ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶಮೀರ್, ಪ್ರಾಯ: 30 ವರ್ಷ ತಂದೆ: ಇಸಾಕ್ ವಾಸ: ರೊಟ್ಟಿಗುಡ್ಡೆ ಮನೆ, ತುಂಬೆ ಗ್ರಾಮ, ಪುದು ಅಂಚೆ, ಬಂಟ್ವಾಳ ತಾಲೂಕು ರವರ ತಂದೆ ಇಸಾಕ್ ರವರು ದಿನಾಂಕ 07-01-2022 ರಂದು ಫರಂಗಿಪೇಟೆಗೆ ಬಂದವರು ವಾಪಾಸು ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು 16:00 ಗಂಟೆಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿಗೆ ತಲುಪಿದಾಗ ಮಂಗಳೂರು ಕಡೆಯಿಂದ KA-19-EZ-5589 ನೇ ಸ್ಕೂಟರನ್ನು ಅದರ ಸವಾರ ಅನ್ಸಾರ್ ರವರು ನೌಸಾದ್ ಎಂಬುವವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಬದಿಗೆ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದ ಪರಿಣಾಮ ಎಡ ಕೋಲು ಕಾಲಿಗೆ ಸೊಂಟಕ್ಕೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 03/2022 ಕಲಂ 279,337 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀ ಅಶ್ರಫ್ ಜೆ. ಪ್ರಾಯ 35 ವರ್ಷ ತಂದೆ: ಹಮೀದ್ ವಾಸ: ನಾವೂರು ಜನತಾ ಕಾಲನಿ, ನಾವೂರು  ಅಂಚೆ&ಗ್ರಾಮ, ಬೆಳ್ತಂಗಡಿ ತಾಲೂಕು  ರವರು ನೀಡಿದ ದೂರಿನಂತೆ ದಿನಾಂಕ: 07-01-2022 ರಂದು ಸಮಯ ಸುಮಾರು ಬೆಳಿಗ್ಗೆ 8:20 ಗಂಟೆಗೆ ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಮುರ ಮಸೀದಿ ಬಳಿ ಮುಹಮ್ಮದ್ ಇಫಾಝ್(7) ಎಂಬವರು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಲಾಯಿಲ ಕಡೆಯಿಂದ ಕಿಲ್ಲೂರು ಕಡೆಗೆ KA 21 U 3473 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ದುಡುಕತನದಿಂದ ಸವಾರಿ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಮುಹಮ್ಮದ್ ಇಫಾಝ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಅಲ್ಲಿಯೇ ರಸ್ತೆಗೆ ಬಿದ್ದು ತಲೆಯ ಬಲಬದಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಫಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ  ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 07/2022 ಕಲಂ; 279, 337 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಲೇರಿಯನ್ ಬರೆಟ್ಟೋ ಪ್ರಾಯ 70 ವರ್ಷ   ತಂದೆ: ದಿ| ಆಲ್ಬರ್ಟ್ ಬರೆಟ್ಟೋ ಪೂಪಾಡಿಕಟ್ಟೆ ನಾವೂರು  ಗ್ರಾಮ ಬಂಟ್ವಾಳ ತಾಲೂಕು ರವರು ಮಗ ಅನಿಲ್ ಬರೋಟ್ಟೋ ಎಂಬುವವನ ಮಗಳು ಲೆನಿಷಾಲೊಂದಿಗೆ ವಾಸವಾಗಿದ್ದು  ಪಿರ್ಯಾದುದಾರರ ಮಗ ಅನಿಲ್ ಲೊರೆಟ್ಟೊ ಮತ್ತು ಸೊಸೆ  ಇಸ್ರೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು  ಮನೆಯಲ್ಲಿ ಇಬ್ಬರೆ ವಾಸವಾಗಿರುವುದಾಗೆದೆ. ಪಿರ್ಯಾದುದಾರರ ಮೊಮ್ಮಗಳಾದ ಲೆನಿಷಳು ಮಂಗಳೂರು ಶಾಲೆಗೆ ಹೋಗಿ  ಸಂಜೆ ವಾಪಸ್ಸು ಬರುವುದಾಗಿದೆ. ದಿನಾಂಕ 08.01.2022 ರಂದು  ರಾತ್ರಿ ಸುಮಾರು 2.00 ಗಂಟೆಯ ಸಮಯಕ್ಕೆ ಮಲಗಿರುವ ಸಮಯ ಪಿರ್ಯಾದುದಾರರ ಮನೆಯ ನಾಯಿ ಜೋರಾಗಿ ಬೊಗಳುತ್ತಿದ್ದು ಕೇಳಿ  ಪಿರ್ಯಾದುದಾರರು ಎದ್ದು  ಮನೆಯ ಹೊರಗೆ ಬಂದು ಲೈಟ್ ಹಾಕಿದಾಗ ಮನೆಯ ಅಂಗಳದಲ್ಲಿ ಓರ್ವ ವ್ಯಕ್ತಿ ನಿಂತುಕೊಂಡಿದ್ದು  ಪಿರ್ಯಾದುದಾರರು ಆತನಲ್ಲಿ ಯಾರು ನೀನು ಇಲ್ಲಿ ಯಾಕೆ ಬಂದೆ ಎಂದು ಕೇಳಿದಾಗ ಆರೋಪಿಯು ಪಿರ್ಯಾದುದಾರರಿಗೆ  ಜೋರು ಮಾಡಿ ನಾನು ಯಾರಾದರೇನು  ನೀನು ಯಾರು  ಬೊಬ್ಬೆ  ಹಾಕಿದರೆ ನಿನ್ನನ್ನು  ಕೊಲ್ಲುತ್ತೇನೆ ಸುಮ್ಮನಿರು ಎಂದು ಬೆದರಿಸಿದ್ದು ಆರೋಪಿತನು ಪಿರ್ಯಾದುದಾರರಿಗೆ ಅಪರಿಚಿತನಾಗಿದ್ದು ಪಿರ್ಯಾದುದಾರರು ಭಯಗೊಂಡು ಬೊಬ್ಬೆ ಹಾಕಿದಾಗ ಪಿರ್ಯಾದುದಾರರ ನೆರೆಯ ರತನ್ ಎಂಬುವವರು ಬಂದು ಆರೋಪಿತನನ್ನು ವಿಚಾರಿಸಿದಾಗ ಅರೋಪಿತನು ಕುವೆಟ್ಟು ಗ್ರಾಮದ ಸವರಬೈಲು ಎಂಬಲ್ಲಿ ಅಜೇಯ ರೋಡ್ರಿಗಸ್ ಎಂದು ತಿಳಿಸಿ ಪಿರ್ಯಾದುದಾರರು ಅತನನ್ನು ವಿಚಾರಿಸುತ್ತಿದ್ದಂತೆ ಆರೋಪಿತನು ಸದ್ರಿ ಸ್ಥಳದಿಂದ ಓಡಿ ಹೋಗಿರುತ್ತಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  02-2022 ಕಲಂ 447,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ದಿವ್ಯಶ್ರೀ ಪ್ರಾಯ 21 ವರ್ಷ  ಗಂಡ: ಯತಿರಾಜ ವಾಸ: ಬೊಟ್ಟಿಕಂಡ ಮನೆ ನಾಯಿಲ ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ರವರ ಗಂಡನಾದ ಯತಿರಾಜ್ ಮರ ಕಡಿಯುವ ಕೆಲಸ ಮಾಡಿಕೊಂಡಿದ್ದು. ದಿನಾಂಕ 09-01-2022 ರಂದು ಅರುಣ್ ಬೋರುಗುಡ್ಡೆ, ಪುರುಷ ನಿನ್ನಿಪಡ್ಪು, ಪ್ರಭಾಕರ ಮರ್ದೊಳಿ ಹಾಗೂ ಸತೀಶ ನಾಯಿಲ ರವರ ಜೊತೆಯಲ್ಲಿ ನರಿಕೊಂಬು ಗ್ರಾಮದ ಪಾದ್ರಿಪಾಲ್ ಎಂಬಲ್ಲಿಯ ಸುಭೋದ ಪ್ರಭು ರವರ ಪತ್ನಿ ಸುಜಾತ ಪ್ರಭು ರವರ ಬಾಬ್ತು ಪಟ್ಟಾ ಜಾಗದಲ್ಲಿ ಬೆಳೆದಿದ್ದ ತೆಂಗಿನ ಮರವನ್ನು ಪುರುಷರವರು ಮಿಷನ್ ನಲ್ಲಿ ಬುಡಭಾಗವನ್ನು ಕಡಿಯುತ್ತಿದ್ದಾಗ  ಪಿರ್ಯಾಧಿದಾರರ ಗಂಡ, ಪ್ರಭಾಕರ, ಅರುಣ್, ಸತೀಶರವರು ಹಗ್ಗವನ್ನು ಕಟ್ಟಿ ತೆಂಗಿನ ಮರದ ಮೇಲ್ಭಾಗವನ್ನು