ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 6

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಂತೋಷ್ (32) ತಂದೆ: ಗುರುವ ವಾಸ: ಮಾತೃಶ್ರೀ ನಿಲಯ ದರ್ಖಾಸು ಮಲೆಬೆಟ್ಟು ಮನೆ ಕೊಯ್ಯೂರು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 08-02-2022 ರಂದು ಕೆಎ 21 ಎ 3954 ನೇ ಆಟೋ ರಿಕ್ಷಾದಲ್ಲಿ ಅದರ ಚಾಲಕ ಯಶೋಧರ ಎಂಬವರು ಸಹಪ್ರಯಾಣಿಕನಾಗಿ ಚಲ್ಲ ಎಂಬವರನ್ನು ಕುಳ್ಳಿರಿಸಿಕೊಂಡು ಕೊಯ್ಯೂರು ಕ್ರಾಸ್‌ ಕಡೆಯಿಂದ ಮಲೆಬೆಟ್ಟು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 7:15 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ದೇವಸ್ಯ ಎಂಬಲ್ಲಿ ಆಟೋ ರಿಕ್ಷಾವನ್ನು ದುಡುಕುತನದಿಂದ ಚಲಾಯಿಸಿ ಚಾಲಕನ ಚಾಲನಾ ಹತೋಟಿ ತಪ್ಪಿ ಆಟೋ ರಿಕ್ಷಾ ಎಡ ಮಗ್ಗುಲಾಗಿ ಮಗಚಿ ಬಿದ್ದ ಪರಿಣಾಮ  ಆಟೋ ರಿಕ್ಷಾದಲ್ಲಿದ್ದ ಸಹ ಪ್ರಯಾಣಿಕರಾದ ಚಲ್ಲ ಎಂಬವರು ತಲೆಗೆ, ಎಡ ಕಿವಿಗೆ, ಬಲಕಾಲಿನ ತೊಡೆಗೆ ಗುದ್ದಿದ ರಕ್ತಗಾಯ ಹಾಗೂ ಚಾಲಕ ಯಶೋಧರ ರವರು ಎಡಕಾಲಿನ ಪಾದಕ್ಕೆ, ಬಲಕಾಲಿನ ಮೊಣಗಂಟಿಗೆ ರಕ್ತಗಾಯಗೊಂಡು ಚಲ್ಲ ಎಂಬವರು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಯಶೋಧರ ಎಂಬವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 21/2022 ಕಲಂ; 279,337ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಾರ್ತಿಕ್ ಪ್ರಾಯ 27 ವರ್ಷ ತಂದೆ: ದಿನೇಶ ವಾಸ: ಶ್ರೀ ಗೋಕುಲ ಮನೆ, ಪೆರಿಂಜ ಪೋಸ್ಟ್, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 09-02-2022 ರಂದು ಪಿರ್ಯಾಧಿದಾರರು ತನ್ನ ಬಾಬ್ತು ಕೆಎ 51 ಡಿ 9446 ನೇ ಖಾಸಗಿ ಬಸ್ಸನ್ನು ವೇಣೂರು ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಮಧ್ಯಾಹ್ನ 12.45 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಬರಾಯ ಬದ್ಯಾರು ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾಧಿದಾರರ ಹಿಂದಿನಿಂದ ಅಂದರೆ ವೇಣೂರು ಕಡೆಯಿಂದ ಗುರುವಾಯನಕೆರೆ ಕಡೆಗೆ ಕೆಎ 21 ಆರ್‌ 2325 ನೇ ಮೋಟಾರು ಸೈಕಲ್‌ ನಲ್ಲಿ ಸವಾರ, ಸಹ ಸವಾರನನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾಧಿದಾರರ ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ಸಂಪತ್‌, ಸಹ ಸವಾರ ಪ್ರಶಾಂತ್‌ ಎಂಬವರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಸಂಪತ್‌ ರವರು ಬಲಕಾಲಿನ ತೊಡೆಗೆ, ಪಾದಕ್ಕೆ ಗುದ್ದಿದ ಗಾಯ, ಪ್ರಶಾಂತ್ ರವರು ಎಡ ಕೈಯ ಭುಜಕ್ಕೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಈ ಪೈಕಿ ಸಂಪತ್‌ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಕೊಂಡು ಹೋಗಿರುವುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 22/2022 ಕಲಂ; 279,337ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹರಿಪ್ರಕಾಶ್ (42) ತಂದೆ: ಬೀರಣ್ಣ ರೈ ವಾಸ : ತೋಟ್ಲ ಮನೆ, ಕೈಕಾರ ಅಂಚೆ, ಅರ್ಯಾಪು ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 08-02-2022 ರಂದು KA-21-B-0052ನೇ ಲಾರಿಯನ್ನು ಮಂಗಳೂರಿನಿಂದ ಪುತ್ತೂರಿಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು 21:30 ಗಂಟೆಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರು ನಗರ ಎಂಬಲ್ಲಿಗೆ ತಲುಪಿದಾಗ ಮೇಲ್ಕಾರ್ ಕಡೆಯಿಂದ KA-19-AC-4157 ನೇ ಲಾರಿಯನ್ನು ಅದರ ಚಾಲಕ ಅಜಾಗರೂಕತೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ KA-21-B-0052 ನೇ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಹಾಗೂ ಬಲಕೈ ಮೊಣಗಂಟಿಗೆ ಗುದ್ದಿದ ನೋವು ಮತ್ತು ಕ್ಲಿನರ್ ಸುದರ್ಶನ್ ರವರ ಗಲ್ಲಕ್ಕೆ ಮತ್ತು ಎಡಕಾಲಿನ ಮೊಣಗಂಟಿಗೆ ಗುದ್ದಿದ ನೋವು ಉಂಟಾದವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರ ಪೋಲಿಸ್ ಠಾಣಾ ಅ.ಕ್ರ 19/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಾಂತಿ ಪ್ರಸಾದ್ (50) ತಂದೆ: ರತ್ನ ಶೇಖರ ಶೆಟ್ಟಿ ವಾಸ : ನಗ್ರಿ ಮನೆ, ಸಜಿಪಮೂಡ  ಗ್ರಾಮ ಮತ್ತು ಅಂಚೆ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 08-02-2022 ರಂದು ಅಗತ್ಯ ಕೆಲಸದ ನಿಮಿತ್ತ ತಮ್ಮ ಬಾಬ್ತು KA-70E-8200 ನೇ ಸ್ಕೂಟರಿನಲ್ಲಿ ಬಿ.ಸಿ.ರೋಡಿಗೆ ಹೋಗಿ ವಾಪಾಸು ಮನೆ ಕಡೆಗೆ ಬರುತ್ತಾ ಸಮಯ ಸುಮಾರು 20:00 ಗಂಟೆಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರು ನಗರ ಎಂಬಲ್ಲಿಗೆ ತಲುಪಿದಾಗ ಮೇಲ್ಕಾರ್ ಕಡೆಯಿಂದ KL-10-AK-8118 ನೇ ಕಾರನ್ನು ಅದರ ಚಾಲಕ ಮಹಮ್ಮದ್ ಅಝೀಮ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿಗೆ ಮತ್ತು ಕೋಲುಕಾಲಿಗೆ ಗುದ್ದಿದ ಜಖಂ ಗೊಂಡವರು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರ ಪೋಲಿಸ್ ಠಾಣಾ ಅ.