ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಸ್ಮಾಯಿಲ್  ಪ್ರಾಯ:61 ವರ್ಷ,ತಂದೆ ಯೂಸುಫ್  ಹಾಜಿ ವಾಸ: ಬಡ್ಡಮೆ  ಕೊಯಿಲಾ ಗ್ರಾಮ ಮತ್ತು ಅಂಚೆ,ಕಡಬ ತಾಲೂಕು ರವರು ದಿನಾಂಕ:08-04-2021 ರಂದು ಬೆಳಿಗ್ಗೆ 10-45 ಗಂಟೆಗೆ ಕಡಬ ತಾಲೂಕು ಕೊಯಿಲ ಗ್ರಾಮದ ಕೆ.ಸಿ ಫಾರ್ಮ್ ಹಳೆ ಗೇಟ್ ಬಳಿ ಕಡಬಕ್ಕೆ ಬರುವರೇ ನಿಂತುಕೊಂಡಿರುವಾಗ  ಕಡಬ-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಒಂದು ಸ್ಕೂಟಿ ಸವಾರನು ಹಿಂಬದಿ ಸವಾರನನ್ನು ಕುಳ್ಳರಿಸಿಕೊಂಡು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದವರು ಒಮ್ಮೆಲೆ ರಸ್ತೆಯ ಬಲ ಬದಿಗೆ ತಿರುಗಿಸಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಹಿಂಬದಿ ಸವಾರ  ರಸ್ತೆಗೆ ಎಸೆಯಲ್ಪಟ್ಟು ಹಿಂಬದಿ ಸವಾರನು ಹೆಲ್ಮಟ್ ಧರಿಸದೇ ಇದ್ದು ಉಪಚರಿಸಿ ನೋಡಲಾಗಿ ತಲೆಯ ಹಿಂಬದಿಗೆ ಗುದ್ದಿದ ನಮೂನೆಯ ಗಾಯವಾಗಿದ್ದು ಗಾಯಗೊಂಡವರು ಪಿರ್ಯಾದಿಯ ಪರಿಚಯದ ಖಲೀಲ್ ರಹ್ಮಾನ್ (34) ವರ್ಷ ದವರಾಗಿದ್ದು ಸ್ಕಿಡ್ ಆದ ಸ್ಕೂಟಿ ನಂಬ್ರ ನೋಡಲಾಗಿ KA-21,EA-7122 ನೇದಾಗಿದ್ದು ಸವಾರನ ಹೆಸರು ಅಬ್ದುಲ್ ಸಮದ್ ಆಗಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಉಪ್ಪಿನಂಗಡಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರಿಕ್ಷೀಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 32/2021  ಕಲಂ 279  304 (A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೊಹಮ್ಮದ್  ಅಬೂಬಕ್ಕರ್ ಸವಾದ್ ಪ್ರಾಯ: 20 ವರ್ಷ ತಂದೆ: ಇಬ್ರಾಹಿಂ ವಾಸ : 4-91 ಅಜಾದ್ ನಗರ ಮುಲ್ಲರ್ ಪಟ್ನ ಮನೆ ಅರಳ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ 04-04-2021 ರಂದು  ತನ್ನ ಚಿಕ್ಕಪ್ಪನ ಮಗನಾದ ಅಬ್ದುಲ್ ರೆಹಮಾನ್  ರೊಂದಿಗೆ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ  ಹೋಗಲು  KA 19 EX 6236 ನೇದರಲ್ಲಿ ಸವಾರನಾಗಿಯೂ ಪಿರ್ಯಾದಿದಾರರು ಸಹಸವಾರನಾಗಿಯೂ ಕುಳಿತುಕೊಂಡು ಮಂಗಳೂರು ನಿಂದ ಮುಲ್ಲರ ಪಟ್ನ ಕಡೆಗೆ ಹೋಗುತ್ತಾ ಬಂಟ್ವಾಳ ತಾಲೂಕು ಬಡಗಬೆಳ್ಳೂರು ಗ್ರಾಮದ ಅಂಬೋಡಿಮಾರ್ ಎಂಬಲ್ಲಿಗೆ ತಲುಪಿದಾಗ ಮೋಟರ್ ಸೈಕಲ್ ನ್ನು ಸವಾರ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಇಳಿಜಾರು ಹಾಗೂ ತಿರುವು ರಸ್ತೆಯಲ್ಲಿ ಚಲಾಯಿಸಿದ ಪರಿಣಾಮ ಮೋಟರ್ ಸೈಕಲ್ ಸ್ಕೀಡ್ ಆಗಿ ರಸ್ತೆಬದಿಯ  ಚರಂಡಿಗೆ ಬಿದ್ದು ಅಪಘಾತವಾಗಿ ಪಿರ್ಯಾದಿದಾರರು ಗಾಯಗೊಂಡು ಕಂಕನಾಡಿ ಯೆನೆಪೊಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ  ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಠಾಣೆ   ಅ ಕ್ರ 39/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 4

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗುರುರಾಜ್ ಕೆ ಎಂ (21) ತಂದೆ: ಮೋಹನ ಕೆ ವಾಸ: ಪರಿವಾರಕಾನ ಮನೆ, ಅರಂಬೂರು ಆಲೆಟ್ಟಿ ಗ್ರಾಮ ಸುಳ್ಯ ತಾಲೂಕು ರವರ ತಾಯಿ ಅರುಣ ಪ್ರಭ (52) ಎಂಬವರು ನಾಲ್ಕು ತಿಂಗಳಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ದಿನಾಂಕ 07.04.2021 ರಂದು ಪಿರ್ಯಾದುದಾರರೊಂದಿಗೆ ರಾತ್ರಿ ಮಲಗಿದ್ದವರು ದಿನಾಂಕ 08.04.2021 ರಂದು ಬೆಳಿಗ್ಗೆ 03:30 ಗಂಟೆಯಿಂದ 06:30 ಗಂಟೆಯ ಮಧ್ಯೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಪರಿವಾರಕಾನ ಎಂಬಲ್ಲಿರುವ ತಮ್ಮ ಮನೆಯ ಅಡುಗೆ ಕೋಣೆಯ ಪಕಾಸಿಯ  ಅಡ್ಡಕ್ಕೆ ಮತ್ತು ಕುತ್ತಿಗೆಗೆ ಚುಡಿದಾರದ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 17/2021 ಕಲಂ 174ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಿನಪ್ಪ (36) ತಂದೆ:ಸಣ್ಣ ಚಿಂಕ್ರ ವಾಸ: ಕುಳ್ಳುಂಪಾಡಿ ಮನೆ, ಐರ್ವನಾಡು ಗ್ರಾಮ, ಸುಳ್ಯ ತಾಲೂಕು ರವರ ಅಣ್ಣ ಸುಂದರ (42) ಎಂಬವನು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕೆ,ವಿ,ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿಕೊಂಡಿದ್ದವನು, ವಿಪರೀತ ಮದ್ಯ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾನೆ. ಅದರಂತೆ ದಿನಾಂಕ: 07.04.2021 ರಂದು ಮದ್ಯಸೇವನೆ ಮಾಡಿ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಕೆ,ವಿ,ಜಿ ಇಂಜಿನಿಯರಿಂಗ್ ಹಾಸ್ಟೇಲ್ ನಲ್ಲಿ ರಾತ್ರಿ 22:00 ಗಂಟೆಗೆ ಇದ್ದು ದಿನಾಂಕ 08.04.2021 ರಂದು ಬೆಳಿಗ್ಗೆ 07:00 ಗಂಟೆಗೆ ಹಾಸ್ಟೇಲ್ ನ ವಾಚ್ ಮ್ಯಾನ್ ಹಾಸ್ಟೇಲ್ ನ ಬೀಗ ತೆಗೆದು ನೋಡಿದಾಗ ಸುಂದರನ್ನು ಟಾಯ್ಲೇಟ್ ನ ಒಳಗಡೆ ಬಿದ್ದಕೊಂಡಿದ್ದನು ನೋಡಿ ಪಿರ್ಯಾದುದಾರರಿಗೆ ಪೋನ್ ಮಾಡಿ ತಿಳಿಸಿದಲ್ಲಿ ಪಿರ್ಯಾದುದಾರರು ಬಂದು ನೋಡಿದಾಗ ಸುಂದರನು ಮೃತಪಟ್ಟಿರುವುದು ದೃಡವಾಗಿರುತ್ತದೆ.ಸುಂದರನು ವಿಪರೀತ ಮದ್ಯಸೇವನೆಯಿಂದ ಹೃದಯಘಾತ ಅಥವಾ ಇನ್ನಿತರ ಕಾರಣದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 18/2021 ಕಲಂ 174ಸಿಆರ್‌ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅರುಣ್ ಡಿ ಸೋಜ್ ಪ್ರಾಯ 45 ವರ್ಷ ತಂದೆ: ದಿ. ಲಾದರಾಸ್ ಡಿ ಸೋಜ್ ವಾಸ: ಅತ್ರೆಲ್ ಮನೆ ಬಂಟ್ವಾಳ ಕಸಬಾ ಗ್ರಾಮ ಬಂಟ್ವಾಳ ತಾಲೂಕು ರವರ ತಾಯಿ ರೋಜಲಿನ್   ಡಿ ಸೋಜ್ ಪ್ರಾಯ 69 ವರ್ಷ  ರವರು ಕಳೆದ 2 ವರ್ಷಗಳಿಂದ ಕಾಲಿನ ಗಂಟು ನೋವಿಗೆ ಮಂಗಳೂರು ಕಂಕನಾಡಿ ಆಸ್ವತ್ರೆಯಿಂದ ಚಿಕಿತ್ಸೆ ಮಾಡುತ್ತಿದ್ದು ದಿನಾಂಕ 07-04-2021 ರಂದು ರಾತ್ರಿ 10.30 ಗಂಟೆಗೆ ಊಟ ಮಾಡಿ ಅವರು ಮಲಗುವ ಕೋಣೆಯಲ್ಲಿ ಮಲಗಿದ್ದು. ದಿನಾಂಕ 08-04-2021ರಂದು ಬೆಳಿಗ್ಗೆ 7.30 ಗಂಟೆಗೆ ಪಿರ್ಯಾಧಿದಾರರ ತಾಯಿಯು ಎಳೆದೇ ಇರುವುದರಿಂದ ಪಿರ್ಯಾಧಿದಾರರು ಮಲಗಿದ ಕೋಣೆಯಲ್ಲಿ ಹೋಗಿ ನೋಡದಾಗ, ಪಿರ್ಯಾಧಿದಾರರ ತಾಯಿಯು ಮಲಗಿದ ಸ್ಥಿತಿಯಲ್ಲಿದ್ದು,  ಮಾತನಾಡದೇ ಇದ್ದು, ಶರೀರವು ತಣ್ಣಗಾಗಿದ್ದು, ಪಿರ್ಯಾಧಿದಾರರ ತಾಯಿಯು ಅವರಿಗಿದ್ದ ಕಾಯಿಲೆಯಿಂದಲೂ, ಹೃದಯಘಾತದಿಂದಲೂ ಅಥವಾ ಇನ್ನಿತರ ಕಾರಣದಿಂದಲೂ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 12-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ವಿಶಾಲಾಕ್ಷಿ ಪ್ರಾಯ 33 ವರ್ಷ ಗಂಡ:ಪ್ರಕಾಶ್‌ ನಾಯ್ಕ್ ವಾಸ:ಅತಿಕ್ರಾಯ ಬೈಲು ಮನೆ, ಕೇಪು ಗ್ರಾಮ  ಬಂಟ್ವಾಳ ತಾಲೂಕು ರವರ ಗಂಡ ಪ್ರಕಾಶ ನಾಯ್ಕ್‌ ಪ್ರಾಯ 45 ವರ್ಷ ರವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದವರು ಸುಮಾರು ಒಂದೂವರೆ ವರ್ಷದ ಹಿಂದಿನಿಂದ ಸಕ್ಕರೆ ಖಾಯಿಲೆ ಪ್ರಾರಂಭವಾಗಿ ಅದಕ್ಕೆ ಔಷಧಿ ಮಾಡುತ್ತಿದ್ದರು, ದಿನಾಂಕ:07-04-2021 ರಂದು ಪಿರ್ಯಾಧಿದಾರರ ಗಂಡ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅತಿಕಾಯ ಬೈಲು ಎಂಬಲ್ಲಿ ರಾತ್ರಿ ಸುಮಾರು 11.00 ಗಂಟೆಗೆ ಹೊರಳಾಡುವುದನ್ನು ಕಂಡು ನೆರೆಯ ಧನಂಜಯ ಮತ್ತು ನಿತೀನ್‌ರವರಿಗೆ ಮಾಹಿತಿ ನೀಡಿ ಅವರು ಬಂದು ಪ್ರಕಾಶ ನಾಯ್ಕ್‌ರವರನ್ನು ಆರೈಕೆ ಮಾಡಿ ನೋಡಿದಾಗ ಅವರ ಬಾಯಿಯಲ್ಲಿ ನೊರೆ ಬರುತ್ತಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ವಿಟ್ಲ ಸರಕಾರಿ ಆಸ್ಪತ್ರಗೆ ದಿನಾಂಕ:08-04-2021 ರಂದು ಮುಂಜಾನೆ 01.20 ಗಂಟೆಗೆ ಕರೆದುಕೊಂಡು ಬಂದು ವೈದ್ಯರು ಪರಿಕ್ಷೀಸಿದಾಗ ಮೃತಪಟ್ಟಿರುವುದಾಗಿ ತಿಳಸಿದರು. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 11/2021  ಕಲಂ 174   ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 09-04-2021 11:01 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080