ಒಂದು  ಬದಿಗೆ ಎಳೆಯುತ್ತಿದ್ದ ಸಮಯ ಏಕಾಏಕಿಯಾಗಿ ತೆಂಗಿನ ಮರವು  ಪಿರ್ಯಾಧಿದಾರರ ಗಂಡನ ಮೈಮೇಲೆ ಬಿದ್ದು, ತಲೆಗೆ ತೀವ್ರ ರೀತಿಯ ರಕ್ತಗಾಯವಾಗಿ ಬಿದ್ದ ಗಂಡನನ್ನು ಜೊತೆಯಲ್ಲಿದವರು 108 ಅಂಬುಲೈನ್ಸ್ ನಲ್ಲಿ ಬಂಟ್ವಾಳ ಸರಕಾರಿ ಆಸ್ವತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿದೆ. ಜಾಗದ ಮಾಲಿಕರಾದ ಸುಜಾತ ಪ್ರಭು, ಹಾಗೂ ಪತಿ ಸುಭೋದ ಪ್ರಭು ರವರು ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷತನ ವಹಿಸಿರುವುದರಿಂದಲೇ ಅವಘಡ ಸಂಭವಿಸಿ ಪಿರ್ಯಾಧಿದಾರರ ಗಂಡನ ಮರಣಕ್ಕೆ ಕಾರಣವಾಗಿರುವುದಾಗಿದೆ, ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 04/2022  ಕಲಂ: 304 (ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪೊಲೀಸ್ ಉಪ ನಿರೀಕ್ಷಕರು (ಕಾ.ಸು) ಬಂಟ್ವಾಳ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿಗಳೊಂದಿಗೆ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ನಲ್ಲಿ ಇರುವ ಸಮಯ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಮಿತ್ತಮಜಲು ದೇವಸ್ಥಾನದ ಸಮೀಪದ ಗುಡ್ಡ ಪ್ರದೇಶದಲ್ಲಿ ಇಸ್ಪೀಟು ಎಳೆಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟವಾಡುವುದಾಗಿ ಬಂದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ನೋಡಲಾಗಿ ಕೆಲವು ವ್ಯಕ್ತಿಗಳು ನೆಲದಲ್ಲಿ ಪ್ಲಾಸ್ಟಿಕ್ ಟರ್ಪಾಲ್ ನ್ನು ಹಾಕಿ ಜನರು ಸುತ್ತಲು ಕುಳಿತು ಇಸ್ಪೀಟು ಎಲೆಗಳ ಮೇಲೆ ಹಣವನ್ನು ಪಣವಾಗಿಡುತ್ತಾ ಉಳಾಯಿ ಪಿದಾಯಿ ಎಂದು ಹೇಳುತ್ತಾ 500, 1000 ಎಂದು ಹೇಳುತ್ತಾ ಹಣ ಕಟ್ಟುತ್ತಾ ಜೂಜಾಟವಾಡುವುದು ಖಚಿತಗೊಂಡಿದ್ದು ದಾಳಿ ನಡೆಸುವ ಸಮಯ ಕೆಲವರು ಓಡಿ ಹೋಗಿದ್ದು ಅದರಲ್ಲಿದ್ದ ಮೂರು ಜನರನ್ನು ಹಿಡಿದುಕೊಂಡು ವಿಚಾರಿಸಲಾಗಿ ಸದ್ರಿ ಜೂಜಾಟವನ್ನು ಶ್ರೀನಾಥ್ ಶೆಟ್ಟಿ ಎಂಬವರು ನಡೆಸುತ್ತಿದ್ದು, ಓಡಿ ಹೋಗಿರುವವರ ಪೈಕಿ ಒಬ್ಬನ ಹೆಸರನ್ನು ತಿಳಿಸಿದ್ದು, ಅಬ್ದುಲ್ ಅಝೀಝ್ ಆಗಿದ್ದು ಹಿಡಿದಿಟ್ಟುಕೊಂಡವರ ಪೈಕಿ ಒಬ್ಬೊಬ್ಬರ ಹೆಸರನ್ನು ಕೇಳಲಾಗಿ 1. ಇಕ್ಬಾಲ್ 2. ಬದ್ರುದ್ದೀನ್ 3. ಅಬ್ದುಲ್ ಶಮೀರ್ ಎಂಬುವುದಾಗಿ ತಿಳಿಸಿದ್ದು ಪ್ಲಾಸ್ಟಿಕ್ ಟರ್ಪಾಲ್ ನ ಮೇಲೆ ಬಿದ್ದುಕೊಂಡಿದ್ದ ಹಣವನ್ನು ಲೆಕ್ಕ ಮಾಡಲಾಗಿ ವಿವಿಧ ಮುಖ ಬೆಲೆಯ ಒಟ್ಟು ರೂ.11,150/- ದೊರೆತಿದ್ದು ಪ್ಲಾಸ್ಟಿಕ್ ಟರ್ಪಾಲ್ ನ ಮೇಲೆ ಬಿದ್ದುಕೊಂಡಿದ್ದ ಇಸ್ಪೀಟು ಎಲೆಗಳನ್ನು ಲೆಕ್ಕ ಮಾಡಲಾಗಿ ಒಟ್ಟು 52 ಇಸ್ಪೀಟು ಎಲೆಗಳು ಇದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 05/2022  ಕಲಂ: 87  ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಾಲಕೃಷ್ಣ  ಪ್ರಾಯ: 39 ವರ್ಷ ತಂದೆ:ದಿ||ಜನಾರ್ಧನ. ವಾಸ: ಮಂಜಿಪಾಲು ಮನೆ,ಶಂಭೂರು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರ  ಹೆಂಡತಿಯ ತಾಯಿ  ಮೋಹಿನಿಯು ಸುಮಾರು 15 ದಿನಗಳ ಹಿಂದೆ  ತನ್ನ ಮಗಳನ್ನು ಹಾಗೂ  ಮೊಮ್ಮಗಳನ್ನು ನೋಡುವರೇ  ಮನೆಗೆ ಬಂದಿದ್ದು  ಹಾಗೆ ಮನೆಗೆ ಬಂದವರು ಸುಮಾರು 15 ದಿನಗಳ ಕಾಲ ಮನೆಯಲ್ಲಿಯೇ  ಇದ್ದು ಹೋಗುವುದಾಗಿ ಹೇಳುತ್ತಿದ್ದರು ಈ ವಿಚಾರದಲ್ಲಿ ತಾಯಿಯವರು ಬೇಸರಗೊಂಡು  ಅವರನ್ನು ಹೋಗುವಂತೆ ಹೇಳಲು ನನ್ನಲ್ಲಿ ಹೇಳುತ್ತಿದ್ದರು ಅದಕ್ಕೆ ನಾನು ತಾಯಿಯನ್ನು ಸಮಾಧಾನ ಪಡಿಸಿ ಇನ್ನೊಂದೆರೆಡು ದಿನಗಳಲ್ಲಿ ಅವರು ಹೋಗುತ್ತಾರೆ ಎಂದು ಹೇಳುತ್ತಿದ್ದೆನು. ದಿನಾಂಕ 04.01.2022 ರಂದು  ಪಿರ್ಯಾದುದಾರರು  ಸಂಪ್ಯ ಪುತ್ತೂರಿಗೆ ಕೆಲಸಕ್ಕೆ ಹೋಗಿದ್ದು  ಮಧ್ಯಾಹ್ನ ಸುಮಾರು 3.30 ಗಂಟೆ ಸಮಯಕ್ಕೆ ಪಿರ್ಯಾದುದಾರರ  ಅಕ್ಕ ಮನೆಗೆ ಬಂದಾಗ ತಾಯಿಯವರು ಆಕೆಯೊಡನೆ ನಾನು  ವಿಷ ಸೇವಿಸಿರುವುದಾಗಿ ಹೇಳಿರುತ್ತಾರೆ ಎಂಬುವುದಾಗಿ ಪಿರ್ಯಾದುದಾರರಿಗೆ ಅಕ್ಕ ತಿಳಿಸಿದ್ದು. ಕೂಡಲೇ ಮಾವನ ಮಗನಾದ ರಾಮಚಂದ್ರನಿಗೆ ಪೋನ್ ಮಾಡಿ ತಾಯಿಯವರು ವಿಷಯ ಸೇವಿಸಿದ್ದಾರಂತೆ  ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗು ನಾನು ಬರುತ್ತೇನೆಂದು ಹೇಳಿ ಪಿರ್ಯಾದುದಾರರು ಹೊರಟು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕತ್ಸೆ ನೀಡಿ ಹೆಚ್ಚಿನ ಚಿಕತ್ಸೆ ಬಗ್ಗೆ ಮೇಲ್ದರ್ಜೆ ಆಸ್ಪತ್ರೆಗೆ ಕರೆದುಕೊಂಡುಹೋಗುವಂತೆ ತಿಳಿಸಿದ್ದು ಅದರಂತೆ  108 ಅಂಬ್ಯೂಲೆನ್ಸ್ ವಾಹನದಲ್ಲಿ  ಕರೆದುಕೊಂಡು ಹೋಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಅಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 08.01.2022 ರಂದು ರಾತ್ರಿ 10.45 ಗಂಟೆಗೆ ತಾಯಿಯವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 03-2022 ಕಲಂ 174 ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-01-2022 10:25 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080