ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅಭಿಜಿತ್(29) ತಂದೆ; ಶೇಖರ್ ಭಂಡಾರಿ ವಾಸ;  2-10-1 ನೆಲ್ಲಿಗುಡ್ಡೆ ಮನೆ ಕಲ್ಮಂಜ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ: 07-06-2022 ರಂದು ನೊಂದಣಿಯಾಗದ ಹೊಸ  ಮೋಟಾರ್‌ ಸೈಕಲನ್ನು  ಸಹ ಸವಾರನನ್ನಾಗಿ ಚಿಂತನ್‌ ಎಂಬವರನ್ನು ಕುಳ್ಳಿರಿಸಿಕೊಂಡು ಕೊಟ್ಟಿಗೆಹಾರ ಕಡೆಯಿಂದ ಉಜಿರೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಪಾಂಡಿಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಉಜಿರೆ ಕಡೆಯಿಂದ ಕೊಟ್ಟಿಗೆಹಾರ ಕಡೆಗೆ KA 70 E 3415 ನೇ ಮೋಟಾರ್‌ ಸೈಕಲ್‌ ನ್ನು ಅದರ ಸವಾರ ನಜೀರ್‌ ಎಂಬವರು ದುಡುಕತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌ ಸೈಕಲ್‌ ಗೆ ಢಿಕ್ಕಿ ಹೊಡೆದ ಪರಿಣಾಮ ನಜೀರ್‌ ಎಂಬವರು ರಸ್ತೆಯ ಬಲಬದಿಗೆ ಬಿದ್ದರು ಅದೇ ವೇಳೆ ಉಜಿರೆ ಕಡೆಯಿಂದ ಕೊಟ್ಟಿಗೆಹಾರ ಕಡೆಗೆ KA 54 1908 ನೇ ಲಾರಿಯನ್ನು ಅದರ ಚಾಲಕ ದುಡುಕತನದಿಂದ ಚಲಾಯಿಸಿಕೊಂಡು ಬಂದು ನಜೀರ್‌ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ನಜೀರ್‌ ಎಂಬವರು ಸ್ಥಳದಲ್ಲೆ ಮೃತಪಟ್ಟಿರುವುದಾಗಿದೆ. ಪಿರ್ಯಾದಿದಾರರಿಗೆ ಎಡಕಾಲಿನ ಮೊಣಗಂಟಿಗೆ, ಎಡ ಕೈ ಯ ಉಂಗುರ ಬೆರಳಿಗೆ ತರಚಿದ ಗಾಯವಾಗಿದ್ದು ಮತ್ತು ಸಹಸವಾರ ಚಿಂತನ್‌ ರವರಿಗೆ ಬಲಕಾಲಿನ ಮೊಣಗಂಟಿಗೆ ರಕ್ತಗಾಯ ಹಾಗೂ ಬಲಭುಜಕ್ಕೆ ಗುದ್ದಿದ ಗಾಯಗೊಂಡು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 80/2022 ಕಲಂ: 279, 337, 304(A) ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ  ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಮೇಶ್, ಪ್ರಾಯ:45 ವರ್ಷ, ತಂದೆ: ಗುರುವ ನಾಯ್ಕ್, ವಾಸ ಬಿ.ಆರ್.ನಗರ ಮನೆ, ಕಲ್ಲಡ್ಕ, ಗೋಳ್ತಮಜಲು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 07-06-2022 ರಂದು ತನ್ನ ಬಾಬ್ತು KA-19-AC-1770 ಬಜಾಜ್ ಮ್ಯಾಕ್ಷಿಮೋ ಟೆಂಪೋವನ್ನು ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಪೂರ್ಲಿಪಾಡಿ ಕೆ,ಎನ್ ಬೇಕರಿ ಎಂಬಲ್ಲಿ ಬೆಂಗಳೂರು-ಮಂಗಳೂರು ರಾಷ್ಟೀಯ ಹೆದ್ದಾರಿಯ ಬದಿ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿ ನೌಶಾದ್ ಎಂಬುವವರು ಸಿಮೇಂಟ್ ಸೀಟನ್ನು ಲೋಡ್ ಮಾಡುತ್ತಿದ್ದ ಸಮಯ ಮಾಣಿ ಕಡೆಯಿಂದ KA-19-MB-6218 