ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೇಶವ (47) ತಂದೆ: ಐತ್ತಪ್ಪ ನಾಯ್ಕ ರಾಧು ಕೋಡಿ ಪಿಲಿಂಜ ವಿಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ರವರ ತಮ್ಮ ದಿನೇಶ್  ಎಂಬವರು ದಿನಾಂಕ: 08.08.2022 ರಂದು ಬೆಳಗ್ಗೆ 09.30 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಉಕ್ಕುಡ ಎಂಬಲ್ಲಿ ಉಕ್ಕುಡ-ವಿಟ್ಲ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ಕೆಎ-19-ಹೆಚ್-4161ನೇಯದಕ್ಕೆ ಜೀಪು ಕೆಎ21-ಝೆಡ್-6948 ನೇಯದನ್ನು ಅದರ ಚಾಲಕ ಉದಯ ಎಂಬವರು ಅಜಾಗರೂಕತೆ ಮತ್ತು ದುಡುಕುತನದಿಂದ ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ದಿನೆಶ್ (38) ಎಂವರು ರಸ್ತೆಗೆ ಬಿದ್ದು ಎಡಕಾಲು ಹಾಗೂ ಗಲ್ಲದ ಭಾಗದಲ್ಲಿ ರಕ್ತಗಾಯ ಮತ್ತು ಎದೆಯ ಭಾಗದಲ್ಲಿ ಗುದ್ದಿದ ತರಹದ ನೋವಾಗಿದ್ದು ಚಿಕಿತ್ಸೆಯ ಬಗ್ಗೆ ವಿಟ್ಲ ಸರಕಾರಿ ಆಸ್ಪತ್ರೆ, ಪುತ್ತೂರು ಸರಕಾರಿ ಆಸ್ಪತ್ರೆಗಳಲ್ಲಿ ಪ್ರಥಮ ಚಿಕಿತ್ಸೆಗಳನ್ನು ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ಅಂಬ್ಯುಲೇನ್ಸ್  ವಾಹನಲ್ಲಿ ಸಾಗಿಸುತ್ತಿದ್ದಾಗ ದಾರಿ ಮದ್ಯೆ ಮೃತಪಟ್ಟಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 127/2022  ಕಲಂ: 279,304(ಎ) ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹೆಚ್ ಮಹಮ್ಮದ್ ಇರ್ಪಾನ್ ಪ್ರಾಯ 23 ವರ್ಷ ತಂದೆ: ಹೆಚ್ ಮಹಮ್ಮದ್ ಹಮೀದ್, ವಾಸ: 1-367(2), ಆಲಂದಿಲ ಮನೆ, ಕುವೆಟ್ಟು ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ: 07-08-2022 ರಂದು ಸಂಜೆ ಕಾವಳಕಟ್ಟೆಯಲ್ಲಿ ಕೆಲಸ ಮುಗಿಸಿಕೊಂಡು ತನ್ನ ಅಣ್ಣ ಇಮ್ತಿಯಾಜ್ ಎಂಬವರೊಂದಿಗೆ KA 70 H 6520 ನೇ ಮೋಟಾರ್ ಸೈಕಲಿನಲ್ಲಿ ಸಹಸವಾರನಾಗಿ ಕಾವಳಕಟ್ಟೆಯಿಂದ ಮದ್ದಡ್ಕ ಕಡೆಗೆ ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಾ ಸಂಜೆ ಸುಮಾರು 5.30 ಗಂಟೆಗೆ ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಹೋಂಡಾ ಶೋರೂಂ ಬಳಿ ತಲುಪುತ್ತಿದ್ದಂತೆ ಬೆಳ್ತಂಗಡಿ ಕಡೆಯಿಯಿಂದ ಬಂಟ್ವಾಳ ಕಡೆಗೆ KA 20 P 6620 ನೇ ಕಾರನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ನಂಬ್ರ KA70H6520 ನೇದಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಫಿರ್ಯಾದಿದಾರರು ಹಾಗೂ ಅವರ ಅಣ್ಣ ಮೋಟಾರ್ ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದು, ಫಿರ್ಯಾದಿದಾರರಿಗೆ ಹಾಗೂ ಅವರ ಅಣ್ಣನಿಗೆ ಬಲಕಾಲು, ಬಲಕೈಗೆ, ಹಾಗೂ ಹಣೆಗೆ ಗಾಯಗೊಂಡವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಕಾರಿನ ಚಾಲಕ ಎತ್ತಿ ಆರೈಕೆ ಮಾಡಿ ಚಿಕಿತ್ಸೆ ಬಗ್ಗೆ ಆಂಬ್ಯುಲೆನ್ಸ್ ಒಂದರಲ್ಲಿ ಕಳುಹಿಸಿಕೊಟ್ಟಿದ್ದು, ಬೆಳ್ತಂಗಡಿ ಅಭಯ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಹೋಗುವಂತೆ ಸಲಹೆ ನೀಡಿದಮೇರೆಗೆ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಹೋದಲ್ಲಿ ಪರೀಕ್ಷಿಸಿದ ವೈದ್ಯರು ಫಿರ್ಯಾದಿದಾರರ ಅಣ್ಣನನ್ನು ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಫಿರ್ಯಾದಿದಾರರಿಗೆ ಗುದ್ದಿದ ಹಾಗೂ ತರಚಿದ ರೀತಿಯ ಗಾಯವಾಗಿರುವುದರಿಂದ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ  56/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉದಯಪ್ರಸಾದ್‌ (39) ತಂದೆ: ವಾಸು ಕುಲಾಲ್‌ ವಾಸ: 18(1) ಕಡ್ತ್ಯಾರ್‌ ಮನೆ, ಪಣಕಜೆ ಅಂಚೆ ಸೋಣಂದೂರು ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ: 08.08.2022 ರಂದು ಬೆಳಿಗ್ಗೆ  ತುರ್ತು ಕೆಲಸದ ನಿಮಿತ್ತ ಅವರ  ಬಾಬ್ತು ಅಟೋ ರಿಕ್ಷಾ ನಂಬ್ರ KA70 4917 ನೇದರಲ್ಲಿ  ಉಪ್ಪಿನಂಗಡಿಗೆ ಹೋದವರು  ಕೆಲಸ ಮುಗಿಸಿಕೊಂಡು ಮದ್ಯಾಹ್ನ ಉಪ್ಪಿನಂಗಡಿಯಿಂದ ಹೊರಟು ಮರಳಿ ಪಣಕಜೆ ಕಡೆಗೆ  ಉಪ್ಪಿನಂಗಡಿ-ಮಡಂತ್ಯಾರು ರಸ್ತೆಯಾಗಿ ಬರುತ್ತಾ, ಅಳಕೆ ಎಂಬಲ್ಲಿಂದ 03 ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಮಡಂತ್ಯಾರು ಕಡೆಗೆ ಬರುತ್ತಾ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕಾರಂದೂರು ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಮಡಂತ್ಯಾರು ಕಡೆಯಿಂದ ಉಪ್ಪಿನಂಗಡಿ ಕಡೆಗೆ KA21EA5582 ನೇ ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ  ರಸ್ತೆಯ ತೀರ ಬಲ ಬದಿಗೆ ಚಲಾಯಿಸಿ ಪಿರ್ಯಾದಿದಾರರು  ಚಲಾಯಿಸುತ್ತಿದ್ದ ಅಟೋ ರಿಕ್ಷಾ KA70 4917 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ಹಾಗೂ ರಿಕ್ಷಾದಲ್ಲಿ ಇದ್ದ ಪ್ರಯಾಣಿಕರು  ಅಟೋ ರಿಕ್ಷಾದೊಂದಿಗೆ  ರಸ್ತೆಗೆ ಮಗುಚಿ ಬಿತ್ತು ಹಾಗೆಯೇ  ಮೋಟಾರು ಸೈಕಲ್ ಸವಾರ ಮೋಟಾರು ಸೈಕಲಿನೊಂದಿಗೆ ರಸ್ತೆಗೆ ಬಿದ್ದಾಗ ಕೂಡಲೆ ಅಲ್ಲಿ ಸಾರ್ವಜನಿಕರು ಓಡಿ ಬಂದು ರಿಕ್ಷಾವನ್ನು ಹಾಗೂ ಮೋಟಾರು ಸೈಕಲನ್ನು ಮೆಲಕ್ಕೆತ್ತಿ ಗಾಯಾಳುಗಳನ್ನು ಆರೈಕೆ ಮಾಡಿದ್ದು, ಅಪಘಾತದಿಂದ ಪಿರ್ಯಾದಿದಾರರ  ಬಲ ಕೈಯ ಮೊಣಗಂಟಿನ ಬಳಿ, ಸೊಂಟಕ್ಕೆ, ಬಲ ಕಾಲಿಗೆ ಹಾಗೂ ಭುಜದ ಬಳಿ  ರಕ್ತ ಗಾಯವಾಗಿದ್ದು, ಅಲ್ಲದೇ ಪ್ರಯಾಣಿಕರ ಪೈಕಿ ಹೆಂಗಸಿಗೆ ತಲೆಗೆ ರಕ್ತಗಾಯವಾಗಿರುತ್ತದೆ. ರಿಕ್ಷಾದಲ್ಲಿ ಇದ್ದ  ಉಳಿದ ಇಬ್ಬರು ಪ್ರಯಾಣಿಕರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ ಅಲ್ಲದೇ ಮೋಟಾರು ಸೈಕಲ್ ಸವಾರನಿಗೆ ಕಾಲಿಗೆ ರಕ್ತಗಾಯವಾಗಿದ್ದು, ಗಾಯಗೊಂಡವರನ್ನು  ಅಲ್ಲಿ ಸೇರಿದ್ದ ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ವಾಹನವೊಂದರಲ್ಲಿ ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರನ್ನು  ಹೊರ ರೋಗಿಯಾಗಿ ಚಿಕಿತ್ಸೆಯನ್ನು ನೀಡಿ ಗಾಯಗೊಂಡ ಹೆಂಗಸನ್ನು ಹಾಗೂ ಮೋಟಾರು ಸೈಕಲ್ ಸವಾರನನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಆಂಬ್ಯುಲೆನ್ಸ್ ನಲ್ಲಿ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದು, ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 57/2022 ಕಲಂ: 279, 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕಬೀರ್, ಪ್ರಾಯ 39 ವರ್ಷ, ತಂದೆ: ಜಹೀರ್ ವಾಸ: ಸುಂಕದಮೂಲೆ ಮನೆ, ಬಲ್ನಾಡು ಗ್ರಾಮ, ಉಜಿರುಪಾದೆ ಅಂಚೆ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 08-08-2022 ರಂದು ಆರೋಪಿ ಅಟೋರಿಕ್ಷಾ ಚಾಲಕ ಬಿ.ಎಸ್‌ ಗಂಗಾಧರ ಎಂಬವರು KA-21-B-3513ನೇ ನೋಂದಣಿ ನಂಬ್ರದ ಅಟೋರಿಕ್ಷಾದಲ್ಲಿ ಕಬೀರ್ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಬಪ್ಪಳಿಗೆ-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬಲ್ನಾಡು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬಪ್ಪಳಿಗೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ ಅಟೋರಿಕ್ಷಾ ರಸ್ತೆಯ ಬದಿಯಲ್ಲಿದ್ದ ವಿದ್ಯುತ್‌ ಸ್ಟೇ ಕಂಬಕ್ಕೆ ಡಿಕ್ಕಿಯಾಗಿ ಮುಂದಕ್ಕೆ ಹೋಗಿ ಚರಂಡಿಗೆ ಬಿದ್ದು ಪಿರ್ಯಾದುದಾರರಾದ ಕಬೀರ್‌ ರವರಿಗೆ ಮೂಗಿಗೆ, ತುಟಿಗೆ, ಬಲಕಾಲಿನ ಮೊಣಕಾಲಿನ ಬಳಿ ಗುದ್ದಿದ ಹಾಗೂ ರಕ್ತ ಗಾಯವಾಗಿ, ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಆರೋಪಿ ಅಟೋರಿಕ್ಷಾ ಚಾಲಕರಿಗೆ ಸಣ್ಣ ಪುಟ್ಟ ಗುದ್ದಿದ ಗಾಯಗಳಾಗಿದ್ದು ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  128/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-08-2022 11:52 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080