ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಭಾಕರ ಪ್ರಾಯ: 44 ವರ್ಷ ತಂದೆ: ದಿ|| ಶೀನ ಪೂಜಾರಿ ವಾಸ: ಪೂಂಜರಕೋಡಿ ಮನೆ,  ಬಿ ಮೂಡ  ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ :08-09-2021 ರಂದು ತನ್ನ ಬಾಬ್ತು ನೊಂದಣಿ ಆಗದ ಹೊಸ ಸ್ಕೂಟರ್ ನಲ್ಲಿ  ಮನೆಯಿಂದ ಹೊರಟು ಸವಾರಿ ಮಾಡಿಕೊಂಡು  ಬೇಂಕ್ಯ ಕಡೆಗೆ ಕೆಲಸದ ನಿಮಿತ್ತ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 10:00 ಗಂಟೆಗೆ ಬಂಟ್ವಾಳ ತಾಲೂಕು ಸಜೀಪಮುನ್ನೂರು ಗ್ರಾಮದ ಮಾರ್ನೆಬೈಲು ಎಂಬಲ್ಲಿಗೆ ತಲುಪಿದಾಗ ಮುಡಿಪು ಕಡೆಯಿಂದ ಕಾರೊಂದನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬಳಿಕ ಪಿರ್ಯಾದಿದಾರರ ಹಿಂದಿನಿಂದ ಹೋಗುತ್ತಿದ್ದ KA-70-E-2829 ನೇ  ಸ್ಕೂಟರಿಗೂ ಡಿಕ್ಕಿ ಹೊಡೆದು  ಕಾರನ್ನು ನಿಲ್ಲಿಸಿದೆ ಕಾರು ಸಮೇತ ಪರಾರಿಯಾಗಿರುವುದಾಗಿದೆ. ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ   ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆ ಬಿದ್ದು  ಬಲ ಕೈಯ ಕಿರು ಬೆರಳಿಗೆ ಗುದ್ದಿದ ಗಾಯ,  ಎಡ ಭುಜಕ್ಕೆ  ತರಚಿದ ಗಾಯ, ಎಡ ಕಣ್ಣಿನ ಬಳಿ ಮತ್ತು ಎಡ ಕೈ ತಟ್ಟಿಗೆ ತರಚಿದ ಗಾಯ,  ಬೆನ್ನಿಗೆ ಗುದ್ದಿದ ನೋವಾಗಿದ್ದು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 90/2021  ಕಲಂ 279,337 ಐಪಿಸಿ & 134 ( ಎ & ಬಿ ) ಮೋ ವಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿದ್ಯಾಭಾಂಡಗೆ  ಪ್ರಾಯ:31 ವರ್ಷಗಂಡ: ಗಣಪತಿ ಭಾಂಡಗೆ  ವಾಸ; ಹಳೇ ಹುಬ್ಬಳ್ಳಿ  ಅಣಿಗಿ ಓಣಿ, ಚೆನ್ನಪೇಟೆ ಹುಬ್ಬಳ್ಳಿ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:05-09-2021 ರಂದು ತನ್ನ ಗಂಡ, ಮಕ್ಕಳು, ತಂಗಿ, ತಂಗಿ ಗಂಡ ಮತ್ತು ಅವರ ಮಕ್ಕಳೊಂದಿಗೆ ರೈಲಿನಲ್ಲಿ ಕಡೂರಿಗೆ ಬಂದು ಅಲ್ಲಿಂದ ಬಸ್ಸಿನಲ್ಲಿ ಶ್ರೀ ಕ್ಷೇತ್ರ  ಧರ್ಮಸ್ಥಳಕ್ಕೆ ದಿನಾಂಕ;06-09-2021 ರಾತ್ರಿ 8.00 ಗಂಟೆಗೆ ತಲುಪಿ ಗಂಗೋತ್ರಿ ವಸತಿ ಗೃಹದಲ್ಲಿ ಉಳಕೊಂಡಿದ್ದೆವು, ಅದೇ  ದೇವರ ದರ್ಶನ ಮುಗಿಸಿ ರಾತ್ರಿ 08.15 ಗಂಟೆಗೆ ಗಂಗೋತ್ರಿ ವಸತಿ ಗೃಹದಲ್ಲಿದ್ದ ಸಮಯ ಪಿರ್ಯಾದುದಾರರ  