ಕ್ರ 20/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೊಹಮ್ಮದ್ ನಾಸೀರ್ (40) ತಂದೆ: ಖಾಸಿಂ ಸಾಹೇಬ್ ವಾಸ : ಫಾತಿಮಾ ಮಂಝಿಲ್ ಸೋಮೇಶ್ವರ ಗ್ರಾಮ ಮಂಗಳೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 08-02-2022 ರಂದು ಪುತ್ತೂರಿನಿಂದ ಮಂಗಳೂರು ಕಡೆಗೆ ತನ್ನ ಬಾಬು MH-03-CH-0087ನೇ ಕಾರಿನಲ್ಲಿ ಪತ್ನಿ ಆಶಿಯಾನ ನೌಷದ್ ರೊಂದಿಗೆ ಬರುತ್ತಾ ಸಮಯ ಸುಮಾರು 18:00 ಗಂಟೆಗೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಎಂಬಲ್ಲಿ ತಲುಪಿದಾಗ ಎದುರುಗಡೆಯಿಂದ ಅಂದರೆ ಕಲ್ಲಡ್ಕ ಕಡೆಯಿಂದ AP-03-TK-3960 ನೇ ಲಾರಿಯನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ಪತ್ನಿ ಆಶಿಯಾನ ನೌಷದ್ ರವರ ಮುಖದ ಎಡಬದಿಗೆ ಗಾಯವಾಗಿದ್ದು, ಕಲ್ಲಡ್ಕ ಪುಷ್ಪರಾಜ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಅಲ್ಲದೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೋಲಿಸ್ ಠಾಣಾ ಅ.ಕ್ರ 21/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಕೃಷ್ಣ ಎಂ, ಪ್ರಾಯ 34 ವರ್ಷ, ತಂದೆ: ದಿ|| ಪೊಡಿಯ, ವಾಸ: ಮುಂಡಾಜೆ ಮನೆ, ಪಡ್ನೂರು ಅಂಚೆ ಮತ್ತು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 08-02-2022 ರಂದು 19-00 ಗಂಟೆಗೆ ಆರೋಪಿ ಸ್ಕೂಟರ್ ಸವಾರ ರಕ್ಷಿತ್ ಕೆ.ವಿ ಎಂಬವರು KA-21-R-3503 ನೇ ನೋಂದಣಿ ನಂಬ್ರದ  ಸ್ಕೂಟರನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ದ್ವಿ ಪಥ ಡಾಮಾರು ರಸ್ತೆಯಲ್ಲಿ ಬನ್ನೂರು ಕಡೆಯಿಂದ ಹಾರಾಡಿ ಹಾಸ್ಟೆಲ್ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ ಪುತ್ತೂರು ಕಸಬಾ ಗ್ರಾಮದ ಪಡೀಲ್ ಜಂಕ್ಷನ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಮುಖ್ಯ ರಸ್ತೆಗೆ ಅಡ್ಡಲಾಗಿ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಬಾಲಕೃಷ್ಣ ಎಂಬವರು ಸವಾರರಾಗಿ, ಜ್ಯೋತಿ ಕುಮಾರ್ ಎಂಬವರು ಸಹಸವಾರರಾಗಿ, ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದ KA-21-V-3254 ನೇ ನೋಂದಣಿ ನಂಬ್ರದ  ಮೋಟಾರ್ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು ಮತ್ತು ಜ್ಯೋತಿ ಕುಮಾರ್ ರವರು ಮೋಟಾರ್ ಸೈಕಲ್ ಸಮೇತ  ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕೈಯ ಬೆರಳಿಗೆ, ಬಲಕೈ ಭುಜಕ್ಕೆ, ಕೋಲು ಕೈಗೆ ಗುದ್ದಿದ ಹಾಗೂ ತರಚಿದ ಗಾಯ ಮತ್ತು ಜ್ಯೋತಿ ಕುಮಾರ್ ರವರಿಗೆ  ಬಲಕೈಯ ಹೆಬ್ಬೆರಳಿಗೆ, ಎಡಕೈಯ ಮೊಣಗಂಟಿಗೆ ಗುದ್ದಿದ, ತರಚಿದ ಗಾಯಗೊಂಡವರನ್ನು  ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಅ.ಕ್ರ:  25/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಲಿಗೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿ ಅಬ್ದುಲ್ ರಹಿಮಾನ್ ಪ್ರಾಯ 47 ತಂದೆ:ದಿ|| ಇಸ್ಮಾಯಿಲ್ ಹಾಜಿ ವಾಸ;ಭಗವಂತ ಕೋಡಿ ಮನೆ ನೆಟ್ಲಮುಡ್ನೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದುದಾರರ ಅಣ್ಣ ಸುಲೈಮಾನ್ ರವರು ಅವರ ಹೆಂಡತಿ ಬಿಫಾತುಮ್ಮ ಎಂಬವರನ್ನು ಮದುವೆಯಾಗಿ ಸಂಸಾರದೊಂದಿಗೆ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಅಡ್ಡದ ಬೀದಿ ಎಂಬಲ್ಲಿ ವಾಸವಿದ್ದು. ಅಡ್ಡದ ಬೀದಿಯಲ್ಲಿ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುವುದಾಗಿದೆ. ದಿನಾಂಕ 09-02-2022 ರಂದು ಮಧ್ಯಾಹ್ನ ಸುಮಾರು 3-30 ಗಂಟೆಗೆ ಯಾರೋ ಇಬ್ಬರು ಅಪರಿಚಿತರು ಸುಲೈಮಾನ್ ರವರ ಮನೆಗೆ ಬಂದು ಅವರ ಹೆಂಡತಿ ಬಿಫಾತುಮ್ಮರವರು ಒಬ್ಬರೇ ಮನೆಯಲ್ಲಿದಾಗ ನಿಮ್ಮ ವಿದ್ಯುತ್ ಬಿಲ್ಲು ಬಾಕಿ ಇದೆ ಬಿಲ್ಲು ತೋರಿಸಿ ಅಂತ ಹೇಳಿ ಅವರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಬಿಫಾತುಮ್ಮರವರಿಗೆ ಮಾರಾಕಾಯುಧದಿಂದ ಗಂಭಿರ ಸ್ವರೂಪದ ಗಾಯವನ್ನು ಉಂಟು ಮಾಡಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿದೆ ಸುಲಿಗೆ ಮಾಡಿದ ಚಿನ್ನ ಸುಮಾರು 32 ಗ್ರಾಂ ಅಗಿದ್ದು. ಅದರ ಅಂದಾಜು ಮೌಲ್ಯ 80,000/- ಅಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 26/2022  ಕಲಂ: 448,397, ಜೊತೆಗೆ 34   ಬಾಧಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದಪ್ಪ ಪ್ರಾಯ 58 ವರ್ಷ ತಂದೆ ತನಿಯಪ್ಪ ಪೂಜಾರಿ ವಾಸ ಬಡಗುಂಡಿ ಕೊಪ್ಪಳ ಮನೆ ನಾವುರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಸುಮಾರು 12 ವರ್ಷಗಳ ಹಿಂದೆ ಪಿರ್ಯಾದುದಾರರ ಪತ್ನಿ ಮಕ್ಕಳನ್ನು ಬಿಟ್ಟು ಒಬ್ಬಂಟಿಯಾಗಿದ್ದು ಬಂಟ್ವಾಳ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಬರುತ್ತಿದ್ದು ಹಗಲಿನಲ್ಲಿ ಸಿಕ್ಕಿದ ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಬರುತ್ತಿರುವುದಾಗಿದೆ ಬಂಟ್ವಾಳ ತಾಲೂಕು ಹಳೇಗೇಟಿ್ ಬಸ್ ಸ್ಟಾಂಡ್ ಮತ್ತು ನಿತ್ಯಾನಂದ ಹೋಟೆಲ್  ಪಕ್ಕದಲ್ಲಿ  ರಾತ್ರಿ ಹೊತ್ತು ತಂಗುತ್ತಿದ್ದು  .ಹಳೆಗೇಟು ಎಂಬಲ್ಲಿರುವ ಕೃಷ್ಣಪ್ಪ  ಎಂಬವರಿಗೆ  ಸುಮಾರು 2 ತಿಂಗಳ ಹಿಂದೆ 1000/- ರೂ ಹಣವನ್ನು ಸಾಲವಾಗಿ ನೀಡಿದ್ದು, ದಿನಾಂಕ 09.02.2022 ರಂದು ಮಧ್ಯಾಹ್ನ 01.00 ಗಂಟೆಗೆ ಪಿರ್ಯಾದಿದಾರರು ಕೃಷ್ಣಪ್ಪ ಎಂಬವರಲ್ಲಿ ನೀಡಿದ ರೂ 1000/- ಸಾಲವನ್ನು ವಾಪಾಸ್ಸು ಕೊಡುವಂತೆ ಕೇಳಿದಾಗ ಆರೋಪಿಯು ಪಿರ್ಯಾದುದಾರರನ್ನು ಉದ್ದೇಶಿಸಿ ಅವ್ಯಾಚ ಶಬ್ಧಗಳಿಂದ ಬೈದು ಕಬ್ಬಿಣದ ರಾಡ್ ನಿಂದ ಪಿರ್ಯಾದುದಾರರ ತಲೆಗೆ ಹೊಡೆದು ಇನ್ನು ಮುಂದಕ್ಕೆ ಹಣ ಕೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ.  