ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಂದ್ರಶೇಖರ್ ಎಸ್ ಪ್ರಾಯ 45 ವರ್ಷ ತಂದೆ ತಿಮ್ಮಪ್ಪ ಮೂಲ್ಯ ವಾಸ ಸುರಂಬಡ್ಕ ಮನೆ ಮಂಗಲಪದವು ಅಂಚೆ ವಿಟ್ಲ ಕಸಬಾ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ: 07.07.2022 ರಂದು  ತನ್ನ ಬಾಬ್ತು ಆಲ್ಟೋ ಕಾರಿನಲ್ಲಿ ಖಾಸಗಿ ಕೆಲಸದ ನಿಮಿತ ಕಲ್ಲಡ್ಕ ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿರುವಾಗ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರ್ ಜಂಕ್ಷನ್ ನಲ್ಲಿ ತಾನು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರನ್ನು ನಿಲ್ಲಿಸಿ ರಸ್ತೆ ಬದಿಯಲ್ಲಿರುವ ಗೂಡು ಅಂಗಡಿಯಲ್ಲಿ ಚಾ ಕುಡಿಯುತ್ತ ಮಂಗಳೂರು – ಬೆಂಗಳೂರು ರಾಷ್ಟೀಯ ಹೆದ್ದಾರಿಯ ಕಡೆ ನೋಡುತ್ತಿದಂತೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಕೆಎ-01-ಎಎಫ್-6268 ಟ್ಯಾಂಕರ್ ನ್ನು ಅದರ ಚಾಲಕ ಪಳನಿಸ್ವಾಮಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲ ಬದಿಗೆ ಚಾಲನೆ ಮಾಡಿಕೊಂಡು ಬಂದು ಎದುರು ಬರುತ್ತಿದ್ದ ಅಂದರೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕೆಎ -19-ಎಂಎಫ್-3357ನೇ ತೂಫಾನ್ ಟೆಂಪೋಗೆ ಎದುರಿನಿಂದ  ಡಿಕ್ಕಿಪಡಿಸಿದನು. ಪಿರ್ಯಾಧಿದಾರರು ಹಾಗೂ ರಸ್ತೆಯ ಬದಿಯಲ್ಲಿ ನಿಂತಿದ್ದ ಅಸುಪಾಸಿನವರು ತೂಪಾನ್ ಟೆಪೋ ಬಳಿಗೆ ಹೋದಾಗ ತೂಪಾನ್ ಟೆಂಪೋನ ಎದುರು ಸಂಪೂರ್ಣ ಜಖಂಗೊಂಡಿತ್ತು. ತೂಫಾನ್ ಟೆಂಪೋ ಒಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಉಪಚರಿಸಿ ನೋಡಲಾಗಿ ಎಡ ಕೈ ಹಾಗೂ ತಲೆಯ ಬಳಿ ರಕ್ತಗಾಯವಾಗಿರುತ್ತದೆ, ತೋಫಾನ ಚಾಲಕನ ಹೆಸರು ತಿಳಿಯಲಾಗಿ ಸುರೇಂದ್ರ ಎಂದು ತಿಳಿಯಿತು. ಬಳಿಕ ಗಾಯಗೊಂಡ ತೂಪಾನ್ ಚಾಲಕನನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೇನ್ಸ್ ವಾಹನದಲ್ಲಿ ಮಂಗಳೂರು ತೇಜಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿರುತ್ತದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 113/2022  ಕಲಂ: 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ಆಲಿ ಜೌಹರ್ (21), ತಂದೆ: ಮಹಮ್ಮದ್ ಬಶೀರ್, ವಾಸ: ಫಾತೀಮ ಮಂಜಿಲ್, ನಂಬ್ರ: 5-46 ಬಿ, ವೆಂಕಟರಮಣ ದೇವಸ್ಥಾನ ಹತ್ತಿರ, ಅರಮನೆ ರಸ್ತೆ, ಮಾರ್ಪಾಡಿ ಗ್ರಾಮ, ಮೂಡಬಿದ್ರೆ ತಾಲೂಕು, ದ.