ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 1. ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುರೇಶ ಪ್ರಾಯ 35 ವರ್ಷ ತಂದೆ: ನಾರಾಯಣ ಪೂಜಾರಿ  ವಾಸ: ಪಂಜಿಕಲ್ಲು ಜೋರ ಮನೆ ಪಂಜಿಕಲ್ಲು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 08-02-2022 ರಂದು ಅಗತ್ಯ ಕೆಲಸದ ನಿಮಿತ್ತ ಬಿ.ಸಿ.ರೋಡಿನಿಂದ ಅಮ್ಟಾಡಿ ಕಡೆಗೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಾ ಸಮಯ ಸುಮಾರು 17:15 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಅಜ್ಜಿಬೆಟ್ಟು ಕ್ರಾಸ್ ಎಂಬಲ್ಲಿಗೆ ತಲುಪುತ್ತಿದ್ದಂತೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪಾದಾಚಾರಿ ಪುಷ್ಪಾರವರಿಗೆ ಮಂಗಳೂರು ಕಡೆಯಿಂದ  ಒಂದು ಮೋಟಾರ್ ಸೈಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಾದಾಚಾರಿ ಪುಷ್ಪಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ಹಿಂಬದಿ ತಲೆಗೆ ಗುದ್ದಿದ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದವರನ್ನು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಅಪಘಾತಕ್ಕೆ ಕಾರಣವಾದ ಮೋಟಾರ್ ಸೈಕಲ್ ಸವಾರ ಅಪಘಾತದ ಸಮಯ ಮೋಟಾರ್ ಸೈಕಲನ್ನು ನಿಲ್ಲಿಸದೇ ಮೋಟಾರ್ ಸೈಕಲ್ ಸಮೇತ ಪರಾರಿಯಾಗಿರುವುದಾಗಿದೆ .ಈ ಬಗ್ಗೆ ಬಂಟ್ವಾಳ ಸಂಚಾರ ಠಾಣಾ ಅ.ಕ್ರ. 18/2022  ಕಲಂ:  279, 304(ಎ) ಐಪಿಸಿ ಮತ್ತು ಕಲಂ: 134(ಎ) (ಬಿ) ಜೊತೆ 187   ಐ ಎಮ್ ವಿ ಕಾಯ್ದೆ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಿಶೋರ್ ಕುಮಾರ್  ಪ್ರಾಯ 34 ವರ್ಷ ತಂದೆ: ಗಂಗಾಧರ ಪೂಜಾರಿ ವಾಸ: ಮನ್ಯೇವು ಮನೆ, ಕಾವಳಕಟ್ಟೆ, ಕಾವಳಮುಡೂರು ಗ್ರಾಮ, ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ಫಿರ್ಯಾಧಿದಾರರು ದಿನಾಂಕ: 07.02.2022 ರಂದು ರಾತ್ರಿ ಸುಮಾರು 8.20 ಗಂಟೆಗೆ ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಕಾವಳಕಟ್ಟೆ ಎನ್‌ಸಿ ರೋಡ್ ಎಂಬಲ್ಲಿರುವ ತನ್ನ ಬೇಕರಿಯ ಮುಂದೆ ಇರುವ ಸಮಯ ಬಿಸಿರೋಡ್ ಕಡೆಯಿಂದ ಬೆಳ್ತಂಗಡಿ ಕಡೆಗೆ ಲಾರಿ ನಂಬ್ರ MH11AL8079 ನೇದನ್ನು ಅದರ  ಚಾಲಕ ದೌಲತ್ ಜನಾರ್ಧನ ಪಟಾರೆ ಎಂಬಾತನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಬೇಕರಿಯ ಎದುರುಗಡೆ ಇರುವ ಬಿಸ್ಮಿಲ್ಲಾ ಚಿಕನ್ ಸೆಂಟರ್ ಅಂಗಡಿಯ ಹತ್ತಿರ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿರುವ ಕಚ್ಚಾ  ಮಣ್ಣು ರಸ್ತೆಯಲ್ಲಿ  ನಿಂತಿದ್ದ ಪ್ರತೀಕ್ ಎಂಬಾತನಿಗೆ  ತಾಗಿಸಿದ ಪರಿಣಾಮ, ಪ್ರತೀಕ್ ನು   ರಸ್ತೆಗೆ ಬಿದ್ದು ಗಾಯಗೊಂಡಿದ್ದು ಆತನನ್ನು ಪಿರ್ಯಾದಿದಾರು ಹಾಗೂ ಅಲ್ಲಿ ಸೇರಿದ್ದ ಇತರರು ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಬಳಿಕ  ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರು ಏಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 12/2022 ಕಲಂ: 279, 337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಧರ್ಮಪ್ಪ, ಪ್ರಾಯ:45 ವರ್ಷ, ತಂದೆ: ಲಕ್ಷ್ಮಣಗೌಡ, ವಾಸ; ಸಾಲಕೊಪ್ಪಲು ಗ್ರಾಮ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ ಎಂಬವರ ದೂರಿನಂತೆ ಫಿರ್ಯಾದಿದಾರರಾದ ಧರ್ಮಪ್ಪ, ಪ್ರಾಯ:45 ವರ್ಷ, ತಂದೆ: ಲಕ್ಷ್ಮಣಗೌಡ, ವಾಸ; ಸಾಲಕೊಪ್ಪಲು ಗ್ರಾಮ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ ರವರು ಕೆ.ಎಸ್.ಆರ್.ಟಿ.ಸಿ ಪುತ್ತೂರು ಘಟಕದಲ್ಲಿ ಚಾಲಕ/ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವುದಾಗಿದೆ, ದಿನಾಂಕ 08.02.2022 ರಂದು ಪುತ್ತೂರು ಘಟಕದ ವಾಹನ ಸಂಖ್ಯೆ ಕೆಎ-19-ಎಫ್-3152, ಮಾರ್ಗಸೂಚಿ ಸಂಖ್ಯೆ 111 ಎಬಿ ಯಲ್ಲಿ ಪುತ್ತೂರಿನಿಂದ ಸುಳ್ಯಕ್ಕೆ ಹೋಗುವರೇ 13-45 ಗಂಟೆಗೆ ಹೊರಟು 14-25 ಗಂಟೆಗೆ ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಕಾವು ಮೇಲಿನ ಪೇಟೆಯಿಂದ ನೂರು ಮೀಟರ್ ಮುಂದಕ್ಕೆ ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಕೆಎ-21-ವೈ-9883 ಹೀರೋ ಡೆಸ್ಟಿನಿ 125 ಸ್ಕೂಟರ್ ನ್ನು ಅದರ ಸವಾರರು ಹಿಂಬದಿ ಸವಾರರೊಂದಿಗೆ ಚಲಾಯಿಸಿಕೊಂಡು ಬಂದು ಫಿರ್ಯದಿದಾರರು ಚಲಾಯಿಸುತ್ತಿದ್ದ ಬಸ್ಸಿನ ಹಿಂಭಾಗದ ಬಲಮೂಲೆಗೆ ಢಿಕ್ಕಿ ಹೊಡೆದು ಸಹಸವಾರರೊಂದಿಗೆ ಡಾಂಬಾರು ರಸ್ತೆಗೆ ಬಿದ್ದಿರುತ್ತಾರೆ. ಸಹಸವಾರರಿಗೆ ಹೆಲ್ಮೆಟ್ ಇಲ್ಲದ ಕರಣ ತಲೆಗೆ ರಕ್ತಗಾಯವಾಗಿದ್ದು, ಅವರನ್ನು ಫಿರ್ಯಾದಿದಾರರು ಕಾರೊಂದರಲ್ಲಿ ಕುಳ್ಳಿರಿಸಿ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ  ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ: 21/2022  ಕಲo:  279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್‌ ಮುಸ್ತಾಫ್ ಪ್ರಾಯ 31 