ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಎಂ ವಿ ಯೂಸುಫ್‌, (40) ತಂದೆ: ದಿ| ಎಂ ಅಹಮ್ಮದ್‌ ಬಾವ, ವಾಸ: ಪರಕೇರಿ ಮನೆ, ನೆಹರುನಗರ ನರಿಕೊಂಬು ಅಂಚೆ ಮತ್ತು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 8-3-2021 ರಂದು ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಸಾಗರ್ ಆಡಿಟೋರಿಯಂ ಎದುರು ನಿಂತಿದ್ದ ಸಮಯ ಪಿರ್ಯಾದಿದಾರರ ಪರಿಚಯದ ಕೆ.ಹೆಚ್.ಆದಂ ಎಂಬವರು ಅವರ ಬಾಬ್ತು KA-19-HA-9054 ನೇ ಆಕ್ಟೀವಾ ಸ್ಕೂಟರಿನಲ್ಲಿ ಬಂದವರು ಬಿ.ಸಿ.ರೋಡ್ ಕಡೆಗೆ ಹೋಗುವರೇ ಸ್ಕೂಟರಿನಲ್ಲಿದ್ದ ಸಮಯ ಬಿ.ಸಿ.ರೋಡ್ ಕಡೆಯಿಂದ KA-19-EJ-6144 ನೇ ಮೋಟಾರು ಸೈಕಲನ್ನು ಅದರ ಸವಾರ ಪಿ.ಮೊಹಮ್ಮದ್ ಎಂಬವರು ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಅಲ್ಲಿ ನಿಂತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನಲ್ಲಿದ್ದ ಕೆ.ಹೆಚ್.ಆದಂ ರವರು ಸ್ಕೂಟರ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ರಕ್ತಗಾಯ ಹಾಗೂ ಎರಡೂ ಕೈಯ ಮುಂಗೈ ಹಾಗೂ ಮೊಣಕಾಲಿಗೆ ತರಚಿದ ಗಾಯವಾಗಿದ್ದು, ಗಾಯಾಳು ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 23/2021 ಕಲಂ 279,337 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅನನ್ಯ ಪ್ರಾಯ 19 ವರ್ಷ ತಂದೆ: ಶಿವರಾಮ ವಾಸ: ಅಲ್ಲಿ ಪಾದೆ ಮನೆ ದೇವಸ್ಯ ಪಡೂರು ಗ್ರಾಮ ಬಂಟ್ವಾಳ ತಾಲೂಕು ರವರು ಎಂದಿನಂತೆ ದಿನಾಂಕ 08-03-2021 ಎಸ್ ವಿ ಎಸ್ ಕಾಲೇಜಿನಿಂದ ಮಧ್ಯಾಹ್ನ 01.05 ಗಂಟೆಗೆ ಬಿ  ಮೂಡ ಗ್ರಾಮ ಬಿ ಸಿ ರೋಡಿನ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಪಾದೆ ಎಂಬಲ್ಲಿಗೆ ಹೋಗುವ ಜೀವನ ಜ್ಯೋತಿ ಬಸ್ಸಿಗೆ ಹತ್ತಿ, ಬಸ್ಸಿನಲ್ಲಿದ್ದ ಸೀಟಿನಲ್ಲಿ ಪಿರ್ಯಾಧಿದಾರರು HP LAP TOP  ಇರುವ ಬ್ಯಾಗ ಯನ್ನು ಸೀಟಿನಲ್ಲಿ ಇಟ್ಟು ಹತ್ತಿರದ ಮೆಡಿಕಲ್ ಅಂಗಡಿಗೆ ಔಷಧಿ ತರಲು ಹೋಗಿ,  ವಾಪಾಸು ಬಂದು ನೋಡಿದಾಗ ಸದ್ರಿ ಸೀಟಿನಲ್ಲಿರುವ HP LAP TOP  ಇರುವ ಬ್ಯಾಗ ಕಾಣೆಯಾಗಿರುವುದು ಕಂಡು ಪಿರ್ಯಾಧಿದಾರರು ಬಸ್ಸಿನಲ್ಲಿರುವ ಜನರಲ್ಲಿ ವಿಚಾರಿಸಿದಾಗ ಯಾರೂ ಒಬ್ಬರೂ ಬ್ಯಾಗ ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ, ನಂತರ ಸದ್ರಿ ಪರಿಸರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ದಿನಾಂಕ 08-02-2021 ರಂದು ಮಧ್ಯಾಹ್ನ 1.05 ರಿಂದ ದಿನಾಂಕ: 08-03-2021 ರಂದು ಮಧ್ಯಾಹ್ನ 1.10 ಗಂಟೆಯ  ಮಧ್ಯೆ ಯಾರೋ ಕಳ್ಳರು HP LAP TOP  ಇರುವ ಬ್ಯಾಗಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಕಳುವಾದ HP LAP TOP ನ ಅಂದಾಜು ಮೌಲ್ಯ 50,000/- ಐವತ್ತು ಸಾವಿರ ರೂ ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 30-2021 ಕಲಂ: 379  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹಸೈನಾರ್ ಪ್ರಾಯ 54 ವರ್ಷ ತಂದೆ:ಅದ್ರಮಾ ಬ್ಯಾರಿ ವಾಸ:ಭಗವಂತಕೋಡಿ ಮನೆ  ,ನೇರಳಕಟ್ಟೆ ,ನೆಟ್ಲಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ರವರು ಹೆಂಡತಿ ಮಕ್ಕಳು ಸೊಸೆಯಂದಿರ ಜೊತೆ ವಾಸವಾಗಿದ್ದು .ದಿನಾಂಕ 08.03.2021 ರಂದು ಹೆಂಡತಿ ತಂಗಿಯ ಮನೆ ಅಜೀಲಮೊಗರುಗೆ ಹೋಗಿದ್ದು ಮನೆಯಲ್ಲಿ ಮಕ್ಕಳು ಮತ್ತು ಸೊಸೆಯಂದಿರು ಇದ್ದರು. ದಿನಾಂಕ 09.03.2021 ರಂದು ಬೆಳಗ್ಗೆ  ಸುಮಾರು 09.00 ಗಂಟೆಗೆ ಪಿರ್ಯಾದುದಾರರ ಕಿರಿಯ ಮಗ ಇಜಝ್ ಪೋನ್ ಕರೆ ಮಾಡಿ ನಿನ್ನೆ ರಾತ್ರಿ ಮನೆಯಲ್ಲಿ ಕಳ್ಳತನವಾಗಿದೆ, ಎಂದು ತಿಳಿಸಿದ ಪ್ರಕಾರ ಪಿರ್ಯಾದುದಾರರು ಕೂಡಲೇ ಹೆಂಡತಿಯೊಂದಿಗೆ ಮನೆಗೆ ಬಂದು ನೋಡಲಾಗಿ ಮನೆಯ ಹಿಂದಿನ ಬಾಗಿಲು ಮುರಿದಿದ್ದು ಮನೆಯ ಅಂತಸ್ಥಿನ ಎರಡು ಬೆಡ್ ರೂಮಿನಲ್ಲಿದ್ದ ಮೂರು ಶೀಟ್ ಕಪಾಟುಗಳ ಬಾಗಿಲನ್ನು ಮುರಿದು ಮಗಳ ಬಾಬ್ತು ಕಿವಿಯ ಬೆಂಡೋಲೆ,ಕಾಲು ಚೈನ್ , ಉಂಗುರ, ಮಗುವಿನ ಆಭರಣಗಳು