ಅಭಿಪ್ರಾಯ / ಸಲಹೆಗಳು

ಕಾಣೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಕಮಲ ಪ್ರಾಯ 47 ವರ್ಷ ಗಂಡ: ರಾಮ ಪೂಜಾರಿ  ವಾಸ: ಪಡೆಂಕಿಲ್ ಮಾರು ಮನೆ ಅಮ್ಟಾಡಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ ಮಗನಾದ ಸುನೀಲ್ ಈತನು ದಿನಾಂಕ 07-10-2021 ರಂಧು ಬೆಳಿಗ್ಗೆ 8.00 ಗಂಟೆಗೆ ಕೆಲಸಕ್ಕೆಂದು ಹೋದವನು  ರಾತ್ರಿಯೂ ಮನೆಗೆ ಬಾರದ ಕಾರಣ ಆತನ ಮೊಬೈಲ್ ಗೆ ಪಿರ್ಯಾಧಿದಾರರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು,   ಪಿರ್ಯಾದಿದಾರರ ಮಗ ಮನೆಗೆ ಬಾರದೇ ಇದ್ದು,  ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ, ಸಂಬಂಧಿಕರಲ್ಲಿ ವಿಚಾರಿಸಲಾಗಿ ಎಲ್ಲಿಯೂ ಸಿಕ್ಕಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 16-2021 ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 08-10-2021 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 116-2021 ಕಲಂ:  366 (a), 376(g), 506 ಐಪಿಸಿ ಮತ್ತು ಕಲಂ: 04. 06 Posco Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಳ್ಯ ಪೊಲೀಸ್ ಠಾಣೆ : ದಿನಾಂಕ 08.10.2021 ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ  ಅ.ಕ್ರ 79/2021 ಕಲಂ 323,324 ಜೊತೆಗೆ 34 ಐಪಿಸಿ ಮತ್ತು The SC & ST (Prevention of Atrocities) Amendment Act 2015 (U/s-3(1)(r),3(1)(s))ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಘ್ನೆಶ್ ಪ್ರಾಯ:45 ವರ್ಷ ತಂದೆ; ಜನಾರ್ಧನ ವಾಸ; ಕನ್ಯಾಡಿ-2 ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ಮಾಹಿತಿ ಕಛೇರಿಯ ಬಳಿ ಇರುವ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಬಳಿ ದಿನಾಂಕ: 08/10/2021 ರಂದು ಬೆಳಗ್ಗೆ 8.00 ಗಂಟೆಯ ಸಮಯಕ್ಕೆ ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹವು ಪತ್ತೆಯಾಗಿದ್ದು ಸದ್ರಿ ವ್ಯಕ್ತಿಯು ಯಾವುದೋ ಖಾಯಿಲೆಯಿಂದ  ಮೃತ ಪಟ್ಟಂತೆ ಕಂಡು ಬರುತ್ತಿದ್ದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್    ಯು ಡಿ ಆರ್  49/2021 ಕಲಂ:174       ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 

ಕೊಲೆ ಪ್ರಕರಣ: 1

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಗನ್ನಾಥ್ (36),  ತಂದೆ: ಸಂಜೀವ ಶೆಟ್ಟಿ, ವಾಸ: ಎಸ್‌ವಿಎಸ್‌ ಕಾಲೇಜಿನ ಬಳಿ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಮೃತ ಸಂಜೀವ ಶೆಟ್ಟಿ(65)  ಇವರು  ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ನೂಯಿ ಮನೆ ಎಂಬಲ್ಲಿ ಒಬ್ಬರೇ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ, ಇವರ ಮನೆಯ ಹತ್ತಿರದಲ್ಲಿ ಇವರ ಅಳಿಯ ಶ್ರೀಶ ಎಂಬವನು ಕೂಡಾ ಪ್ರತ್ಯೇಕವಾಗಿ ವಾಸವಾಗಿದ್ದು, ಅವರಿಬ್ಬರಿಗೂ ಜಾಗದ ವಿಚಾರದಲ್ಲಿ ಆಗಾಗ ಗಲಾಟೆಯಾಗುತ್ತಿದ್ದು, ದಿನಾಂಕ 07.10.2021  ರಂದು 19:00 ಗಂಟೆಯಿಂದ ಮರುದಿನ ಬೆಳಿಗ್ಗೆ 10:00 ಗಂಟೆಯ ಮಧ್ಯಕಾಲದಲ್ಲಿ  ಆರೋಪಿ ಶ್ರೀಷಾ ಇವರು ಸಂಜೀವ ಶೆ್ಟ್ಟಿಯವರ ಮನೆಯ ಒಳಗೆ ಬಂದು ಜಗಳ ತೆಗೆದು ಸಂಜೀವ ಶೆಟ್ಟಿಯವರ ಬೆನ್ನಿಗೆ ಮತ್ತು ಕುತ್ತಿಗೆಗೆ  ಕತ್ತಿಯಿಂದ ಕಡಿದು ತೀವ್ರ ಗಾಯಗೊಳಿಸಿದ್ದರಿಂದ ಸಂಜೀವ ಶೆಟ್ಟಿಯವರು ಅವರಿಗಾದ ತೀವ್ರ ಗಾಯದಿಂದ ತನ್ನ ಮನೆಯ ಒಳಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ: 63-2021 ಕಲಂ: 302 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-10-2021 10:33 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080