ಕ ಜಿಲ್ಲೆ ರವರು ದಿನಾಂಕ: 02-07-2022 ರಂದು ತನ್ನ ಬಾಬ್ತು ಮೋಟಾರು ಸೈಕಲ್‌ ನಂಬ್ರ: ಕೆಎ 19 ಎಚ್‌ ಎಫ್‌ 8901 ನೇದರಲ್ಲಿ ಉಜಿರೆಯಿಂದ ಚಾರ್ಮಾಡಿ ಕಡೆಗೆ ಸವಾರಿ ಮಾಡಿಕೊಂಡು  ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 11.30 ಗಂಟೆಗೆ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಸ್ಮಶಾನ ಗುಡ್ಡೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ಧಿಕ್ಕಿನಿಂದ ಅಂದರೆ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಕೆಎ 02 ಎಮ್‌ಪಿ 0218 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದನು ಪರಿಣಾಮ ಪಿರ್ಯಾದಿದಾರರಿಗೆ ಬಲಕಾಲಿನ ತೊಡೆಗೆ, ಬಲಕಾಲಿನ ಪಾದ ಮತ್ತು ಮಣಿಗಂಟಿಗೆ ಗುದ್ದಿದ ಗಾಯವಾಗಿರುತ್ತದೆ, ಗಾಯಾಳು ಮಂಗಳೂರು ಹೈಲ್ಯಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 95/2022 ಕಲಂ: 279 337 ಭಾ ದಂ ಸಂ,  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀ ಮದನ್‌ ಕುಮಾರ್‌ ಪ್ರಾಯ:39 ವರ್ಷ ತಂದೆ: ಶಶಿಧರನ್ ವಾಸ:ಮತ್ರಾಡಿ ಮನೆ, ಕುಂತೂರು ಗ್ರಾಮ ,ಕಡಬ ತಾಲೂಕು ರವರು KA-19 D-1552 ನೇ SUPER ACE ಮಿನಿ ಗೂಡ್ಸ್ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ:08.07.2022 ರಂದು ಸದ್ರಿ ವಾಹನದಲ್ಲಿ ಬಾಡಿಗೆ ನಿಮಿತ್ತ ಮಂಗಳೂರಿನಿಂದ ಕಡಬ ತಾಲೂಕು ಮರ್ದಾಳ ಗ್ರಾಮಕ್ಕೆ ಮನೆ ಸಾಮಾನುಗಳನ್ನು ತುಂಬಿಸಿಕೊಂಡು ಉಪ್ಪಿನಂಗಡಿ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಕಡಬ ತಾಲೂಕು ಕುಂತೂರು ಗ್ರಾಮದ ಎರ್ಮಾಳ ಎಂಬಲ್ಲಿಗೆ ತಲುಪಿದಾಗ ಕಡಬ ಕಡೆಯಿಂದ ಬರುತಿದ್ದ KA-21 B-9302ನೇ ಆಟೋ ರಿಕ್ಷಾ ವಾಹನದ ಸವಾರನಾದ ಆರೋಪಿತನು ರಸ್ತೆಯಲ್ಲಿ ತೀರಾ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಚಲಾಯಿಸಿಕೊಂಡು ಬರುತಿದ್ದ KA-19 D-1552 ನೇ SUPER ACE ಮಿನಿ ಗೂಡ್ಸ್ ವಾಹನಕ್ಕೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಆಟೋರಿಕ್ಷಾ ಮತ್ತು ಗೂಡ್ಸ್ ವಾಹನ ಜಖಂಗೊಂಡಿದ್ದು .ಅಪಘಾತದಲ್ಲಿ ಆಟೋ ರಿಕ್ಷಾ ವಾಹನದ ಸವಾರನಾದ ಆರೋಪಿತ ಹರೀಶ್‌ ಎಂಬಾತನಿಗೆ ಕಾಲಿಗೆ ರಕ್ತಗಾಯವಾಗಿರುತ್ತದೆ  ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 60/2022 ಕಲಂ: 279.337 ಐಪಿಸಿ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶೇಖರ ಪೂಜಾರಿ, 47 ವರ್ಷ, ತಂದೆ: ತನಿಯಪ್ಪ ಪೂಜಾರಿ, ವಾಸ: ತಾರಿಯಡ್ಕ ಮನೆ, ವಿಟ್ಲ ಪಡ್ನೂರು ಗ್ರಾಮ, ಬಂಟ್ವಾಳ ತಾಲೂಕು. ದ.