ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅನ್ಸಾರ್, (29) ತಂದೆ: ಚೆರಿಯಕ್ಕ @ ಮೊಹಮ್ಮದ್, ವಾಸ :ಶಿವಾಜಿನಗರ ಮನೆ, ವೇಣೂರು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:  06-03-2022 ರಂದು  ರಾತ್ರಿ  ಸುಮಾರು  08:30 ಗಂಟೆಗೆ  ಬೆಳ್ತಂಗಡಿ  ತಾಲುಕೂ  ಹೊಸಂಗಡಿ  ಗ್ರಾಮದ  ಪೆರಿಂಜೆ  ಎಂಬಲ್ಲಿ  ಮೂಡಬಿದ್ರೆ-  ವೇಣೂರು   ರಸ್ತೆಯಲ್ಲಿ  ಆಕ್ವಿವಾ ದ್ವಿ ಚಕ್ರ  ವಾಹನ  ನಂ: ಕೆ ಎ 19 ಇ ಎಕ್ಸ್  2324 ನೇ  ದನ್ನು   ಅದರ  ಸವಾರ  ದಿನೇಶ್    ರವರು  ಸಹ ಸವಾರ  ಅಬೂಬ್ಕರ್  ಸಿದ್ದಿಕ್  ರವರನ್ನು  ಕುಳ್ಳಿರಿಸಿಕೊಂಡು   ದಾರ್ಖಾಸು  ಕಡೆಯಿಂದ    ಮಣ್ಣು   ರಸ್ತೆಯಲ್ಲಿ  ಮುಖ್ಯ   ರಸ್ತೆಗೆ ದುಡುಕುತನ  ಮತ್ತು  ನಿರ್ಲಕ್ಷ್ಯತನದಿಂದ  ಚಲಾಯಿಸಿದ  ಪರಿಣಾಮ  ದ್ವಿ ಚಕ್ರ  ವಾಹನ  ಸ್ಕಿಡ್    ಆಗಿ  ಸವಾರರಿಬ್ಬರೂ  ರಸ್ತೆಗ  ಬಿದ್ದು  ಸಹ   ಸಹಾರ  ಅಬೂಬಕ್ಕರ್  ಸಿದ್ದಿಕ್ ರವರ  ಬಲ   ಕಾಲು ದ್ವಿ ಚಕ್ರ  ವಾಹದನ ಅಡಿಗೆ ಸಿಲುಕಿ  ಒಳ  ಜಖಂ  ಉಂಟಾಗಿ  ಕಾರ್ಕಳ  ಸ್ವಂದನ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ   ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 17-2022 ಕಲಂ 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹನೀಫ್  (38) ತಂದೆ: ಬಿ ಹಮೀದ್ ವಾಸ: ಗಾಂಧೀನಗರ ಮನೆ, ಇಂದಬೆಟ್ಟು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ:08-03-2022 ರಂದು ತನ್ನ ಬಾಬ್ತು KA 21 B 7173 ನೇ ಆಟೋರಿಕ್ಷಾವನ್ನು ಉಜಿರೆ ಕಡೆಯಿಂದ ಸೊಮಂತಡ್ಕ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಮದ್ಯಾಹ್ನ 13:30 ಗಂಟೆಗೆ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ವಿಧ್ಯಾ ನಗರ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಉಜಿರೆ ಕಡೆಯಿಂದ ಸೊಮಂತಡ್ಕ ಕಡೆಗೆ KA 18 C 4967 ನೇ ಪಿಕ್‌ ಅಪ್‌ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ಪಿರ್ಯಾದಿದಾರರ ಆಟೋರಿಕ್ಷಾಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ರಸ್ತೆ ಬದಿಯ ಚರಂಡಿಗೆ ಮಗಚಿ ಬಿದ್ದು ಪಿರ್ಯಾದಿದಾರರಿಗೆ ಎಡ ಕೈಯ ಕೋಲು ಕೈ ಗೆ, ಬಲಕಾಲಿನ ಮಂಡಿಗೆ, ಸೊಂಟಕ್ಕೆ ಗುದ್ದಿದ ರಕ್ತಗಾಯ ವಾಗಿದ್ದು ಪಿಕ್‌ ಅಪ್‌ ವಾಹನದಲ್ಲಿದ್ದ ಸಹಪ್ರಯಾಣಿಕ ಪರ್ವತೇಗೌಡ ರವರಿಗೆ ಹಣೆಗೆ ಗುದ್ದಿದ ಗಾಯವಾಗಿದ್ದು ಪಿರ್ಯಾದಿದಾರರು ಮತ್ತು ಪರ್ವತೇಗೌಡ ರವರು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 