ನೇ ನಂಬರಿನ ಮಾರುತಿ ಆಲ್ಟೊ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ನೌಶಾದ್ ರವರಿಗೆ ಮತ್ತು ನನ್ನ ರಿಕ್ಷಾ ಟೆಂಪೋದ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ನೌಶಾದ್ ರವರು ರಸ್ತೆಗೆ ಎಸೆಯಲ್ಪಟ್ಟು ಕಾಲಿಗೆ ಮೈ, ಕೈಗೆ ಗುದ್ದಿದ ಗಾಯವಾಗಿರುತ್ತದೆ ಅಲ್ಲದೆ ಕಾರಿನಲ್ಲಿದ್ದ ಚಾಲಕ ಇಬ್ರಾಹಿಂ ಮತ್ತು ಸಫಿಯಾ ಎಂಬುವವರಿಗೂ ರಕ್ತ ಗಾಯಗಳಾಗಿದ್ದು ಕೂಡಲೆ ಗಾಯಾಳುಗಳನ್ನು ಅಲ್ಲಿ ಸೇರಿದ ಜನರ ಸಹಾಯದಿಂದ ಎತ್ತಿ ಉಪಚರಿಸಿ ಅದೇ ರಸ್ತೆಯಲ್ಲಿ ಬರುತ್ತಿದ್ದ ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಕಳುಹಿಸಿಕೊಟ್ಟಿದ್ದು ನೌಶಾದ್ ರವರನ್ನು ಮಂಗಳೂರು ಕಂಕನಾಡಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಗಾಯಾಳು ನೌಶದ್ ಎಂಬವರು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್  ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ, ದಿನಾಂಕ: 08.06.2022 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ  ಸಂಚಾರ  ಪೊಲೀಸ್ ಠಾಣೆ. ಅ.ಕ್ರ 66/2022 ಕಲಂ: 279,337,304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಬಿ.ಅಬೂಬಕ್ಕರ್ ಪ್ರಾಯ 45 ವರ್ಷ, ತಂದೆ: ಬಿ. ಮಹಮ್ಮದ್, ವಾಸ: ಬೈಲಮೇಲು ಮನೆ, ತೆಕ್ಕಾರು ಅಂಚೆ & ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 07-06-2022 ರಂದು 15-40 ಗಂಟೆಗೆ ಆರೋಪಿ ಕಾರು ಚಾಲಕ ಅಯೂಬ್‌ ಪಿ ಎಸ್‌  ಎಂಬವರು KA-01-MG-1235 ನೇ ನೋಂದಣಿ ನಂಬ್ರದ ಕಾರನ್ನು ಅಜಿಲಮೊಗರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಅಜಿಲಮೊಗರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಬಾಜಾರು ಎಂಬಲ್ಲಿ ಬಾಜಾರು ಮಸೀದಿ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿದ ಪರಿಣಾಮ, ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರ ಮಗ ಮಹಮ್ಮದ್‌ ಅನ್ಫಲ್‌ ( 6 ½ ವ) ರವರಿಗೆ ಅಪಘಾತವಾಗಿ ಮಹಮ್ಮದ್‌ ಅನ್ಫಲ್‌ ರವರು ಮಣ್ಣು ರಸ್ತೆಗೆ ಬಿದ್ದು, ತಲೆಯ ಎಡಬದಿ, ದವಡೆ ಬಳಿ, ತಲೆಯ ಮಧ್ಯ ಭಾಗದಲ್ಲಿ ಗುದ್ದಿದ ಹಾಗೂ ರಕ್ತಗಾಯ,  ಬಲ ಕೈ ಬಳಿ ತರಚಿದ ಗಾಯಗಳಾಗಿ,  ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ  ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  104/2022  ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅನಿತಾ.ಕೆ ಪ್ರಾಯ 37 ವರ್ಷ, ತಂದೆ: ಶೀನಪ್ಪ ಗೌಡ, ವಾಸ: ಕರ್ನೊಜಿ  ಮನೆ, ಉಪ್ಪಿನಂಗಡಿ ಅಂಚೆ & ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 08-06-2022 ರಂದು 13-00 ಗಂಟೆಗೆ ಆರೋಪಿ ಸವಾರ ಶೀನಪ್ಪ ಗೌಡ ಎಂಬವರು KA-21-U-4120ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿನಲ್ಲಿ ಪಿರ್ಯಾದುದಾರರಾದ ಅನಿತಾ. ಕೆ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಹಿರೇಬಂಡಾಡಿ-ಪೆರಿಯಡ್ಕ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕರ್ನೊಜಿ ಮನೆ ಕಡೆಯಿಂದ ಪೆರಿಯಡ್ಕ್ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಬೊಳ್ಳವು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ತಿರುವು ರಸ್ತೆಯಲ್ಲಿ ಒಮ್ಮಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸ್ಕಿಡ್ ಆಗಿ ಪಿರ್ಯಾದುದಾರರು ಮತ್ತು ಆರೋಪಿ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಬಲಕಾಲಿನ ತೊಡೆಗೆ ಗುದ್ದಿದ ಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಯಲ್ಲಿ  ದಾಖಲಿಸಿರುತ್ತಾರೆ. ಆರೋಪಿ ಸವಾರನಿಗೂ ಮೈ ಕೈಗೆ ಗುದ್ದಿದ ನೋವಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  105/2022  ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿನಯಚಂದ್ರ ನಾಯಕ್ (50)ತಂದೆ:ದೇವಣ್ಣ ನಾಯಕ್‌ :ವಾಸ: ದಂಬೆತ್ತಾರು ಮನೆ.ವಿಟ್ಲ ಮುಡ್ನೂರು ಗ್ರಾಮ.ಬಂಟ್ವಾಳ ತಾಲೂಕು ರವರು ದಿನಾಂಕ:01.03.2022 ರಂದು ತಮ್ಮ ಕುಟುಂಬದ ಮನೆಯಾದ ಪೋಳ್ಯ ಎಂಬಲ್ಲಿ ಶಿವ ಪೂಜೆ ಇದ್ದುದರಿಂದ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ದಂಬೆತ್ತಾರು ಎಂಬಲ್ಲಿರುವ ತಮ್ಮ ಮನೆಯಿಂದ ಹೊರಟು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ 3.00 ಗಂಟೆಯ ವೇಳೆಗೆ ಮನೆಗೆ ತಲುಪಿದ ಬಳಿಕ ಪಿರ್ಯಾಧಿ ಪತ್ನಿ ವಿಧ್ಯಾಳು ಧರಿಸಿದ್ದ ಚಿನ್ನದ ಬ್ರಾಸ್ ಲೈಟ್ ನ್ನು ಮನೆಯ ಕಪಾಟಿನಲ್ಲಿ ಇನ್ನುಳಿದ ಚಿನ್ನಾಭರಣಗಳ ಜೊತೆ ಇಟ್ಟಿರುತ್ತಾರೆ.  ನಂತರ ದಿನಾಂಕ:05.04.2022 ರಂದು ಪಿರ್ಯಾಧಿಯ ಮನೆಯಲ್ಲಿ ʼʼರಾತ್ರಿ ದೇವಿ ಪೂಜೆʼʼ ಕಾರ್ಯಕ್ರಮ ಇದ್ದ ಕಾರಣ ದೇವಿಗೆ ಅಲಂಕಾರ ಮಾಡುವ ಸಂಧರ್ಭದಲ್ಲಿ ಚಿನ್ನದ ಸರವನ್ನು ಹಾಕುವ ಸಲುವಾಗಿ ರಾತ್ರಿ ವೇಳೆ 8.30 ಗಂಟೆಯ ಸಮಯದಲ್ಲಿ ಚಿನ್ನಾಭರಣಗಳಿಡುವ ಕಪಾಟನ್ನು ತೆರೆದು ನೋಡಿದಾಗ ಕಪಾಟಿನ ಒಳಗಡೆ ಚಿನ್ನಾಭರಣಗಳಿದ್ದ ಬಾಕ್ಸ್ ಇಲ್ಲದೇ ಇದ್ದು ಚಿನ್ನಾಭರಣಗಳ ಸಮೇತ ಕಳವಾಗಿರುವುದು ಕಂಡು ಬಂದಿರುತ್ತದೆ. ಸದ್ರಿ ಕಪಾಟಿನಲ್ಲಿದ್ದ ಬಾಕ್ಸ್ ನಲ್ಲಿ 1) ಚಿನ್ನದ ಬ್ರಾಸ್ ಲೈಟ್ -01 ಇದು ಅಂದಾಜು 24 ಗ್ರಾಂ ಆಗಿರುತ್ತದೆ.2) ಚಿನ್ನದ ಲಕ್ಷ್ಮಿ ಚೈನ್-01 ಇದು ಅಂದಾಜು 22 ಗ್ರಾಂ 3) ಚಿನ್ನದ ಪದಕ ಸಹಿತ ಚೈನು ಅಂದಾಜು 24 ಗ್ರಾಂ 4)ಚಿನ್ನದ ಲಕ್ಷ್ಮಿ ಪದಕ ಸಹಿತ ಚೈನ್-01 ಇದು ಅಂದಾಜು 20 ಗ್ರಾಂ 5) ಚಿನ್ನದ ಉಂಗುರಗಳು-03 ಇದು ಅಂದಾಜು 8 ಗ್ರಾಂ ಚಿನ್ನಾಭರಣಗಳು ಕಳವಾಗಿದ್ದು ಸದ್ರಿ ಚಿನ್ನಾಭರಣಗಳ ಒಟ್ಟು ಮೌಲ್ಯ ಅಂದಾಜು 1,48,000/- ರೂಪಾಯಿ ಆಗಬಹುದು. ದಿನಾಂಕ:01.03.2022 ರಂದು ಮಧ್ಯಾಹ್ನ 3.00 ಗಂಟೆಯಿಂದ ದಿನಾಂಕ:05.04.2022 ರಂದು ರಾತ್ರಿ 8.30 ಗಂಟೆಯ ನಡುವೆ ಪಿರ್ಯಾಧಿ ಮನೆಯ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 89/2022  ಕಲಂ: 380  ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಕುಮಾರ ಎಂ ಕೆ ಪ್ರಾಯ:65 ವರ್ಷ ತಂದೆ: ದಿ/ ನಾರಾಯಣ ಎಂ ಕೆ ವಾಸ; ಬೊಲ್ಮನಾರು ಮನೆ ಪುದುವೆಟ್ಟು  ಗ್ರಾಮ ಬೆಳ್ತಂಗಡಿ  ತಾಲೂಕು ರವರು ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಬೊಲ್ಮನಾರು ಎಂಬಲ್ಲಿ  ದಿನಾಂಕ:07-06-2022 ರಂದು ಸಂಜೆ 5.30 ಗಂಟೆಗೆ ಮನೆ ಅಂಗಳದಲ್ಲಿ ನಿಂತುಕೊಂಡಿರುವಾಗ ಪಿರ್ಯಾದುದಾರರ ಮಗ ರಜೀಶ್ (40) ಎಂಬವನು ವಿಪರೀತ ಅಮಲು ಪದಾರ್ಥ ಸೇವಿಸಿಕೊಂಡು ಬಂದು ಪಿರ್ಯಾದುದಾರರ ಉದ್ದೇಶಿಸಿ  ನೀನು ಮನೆ ಬಿಟ್ಟು ಹೋಗಬೇಕು ಇಲ್ಲದಿದ್ದರೆ ನಿನ್ನನ್ನು ಕೊಲ್ಲದೇ  ಬಿಡುವುದಿಲ್ಲ ಎಂದು ಹೇಳಿ ಅವ್ಯಾಚ ಶಬ್ದಗಳಿಂದ ಬೈದು ಅಂಗಳದ ಬದಿಯಲ್ಲಿ ರಬ್ಬರ ಮರದ ದೊಣ್ಣೆಯಿಂದ ಪಿರ್ಯಾದುದಾರರ ಎಡ ಕಾಲಿನ ತೊಡೆಗೆ ಹೊಡೆದುಹಾಕಿರುತ್ತಾನೆ.  ಗಾಯಗೊಂಡ ಪಿರ್ಯಾದುದಾರರನ್ನು ನೆರೆಯ ಕಮಲದಾಸ್ ಹಾಗೂ ಪಿರ್ಯಾದುದಾರರ ಹೆಂಡ್ತಿ ಅಲ್ಸಮ್ಮ  ಎಂಬವರು ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ ಕ್ರ  43/2022 ಕಲಂ; 506,504,324 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೊಹಮ್ಮದ್ ಪುಝೈಲ್ ಉಮ್ಮರ್ ಪ್ರಾಯ: (19) ತಂದೆ: ಬುಡೋಳಿ ಉಮ್ಮರ್ ವಾಸ: ಪಲಿಕೆ ಮನೆ ಪೆರಾಜೆ ಗ್ರಾಮ ಮಾಣಿ ಅಂಚೆ ಬಂಟ್ವಾಳ ತಾಲೂಕು ಎಂಬವರು