ಮತ್ತು ವ್ಯಾಪಾರದ ಹಣ 35.250 ಕಳವಾಗಿರುವುದು ಕಂಡು ಬಂದು ಮಕ್ಕಳಲ್ಲಿ ವಿಚಾರಿಸಿದಾಗ ರಾತ್ರಿ 12.00 ಗಂಟೆಯಿಂದ ಬೆಳಗ್ಗೆ 08.00 ಗಂಟೆಯ ಮಧ್ಯೆದ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಕಳ್ಳತನ ನೆಡೆಸಿರುವುದು ತಿಳಿಯಿತು ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ 1.45.000 ಆಗ ಬಹುದು ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 37/2021  ಕಲಂ: 457,380  ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಸಂತ ಪೂಜಾರಿ, ಪ್ರಾಯ : 42 ವರ್ಷ, ತಂದೆ: ಸೂರಪ್ಪ ಪೂಜಾರಿ,  ವಾಸ: ನೆಲ್ಲಾಳು ಮನೆ, ಪುದುವೆಟ್ಟು ಗ್ರಾಮ ಬೆಳ್ತಂಗಡಿ ತಾಲೂಕು ರವರು ನೀಡಿದ ದೂರೇನೆಂದರೆ ಬೆಳ್ತಂಗಡಿ ತಾಲೂಕು, ಪಟ್ರಮೆ ಗ್ರಾಮದ, ಕಾಯಿಲ ಮನೆ, ಲೋಕಯ್ಯ ಗೌಡ ರವರ ಪಟ್ಟಾ ಜಮೀನಿನಲ್ಲಿದ್ದ ದೂಪದ ಮರದಿಂದ ಅವರ ಕೃಷಿ ಬೆಳೆಗೆ ಹಾನಿಯಾಗುತ್ತಿದ್ದ ಕಾರಣ ಸದ್ರಿ ಮರವನ್ನು ಕಡಿಯಲು ಲೋಕಯ್ಯ ಗೌಡರು ಪಿರ್ಯಾದಿದಾರರ ಅಕ್ಕನ ಮಗ ಸ್ವಸ್ತಿಕನಿಗೆ ತಿಳಿಸಿದ್ದು, ಅದರಂತೆ ಆತನು ರವಿ, ಗಣೇಶ ಮತ್ತು ಪಿರ್ಯಾದಿದಾರರನ್ನು ಜೊತೆಯಲ್ಲಿ ಕರೆದುಕೊಂಡು ದಿನಾಂಕ: 09-03-2021 ರಂದು ಲೋಕಯ್ಯ ಗೌಡ ರವರ ಜಮೀನಿಗೆ ಹೋಗಿದ್ದು, ಅಲ್ಲಿಗೆ ಸ್ವಸ್ತಿಕನ ಸ್ನೇಹಿತ ಪ್ರಶಾಂತ ಎಂಬವನು ಕೂಡ ಬಂದಿದ್ದು, ಅವರೆಲ್ಲರೂ ಸೇರಿ ಮರವನ್ನು ಕಡಿಯುವರೇ ಮರದ ಕೊಂಬೆಗೆ ಹಗ್ಗ ಕಟ್ಟಿ ಅವರ ಪೈಕಿ ರವಿ, ಪ್ರಶಾಂತ, ಗಣೇಶ ಎಂಬವರು ಹಗ್ಗವನ್ನು ಎಳೆದು ಹಿಡಿದಿದ್ದು, ಸ್ವಸ್ತಿಕ್ ಹಾಗೂ ಪಿರ್ಯಾದಿ ವಸಂತ ಪೂಜಾರಿ ಯವರು ಯಂತ್ರದ ಸಹಾಯದಿಂದ ಮರವನ್ನು ತುಂಡರಿಸುತ್ತಿದ್ದರು. ಅರ್ಧ ತುಂಡಾದ ಮರವು ಒಮ್ಮೆಲೆ ಬಿದ್ದ ಪರಿಣಾಮ ಮರದ ಅಡಿಯಲ್ಲಿ ಸಿಲುಕಿ ಸ್ವಸ್ತಿಕ್, ಪ್ರಶಾಂತ, ಗಣೇಶ ಎಂಬವರು ತೀವ್ರ ಗಾಯದಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ವಸಂತ ಪೂಜಾರಿ ಹಾಗೂ ರವಿಯವರು ಓಡಿ ತಪ್ಪಿಸಿಕೊಂಡಿದ್ದು, ಅವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯುಡಿಆರ್ ನಂ : 14/2021 ಕಲಂ : 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಪ್ರೇಮ ಪ್ರಾಯ 34 ವರ್ಷ ಗಂಡ ಗಂಗಾಧರ ಬಾಲೆಂಬಿ ಮನೆ ಅನ್ಯಾಳ ಚೆಂಬು ಗ್ರಾಮ ಮಡಿಕೇರಿ ತಾಲೂಕು ಕೊಡಗು ಜಿಲ್ಲೆ ರವರು ಮತ್ತು ಅವರ ಗಂಡ ಗಂಗಾಧರರು ಕಲ್ಲುಗುಂಡಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ನಾರಾಯಣ ಭಟ್ರವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಟೈಲರಿಂಗ್ ಕೆಲಸ ಮಾಡುತ್ತಿದ್ದು ಪಿರ್ಯಾದುದಾರರ ಗಂಡ ಹೃದಯ ಸಂಬಂದಿ ಖಾಯಿಲೆಯಿಂದ ಬಳಲುತ್ತಿದ್ದವರು ದಿನಾಂಕ 09.03.2021 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗದೇ ಒಬ್ಬನೇ ಮನೆಯಲ್ಲಿದ್ದು ಮದ್ಯಾಹ್ನ ಪಿರ್ಯಾದಿ ಶ್ರೀಮತಿ ಪ್ರೇಮರವರು ಊಟಕ್ಕೆ ಹೋಗಿ ವಾಪಾಸ್ಸು ಅಂಗಡಿಗೆ ಬರುವಾಗ ಪಿರ್ಯಾದುದಾರರ ಗಂಡನು ಮನೆಯಲ್ಲೇ ಇದ್ದು ನವೀನ್ ಎಂಬವರಿಗೆ ಪಿರ್ಯಾದಿದಾರರ ಗಂಡ ಫೋನ್ ಮಾಡಿ ನಾನು ಇನ್ನಿಲ್ಲ ಇದು ಕೊನೆಯ ಮಾತು ಎಂದು ಹೇಳಿದಾಗ ನವೀನರು 16.00 ಗಂಟೆಗೆ ಹೋಗಿ ನೋಡಲಾಗಿ ಪಿರ್ಯಾದುದಾರರ ಗಂಡ ಗಂಗಾಧರರು ಮನೆಯ ಚಿಲಕ ಹಾಕಿದ್ದು ಕಿಟಕಿಯಲ್ಲಿ ಒಳಗೆ ನೋಡಲಾಗಿ ಅಡುಗೆ ಕೋಣೆಯ ಪಕ್ಕಾಸಿಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದು  ನೇತಾಡುವ ಸ್ಥಿತಿಯಲ್ಲಿದ್ದುದ್ದನ್ನು ನವೀನರವರು  ಪಿರ್ಯಾದುದಾರರಿಗೆ ತಿಳಿಸಿ ಪಿರ್ಯಾದಿದಾರರು ಬಂದು ನೋಡಿದ್ದಾಗಿದೆ. ಪಿರ್ಯಾದುದಾರ ಗಂಡ ಗಂಗಾಧರರವರು ಹೃದಯ ಸಂಬಂದಿ ಖಾಯಿಲೆಯಿಂದ ಮಾನಸಿಕವಾಗಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಯುಡಿಅರ್‌ ನಂಬ್ರ 13/2021 ಕಲಂ 174ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 10-03-2021 11:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080