43/2022 ಕಲಂ; 279,337ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಧನರಾಜ್ ಕೆ (25) ತಂದೆ:ನಾಣ್ಯಪ್ಪ ಪೂಜಾರಿ ವಾಸ:ಎಣ್ಣೆಕ್ಕಿ ಮಜಲು ಮನೆ ನೂಜಿಬಾಳ್ತಿಲ ಗ್ರಾಮ ಕಡಬ ಎಂಬವರ ದೂರಿನಂತೆ ಫಿರ್ಯಾದಿದಾರರು ನೂಜಿ ಬಾಳ್ತಿಲ ಪಂಚಾಯತ್ ಕಛೇರಿಯಲ್ಲಿಡಾಟಾ ಎಂಟ್ರಿ ಕೆಲಸ ಮಾಡುತ್ತಿದ್ದು ದಿನಾಂಕ 07-03-2022 ರಂದು ಪಿರ್ಯಾಧಿದಾರರ ಬಾಬ್ತು ಮೋಟಾರ್ ಸೈಕಲಿನಲ್ಲಿ ಬೆಳಗ್ಗೆ ಪುತ್ತೂರು ತಾಲುಕು ಪಂಚಾಯತ್ ಕಛೆರಿಗೆ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿ ಮನೆ ಕಡೆ ಬರುತ್ತಾ ರಾತ್ರಿ 8.20 ಗಂಟೆಯ ಸಮಯಕ್ಕೆ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಸೈಂಟ್ ಜೋರ್ಜ್‌ ಶಾಲೆಯ ಬಳಿ ತಲುಪಿದಾಗ ಪಿರ್ಯಾಧಿದಾರರ ಎದುರಿನಿಂದ ಅಂದರೆ ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಒಂದು ಮೋಟಾರ್ ಸೈಕಲಿಗೆ ಕೊಪ್ಪ ಮಾದೇರಿ ಕಡೆಯಿಂದ ಒಂದು ಮಿನಿ ಗೂಡ್ಸ್‌ ವಾಹನವನ್ನು ಅದರ ಚಾಲಕ ನಿರ್ಲಕ್ಷತನದಿಂದ ಏಕಾಏಕಿ ರಾ.ಹೆ 75ರ ರಸ್ತೆಗೆ ಚಲಾಯಿಸಿದ ಪರಿಣಾಮ ಪಿರ್ಯಾಧಿದಾರರ ಎದುರಿನಿಂದ ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಯಾಯಿತು. ಪರಿಣಾಮ ಮೋಟಾರ್‌ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟರು. ಪಿರ್ಯಾಧಿದಾರರು ಕೂಡಲೇ ಮೋಟಾರ್ ಸೈಕಲ್ ನಿಲ್ಲಿಸಿ ಹೋಗಿ ನೋಡಲಾಗಿ ಪರಿಚಯದ ಹರಿಶ್ಚಂದ್ರ ಪಿ ರವರಾಗಿದ್ದು, ಡಿಕ್ಕಿ ಹೊಡೆದ ಪರಿಣಾಮ ಹರಿಶ್ಚಂದ್ರ ಪಿ ರವರಿಗೆ ಕಾಲಿಗೆ, ಭುಜಕ್ಕೆ ಮತ್ತುಎದೆಗೆ ಗುದ್ದಿದ ಗಾಯವಾಗಿದ್ದು ಕೂಡಲೇ ಪಿರ್ಯಾಧಿದಾರರು ಒಂದು ಆಟೋ ರಿಕ್ಷಾದಲ್ಲಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿನ ವೈದ್ಯರು ಹರಿಶ್ಚಂದ್ರ ಪಿ ರವರನ್ನು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಟ್ಟರು. ಈ ದಿನ ದಿನಾಂಕ 08-03-2022 ರಂದು ಹರಿಶ್ಚಂದ್ರ ಪಿ ರವರಿಗೆ ನೋವು ಉಲ್ಬಣಗೊಂಡಿರುವುದರಿಂದ ಅವರನ್ನು ಅವರ ಪತ್ನಿ ಸವಿತಾರವರು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಒಳ ರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 37/2022 ಕಲಂ:279 337 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭಿಮ ತೇಜಸ್ವಿ ಪ್ರಾಯ 25  ವರ್ಷ ತಂದೆ:ದಿ . ರಘು ರಾಮ ಭಟ್  ವಾಸ:ಕೆದಿಲ ಮನೆ,ಕಣಿಯೂರು ಗ್ರಾಮ,  ಬೆಳ್ತಂಗಡಿ  ಎಂಬವರ ದೂರಿನಂತೆ ಪಿರ್ಯಾದುದಾರರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ  ಉದ್ಯೋಗ ಮಾಡಿಕೊಂಡಿದ್ದು ದಿನಾಂಕ: 05.03.2022 