Feedback / Suggestions

ಅಪಘಾತ ಪ್ರಕರಣ: 3

 

ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುರೇಶ್‌ ಆಚಾರ್ಯ (37) ತಂದೆ: ದಿ/ಸೇಸಪ್ಪ ಆಚಾರ್ಯ, ವಾಸ: ಅರೆ ಮಜಲುಪಲ್ಕೆ ಮನೆ, ಬಡಗಮಿಜಾರು ಗ್ರಾಮ, ಮೂಡಬಿದ್ರೆ ತಾಲೂಕು, ರವರು ನೀಡಿದ ದೂರಿನಂತೆ ದಿನಾಂಕ: 08.01.2023 ರಂದು ಬೆಳಿಗ್ಗೆ ಸುಮಾರು 06.45 ಗಂಟೆಗೆ ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಪಡ್ಡಂದಡ್ಕ ಎಂಬಲ್ಲಿ ಮೂಡಬಿದ್ರೆ –ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ  KA  01 AB 9594 ನೇ ಲಾರಿಯನ್ನು ಅದರ ಚಾಲಕ ಗುರುವಾಯನಕೆರೆ ಕಡೆಯಿಂದ ಮೂಡಬಿದ್ರೆ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ರಾಂಗ್ ಸೈಡ್ ಗೆ ಚಲಾಯಿಸಿ  ಮೂಡಬಿದ್ರೆ ಕಡೆಯಿಂದ ಗುರುವಾಯಕೆರೆ ಕಡೆಗೆ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಕೆಎ 19 EN 2404 ನೇ ಮೊಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಅಲ್ಲದೇ ಮೋಟಾರ್ ಸೈಕಲ್ ಜಖಂ ಗೊಂಡಿರುತ್ತದೆ.  ಗಾಯಾಳು ಸುರೇಶ್ ಆಚಾರ್ಯ ರವರು ಮೂಡಬಿದ್ರೆ ಆಳ್ವಾಸ್ ಹೆಲ್ತ್ ಸೆಂಟರ್ ನಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 02/2023 ಕಲಂ: 279,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಒ.ಎಮ್ ಸನ್ನಿ ಪ್ರಾಯ 57 ವರ್ಷ ತಂದೆ: ದಿ|| ಮೈಕಲ್ ವಾಸ: ಹಾರ ಡೆಂಜ ಮನೆ ,  ಕೊಕ್ಕಡ ಗ್ರಾಮ, ಬೆಳ್ತಂಗಡಿ ತಾಲೂಕು ದ.ಕ ಜಿಲ್ಲೆ  ರವರ ಗೆಳೆಯ ಬಿನೀಶ್ ಎಂಬವರು ದಿನಾಂಕ 08-01-2023 ರಂದು ಇಚ್ಲಂಪಾಡಿಯಲ್ಲಿರುವ ಬೆಥನಿ ಕಾನ್ವೆಂಟ್ ಅನಾಥಾಶ್ರಮದ ಜನರಿಗೆ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದ್ದು, ಅಲ್ಲಿಗೆ ಊಟ ಬಡಿಸಲು ಫಿರ್ಯಾದಿ ಒ.ಎಮ್ ಸನ್ನಿ , ಬಿನೀಶ್ ಹಾಗೂ ಅವರ  ಗೆಳೆಯರಾದ ಜಯೇಶ್ ವಿ.ಜೆ ಮತ್ತು ಜಿನೋಯ್ ಎ.ಜಾರ್ಜ್ ರವರೊಂದಿಗೆ ಹೋಗಿದ್ದು, ಅಲ್ಲಿ ಆಶ್ರಮದವರಿಗೆ ಊಟ ಕೊಟ್ಟ ಬಳಿಕ ವಾಪಾಸು  ಜಿನೋಯ್ ಎ.ಜಾರ್ಜ್ರವರ ಕಾರಿನಲ್ಲಿ ಪೆರಿಯಶಾಂತಿ ವರೆಗೆ ಬಂದು ಫಿರ್ಯಾದಿದಾರರು ಮತ್ತು ಬಿನೀಶ್ ರವರು ಕಾರಿನಿಂದ ಇಳಿದು ಬಿನೀಶ್ ನು ತಂದಿರಿಸಿದ್ದ ಮೋಟಾರು ಸೈಕಲ್ ನಂ ಕೆಎ 21 EB-2191 ನೇದರಲ್ಲಿ ಸಹ ಸವಾರನಾಗಿ ಕುಳಿತು ನೆಲ್ಯಾಡಿ ಕಡೆಗೆ ಹೋಗುವಾಗ ಸಮಯ ಸುಮಾರು ಮದ್ಯಾಹ್ನ 2.00 ಗಂಟೆಗೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಸಮೀಪ ತಲುಪುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕೆಎ 19 ಎಫ್ 3014 ನೇ ಕೆ.ಎಸ್ ಆರ್ ಟಿ.ಸಿ  ಬಸ್ಸನ್ನು ಅದರ ಚಾಲಕರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಹೋಗುತ್ತಿದ್ದ ಮೋಟಾರು ಸೈಕಲ್ ನ ಹಿಂಬದಿಗೆ  ಡಿಕ್ಕಿಯಾಗಿ ಫಿರ್ಯಾದಿದಾರರು ಮತ್ತು ಸವಾರ ಬಿನೀಶ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಮಗುಚಿ ಬಿದ್ದು  ಫಿರ್ಯಾದಿದಾರರು ಹಾಗೂ ಬಿನೀಶ್ ರವರಿಗೆ ಗುದ್ದಿದ ಹಾಗೂ ರಕ್ತ ಗಾಯವುಂಟಾಗಿದ್ದು,  ಗಾಯಾಳುಗಳನ್ನು ಜಿನೋಯ್ ಎ.ಜಾರ್ಜ್ರವರು ಅವರ ಕಾರಿನಲ್ಲಿ ಉಜಿರೆಯ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಫಿರ್ಯಾದಿದಾರರನ್ನು  ಹೊರರೋಗಿಯಾಗಿ ಚಿಕಿತ್ಸೆ ನೀಡಿ ಬಿನೀಶ್ ರವರಿಗೆ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   .ಕ್ರ 01/2023 ಕಲಂ: 279,337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪುನೀತ್‌ ಕುಮಾರ್‌, (33 ವರ್ಷ), ತಂದೆ: ಗಂಗಯ್ಯ ಪೂಜಾರಿ,ಮಡಂತ್ಯಾರು ಮನೆ, ಮಾಲಾಡಿ ಗ್ರಾಮ,ಬೆಳ್ತಂಗಡಿ ತಾಲೂಕು, ರವರು ನೀಡಿದ ದೂರಿನಂತೆ ಬೆಳ್ತಂಗಡಿ ತಾಲೂಕು, ಕುಕ್ಕಳ ಗ್ರಾಮದ, ಮಡಂತ್ಯಾರು ಎಂಬಲ್ಲಿರುವ ವಿಜಯಾ ರೆಸಿಡೆನ್ಸಿಯಲ್ಲಿ ವಾಸವಿರುವ ಫಿರ್ಯಾಧಿದಾರರು ದಿನಾಂಕ: 08.01.2023 ರಂದು ಬೆಳಿಗ್ಗೆ ತಮ್ಮ ಮನೆಯ ಮುಂದೆ ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೆಲಸ ಮಾಡುತ್ತಿರುವಾಗ ಬೆಳಿಗ್ಗೆ 11:55 ಗಂಟೆಗೆ ಬೆಳ್ತಂಗಡಿ ಕಡೆಯಿಂದ ಬಿ.ಸಿ ರೋಡ್‌ ಕಡೆಗೆ ಕೆ್‌ಎಸ್‌ಆರ್‌ಟಿಸಿ ಬಸ್‌ KA19F3480 ನೇದನ್ನು ಅದರ ಚಾಲಕ ಮಲ್ಲಪ್ಪ ಸಿದ್ದಾನಿ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಿ.ಸಿ ರೋಡ್‌ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡುಕೊಂಡು ಹೋಗುತ್ತಿದ್ದ ವೇದವ ಎಂಬವರ  ಮೋಟಾರ್‌ ಸೈಕಲ್‌ KA20EE5912 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಮೋಟಾರ್‌ ಸೈಕಲ್‌ ಸಮೇತ ಡಾಮಾರು ರಸ್ತೆಗೆ ಬಿದ್ದು ತಲೆಗೆ, ಸೊಂಟಕ್ಕೆ ಗಂಭಿರವಾಗಿ ಗಾಯಗೊಂಡವರನ್ನು ಫಿರ್ಯಾಧಿದಾರರು ಹಾಗೂ ಇತರರು ಉಪಚರಿಸಿ ಆರೈಕೆ ಮಾಡಿ ಅಂಬ್ಯುಲೆನ್ಸ್‌ವೊಂದರಲ್ಲಿ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದು, ಗಾಯಾಳು ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾಅ.ಕ್ರ ನಂಬ್ರ: 02/20223 ಕಲಂ: 279,338 ಐಪಿಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕಮಲ (65) ಗಂಡ: ದಿ| ಸೋಮಪ್ಪ ವಾಸ: ಪಿಲಿಕೋಡಿ ಮನೆ, ಪೈಚಾರು. ಜಾಲ್ಸೂರು ಗ್ರಾಮ, ಸುಳ್ಯ ತಾಲೂಕು ರವರ ಮಗ ಪುರುಷೋತ್ತಮ ಎಂಬಾತನು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 07.01.2023 ರಂದು ಕೂಲಿ ಕೆಲಸ ಮಾಡಿ ಮುಗಿಸಿ ಸಮಯ ಸುಮಾರು 17:00 ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮ ಪಿಲಿಕೋಡಿ ಎಂಬಲ್ಲಿರುವ ತನ್ನ ಮನೆಗೆ ಬಂದಿದ್ದು ಜೊತೆಗೆ ಕೋಳಿ ಮಾಂಸವನ್ನು ಸಹ ಮನೆಗೆ ತಗೆದುಕೊಂಡು ಬಂದು ಪಿರ್ಯಾದುದಾರರಲ್ಲಿ ಕೋಳಿ ಮಾಂಸದಿಂದ ಚಿಲ್ಲಿ ಮಾಡಿಕೊಡುವಂತೆ ಹೇಳಿದ್ದು, ಅದಕ್ಕೆ ಪಿರ್ಯಾದುದಾರರು ನನಗೆ ಚಿಲ್ಲಿ ಮಾಡಲು ಬರುವುದಿಲ್ಲ, ಪಧಾರ್ಥ ಬೇಕಾದರೆ ಮಾಡಿಕೋಡುತ್ತೆನೆ ಎಂದಾಗ ಅದಕ್ಕೆ ಪುರುಷೋತ್ತಮನು ಕೋಪಗೊಂಡು ಅಲ್ಲೇ ಇದ್ದ ದೊಣ್ಣೆಯಿಂದ ಪಿರ್ಯಾದುದಾರರ ಸೊಂಟಕ್ಕೆ ಹೊಡೆದ ಪರಿಣಾಮ  ಸೊಂಟಕ್ಕೆ  ನೋವುವುಂಟಾಗಿ ಬಿ,ಪಿ ಕಡಿಮೆಯಾಗಿ ಆಸ್ಪತ್ತಗೊಂಡವರನ್ನು ಹಲ್ಲೆ ಮಾಡಿದ ಮಗ ಪುರುಷೋತ್ತಮ ಹಾಗೂ ಇತರರು ಪಿರ್ಯಾದುದಾರರನ್ನು ಉಪಚರಿಸಿ ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ   ನಂ: 03/2023 ಕಲಂ: 324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನವೀನ್ ಕುಮಾರ್ ಭಂಡಾರಿ .ಹೆಚ್‌ (43 ವರ್ಷ ) ತಂದೆ: ಕೃಷ್ಣ ಭಂಡಾರಿ ಹೆಚ್ ,ಕಾರ್ಯನಿರ್ವಾಹಣಾಧಿಕಾರಿ, ಪುತ್ತೂರು ತಾಲೂಕು ಪಂಚಾಯತ್,  ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ಪುತ್ತೂರು ತಾಲೂಕು ಪಂಚಾಯತ್‌ ಕಛೇರಿಯಲ್ಲಿ ಕೆ. ಶಿವಾನಂದ ಎಂಬವರು  ಬೆರಳಚ್ಚುಗಾರನಾಗಿ (ನಿಯೋಜನೆ ಮೇರೆಗೆ) ಕರ್ತವ್ಯ ನಿರ್ವಹಿಸುತ್ತಿದ್ದು, ಕಛೇರಿಯ ಪತ್ರ ವ್ಯವಹಾರ ರವಾನೆ ಸಹಾಯಕರಾಗಿ (Dispatch section) ಕೂಡಾ ಅವರೇ ನಿರ್ವಹಿಸುವುದಾಗಿದೆ. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ W.P.No. 30536/2014(S-RES) ರಲ್ಲಿ ದಿನಾಂಕ 25.06.2022 ರಂದು ತೀರ್ಪಾಗಿದ್ದು, ಸದ್ರಿ ತೀರ್ಪಿನಲ್ಲಿ 3rd Respondent , Executive Officer , Taluk Panchayath , Puttur hasa agreed to regularize the service of the Petitioner. The 3rd respondent Executive Officer has given consent by a letter dated 16-06-2022 addressed to Sri A.K.Vasanth ಎಂದು ಉಲ್ಲೇಖಿಸಿದ್ದು, ಪಿರ್ಯಾದಿದಾರರ ಗಮನಕ್ಕೆ ಬಂದು ಈ ರೀತಿಯಲ್ಲಿ ಯಾವುದೇ ಪತ್ರ ವ್ಯವಹಾರ ನಡೆದಿರುವುದಿಲ್ಲ. ಕಛೇರಿ ರವಾನೆ ವಹಿಯನ್ನು ಪರಿಶೀಲಿಸಿದಾಗ ಸದ್ರಿ ದಿನಾಂಕದಂದು ದ.ಕ ಜಿ.ಪ ಪ್ಯಾನಲ್ ವಕೀಲರಾದ ಎ.ಕೆ ವಸಂತ ಮತ್ತು ಶಿವಾನಂದರವರ ಖಾಸಗಿ ವಕೀಲರಾದ ಕೆ. ಗೋವಿಂದರಾಜ್‌ರವರಿಗೂ ಪತ್ರ ರವಾನೆಯಾಗಿರುತ್ತದೆ. ಪಿರ್ಯಾದಿದಾರರ ಕಚೇರಿಯಿಂದ ಅಧಿಕೃತವಾಗಿ ಯಾವುದೇ ಪತ್ರ ವ್ಯವಹಾರ ನಡೆದಲ್ಲಿ ಅಥವಾ ಅಧಿಕೃತವಾಗಿ ಪತ್ರ ರವಾನೆಯಾಗಿದ್ದಲ್ಲಿ ವ್ಯವಸ್ಥಾಪಕರ ಗಮನಕ್ಕೆ ಬಂದಿರತಕ್ಕದ್ದು ಮತ್ತು ಕಛೇರಿ ಪ್ರತಿಯು ಕಡತದಲ್ಲಿ ಇರಬೇಕಾಗಿರುತ್ತದೆ. ಸದ್ರಿ ದಿನಾಂಕದ ಪತ್ರಗಳ ಪ್ರತಿಗಳು ವ್ಯವಸ್ಥಾಪಕರ ಗಮನಕ್ಕೂ ಬಾರದೇ ಕಛೇರಿಯ ಕಡತದಲ್ಲಿ ಇರುವುದಿಲ್ಲ. ಕೆ ಶಿವಾನಂದರವರು ಪಿರ್ಯಾದಿದಾರರ ಗಮನಕ್ಕೆ ಭಾರದೇ ಕಛೇರಿಯ ಲೆಟರ್ ಹೆಡ್ (Letter head) , ರಬ್ಬರ್ ಸ್ಟಾಂಪ್ (Seal) ರವಾನೆ ವಹಿ ಮತ್ತು ಪಿರ್ಯಾದಿದಾರರ ಸಹಿಯನ್ನು ತನ್ನ ವೈಯಕ್ತಿಕ ಹಾಗೂ ಸ್ವಹಿತಾಸಕ್ತಿ ಉದ್ದೇಶಕ್ಕೆ ಬಳಸಿ ಕಛೇರಿ ವ್ಯವಸ್ಥೆಯನ್ನು ದುರುಪಯೋಗ ಪಡಿಸಿರುವುದು ಕಂಡು ಬರುತ್ತಿದ್ದು, ಅಲ್ಲದೇ ಕೆ. ಶಿವಾನಂದರವರು ನಂಬಿಕೆ ದ್ರೋಹ ಎಸಗಿದ್ದು , ತನ್ನ ಸೇವಾ ಅನುಕೂಲತೆಗಾಗಿ ಸರ್ಕಾರದ ಜವಾಬ್ದಾರಿಯುತ ಕೆಲಸದ ವಿರುದ್ದವಾಗಿ ಮೋಸದಿಂದ ದುರ್ಲಾಭ ಪಡೆಯಲು ಪ್ರಯತ್ನಿಸಿರುತ್ತಾರೆ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ: 01/2023 ಕಲಂ:   406,465,468,471,420 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎಮ್ ರವೀಂದ್ರ ಗೌಡ (53) ತಂದೆ: ಕುಂಞಣ್ಣ ಗೌಡ ವಾಸ: ಮಣಿಲ ಮನೆ ಪುಣಚ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ 08.01.2023 ರಂದು ಬೆಳಗ್ಗೆ 10.45 ಗಂಟೆಗೆ ಪುಣಚ ದೇವಸ್ಥಾನಕ್ಕೆ ಹೋಗಿದ್ದು ಪಿರ್ಯಾದಿದಾರರ ಪತ್ನಿ ಮತ್ತು ಮಕ್ಕಳಾದ ಯೋಗೇಶ್‌ ಮತ್ತು ಜಯೇಶ್‌ ರವರು ಸಮಯ ಸುಮಾರು 12.00 ಗಂಟೆಗೆ ಪುಣಚ ದೇವಸ್ಥಾನಕ್ಕೆ ಬಂದಿದ್ದು ಮಗ ಹೇಮಂತ್‌  ನ ಬಗ್ಗೆ ಪಿರ್ಯಾದಿದಾರರು ವಿಚಾರಿಸಿದಾಗ ಹೇಮಂತ್‌ ನು ಬರುವುದಿಲ್ಲವಾಗಿ ತಿಳಿಸಿದ್ದು ಮನೆಯಲ್ಲಿ ಪರೀಕ್ಷೆಯ ಬಗ್ಗೆ ಓದುತ್ತಾ ಕುಳಿತ್ತಿದ್ದನು ಎಂಬುದಾಗಿ ತಿಳಿಸಿದ್ದು ಪಿರ್ಯಾದಿದಾರರು ದೇವರ ದರ್ಶನ ಮುಗಿಸಿ ಮನೆಗೆ ಬಂದ ಸಮಯ ಸುಮಾರು 14.00 ಗಂಟೆಗೆ ಹೇಮಂತ್ ನು ಇಲ್ಲದೇ ಇದ್ದು ಆತನನ್ನು ಕರೆದಾಗ ಯಾವುದೇ ಪ್ರತಿಕಿಯೆ ಇಲ್ಲದೇ ಇದ್ದು ಆತನನ್ನು ಹುಡುಕಾಡಿದಾಗ ಹೇಮಂತ್‌ ನು ಮನೆಯ ಮತ್ತು ಕೊಟ್ಟಿಗೆ ಯ ಮಧ್ಯೆ ಇರುವ  ಪ್ಯಾಸೇಜ್‌ಗೆ ಹೋದಾಗ ಬಟ್ಟೆಗಳನ್ನು ಓಣಗಲು ಹಗ್ಗವನ್ನು ಕಟ್ಟಿದ ಗೋಡೆಯಲ್ಲಿರುವ ಕಬ್ಬಿಣದ ಹುಕ್‌ಗೆ ಹಳೆಯ ಲಂಗವನ್ನು ಹರಿದು ಅದರ ಒಂದು ತುದಿಯನ್ನು ಕುಣಿಕೆಯಾನ್ನಾಗಿ ಮಾಡಿ ಕುತ್ತಿಗೆಗೆ ಬಿಗಿದು ಅದರ ಇನ್ನೊಂದು ತುದಿಯನ್ನು ಕಬ್ಬಿಣದ ಹುಕ್‌ಗೆ ಕಟ್ಟಿ ನೇತಾಡುತ್ತಿದ್ದನು ಅದರ ಪಕ್ಕದಲ್ಲಿ ಮನೆಯಲ್ಲಿ ಉಪಯೋಗಿಸುತ್ತಿದ್ದ ಒಂದು ಕುರ್ಚಿಯನ್ನು ಇಟ್ಟಿದ್ದನು ಕೂಡಲೇ ಪಿರ್ಯಾದಿದಾರರು ಎತ್ತಿ ಕುಣಿಕೆಯನ್ನು ಬಿಚ್ಚಿ ನೆಲದಲ್ಲಿ  ಮಲಗಿಸಿ ಉಪಚರಿಸಿದಾಗ ಯಾವುದೇ ಚಲನವಲನಗಳು ಕಂಡುಬಾದರೇ ಇದ್ದರಿಂದ ಅಂಬ್ಯುಲೇನ್ಸ್‌ ಒಂದನ್ನು ಬರಮಾಡಿಕೊಂಡು ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈಧ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಪಿರ್ಯಾದಿದಾರ ಮಗ ಹೇಮಂತ್‌ ನು  ಯಾವುದೋ ವಿಚಾರಕ್ಕೆ ಜಿಗುಪ್ಸೆಗೊಂಡು ಅಥವಾ  ಯಾವುದಾರರು ಹೆದರಿಕೆಯಿಂದಲೋ ಲಂಗವನ್ನು ಹರಿದು ಕುಣಿಕೆಯನ್ನು ಮಾಡಿ ಪ್ಯಾಸೇಜ್‌ ನ ಕಬ್ಬಿಣದ ಹುಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆ ಯು.ಡಿ ಆರ್ ನಂಬ್ರ : 02/2023 ಕಲಂ: 174 ಸಿ ಆರ್ ಪಿಸಿ       ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 09-01-2023 01:58 PM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080