ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶರತ್, 29 ವರ್ಷ ತಂದೆ: ಸದಾಶಿವ ಪೂಜಾರಿ ವಾಸ: ಶಾನರಕೊಟ್ಟ ಮನೆ, ಮಣಿ ನಾಲ್ಕೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 08-11-2021 ರಂದು ಬೆಳಿಗ್ಗೆ 11:00 ಗಂಟೆಗೆ ಬಂಟ್ವಾಳ ತಾಲೂಕು ಬಿ-ಕಸಬಾ ಗ್ರಾಮದ ಜಕ್ರಿಬೆಟ್ಟು ಕ್ರಾಸ್ ಬಳಿ ಆಟೋರಿಕ್ಷಾ ನಂಬ್ರ KA-70-2078  ನೇಯದರ ಚಾಲಕ ಬಂಟ್ವಾಳ ಬೈಪಾಸ್ ರಸ್ತೆಯಿಂದ ಕಡೂರು-ಬಂಟ್ವಾಳ ಹೆದ್ದಾರಿಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೆ ಚಲಾಯಿಸಿ ಬೆಳ್ತಂಗಡಿ ಕಡೆಯಿಂದ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ನಂಬ್ರ KA-04-MA-4121ನೇಯದ್ದು ಪರಸ್ಪರ ಡಿಕ್ಕಿ ಹೊಡೆದು ಆಟೋರಿಕ್ಷಾ ಪಲ್ಟಿ ಹೊಡೆದು ವಾಹನಗಳು ಜಖಂಗೊಂಡು ಆಟೋರಿಕ್ಷಾವನ್ನು ಪ್ರಯಾಣಿಸುತ್ತಿದ್ದ ದೇವರಾಜ ಪ್ರಭು ರವರಿಗೆ ಎಡಕಾಲಿಗೆ ರಕ್ತ ಗಾಯ ಹಾಗೂ ಮೈಕೈಗೆ ನೋವು ಗಾಯಗಳಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 119/2021  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್ ಲತೀಫ್ (35) ತಂದೆ:ಯು.ಎಂ. ಅಹಮ್ಮದ್ ವಾಸ:ಹಳೇಪೇಟೆ ಉಜಿರೆ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರ ಹೆಂಡತಿಯು ದಿನಾಂಕ:07.11.2021 ರಂದು ತನ್ನ ಮನೆಯಾದ ಪೆರ್ಲಾಪುವಿನಿಂದ ತನ್ನ ಮಕ್ಕಳು ಮತ್ತು ತನ್ನ ತಂದೆಯೊಂದಿಗೆ ಉಜಿರೆಯಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ ಬೆಳಿಗ್ಗೆ ಮನೆಯಿಂದ ಹೊರಡುವಾಗ ಒಟ್ಟು 18 ಪವನಿನ 4.5 ಲಕ್ಷ ಮೌಲ್ಯದ ಚಿನ್ನದ ಒಡವೆಗಳನ್ನು ತನ್ನ ವ್ಯಾನಿಟಿ ಬ್ಯಾಗಿನಲ್ಲಿಟ್ಟುಕೊಂಡು ಮನೆಯ ಪಕ್ಕದ ಆಟೋ ರೀಕ್ಷಾದಲ್ಲಿ ಅಮೈ ವರೆಗೆ ಬಂದು ಬಳಿಕ ಇನ್ನೊಂದು ರೀಕ್ಷಾದಲ್ಲಿ ಉಪ್ಪಿನಂಗಡಿಯವರೆಗೆ ಬಂದು ಬೆಳಿಗ್ಗೆ 10-15 ಗಂಟೆಗೆ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿರುವ ಸಮಯ ತನ್ನ ತಂದೆಯವರು ನೀರಿನ ಬಾಟಲ್ ತಂದು ನೀಡಿದ್ದನ್ನು ಸದ್ರಿ ವ್ಯಾನಿಟಿ ಬ್ಯಾಗಿನಲ್ಲಿಟ್ಟು ಬಳಿಕ ಬೆಳಿಗ್ಗೆ 10-30 ರ ಉಜಿರೆ ಬಸ್ಸಿನಲ್ಲಿ ಕುಳಿತು ಉಜಿರೆ ಹಳೆ ಪೇಟೆಗೆ ಬಂದು ನಂತರ ಉಜಿರೆ ಹಳೇ ಪೇಟೆಯಿಂದ ಆಟೋ ರೀಕ್ಷಾದಲ್ಲಿ ಬೆಳಿಗ್ಗೆ 11-15 ಗಂಟೆಗೆ ತನ್ನ ಮನೆಗೆ ಬಂದು ಬ್ಯಾಗ್  ನೋಡಲಾಗಿ ಬ್ಯಾಗಿನಲ್ಲಿದ್ದ 18 ಪವನ್ ಚಿನ್ನದ ಒಡವೆಗಳು ಕಾಣೆಯಾಗಿದ್ದು ಯಾರೋ ಕಳ್ಳರು ಸದ್ರಿ ವ್ಯಾನಿಟಿ ಬ್ಯಾಗಿನಲ್ಲಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 131/2021 ಕಲಂ:379 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 08.11.2021  ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 140/2021 ಕಲಂ 324,354,504,, ಜೊತೆಗೆ  34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 08.11.2021  ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ,ಕ್ರ 139/2021 ಕಲಂ 324,354,427,506, ಜೊತೆಗೆ  34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 08.11.2021 ರಂದು ಸಮಯ ಸುಮಾರು ಬೆಳಿಗ್ಗೆ  10.40 ಗಂಟೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕ ಪ್ರಸನ್ನ ಎಂ,ಎಸ್  ರವರು ಸಿಬ್ಬಂದಿಗಳೊಂದಿಗೆ  ಬಂಟ್ವಾಳ  ತಾಲೂಕು  ಮೇರಮಜಲು ಗ್ರಾಮದ  ತೇವುಕಾಡು ಎಂಬಲ್ಲಿ ಅಕ್ರಮವಾಗಿ  ಮದ್ಯ ಮಾರಾಟ ಮಾಡುತ್ತಿದ್ದಲ್ಲಿಗೆ ಧಾಳಿ ನಡೆಸಿದಾಗ  ಮನೆಯಲ್ಲಿದ್ದ ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದು  ಮನೆಯ ಅಂಗಳಕ್ಕೆ ಹೋದಾಗ  ಒಬ್ಬಾತ ಇದ್ದು ಆತನ ಹೆಸರು ವಿಳಾಸ ಕೇಳಿದಾಗ ನವೀನ  ಡಿಸೋಜ ಎಂಬುವುದಾಗಿ  ತಿಳಿಸಿದ್ದು ಇದು ನಮ್ಮ ಅಣ್ಣ  ಮೆಲ್ವಿನ್ ಡಿಸೋಜ  ರವರ ಮನೆಯಾಗಿದ್ದು ಆತನ ಹೊರದೇಶದಲ್ಲಿ ಉದ್ಯೋಗದಲ್ಲಿದ್ದು  ನಾನು ಈ ಮನೆಯಲ್ಲಿ ವಾಸವಾಗಿದ್ದು   ಇದು ಮೇರ ಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ.   ಮನೆಯ  ಪಕ್ಕ ಒಂದು ಚಿಕನ್  ಶೆಡ್  ಇದರ ಮದ್ಯದ ಜಾಗದಲ್ಲಿ  ಬಾಕ್ಸ್ ಗಳನ್ನು ಜೋಡಿಸಿಟ್ಟು ಸದ್ರಿ  ಬಾಕ್ಸ್  ಗಳ ಬಗ್ಗೆ ಕೇಳಲಾಗಿ  ಹೇಳಲು ತಡವರಿಸಿದ್ದು  ಮತ್ತೆ ಮತ್ತೆ ಕೇಳಲಾಗಿ ಇದು  ಮದ್ಯ ಎಂಬುವುದಾಗಿ ತಿಳಿಸಿದ್ದು,  ಮದ್ಯವನ್ನು ಇಲ್ಲಿ ತಂದು ಇಟ್ಟ ಬಗ್ಗೆ ಕೇಳಲಾಗಿ ಗಿರಾಕಿಗಳಿಗೆ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದು  ಮದ್ಯವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಪರವಾನಿಗೆ ಇದೆಯೇ? ಎಂದು ಕೇಳಲಾಗಿ ಯಾವುದೇ ಪರವಾನಿಗೆ  ಇರುವುದಿಲ್ಲವಾಗಿ  ಹೇಳಿದ್ದು  ಪಂಚರ ಸಮಕ್ಷಮ  ಮದ್ಯವನ್ನು  ಪರಿಶೀಲನೆ ಮಾಡಲಾಗಿ 8 ರಟ್ಟಿನ ಬಾಕ್ಸಿನಲ್ಲಿ  90 ML ಮದ್ಯ  ತುಂಬಿದ Mysore Lancer Whisky ಎಂದು ಬರೆದಿರುವ   ಸ್ಯಾಚೆಟ್ ಗಳು  ಒಟ್ಟು  762, ಇದರ ಅಂದಾಜು ಮೌಲ್ಯ 26,670/  ಮೂರು ರಟ್ಟಿನ ಬಾಕ್ಸಿನಲ್ಲಿ 500 ML ಮದ್ಯ ತುಂಬಿದ  Black Fort Beer ಎಂದು ಬರೆದಿರುವ ಟಿನ್ ಗಳು ಒಟ್ಟು 72, ಇದರ ಅಂದಾಜು ಮೌಲ್ಯ 6,840/ ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಎಲ್ಲಾ ಮದ್ಯದ ಬೆಲೆ ರೂ  33,510/ ಆಗ ಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 138/2021 ಕಲಂ ಕರ್ನಾಟಕ ಅಬಕಾರಿ ಕಾಯ್ದೆ 1965  ಕಲಂ 32,34 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಾಜೇಶ್‌, ಪ್ರಾಯ: 36 ವರ್ಷ, ಗಂಡ: ಲಿಂಗಪ್ಪ ಪೂಜಾರಿ, ವಾಸ: ಉಮ್ಮೆಟ್ಟು ಮನೆ, ಎಲಿಯ ನಡುಗೋಡು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾಧಿದಾರರಾದ ರಾಜೇಶ್‌ ಎಂಬವರ ತಾಯಿ ಶ್ರೀಮತಿ ಲಲಿತ ಪೂಜಾರಿ, ಪ್ರಾಯ: 66 ವರ್ಷ ಎಂಬವರು ಹಲವು ಸಮಯಗಳಿಂದ ಬಿ.ಪಿ, ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಕೆಲಸಗಳನ್ನು ಮಾಡಲು ಸಾಧ್ಯವಾಗದೇ ಔಷದೋಪಚಾರ ಮಾಡಿಕೊಂಡಿದ್ದವರು ಖಾಯಿಲೆ ಗುಣಮುಖವಾಗದೇ ಇದ್ದುದರಿಂದ ಬೇಸರದಲ್ಲಿದ್ದವರು, ಜೀವನದಲ್ಲಿ ಜಿಗುಪ್ಸೆ ಹೊಂದಿ ಈ ದಿನ ಬೆಳಿಗ್ಗೆ ದಿನಾಂಕ: 08.11.2021 ರಂದು 09:00 ಗಂಟೆಯಿಂದ ಸಂಜೆ 5:00 ಗಂಟೆಯ ಮಧ್ಯೆ ಬಂಟ್ವಾಳ ತಾಲೂಕು, ಎಲಿಯ ನಡುಗೋಡು  ಗ್ರಾಮದ ಉಮ್ಮೆಟ್ಟು ಎಂಬಲ್ಲಿ ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಚಾವಡಿಯ ಮೇಲ್ಬಾಗದ ಮಾಡಿನ ಪಕ್ಕಾಸಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ UDR NO 18/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜನಾರ್ಧನ ಗೌಡ, ಪ್ರಾಯ; 43 ವರ್ಷ ತಂದೆ; ಕಿಣ್ಣಿ ಗೌಡ, ವಾಸ; ನಾಗಬೆಟ್ಟು ಮನೆ, ಮಿತ್ತಬಾಗಿಲು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಮ್ಮನಾದ  ಗಣೇಶ್ ಗೌಡ (40) ರವರು ಮಲವಂತಿಗೆ ಗ್ರಾಮದ ಮಂಟಮೆ ಎಂಬಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು ದಿನಾಂಕ 08.11.2021 ರಂದು ಮದ್ಯಾಹ್ನ 2.00 ಗಂಟೆಗೆ ಮಲವಂತಿಗೆ ಗ್ರಾಮದ ಕರಿಯಂದೂರು ಎಂಬಲ್ಲಿನ ತಮ್ಮ ಬಾಬ್ತು ತೋಟಕ್ಕೆ ಹೋಗಿ ಅಡಿಕೆ ತರುವುದಾಗಿ ತಿಳಿಸಿ ಮನೆಯಿಂದ ಹೋದವರು ಸಂಜೆಯಾದರೂ ಮನೆಗೆ ಬಾರದೆಯಿದ್ದು, ಈ ಬಗ್ಗೆ ಕರಿಯಂದೂರು ಸುತ್ತಮುತ್ತ ಹುಡುಕಾಡಿದಾಗ ರಾತ್ರಿ ಸುಮಾರು 8.30 ಗಂಟೆಗೆ ಅದೇ ಭಾಗದಲ್ಲಿ ಹರಿಯುತ್ತಿದ್ದ ಹಳ್ಳದ ಕೆಳಭಾಗದಲ್ಲಿ ಗಣೇಶ್ ಗೌಡನ ಮೃತದೇಹ ಸಿಕ್ಕಿದ್ದು, ಮೃತ ಗಣೇಶ್ ಗೌಡನ ಅಡಿಕೆ ತೋಟಕ್ಕೆ ಹೋಗಲು ಇದೇ ಹಳ್ಳ ದಾಟಿ ಹೋಗಬೇಕಾಗಿದ್ದು, ಏಕಾಏಕಿ ಕಾಡಿನಿಂದ ಮಳೆನೀರು ಹರಿದುಬಂದು ಮೃತ ಗಣೇಶ್ ಗೌಡ ಹಳ್ಳ ದಾಟುವಾಗ ಆಯ ತಪ್ಪಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ UDR NO 37/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 09-11-2021 10:34 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080