ರಂದು ಬೆಳ್ತಂಗಡಿಯಿಂದ ತನ್ನ ಮನೆಯಾದ ಅತ್ತೆ ಮನೆಯಾದ ಬೆಳ್ಳಾರೆಗೆ  ಹೋಗುವರೇ  ನನ್ನ ಬಾಬ್ತು KA-19 EY-5975 ನೇ ಸ್ಕೂಟರ್ ವಾಹನದಲ್ಲಿ ಉಪ್ಪಿನಂಗಡಿಯಿಂದ ಹೊರಟು ಉಪ್ಪಿನಂಗಡಿ –ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಹೋಗುತ್ತಿದ್ದ ಸಮಯ ಕಡಬ ತಾಲೂಕು ಆಲಂಕಾರು ಗ್ರಾಮದ ನೂಜಿಬೈಲು ಎಂಬಲ್ಲಿಗೆ ಸಮಯ 12.45 ಗಂಟೆಗೆ  ತಲುಪಿದಾಗ ಅದೇ ರಸ್ತೆಯಲ್ಲಿ  ಕಡಬ ಕಡೆಯಿಂದ  ಉಪ್ಪಿನಂಗಡಿ  ಕಡೆಗೆ  ಬರುತ್ತಿದ್ದ KA- 19 AD- 3215 ನೇ ಲಾರಿಯ ಚಾಲಕನಾದ ಆರೋಪಿತನು ತೀವ್ರ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಲಾರಿ ವಾಹನವನ್ನು ಚಲಾಯಿಸಿಕೊಂಡು ಡಾಮಾರು ರಸ್ತೆಯ ತೀರ ಬಲಬದಿಗೆ ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಸ್ಕೂಟರಿಗೆ ತಾಗಿಸಿದ ಪರಿಣಾಮ ಪಿರ್ಯಾದುದಾರರು ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ರಸ್ತೆಯ ಬದಿಗೆ ಎಸೆಯಲ್ಪಟ್ಟಿರುತ್ತಾರೆ ಆ ಸಮಯ ಅಲ್ಲಿದ್ದ ಸಾರ್ವಜನಿಕರು ಪಿರ್ಯಾದುದಾರರನ್ನು ಉಪಚರಿಸಿದ್ದು ಬಳಿಕ ಪರಿಚಯದ ಹಿತೇಶ್ ರವರು ಹಾಗೂ ಇನ್ನೋರ್ವರು ಕಾರು ವಾಹನದಲ್ಲಿ ಗಾಯಾಳು ಪಿರ್ಯಾದಿಯನ್ನು ಕರೆದುಕೊಂಡು ಹೋಗಿ ಪುತ್ತೂರು ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು.ಈ ಬಗ್ಗೆ ಕಡಬ ಠಾಣಾ ಅ.ಕ್ರ 21/2022 ಕಲಂ. 279,337   IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಚಂದ್ರಾವತಿ ಪ್ರಾಯ;44 ವರ್ಷ ತಂದೆ: ಸಂಜೀವ ಗೌಡ ವಾಸ; ಕುಲೆನಾಡಿ ಮನೆ ನೆರಿಯಾ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರು  ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಕುಲೆನಾಡಿ ಎಂಬಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು  ದಿನಾಂಕ: 24-11-2021 ರಂದು ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಗುಂಪಿನಿಂದ ರೂ 2,47,000/- ಸಾಲವನ್ನು ಪಡೆದಿದ್ದು, ಆ ಪೈಕಿ ರೂ 65,000/- (ಅರುವತ್ತೈದು ಸಾವಿರ) ಹಣವನ್ನು ತಮ್ಮ ಮನೆಯ ಮಲಗುವ ಕೊಠಡಿಯಲ್ಲಿರುವ ಬೀರುವಿನಲ್ಲಿ ಇಟ್ಟಿದ್ದು ಅದಲ್ಲದೇ ಆ ಬೀರುವಿನಲ್ಲಿ ದಿನಾಂಕ; 06-09-2021 ರಂದು ಆಭರಣ ಇಡುವ ಪೆಟ್ಟಿಗೆಯಲ್ಲಿ ಸುಮಾರು 24 ಗ್ರಾಂ ತೂಕದ ಲಕ್ಷ್ಮೀ ದೇವರ ಪದಕ ಇರುವ ಚಿನ್ನದ ನೆಕ್ಲೇಸ್ -1, ಹಾಗೂ ಇನ್ನೊಂದು ಡಬ್ಬದಲ್ಲಿ 20 ಗ್ರಾಂ ತೂಕದ ಬಾಣದ ಗುರುತಿಗೆ S ಎಂಬುದಾಗಿ    ಬರೆದಿರುವ ಚಿನ್ನದ ಪದಕದ ಚಿನ್ನದ ಸರ-1 ಇಟ್ಟಿದ್ದು ದಿನಾಂಕ; 08-03-2022 ರಂದು ಬೆಳಿಗ್ಗೆ 09.00 ಗಂಟೆ ಸಮಯಕ್ಕೆ ಪಿರ್ಯಾದುದಾರರಿಗೆ ಹಣದ ಅವಶ್ಯಕತೆ ಇರುವುದರಿಂದ ಬೀರುವಿನಲ್ಲಿ ಇಟ್ಟಿದ್ದ  ಹಣವನ್ನು ತಗೆಯಲು ಹೋದಾಗ ಹಣವು ಕಂಡುಬಾರದೇ ಇದ್ದು ಸಂಶಯಗೊಂಡು  ಆಭರಣ ಇಟ್ಟಿದ್ದ ಡಬ್ಬಿಯನ್ನು ನೋಡಿದಾಗ ಸದ್ರಿ ಡಬ್ಬಿಯಲ್ಲಿ ಇಟ್ಟಿದ್ದ ಚಿನ್ನದ ನೆಕ್ಲೇಸ್  ಹಾಗೂ ಚಿನ್ನದ ಸರ ಕೂಡಾ  ಕಂಡುಬರಲಿಲ್ಲ. ಸದ್ರಿ  ಹಣ ಹಾಗೂ ಚಿನ್ನವನ್ನು ಯಾರೋ ಕಳ್ಳರು ದಿನಾಂಕ: 06-09-2021 ರಂದು ರಾತ್ರಿ 10.00 ಗಂಟೆಯಿಂದ  ದಿನಾಂಕ; 08-03-2022 ರಂದು ಬೆಳಿಗ್ಗೆ 09.00 ಗಂಟೆಯ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಚಿನ್ನದ ಅಂದಾಜು ಮೌಲ್ಯ 1,75,000 ರೂ  ಆಗಬಹುದು ಕಳುವಾದ ಹಣ ಹಾಗೂ ಆಭರಣದ ಒಟ್ಟು ಅಂದಾಜು ಮೊತ್ತ 2,40,000/- ರೂ ಆಗಬಹುದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 19/2022  ಕಲಂ:454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 08-03-2022 ರಂದು  ಬೆಳ್ಳಾರೆ ಪೊಲೀಸ್ ಠಾಣೆ. 19/2022 ಕಲಂ 498(ಎ), 504, 323, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶೇಖ್ರ ಪ್ರಾಯ 37 ವರ್ಷ ತಂದೆ: ಪುಕಾರಿ ವಾಸ: ಕರಿಯ ಮೂಲೆ ಮನೆ ಅಜ್ಜಾವರ ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರ ಅಣ್ಣ ಮಾಯಿಲ (55) ವಿಪರೀತ ಮದ್ಯ ಸೇವನೆ  ಮಾಡುವ ಚಟವನ್ನು ಹೊಂದಿದ್ದು, ಅದರಂತೆ ನಿನ್ನೆ ದಿನ ದಿನಾಂಕ: 07.03.2022 ರಂದು ಸಮಯ ಸುಮಾರು 08:30 ಗಂಟೆಗೆ ಮನೆ ಬಿಟ್ಟುಹೋದವನು ಮನೆಗೆ ಬಾರದೇ ಇದ್ದಾಗ ಪಿರ್ಯಾದುದಾರರು ಮತ್ತು ಅಣ್ಣನ ಮಗ ಗೋಪಾಲ ರವರು ಮಾಯಿಲನನ್ನು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ದಿನಾಂಕ: 08.03.2022 ರಂದು ಪಿರ್ಯಾದುದಾರರ ತಮ್ಮ ನಾಗೇಶ ಎಂಬಾತನು ಸಮಯ ಸುಮಾರು 09:00 ಗಂಟೆಗೆ ಕರೆಮಾಡಿ ಮಾಯಿಲನು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಪ್ರಕಾಶ ಥಿಯೇಟರ್ ಹತ್ತಿರ ಮಲಗಿರುವುದಾಗಿ ತಿಳಿಸಿದ್ದು, ಅದರಂತೆ ಪಿರ್ಯಾದುದಾರರು ಸದ್ರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮಾಯಿಲನು ಮೃತ ಪಟ್ಟ ಸ್ಥಿತಿಯಲ್ಲಿ ಬಿದ್ದುಕೊಂಡ ಹಾಗೆ  ಕಂಡುಬಂದಿರುವುದಾಗಿ ಮಾಯಿಲನು ವಿಪರೀತ  ಮದ್ಯ ಸೇವನೆ ಮಾಡಿ ಅಥವಾ ಯಾವುದೋ ಖಾಯಿಲೆಯಿಂದ ಅಸ್ವಸ್ಥಗೊಂಡು ಮಲಗಿದ್ದಲ್ಲಿಯೇ ಮೃತಪಟ್ಟಿರಬಹುದು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ UDR NO. 12/2022 SEC: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-03-2022 10:04 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080