ಕಾಲೇಜು ವಿದ್ಯಾರ್ಥಿಯಾಗಿದ್ದು ದಿನಾಂಕ: 08-06-2022 ರಂದು ತನ್ನ ತಂದೆ ಬಾಬ್ತು ಕಾರಿನಲ್ಲಿ ಕಾಲೇಜಿಗೆ ಬಂದಿದ್ದು ತನ್ನ ಸಹಪಾಠಿಯ ಜೊತೆ ಹೋಗುತ್ತಿದ್ದ ಸಮಯ ನೆಹರೂನಗರ ಜಂಕ್ಷನ್ ಎಂಬಲ್ಲಿ ಅಪರಿಚಿತ 8 ಜನ ಯುವಕರು ಬಂದು ಪಿರ್ಯಾದುದಾರರಿಗೆ ಹಾಗೂ ಸಹಪಾಠಿಗೆ ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 44/2022 ಕಲಂ: 143,147,341,323 ಜೊ 149 ಐಪಿಸಿ     ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎಸ್. ಜೀವರಾಜ, 46 ವರ್ಷ, ತಂದೆ: ಎಂ. ಚಿದಂಬರಂ, ವಾಸ: ಮೊಗಪ್ಪೆ ಮನೆ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 08-06-2022 ರಂದು ಮೊಗಪ್ಪೆ ಸಿ ಆರ್ ಸಿ ಕಾಲನಿಯಲ್ಲಿ ತಂದೆ ಚಿದಂಬರಂ, ತಾಯಿ ಜೀವರತ್ನಂ, ದೊಡ್ಡಮ್ಮ ಪೊನ್ನಮ್ಮ, ಮತ್ತು ಪತ್ನಿ ಉಮಾ ಹಾಗೂ ಮಕ್ಕಳ ಜೊತೆ ವಾಸವಾಗಿದ್ದ ಪಿರ್ಯಾದಿದಾರರ ತಮ್ಮ ಷಣ್ಮುಖ ಮೂರ್ತಿ, 44 ವರ್ಷ ರವರು ದಿನಾಂಕ 03-06-2022 ರಂದು ಮುಂಜಾನೆ 05-30 ಗಂಟೆಗೆ ಮನೆ ಸಮೀಪದ ಕೊಠಡಿಯ ಒಳಗೆ ಹೋಗಿ ಬಾಗಿಲುಗಳನ್ನು ಹಾಕಿಕೊಂಡು ಕಳೆ ತೆಗೆಯುವ ಯಂತ್ರಕ್ಕೆ ಹಾಕಲು ತಂದ ಪೆಟ್ರೋಲ್ ನ್ನು ಮೈ ಮೇಲೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಪ್ರಯತ್ನಿಸಿದವನನ್ನು, ಪತ್ನಿ ಉಮಾ ಮತ್ತು ನೆರೆಮನೆಯವರು ಬಾಗಿಲು ದೂಡಿ ತೆರೆದು ಬೆಂಕಿ ನಂದಿಸಿ ಚಿಕಿತ್ಸೆಯ ಬಗ್ಗೆ ಕಾರಿನಲ್ಲಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ದೇಹದಲ್ಲಿ ಸುಟ್ಟ ಗಂಭೀರಗಾಯಗಳಾಗಿದ್ದುದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ ಷಣ್ಮಖ ಮೂರ್ತಿ ದಿನಾಂಕ 08-06-2022 ರಂದು 08-40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಷಣ್ಮಖ ಮೂರ್ತಿಯು ರಬ್ಬರ್ ವ್ಯವಹಾರದ ಬಗ್ಗೆ ಬೆಳ್ಳಾರೆಯ ಆರ್.ಪಿ.ಎಸ್ ರಬ್ಬರ್ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದ್ದು, ಸೊಸೈಟಿಯಲ್ಲಿ ನಷ್ಟ ಉಂಟಾದ ಪರಿಣಾಮ ಹೂಡಿಕೆ ಮಾಡಿದ ಹಣ ವಾಪಾಸ್ಸು ಬಾರದೇ ಇದ್ದುದರಿಂದ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಈ ಕೃತ್ಯ ಎಸಗಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 18/2022. ಕಲಂ  174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 09-06-2022 11:09 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080