ಗಂಡ ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಾಸು  ಬಾರದೇ ಇದ್ದು ಧರ್ಮಸ್ಥಳ ವಠಾರ, ಬಸ್ ನಿಲ್ದಾಣ, ಉಜಿರೆ ಕಡೆಗಳಲ್ಲಿ ಹುಡುಕಾಡಿ ಪತ್ತೆಯಾಗಿರುವುದಿಲ್ಲ. ಪಿರ್ಯಾದುದಾರರ  ಗಂಡನು ಸ್ವಲ್ಪ ಮಾನಸಿಕ ಹಾಗೂ ಮೂರ್ಚೆ ರೋಗದಿಂದ ಬಳಲುತ್ತಿದ್ದು, ನೆನಪು ಶಕ್ತಿ ಅಷ್ಟಾಗಿ ಇರುವುದಿಲ್ಲ. ಊರಿನಲ್ಲಿ ಕೂಡಾ  ಸಂಬಂಧಿಕರಿಗೆ ದೂರವಾಣಿ ಮೂಲಕ ವಿಚಾರಿಸಿದ್ದು ಅಲ್ಲಿ ಕೂಡಾ ಬಂದಿರುವುದಿಲ್ಲವಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 53/2021 ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಲಿಗೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ವತ್ಸಲಾ ನಾರಾಯಣ (53) ಗಂಡ: ಲಕ್ಷ್ಮೀ ನಾರಾಯಣ, ವಾಸ: ದಾಸಬೈಲು ಮನೆ, ಸಜೀಪ ಮೂಡ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ: 08.09.2021 ರಂದು ತನ್ನ ಮನೆಯಿಂದ ಪಕ್ಕದಲ್ಲಿರುವ ತೋಟಕ್ಕೆ ಪಂಪ್ ಬಂದ್ ಮಾಡಲು ಹೋಗುತ್ತಿದ್ದ ಸಮಯ ಸುಮಾರು 12:50 ಗಂಟೆಗೆ ಬಂಟ್ವಾಳ ತಾಲೂಕು ಸಜೀಪ ಮೂಡ ಗ್ರಾಮದ ದಾಸಬೈಲು ಎಂಬಲ್ಲಿಗೆ ಮಾರ್ನಬೈಲು - ಬೊಳ್ಳಾಯಿಯ ಡಾಮಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೊಳ್ಳಾಯಿ ಕಡೆಯಿಂದ ಇಬ್ಬರು ಬೈಕ್ ನಲ್ಲಿ ಬಂದು ಪಿರ್ಯಾದಿದಾರರಲ್ಲಿ ಸಾಲೆತ್ತೂರು ಕಡೆಗೆ ಹೋಗುವ ರಸ್ತೆ ಯಾವುದು ಎಂದು ಕೇಳಿದಾಗ ಪಿರ್ಯಾದಿದಾರರು "ಇಲ್ಲಿ ಏಕೆ ಬಂದಿದ್ದು, ವಾಪಾಸು ಅದೇ ರಸ್ತೆಯಲ್ಲಿ ಹೋದರೆ ಸಾಲೆತ್ತೂರು ಹೋಗುತ್ತದೆ" ಎಂದು ತಿಳಿಸಿದಾಗ ಬಳಿಕ ವಿಳಾಸ ಕೇಳಲಿಕ್ಕೆ ಇದೆ ಎಂದು ಅವರ ಮೊಬೈಲ್ ನಲ್ಲಿ ಮಾತನಾಡಲು ಕೊಟ್ಟಿರುತ್ತಾರೆ ಸದ್ರಿ ಮೊಬೈಲ್ ನಿಂದ ಯಾರೋ ಹೆಂಗಸು ಮಾತನಾಡು ಧ್ವನಿ ಕೇಳುತ್ತಿದ್ದು, ಬೈಕ್ ಸವಾರ ಪಿರ್ಯಾದಿಯ ಕೈಯಿಂದ ಅವನ ಮೊಬೈಲನ್ನು ಎಳದುಕೊಂಡನು. ಆಗ ಸಮಯ 12:55 ಗಂಟೆ ಆಗಬಹುದು. ಹಿಂಬದಿ ಸವಾರನು ಪಿರ್ಯಾದಿಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಬೊಳ್ಳಾಯಿಯ ಕಡೆಗೆ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಪರಾರಿಯಾಗಿರುತ್ತಾರೆ. ಪಿರ್ಯಾದಿಯ ಕರಿಮಣಿ ಸರವು 1.1/2 ಪವನ್ ಆಗಿದ್ದು, (12 ಗ್ರಾಂ)  ಸುಮಾರು 60,000/- ರೂಪಾಯಿ ಮೌಲ್ಯ  ಆಗಬಹುದು. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 105/2021 ಕಲಂ 392 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀ ಮತಿ ರೇವತಿ ಪ್ರಾಯ (50) ಗಂಡ ಗುರುವಪ್ಪ ನಾಯ್ಕ , ವಾಸ ಮರ್ತನಾಡಿ ಮನೆ, ಕನ್ಯಾನ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:08-09-2021 ರಂದು ಬೆಳಗ್ಗೆ 08.30 ಗಂಟೆಗೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಮರ್ತನಾಡಿ ಎಂಬಲ್ಲಿಂದ ಪಿರ್ಯಾಧಿದಾರರ ಮಗ ಜನಾರ್ಧನ, ಮಗಳು ಸುಜಾತ ಕೆಲಸಕ್ಕೆ ಹೊರಗೆ ಹೋಗಿದ್ದು. ಪಿರ್ಯಾಧಿದಾರರು ಮೊಮ್ಮಗನನು ಶಾಲೆಗೆ ಕೆರದುಕೊಂಡು ಹೋಗಿದ್ದು ಮನೆಯಲ್ಲಿ ಮಗನ ಹೆಂಡತಿ ಮಕ್ಕಳು ಇರುವ ಸಮಯ ಸುಮಾರು 12.00 ಗಂಟೆಗೆ ಮೊಮ್ಮಗನನ್ನು ಶಾಲೆಗೆ ಬಿಟ್ಟು ವಾಪಸ್ಸು ಮನೆಗೆ ಬಂದ ಬಳಿಕ ಹೊರಗೆ ತೊಳೆದು ಹಾಕಿದ್ದ ಬಟ್ಟೆಯನ್ನು ತೆಗೆಯಲು ಹೋದಾಗ ಪಿರ್ಯಾಧಿದಾರರ ಗಂಡ ಗುರವಪ್ಪ ನಾಯ್ಕ ಪ್ರಾಯ 58 ವರ್ಷ ಎಂಬವರು ತಮ್ಮ ಮನೆಯ ಪಕ್ಕದಲ್ಲಿರುವ ಹೊಸ ಮನೆಯ ಕಿಟಕಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ನೇತಾಡುವುದನ್ನು ಕಂಡು ಬೊಬ್ಬೆ ಹಾಕಿ ಕತ್ತಿಯಿಂದ ಹಗ್ಗವನ್ನು ಕಟ್ಟು ಮಾಡಿದ ಬಳಿಕ ನೆರೆಕರೆಯವರು ಮತ್ತು ಮಗ ಜನಾರ್ಧನ ವಿಷಯ ತಿಳಿದು ಬಂದು ನೋಡಲಾಗಿ ಗಂಡ ಗುರವಪ್ಪ ನಾಯ್ಕರ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಯುಡಿಆರ್‌ ನಂಬ್ರ 26/2021 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೋಮ ಪ್ರಾಯ:45 ವರ್ಷತಂದೆ: ಬಾಬು  ವಾಸ; ಅಶೋಕ ನಗರ, ಧಮಸ್ಥಳ  ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು  ದಿನಾಂಕ:08-09-2021 ರಂದು ಸಂಜೆ 5.00 ಗಂಟೆ ಸಮಯಕ್ಕೆ ಮಾಹಿತಿ ಕಛೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಮಾಹಿತಿ ಕಛೇರಿಯ ಹತ್ತಿರ ಇರುವ ಕೆ ಎಸ್ ಆರ್ ಟಿ ಸಿ ಬಸ್ಸಿನ ನಿಲ್ದಾಣದ ಹಿಂದುಗಡೆ ಇರುವ ಗೋದಾವರಿ ಕಟ್ಟಡದ ವರಾಂಡದಲ್ಲಿ ಅಪರಿಚಿತ ಗಂಡಸಿನ ಮೃತ ದೇಹ ಇರುವುದಾಗಿ ಯಾರೋ ಮಾಹಿತಿ ಕಛೇರಿಗೆ ಮಾಹಿತಿ ನೀಡಿದ ಮೇರೆಗೆ ಪಿರ್ಯಾದುದಾರರು  ಅಲ್ಲಿಗೆ ಹೋಗಿ ನೋಡಿದಾಗ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸು ಅಂಗಾತನೆ ಮಲಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆತನನ್ನು ಎಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮೃತ ಪಟ್ಟಿರುವುದು ಕಂಡು ಬಂದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್  47/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಾರಪ್ಪ(33) ತಂದೆ ಶಂಭು  ಬಂಟ್ವಾಳ ತಾಲೂಕು ಅಂಬೇಡ್ಕರ್ ನಗರ, ಸರಪಾಡಿ, ಮಣಿನಾಲ್ಕೂರು ಗ್ರಾಮ ಎಂಬವರ ದೂರಿನಂತೆ ಪಿರ್ಯಾದುದಾರರ ತಾಯಿ ಕೊರಪೊಲು ರವರು ರಕ್ತದೊತ್ತಡ, ಶುಗರ್ ಕಾಯಿಲೆಯಿಂದ ಬಳಲುತ್ತಿದ್ದು ಬಂಟ್ವಾಳದ ಬಡ್ಡಕಟ್ಟೆಯ ಶ್ರೀನಿವಾಸ್ ರವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು  ಅಲ್ಲದೇ  ಸುಮಾರು 2 ವಾರದ ಹಿಂದೆ ಅವರಿಗೆ ಕಣ್ಣಿನ ಪೊರೆ ಚಿಕಿತ್ಸೆ ಕೂಡ ಮಾಡಿಸಿದ್ದು  ಮನೆಯಲ್ಲಿಯೇ ಇದ್ದರು. ದಿನಾಂಕ 07.09.2021 ರಂದು    ರಾತ್ರಿ ಪಿರ್ಯಾದುದಾರರು ಮತ್ತು ಮನೆಯವರು  ಊಟ ಮಾಡಿ ತಾಯಿಗೆ ಕೂಡ ಊಟ ಮಾಡುವಂತೆ ಹೇಳಿದ್ದು ಆಗ ತಾಯಿ ನನಗೆ  ಊಟ ಬೇಡ ನಿತ್ರಾಣ ಆದ ಹಾಗೆ ಆಗುತ್ತದೆ ಎಂದು ಮಲಗಿದ್ದು ಬೆಳಿಗ್ಗೆ ಸುಮಾರು 09.00 ಗಂಟೆಗೆ ಪಿರ್ಯಾದುದಾರರ  ತಾಯಿ ನಿಶ್ತಕ್ತಿಯಿಂದ ಕೈಕಾಲಿನಲ್ಲಿ ಬಲ ಇಲ್ಲದ ಹಾಗೆ ಆಗುತ್ತದೆ ಎಂದು ತಿಳಿಸಿದ್ದು ಪರ್ಯಾದುದಾರರು  ಕೂಡಲೇ ಚಿಕಿತ್ಸೆ ಬಗ್ಗೆ ಒಂದು ಆಟೋರಿಕ್ಷಾದಲ್ಲಿ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಅವರಿಗೆ ಪ್ರಥಮ  ಚಿಕಿತ್ಸೆ ನೀಡಿ ಅವರಿಗೆ ಬಿ.ಪಿ ಕಡಿಮೆಯಾಗಿದೆ ನೀವು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಪಿರ್ಯಾದುದಾರರು ಒಂದು ಅಂಬೂಲೆನ್ಸ್ ನಲ್ಲಿ ಬಂಟ್ವಾಳ ದಿಂದ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಮದ್ಯಾಹ್ನ 1.50 ಗಂಟೆಗೆ  ಅವರನ್ನು ಪರೀಕ್ಷಿಸಿದ ವೈದ್ಯರು  ತಾಯಿ ಕೊರಪೊಲು ರವರು ದಾರಿ ಮದ್ಯೆ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 33/2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-09-2021 10:39 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080