ಆರೋಪಿಯು ತಲೆಗೆ ಹೊಡೆದುದರಿಂದ  ತಲೆಯಲ್ಲಿ ರಕ್ತ  ಗಾಯವಾಗಿದ್ದು  ಪಿರ್ಯಾದಿದಾರರು  ಚಿಕಿತ್ಸೆಯ ಬಗ್ಗೆ  ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 12-2022 ಕಲಂ 504 324 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಲೀಲಾ, ಪ್ರಾಯ: 76 ವರ್ಷ, ಗಂಡ: ದಿ/ಕುಂಜೀರ ಪೂಜಾರಿ, ವಾಸ: ಬರಮೇಲು ಮನೆ, ತೆಂಕಕಜೆಕಾರು ಗ್ರಾಮ, ಕಕ್ಕೆಪದವು, ಕರ್ಲ ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಮಗ ಕೇಶವ 48 ವರ್ಷ ಎಂಬವರಿಗೆ ದಿನಾಂಕ: 31.01.2022 ರಂದು ಮೃತರ ಹೆಂಡತಿಯ ಅಣ್ಣ ಅಶೋಕ ಎಂಬವರು ಹಲ್ಲೆ ನಡೆಸಿದ್ದು, ಈ ಬಗ್ಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.  ದಿನಾಂಕ: 08.02.2022 ರಂದು ಸಂಜೆ 4 ಗಂಟೆಯ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆತನ ಪತ್ನಿ ಹಾಗೂ ಇತರರು ಚಿಕಿತ್ಸೆ ಬಗ್ಗೆ  ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ  ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣೆ  UDR NO 05/2022 ಕಲಂ: 174 (3) (iv)  ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಆರ್ ಸಿದ್ದೀಕ್ (39) ತಂದೆ: ದಿ. ಹಸೈನಾರ್ ವಾಸ: ರೆಂಜಿಲಾಡಿ ಮನೆ ಸರ್ವೆ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ  ತಮ್ಮ ಬಾತಿಷಾ ಪ್ರಾಯ 35 ವರ್ಷ ತಂದೆ: ದಿ.ಹಸೈನಾರ್ ವಾಸ ರೆಂಜಿಲಾಡಿ ಮನೆ, ಸರ್ವೆ ಗ್ರಾಮ, ಪುತ್ತೂರು ತಾಲೂಕು ಎಂಬುವರು ಈ ದಿನ ದಿನಾಂಕ 09.02.2022 ರಂದು ಮರ ಕಡಿಯುವ ಕೆಲಸದ ನಿಮಿತ್ತ ನರಿಮೊಗ್ರು ಗ್ರಾಮದ ಪುರುಷರ ಕಟ್ಟೆ ಎಂಬಲ್ಲಿಗೆ ಹೋಗಿ ಅಲ್ಲಿ ಅಬ್ದುಲ್ ಅಜೀಜ್ ರೆಂಜಿಲಾಡಿ ಹಾಗೂ ಇತರರ ಜೊತೆ ಮ್ಯಾಂಜಿಯಮ್ ಮರ ಕಡಿಯುವ ಕೆಲಸದಲ್ಲಿ ತೊಡಗಿದ್ದರು ಮಧ್ಯಾಹ್ನ ಸುಮಾರು 12.30 ಗಂಟೆಗೆ ಮರ ಕಡಿಯುತ್ತಿರುವ ಸಮಯ ಮರವು  ಮರದ ಬದಿಯಲ್ಲಿ ನಿಂತಿದ್ದ ಬಾತಿಷಾರವರ  ಮೇಲೆ ಆಕಸ್ಮಿಕವಾಗಿ ಬಿದ್ದು, ಗಂಭೀರ ಗಾಯಗೊಂಡಿದ್ದು, ಬಳಿಕ ಅವರನ್ನು ಅಲ್ಲಿ  ಸೇರಿದ ಜನರು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದು ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುತ್ತಾನೆ ಎಂದು ದೃಡಪಡಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ  ಯುಡಿಆರ್‌:      05/2022  ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-02-2022 11:06 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080