ಅಪಘಾತ ಪ್ರಕರಣ: ೦1
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರವೀಂದ್ರ ಆಚಾರ್ಯ , ಪ್ರಾಯ 43 ವರ್ಷ, ತಂದೆ: ದಿ|| ಹರಿಶ್ಚಂದ್ರ ಆಚಾರ್ಯ, ವಾಸ: ಶಿಲ್ಪಾ ನಿಲಯ ಮನೆ, ಇಳಂತಿಲ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 07-07-2021 ರಂದು 16-00 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಹರೀಶ್ ಗೌಡ ಎಂಬವರು KA-21-EB-6314 ನೇ ನೋಂದಣಿ ನಂಬ್ರದ ಸ್ಕೂಟರ್ನಲ್ಲಿ ಪಿರ್ಯಾದುದಾರರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಪೇಟೆ ಕಡೆಯಿಂದ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಉಪ್ಪಿನಂಗಡಿ ಎಂಬಲ್ಲಿ ಸರಕಾರಿ ಆಸ್ಪತ್ರೆಯ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಸ್ಕೂಟರ್ ಸ್ಕಿಡ್ ಆಗಿ ಸಹಸವಾರರಾಗಿದ್ದ ಪಿರ್ಯಾದುದಾರರು ಮತ್ತು ಆರೋಪಿ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಆರೋಪಿ ಸವಾರನಿಗೆ ಸಣ್ಣಪುಟ್ಟ ಗಾಯಗಳು ಮತ್ತು ಪಿರ್ಯಾದುದಾರರಿಗೆ ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಹಾಗೂ ಬಲಕೈ ಮೊಣಗಂಟಿಗೆ ತರಚಿದ ಗಾಯಗಳಾಗಿ, ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 95/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕೊಲೆ ಬೆದರಿಕೆ ಪ್ರಕರಣ: ೦2
ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರುಮಾಣಿ (66) ತಂದೆ: ಮಂಗುರ ,ವಾಸ: ದೈಲ ಮನೆ,ಬಡಗಕಾರಂದೂರು ಗ್ರಾಮ,ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಸ್ವಾಧೀನದಲ್ಲಿರುವ ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ಕುಮ್ಕಿ ಜಮೀನಿನಲ್ಲಿ ಅಡಿಕೆ ತೆಂಗಿನ ಕೃಷಿ ಮಾಡಿ ಬೇಲಿ ಹಾಕಿರುತ್ತಾರೆ. ದಿನಾಂಕ 07-07-2021 ರಂದು ಮಧ್ಯಾಹ್ನ 02:00 ಗಂಟೆಗೆ ಪಿರ್ಯಾದಿದಾರರ ಮನೆ ಸಮೀಪ ವಾಸವಿರುವ ಆರೋಪಿಗಳಾದ ರೋಜಿನ, ಪ್ರದೀಪ್, ಅರುಣ್, ಮೆಲ್ವಿನ್,ಮೆಬುಲ್ ರವರು ಅಕ್ರಮ ಕೂಟ ಸೇರಿಕೊಂಡು ಸದ್ರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅದರಲ್ಲಿದ್ದ ಕೃಷಿ ನಾಶ ಮಾಡಿ ತಂತಿ ಬೇಲಿಯನ್ನು ಕಡಿದು ಹಾಕಿ ಸುಮಾರು ಒಂದು ಲಕ್ಷ ರೂ ನಷ್ಠವನ್ನು ಉಂಟು ಮಾಡಿರುತ್ತಾರೆ. ಪಿರ್ಯಾದಿದಾರರು ಮತ್ತು ಅವರ ಮಗ ಜೋನ್ ಸೇರಿ ಆರೋಪಿಗಳ ಕೃತ್ಯವನ್ನು ನಿಲ್ಲಿಸಲು ಹೇಳಿದಾಗ ಮೇಲಿನ ಆರೋಪಿಗಳೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು ,ಅಲ್ಲದೇ ಪಿರ್ಯಾದಿದಾರರ ಮಗನಿಗೆ ಮರದ ದೊಣ್ಣೆಯಿಂದ ಹಲ್ಲೆ ಮಾಡಿರುತ್ತಾರೆ ಹಾಗೂ ರೋಜಿನ ಎಂಬವರು ಕತ್ತಿ ಹಿಡಿದುಕೊಂಡು ಬಂದು “ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು “ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 44 -2021 ಕಲಂ: 143,147,447, 427, 504, 506 324, ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರೋಜಿನಾ (66) ಗಂಡ:ಸುಂದರ ಆತೋನಿ : ಮಂಗುರ ,ವಾಸ: ದೈಲ ಮನೆ,ಬಡಗಕಾರಂದೂರು ಗ್ರಾಮ,ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ದೈಲ ಎಂಬಲ್ಲಿರುವ ಕುಮ್ಕಿ ಜಮೀನಿನಲ್ಲಿ ಬೇಲಿ ಹಾಕಿ ಕೃಷಿ ಮಾಡಿಕೊಂಡಿರುತ್ತಾರೆ. ದಿನಾಂಕ 07-07-2021 ರಂದು ಮಧ್ಯಾಹ್ನ 02:15 ಗಂಟೆಗೆ ಸದ್ರಿ ಜಮೀನಿನಲ್ಲಿ ಪಿರ್ಯಾದಿದಾರರು ಮತ್ತುಅವರ ಮಗ ಮೆಲ್ವಿನ್ ರವರುಗಳು ಕೃಷಿ ಕೆಲಸದಲ್ಲಿ ನಿರತರಾಗಿದ್ದಾಗ ಆರೋಪಿಗಳಾದ ಜಾನ್ , ರುಮಾಣಿ, ರೋಶನ್ ಎಂಬವರುಗಳು ಸದ್ರಿ ಸ್ಥಳಕ್ಕೆ ಬಂದು “ಈ ಜಾಗವು ನಮಗೆ ಸೇರಿದ್ದು, ಸದ್ರಿ ಜಾಗಕ್ಕೆ ಅಕ್ರಮ ಸಕ್ರಮವಾಗಿ ನಾವೂ ಕೂಡ ಅರ್ಜಿ ಸಲ್ಲಿಸಿರುತ್ತೇವೆ ಹಾಗೂ ನಮಗೆ ನಕ್ಷೆ ಯಾಗಿರುತ್ತದೆ” ಎಂದು ತಿಳಿಸಿ ಇಲ್ಲಿ ಕೆಲಸ ಮಾಡಬೇಡಿ ಎಂದು ಆರೋಪಿಗಳು ಪಿರ್ಯಾದಿದಾರರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರರ ಬಳಿ ಬಂದು ಅಲ್ಲಿಯೇ ಇದ್ದ ಮರದ ಕೋಲಿನಿಂದ ಫಿರ್ಯಾದಿದಾರರ ಎಡ ಕಾಲಿನ ಮೊಣಗಂಟಿಗೆ ಹೊಡೆದಿದ್ದು ತಡೆಯಲು ಬಂದ ಮಗ ಮೆಲ್ವಿನ್ ಗೆ ಅದೇ ಮರದ ದೊಣ್ಣೆಯಿಂದ ಸೊಂಟಕ್ಕೆ ಹಾಗೂ , ತಲೆ, ಮುಖಕ್ಕೆ ಹೊಡೆದಿರುತ್ತಾರೆ, ಆ ಸಮಯ ಪಿರ್ಯಾದಿದಾರರು ನೆಲಕ್ಕೆ ಬಿದ್ದು ಸೊಂಟಕ್ಕೆ ನೋವಾಗಿರುತ್ತದೆ ನಂತರ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಬೊಬ್ಬೆ ಕೇಳಿ ಫಿರ್ಯಾದಿದಾರರ ಮಗ ಪ್ರವೀಣ್ ಅಲ್ಲಿಗೆ ಬಂದಿದನ್ನು ನೋಡಿ ಜಾನ್ ದೊಣ್ಣೆಯನ್ನು ಅಲ್ಲೇಯೇ ಬಿಸಾಡಿ “ ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 45-2021 ಕಲಂ:323,324,504,506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦3
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ. 08.07.2021 ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 75-2021 ಕಲಂ 504,323,354,34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ವೇಣೂರು ಪೊಲೀಸ್ ಠಾಣೆ : ದಿನಾಂಕ: 08.07.2021 ವೇಣೂರು ಠಾಣಾ ಅ.ಕ್ರ ನಂಬ್ರ 46-2021 ಕಲಂ: 448,323, 504, 354,427,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಬ್ರಮಣ್ಯ ಪೊಲೀಸ್ ಠಾಣೆ : ದಿನಾಂಕ: 08-07-2021 ರಂದು ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 44-2021 U/s Sec. 341,323, 354, 504,506 r/w 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಮೀಲ್ ಕುಮಾರ್ ಹೆಬ್ರಮ್ (21) ತಂದೆ: ದಿ| ವಿಜೇಂದ್ರ ಹೆಬ್ರಮ್ ವಾಸ: ಚಂದ್ ಗ್ರಾಮ ಮತ್ತು ಅಂಚೆ, ಬಾದೆಜೀ ಹರಿಪುರ್ ತಾಣಾ ಮುಪುಸಿಲ್ ಮಮುತಾ ಜರ್ಖಾಂಡ್ ಎಂಬವರ ದೂರಿನಂತೆ ಪಿರ್ಯಾಧಿದಾರರ ಅಣ್ಣನ ಮಗನಾದ ದಿನೇಶ್ ಎಂಬಾತನು ಕಳೆದು ಒಂದುವರೇ ವರ್ಷಗಳಿಂದ ಬಿ ಕಸಬಾ ಗ್ರಾಮದ ಲೊರೆಟ್ಟೊಪದವಿನಲ್ಲಿ ಪಿಯೂಶ್ ರೋಡ್ರಿಗಸ್ ರವರ ಲೆವಿನ್ ಇಲೆಕ್ಟ್ರಿಕಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:05-07-2021 ರಂದು ಎದೆನೋವಿಗೆಂದು ಸರಕಾರಿ ಆಸ್ಪತ್ರೆಯಿಂದ ಔಷಧಿಯನ್ನು ಪಡೆದುಕೊಂಡಿದ್ದು, ದಿನಾಂಕ:06-07-2021 ರಂದು ಮಧ್ಯಾಹ್ನ 2.00 ಗಂಟೆಗೆ ದಿನೇಶ್ ರವರೊಂದಿಗೆ ಕೆಲಸ ಮಾಡಿಕೊಂಡಿದ್ದ ಹುಡುಗರು ಪಿರ್ಯಾದಿದಾರರಿಗೆ ಕರೆ ಮಾಡಿ ದಿನೇಶ್ ಮೃತಪಟ್ಟಿರುವುದಾಗಿಯೂ ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 26-2021 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.