್ಸ್ ರವರು ತೋಟದಿಂದ ಉಟಕ್ಕೆ ಮನೆಗೆ ಬಂದಾಗ ಪಿರ್ಯಾದಿಯ ತಂದೆಯವರು ಕೊಟ್ಟಿಗೆಯ ಹತ್ತಿರ ಮಾಡಿನ ಪಕ್ಕಾಸಿಗೆ ನೈಲನ್ ಹಗ್ಗವನ್ನು  ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ನೇತಾಡುತ್ತಿರುವುದನ್ನು ನೋಡಿ ಮನೆಯಲ್ಲಿ ಮಲಗಿದ್ದ ಪಿರ್ಯಾದಿಗೆ ಕರೆದು ನಂತರ ನೆರೆಕರೆಯವರನ್ನು ಕರೆದು ನೋಡಲಾಗಿ  ಮೃತ ತಂಗಚ್ಚನ್ ರವರು  ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ತಿಳಿದಿದ್ದು ಪಿರ್ಯಾದಿಯ ತಂದೆಯವರು  ಬೆಳ್ಳಿಗ್ಗೆ 10-00 ಗಂಟೆಗೆ ಪೇರಡ್ಕಕ್ಕೆ ತೆರಳಿ ನಂತರ 11-00 ಗಂಟೆಗೆ ಮನೆಗೆ ಬಂದಿರುವುದು ನೆರೆ-ಕರೆಯವರು ನೋಡಿರುತ್ತರೆ   ಹಾಗೂ  ಮೃತ ತಂಗಚ್ಚನ್ ರವರು  11-00 ಗಂಟೆಯಿಂದ 13-30 ಗಂಟೆಯ ಮದ್ಯೆ  ಪಿರ್ಯಾದಿಯ ಮನೆಯ ಸಮೀಪ ಇರುವ ದನದ ಕೊಟ್ಟಿಗೆಗೆ ಇಳಿಸಿ ಕಟ್ಟಿದ ಜಾಗದಲ್ಲಿ  ಕೊಟ್ಟಿಗೆಯ  ಪಕ್ಕಾಸಿಗೆ ನೈಲನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 30/2021 ಕಲಂ: 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಬ    ಪ್ರಾಯ  56  ವರ್ಷ ತಂದೆ ;  ಕುಕ್ಕ ಮುಗೇರ ವಾಸ ;ಪರ್ಲಡ್ಕ ಕೋಡಿಬಾಲ್   ಮನೆ ಕಸಬ    ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಕೂಲಿ ಕೆಲಸ ಮಾಡಿಕೊಂಡಿದ್ದು ಪಿರ್ಯಾದುದಾರರ ತಂದೆಯ ಮಕ್ಕಳ ಪೈಕಿ ಹಿರಿಯ ಮಗಳಾದ ಹರಿಣಿ ಎಂಬವರನ್ನು  ಕೊಯಿಲಾ ಗ್ರಾಮದ ಪಟ್ಟೆ ನಿವಾಸಿ ಅಂಗಾರ ಎಂಬವರಿಗೆ 12 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು 6 ವರ್ಷಗಳ ಹಿಂದಿನಿಂದ ಮೃತ ಶ್ರೀಮೃತಿ ಹರಿಣಿಯವರ ಗಂಡ ವಿಪರೀತ ಕುಡಿತದ ಅಬ್ಯಾಸ ಮಾಡಿಕೊಂಡಿದ್ದು ಸಂಸಾರದಲ್ಲಿ ಜಿಗುಪ್ಸೆ ಮತ್ತು ಬಿನ್ನಾಭಿಪ್ರಾಯ ಉಂಟಾಗಿದ್ದು ನಂತರ ಮೃತ ಹರಿಣಿಯವರನ್ನು ಮತ್ತು ಮಕ್ಕಳನ್ನು ಪಿರ್ಯಾದುದಾರರು ತನ್ನ ಮನೆಗೆ ಕರೆದುಕೊಂಡು ಬಂದಿದ್ದು 2 ವರ್ಷಗಳಿಂದ ಪಿರ್ಯಾದುದಾರರ ಜೊತೆಯಲ್ಲಿ ಮೃತ ಹರಿಣಿರವರು  ವಾಸ ಮಾಡಿಕೊಂಡಿದ್ದು ನಂತರ ಇತ್ತೀಚೆಗೆ ಮೃತ ಹರಿಣಿಯವರು ತನ್ನ ಅಣ್ಣನಾದ ಬಾಬರವರಿಗೆ ತಿಳಿಸದೇ ತನ್ನ  ಗಂಡ  ಮನೆಗೆ ಹೋಗಿ ವಾಸ ಮಾಡಿಕೊಂಡಿರುತ್ತಾರೆ ಹೀಗಿರುತ್ತಾ  ಮೃತ ಹರಿಣಿಯ ಗಂಡ ಅಂಗಾರನು ಯಾವುದೇ ಕೆಲಸ ಮಾಡದೇ ಮನೆಯಲ್ಲಿ ವಿಪರೀತ ಕುಡಿತದ ಅಬ್ಯಾಸ ಮಾಡಿಕೊಂಡಿದ್ದರಿಂದ ಮೃತ ಹರಿಣಿಯವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಬೆಳಗ್ಗೆ 10.00 ಗಂಟೆಯಿಂದ 13.30 ಗಂಟೆಯ ಮದ್ಯೆ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಅಟ್ಟದ ಬಿದಿರಿನ ಅಡ್ಡಕ್ಕೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 31/2021 ಕಲಂ: 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮತ್ತಾಡಿ ಪ್ರಾಯ 60 ವರ್ಷ ತಂದೆ:ಚಲ್ಲಮುಗೇರ ವಾಸ:ಮಾವಿನಕಟ್ಟೆ ಮನೆ ಹಿರೇಬಂಡಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರ ಮಗ 29 ವರ್ಷ ಪ್ರಾಯದ ವಸಂತನು  ಕೂಲಿ ಕೆಲಸ ಮಾಡುತ್ತಿದ್ದು ವಿಪರೀತ ಅಮಲು ಪದಾರ್ಥ ಸೇವಿಸುವ ಚಟವುಳ್ಳವನಾಗಿರುತ್ತಾನೆ.  ಇವನನ್ನು ಅಮಲು ಪದಾರ್ಥ ಬಿಡಿಸುವರೇ ಪ್ರಯತ್ನಿಸಿದರೂ ಬಿಡದೆ ಇದ್ದು, ಈತನು ಕೆಲವು ಸಮಯದಿಂದ ಮನೆಗೂ ಬಾರದೇ ಅಮಲು ಪದಾರ್ಥವನ್ನು ಬಿಡದೆ ಇದೆ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 6.12.2021 ರ ಮದ್ಯಾಹ್ನ 1.00 ಗಂಟೆಯಿಂದ ದಿನಾಂಕ 7.12.2021 ರ ಬೆಳಿಗೆ 8.00 ಗಂಟೆಯ ಮದ್ಯೆ ಕುಬಲ ಎಂಬಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ:40/2021 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-12-2021 11:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080