ಕ ಜಿಲ್ಲೆ ರವರು ದಿನಾಂಕ 07-07-2022 ರಂದು ಅವರ ಬಾಬ್ತು ಮಾರುತಿ 800 ಕಾರು ನಂ KA19M-8332 ನೇಯದ್ದರಲ್ಲಿ ಕಡಬ ಸಮೀಪ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ರಮದ ನಿಮಿತ್ತ ಹೋದವರು, ಕಾರ್ಯಕ್ರಮ ಮುಗಿಸಿ ವಾಪಾಸ್ಸು ಮನೆ ಕಡೆಗೆ ನಿಂತಿಕಲ್ಲು-ಸವಣೂರು ಮಾರ್ಗವಾಗಿ ಪ್ರಯಾಣಿಸುತ್ತಾ ಕಡಬ ತಾಲೂಕು ಸವಣೂರು ಗ್ರಾಮದ ಸವಣೂರು ಪೆಟ್ರೋಲ್ ಬಂಕ್ ಸಮೀಪ ಸಂಜೆ 6:45 ಗಂಟೆ ಸಮಯಕ್ಕೆ ತಲಪಿದಾಗ ವಿರುದ್ದ ದಿಕ್ಕಿನಿಂದ ಅಂದರೆ ಪುತ್ತೂರು ಕಡೆಯಿಂದ ಸವಣೂರು ಕಡೆಗೆ ಮೋಟಾರು ಸೈಕಲೊಂದನ್ನು ಅದರ ಸವಾರರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡುತ್ತಾ ರಸ್ತೆಯ ತೀರಾ ಬಲಬದಿಗೆ ಅಂದರೆ ತಪ್ಪು ಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರರ ಸಮೇತ ರಸ್ತೆಯಲ್ಲಿ ಬಿದ್ದು  ಎರಡೂ ವಾಹನಗಳು ಜಖಂ ಗೊಂಡು ಮೋಟಾರು ಸೈಕಲ್ ಸವಾರ ಪುನೀತ್ ಹಾಗೂ ಸಹ ಸವಾರರಾಗಿದ್ದ ಜೀವನ್ ರವರಿಗೆ ಗಾಯಗಳುಂಟಾಗಿದ್ದು ಗಾಯಾಳುಗಳನ್ನು ಪಿರ್ಯಾದಿದಾರರು ಹಾಗೂ ಸಾರ್ವಜನಿಕರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಆಂಬುಲೆನ್ಸ್ ವಾಹನದಲ್ಲಿ ಪುತ್ತೂರಿಗೆ ಕಳುಹಿಸಿಕೊಟ್ಟಿದ್ದು, ಗಾಯಾಳುಗಳಿಬ್ಬರೂ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಅ.ಕ್ರ 56/2022 ಕಲಂ 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವ ಬೆದರಿಕೆ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಿ ಪದ್ಮನಾಭ  ಪ್ರಾಯ: 50 ವರ್ಷ, ತಂದೆ:ಬಾಳಪ್ಪ ಗೌಡ,ವಾಸ: ಸಲ್ತಾಡಿ ಮನೆ,ನಾಲ್ಕೂರು ಗ್ರಾಮ,ಸುಳ್ಯ .ದ.ಕ ಜಿಲ್ಲೆ ರವರು ದಿನಾಂಕ 06.07.2022 ರಂದು ರಾತ್ರಿ 07.30 ಗಂಟೆಗೆ ಅವರ ಮಗ ಆನಾರೋಗ್ಯ ನಿಮಿತ್ತ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಲ್ಲಿಗೆ ಹೋಗುವಾಗ ಪಂಜ-ಕಡಬ ಕ್ರಾಸ್ (ಪಂಜ ಸೊಸೈಟಿ ಬ್ಯಾಂಕ್ ) ಬಳಿ ಒಂದು ಬೈಕ್ ಮತ್ತು ಕಾರ್ ಅಪಘಾತವಾಗಿದ್ದು, ಸದ್ರಿ ಸಮಯ ಪಿರ್ಯಾದಿಯವರು ಅಪಘಾತ ಸ್ಥಳಕ್ಕೆ ತೆರಳಿ ಗಾಯಾಳುವನ್ನು ಎಬ್ಬಿಸಲು ಹಗಿದ್ದು ಆ ಸಮಯ ಅಲ್ಲಿಗೆ ಬಂದ ಭರತ್ ,ಜಿನತ್ ಗೌಡ,ಸತೀಶ ಮತ್ತು ಇನ್ನೂ ಕೆಲವು ಅಪರಿಚಿತರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ನೀನು ಇಲ್ಲಿ ಇದ್ದರೆ “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆಯೊಡ್ಡಿ ಪಿರ್ಯಾದಿದಾರರ ಭುಜಕ್ಕೆ ಕೈ ಹಾಕಿ ಪಕ್ಕದ ಚರಂಡಿಗೆ ಎಸೆದಿರುತ್ತಾರೆ. ಪರಿಣಾಮ ಪಿರ್ಯಾದಿದಾರರ ಎಡಗೈ ಅಂಗೈಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ನಂತರ ಪಿರ್ಯಾದಿದಾರರ ಮಗನನ್ನು ಅನಾರೋಗ್ಯದ ನಿಮಿತ್ತ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ದಾಖಲಿಸಿರುವುದರಿಂದ ಸ್ವತ: ಪ್ರಥಮ ಚಿಕಿತ್ಸೆ ತೆಗೆದುಕೊಂಡು ಪುತ್ತೂರಿಗೆ ತೆರಳಿರುತ್ತಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಅ.ಕ್ರ 70/2022 ಕಲಂ 341,323, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅಹಲ್ಯ ಕಿರಣ ಶೆಟ್ಟಿ ಪ್ರಾಯ: 43 ವರ್ಷ ಗಂಡ : ಕಿರಣ ಶೆಟ್ಟಡಿ ಔಆಸ: 304, 3ನೆ ಮಹಡಿ ಆರ್.ಈ.ಬಿ ಎನಕ್ಲೇವ್‌ ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ರವರು ತನ್ನ ಪತಿ, ಮಕ್ಕಳೊಂದಿಗೆ ವಾಸವಾಗಿದ್ದು, ಪಿರ್ಯಾದಿದಾರರ ಗಂಡ ಕಿರಣ ಶೆಟ್ಟಿಯವರು ಸುಮಾರು 20 ವರ್ಷಗಳಿಂದ ಪುತ್ತೂರು ಮಹಾವೀರ ಆಸ್ಪತ್ರೆ ಎದುರುಗಡೆ ಇರುವ ಸೋಲಾರ್ ಮೇಟ್ರಿಕ್ಸ್ ಎಂಬ ಸಂಸ್ಥೆಯ ಮಾಲಿಕರಾಗಿ ಸಂಸ್ಥೆ ನಡೆಸುತ್ತಿದ್ದು, ದಿನಾಂಕ 08.07.2022 ರಂದು ಶ್ರೀಮತಿ ಅಹಲ್ಯ ಶೆಟ್ಟಿಯವರು ಕೆಲಸಕ್ಕೆ ತೆರಳಿದ್ದು ಅವರ ಪತಿ ಕಿರಣ ಶೆಟ್ಟಿಯವರು ಮನೆಯಲ್ಲಿಯೆ ಮಕ್ಕಳೊಂದಿಗೆ ಇದ್ದು ತನ್ನ ಬೆಡ್‌ರೂಮ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮದ್ಯಾಹ್ನ ಸಮಯ ಸುಮಾರು 01.30 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮಗಳು ಕಿರಣ ಶೆಟ್ಟಿಯವರನ್ನು ಊಟಕ್ಕೆ ಕರೆದಾಗ ತಾನು ಮತ್ತೆ ಬರುವುದಾಗಿ ತಿಳಿಸಿದ್ದು, ಶ್ರೀಮತಿ ಅಹಲ್ಯ ಶೆಟ್ಟಿಯವರು ಸಾಯಂಕಾಲ ಮನೆಗೆ ಬಂದು ಗಂಡನಿಗೆ ಚಹಾ ನೀಡಲು ಕರೆದಾಗ ಅವರು ಬಾಗಿಲು ತೆಗೆಯದೆ ಇದ್ದುದ್ದನ್ನು ಕಂಡು ಬೆಡ್‌ರೂಮ್ ಬಾಗಿಲು ಬಡಿದಾಗ ತೆರೆಯದೆ ಇದ್ದರಿಂದ ಸಂಶಯಗೊಂಡ ಪಿರ್ಯಾದಿದಾರರು ತನ್ನ ಗಂಡನ ಸ್ನೇಹಿತ ಕೋಡಿಂಬಾಡಿ ನಿವಾಸಿ ಸುದೇಶ್‌ ಹಾಗೂ ಪಿರ್ಯಾದುದಾರರ ಗಂಡನ ತಾಯಿಯವರಿಗೆ ತಿಳಿಸಿದ್ದು ಅವರೆಲ್ಲರೂ ಸೇರಿ ಬೆಡ್‌ರೂಮ್ ಬಾಗಿಲನ್ನು ರಾತ್ರಿ 08.00 ಗಂಟೆಗೆ ಬಲಾತ್ಕಾರವಾಗಿ ತೆಗೆದು ನೋಡಿದಾಗ ಪಿರ್ಯಾದಿದಾರರ ಗಂಡ ಮಂಚದ ಬಳಿ ಕವಚಿ ಬಿದ್ದಿದ್ದು ಪರಿಶೀಲಿಸಲಾಗಿ ಕಿರಣ ಶೆಟ್ಟಿಯವರು ಮೃಪಟ್ಟಿರುತ್ತಾರೆ. ಅವರು ದಿನಾಂಕ 08.07.2022 ರಂದು 13.30 ಗಂಟೆಯಿಂದ ರಾತ್ರಿ 20.00 ಗಂಟೆಯ ಮಧ್ಯ ಅವಧಿಯಲ್ಲಿ ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿದ್ದು ಈ ಬಗ್ಗೆ ಪುತ್ತೂರು ನಗರ ಠಾಣೆ ಯುಡಿಆರ್‌ ನಂಬ್ರ 16/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 09-07-2022 12:07 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080