ವರ್ಷ  ತಂದೆ ಅಬ್ದುಲ್‌ ಖಾದರ ವಾಸ :ನೀರಪಳಿಕೆ ಮನೆ ಬಾರೆಬೆಟ್ಟು ಅಂಚೆ ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿರವರು ಕೊಳ್ನಾಡು ಗ್ರಾಮದ ನೀರಪಳಿಕೆ ಬಾರೆಬೆಟ್ಟು ಎಂಬಲ್ಲಿ ಹಳೆ ಮನೆ ಇದ್ದು ಸದ್ರಿ ಮನೆಯಲ್ಲಿ ಯಾರೂ ವಾಸವಾಗಿರುವುದಿಲ್ಲ. ಸದ್ರಿ ಮನೆಯ ಅಂಗಳದಲ್ಲಿ ಒಣ ಅಡಿಕೆಯನ್ನು ದಿನಾಂಕ:06-02-2022 ಒಣಗಲು ಹಾಕಿ ಹೋಗಿದ್ದು ನಂತರ ದಿನಾಂಕ:07-02-2022 ರಂದು ಬೆಳಿಗ್ಗೆ 08.00 ಗಂಟೆಗೆ ಮೇಲ್ಕಾಣಿಸಿದ ಸ್ಥಳಕ್ಕೆ ಹೋಗಿ ನೋಡಿದಾಗ 3500 ಅಡಿಕೆ ಕಳುವಾಗಿರುವುದು ಕಂಡು ಬಂತು . ಈ ಅಡಿಕೆಯನ್ನು ದಿನಾಂಕ:06-02-2022 ರಿಂದ ದಿನಾಂಕ:07-02-2022 ರಂದು ಬೆಳಿಗ್ಗೆ 08.00 ಗಂಟೆಯ ಮಧ್ಯೆ ಯಾರೋ ಕಳ್ಳರೂ ಒಣ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಸದ್ರಿ ಅಡಿಕೆಯ ಮೌಲ್ಯ ಸುಮಾರು 12000/-ರೂ ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 25/2022  ಕಲಂ: 379  ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಮಹಿಳಾ ಪೊಲೀಸ್ ಠಾಣೆ : ದಿನಾಂಕ: 08.02.2022 ರಂದು ದಕ್ಷಿಣ ಕನ್ನಡ  ಮಹಿಳಾ ಪೊಲೀಸ್‌ ಠಾಣೆ ಪುತ್ತೂರು  ಇಲ್ಲಿ ಅ.ಕ್ರ: 07/2022   ಕಲಂ: 354,506    IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಶ್ವಥ್  (24) ತಂದೆ: ಕೃಷ್ಣ ಶಟ್ಟಿ ವಾಸ; ನಾಡಿಂಜೆ ಮನೆ,  ಲಾಯಿಲ  ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾದಿದಾರರು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ ಶೀತಲ್ ಗಾರ್ಡನ್ ಲಾಡ್ಜ್  ನಲ್ಲಿ ಸುಮಾರು 15 ದಿವಸಗಳಿಂದ ಕೆಲಸ ಮಾಡಿಕೊಂಡಿದ್ದ  ಕುಮಾರ.ಎಸ್‌ ರವರು ಪ್ರತಿದಿನ ರಾತ್ರಿ 10.30 ಗಂಟೆಯ ತನಕ ಕೆಲಸ ಮಾಡಿ ನಂತರ ಅಮಲು ಪದಾರ್ಥ ಸೇವಿಸಿ ಊಟದ ಬಳಿಕ ಮಹಡಿಯ ಮೇಲೆ ಬೀಡಿ ಸೇದುವ ಅಭ್ಯಾಸ ಹೊಂದಿದ್ದವರು ದಿ: 07.02.2022 ರಂದು ರಾತ್ರಿ 12.00ಯಿಂದ ಈ ದಿನ ದಿ:08.02.2022 ರಂದು ಬೆಳಿಗ್ಗೆ 09.00 ಗಂಟೆಯ ಮಧ್ಯೆ ಸಮಯದಲ್ಲಿ ಬೀಡಿ ಸೇದುವರೇ ಲಾಡ್ಜ್ ನ ಮಹಡಿಯ ಮೆಟ್ಟಿಲು ಹತ್ತುವ ಸಮಯ  ಆಯತಪ್ಪಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯುಡಿಆರ್  04/2022 ಕಲಂ: 174 ಸಿಆರ್.ಪಿ.ಸಿ.  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-02-2022 11:56 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080