ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಕೀಲ್ ಪಾಸ್ವಾನ್ ಪ್ರಾಯ 32 ವರ್ಷ ತಂದೆ: ಬೋಪ್ ನಾರಾಯಣ ಸಿಂಗ್ ವಾಸ: ಪಟೀಲಿಯಾ ಅಂಚೆ ಮತ್ತು ಗ್ರಾಮ, ವಿಭೂತಿಪುರ್ ಠಾಣೆ, ಸಮಸ್ಥಿಪುರ್ ಜಿಲ್ಲೆ, ಬಿಹಾರ ಎಂಬವರ ದೂರಿನಂತೆ ದಿನಾಂಕ 08-03-2022 ರಂದು 21-30 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಪ್ರತಾಪ್ ಎಂಬವರು KA-21-L-0468ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಎಂಬಲ್ಲಿ ಅಕ್ಷಯ ಇಂಡ್ಸ್ಟ್ರೀಸ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿದ ಪರಿಣಾಮ, ಸದ್ರಿ ಸ್ಥಳದಲ್ಲಿ ಹೆದ್ದಾರಿಯನ್ನು ದಾಟುತ್ತಿದ್ದ ಪಿರ್ಯಾದುದಾರರಾದ ವಕೀಲ್ ಪಾಸ್ವಾನ್ ರವರಿಗೆ ಅಪಘಾತವಾಗಿ, ಎಡ ಕೋಲು ಕಾಲಿಗೆ ಗುದ್ದಿದ ಒಳ ನೋವಿರುವ ಗಾಯ, ಎಡ ಪಕ್ಕೆಲುಬು ಬಳಿ, ಎಡ ಮೊಣ ಕೈ ಬಳಿ, ಹಣೆಗೆ ತರಚಿದ ಗಾಯವಾಗಿ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  43/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಂಗಾಧರ ಗೌಡ ಪ್ರಾಯ 51 ವರ್ಷ, ತಂದೆ:ಕುಂಞಣ್ಣ ಗೌಡ, ವಾಸ: ಬ್ರಂತೂಡು ಮನೆ, ಕೊಣಾಜೆ ಗ್ರಾಮ, ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರಾದ ಗಂಗಾಧರ ಗೌಡ ಬಿ  ರವರು ನೀಡಿದ ದೂರಿನ ಸಾರಾಂಶವೆನೆಂದರೆ  ದಿನಾಂಕ:08.03.2022 ರಂದು ಮದ್ಯಾಹ್ನ ಸುಮಾರು 15-05 ಗಂಟೆ  ಸಮಯಕ್ಕೆ ಕಡಬ ಬರುವರೇ ಮರ್ಧಾಳ ಹಾಲಿನ ಡೈರಿಯ ಎದುರುಗಡೆ ( ಬ್ರಾಂತಿಕಟ್ಟೆ ) ಎಂಬಲ್ಲಿ ತಲುಪಿದ ಸಂದರ್ಭ ಪಿರ್ಯಾದುದಾರರನ್ನು  ಬೋಲೇರೋ  ವಾಹನದ ಚಾಲಕನು ಒವರ್ಟೆಕ್ ಮಾಡಿಕೊಂಡು  ಸುಬ್ರಹ್ಮಣ್ಯ ಕಡೆಯಿಂದ  ಕಡಬ ಕಡೆಗೆ ಅತೀ ವೇಗ  ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿಯ ಮುಂದೆ ಹೋಗುತ್ತಿದ್ದ  KA-21-EA-4706 ಸ್ಕೂಟರ್ ವಾಹನವನ್ನು ಓವರ್ಟೆಕ್ ಮಾಡಿ ಮುಂದಕ್ಕೆ ಚಲಾಯಿಸುವ ಸಂದರ್ಭದಲ್ಲಿ ವಾಹನವನ್ನು ಎಡಗಡೆ ಚಲಾಯಿಸಿದ ಪರಿಣಾಮ  ಸ್ಕೂಟರ್  ಸವಾರನಿಗೆ  ಬೋಲೇರೋ ವಾಹನದ ಹಿಂದೂಗಡೆ ಭಾಗವು ತಾಗಿ ಸ್ಕೂಟರ್  ಸವಾರನು  ಡಾಮಾರು ರಸ್ತೆಗೆ  ಎಸೆಯಪಟ್ಟಿದ್ದು ನಂತರ ಪಿರ್ಯಾದುದಾರರು ಹತ್ತಿರ ಹೋಗಿ ನೋಡಲಾಗಿ ಪರಿಚಯದ ವಿಶ್ವನಾಥ ಎಂಬುದಾಗಿ ತಿಳಿದಿದ್ದು ಅತನಿಗೆ  ಕೈ ಕಾಲು ಮತ್ತು ದೇಹದ ಇತರ ಭಾಗಗಳಿಗೆ ತಿವ್ರ ತರಹದ  ಗಾಯವಾಗಿದ್ದು  ಬಳಿಕ ಕಡಬ ಸಮುದಾಯ ಅಸ್ವತ್ರೆಗೆ ಕರೆದುಕೊಂಡು ಹೋಗಿ ಪಥಮ ಚಿಕಿತತ್ಸೆ  ನೀಡಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ   ಸುಳ್ಯ ಸರಕಾರಿ ಅಸ್ವತ್ರೆಗೆ  ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 22/2022 ಕಲಂ. 279,338 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಲೈಮಾನ್ ಪ್ರಾಯ 41 ವರ್ಷ ತಂದೆ: ಅಬ್ಬಾಸ್ ಬ್ಯಾರಿ ವಾಸ: ಕುದ್ಮಾನು ಮನೆ, ಪೆರಮೊಗರು ಅಂಚೆ, ಕೆದಿಲ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 09-03-2022 ರಂದು 13-45 ಗಂಟೆಗೆ ಆರೋಪಿ ಸ್ಕೂಟರ್ ಸವಾರ ಹರ್ಷಿತ್ ಎಂಬವರು KA-21-Y-2047ನೇ ನೋಂದಣಿ ನಂಬ್ರದ ಸ್ಕೂಟರನ್ನು ಕಲ್ಲಾರೆ-ಸಾಮೆತ್ತಡ್ಕ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಸಾಮೆತ್ತಡ್ಕ ಕಡೆಯಿಂದ ಕಲ್ಲಾರೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಕಲ್ಲಾರೆ ರಾಘವೇಂದ್ರ ಮಠದ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್  ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಸುಲೈಮಾನ್ ರವರು ಕಲ್ಲಾರೆ ಕಡೆಯಿಂದ ಸಾಮೆತ್ತಡ್ಕ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-W-6069ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರಿಗೆ ಬಲ ಕಾಲಿನ ಪಾದಕ್ಕೆ ತೆರೆದ ರಕ್ತಗಾಯವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿರುತ್ತಾರೆ. ಆರೋಪಿ ಸ್ಕೂಟರ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಚಿಕಿತ್ಸೆ ಪಡೆದಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  44/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೆ ಮಹಮ್ಮದ್ ಪ್ರಾಯ: 60 ವರ್ಷ ತಂದೆ: ದಿ/ಅಬ್ದುಲ್ ಖಾದರ್ ವಾಸ: ಕೆಮ್ಮಿಂಜೆ ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಕೆ ಮಹಮ್ಮದ್ ಪ್ರಾಯ: 60 ವರ್ಷ ತಂದೆ: ದಿ/ಅಬ್ದುಲ್ ಖಾದರ್ ವಾಸ: ಕೆಮ್ಮಿಂಜೆ ಕೆಮ್ಮಿಂಜೆ ಗ್ರಾಮ ಪುತ್ತೂರು ತಾಲೂಕು ಎಂಬವರು ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ರಸ್ತೆಯ ಪಿ.ಕೆ ಇಸ್ಮಾಯಿಲ್ ರವರ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿ ಬೀಡಿ ಬ್ರಾಂಚ್ ಇಟ್ಟು ವ್ಯಾಪಾರ ಮಾಡಿಕೊಂಡು ಬರುತ್ತಿರುವುದಾಗಿದೆ. ಪಿರ್ಯಾದಿದಾರರು ದಿನಾಂಕ: 08-03-2022 ರಂದು ಎಂದಿನಂತೆ ಸಂಜೆ 6:00 ಗಂಟೆಗೆ ಬೀಡಿ ಬ್ರಾಂಚ್ ನ ಅಂಗಡಿಯ ಶಟರ್ ಹಾಕಿ ಬೀಗ ಹಾಕಿ  ಮನೆಗೆ ಹೋಗಿದ್ದು, ದಿನಾಂಕ: 09-03-2022 ರಂದು ಬೆಳಿಗ್ಗೆ 07:00 ಗಂಟೆಗೆ ಬೀಡಿ ಬ್ರಾಂಚ್ ನ್ನು ತೆರೆಯಲು ಅಂಗಡಿ ಬಳಿ ಬಂದಾಗ ಯಾರೋ ಕಳ್ಳರು ಶಟರ್ ನ ಚಿಲಕ ಓಪನ್ ಮಾಡಿ ಅಂಗಡಿಯಲ್ಲಿದ್ದ 2 ಗೋಣಿ ತಂಬಾಕು ಮತ್ತು ಸುಮಾರು 18,000 ಬೀಡಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ ಒಟ್ಟು ಮೌಲ್ಯ 18,000/- ಆಗಬಹುದು. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ:12/2022 ಕಲಂ: 457, 380 ಐ.ಪಿ.,ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಮನುಷ್ಯ ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸ್ವಾತಿ ಬಿ (29) ಗಂಡ:ರಾಮ ದೇವರಗುಂಡಿ ತೊಡಿಕಾನ ವಾಸ:ಮರ್ಕಂಜ ಬಳಕ್ಕಾನ ಮರ್ಕಂಜ ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರ ತಮ್ಮ ಸಂಧೇಶ ಪ್ರಾಯ 25 ವರ್ಷ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು  ದಿನಾಂಕ 04-03-2021 ರಂದು ಕಡಬ ತಾಲೂಕು ಶಿರಾಡಿ ಗ್ರಾಮದ ದಿವಾಕರ ಗೌಡ ಎಂಬವರ ಮನೆಗೆ ಕೂಲಿ ಕೆಲಸದ ಬಗ್ಗೆ ಹೋಗಿದ್ದು ಅಲ್ಲಿಗೆ ತಲುಪಿದ ಬಗ್ಗೆ ಪಿರ್ಯಾದುದಾರರಿಗೆ ಕರೆ ಮಾಡಿ ತಿಳಿಸಿದ್ದು ಬಳಿಕ ದಿನಾಂಕ 07-03-2022 ರಂದು ದಿವಾಕರ ಗೌಡ ರವರು ಪಿರ್ಯಾದುದಾರರಿಗೆ ಕರೆಮಾಡಿ ಪಿರ್ಯಾಧುದಾರರ ತಮ್ಮ ರಾತ್ರಿ ಊಟ ಮಾಡಿ ರೂಮಿನಲ್ಲಿ ಮಲಗಿದ್ದು ಬೆಳಿಗ್ಗೆ ನೋಡಿದಾಗ  ಅಲ್ಲಿರದೆ,ಆತನು ಮೊಬೈಲನ್ನು ರೂಮಿನಲ್ಲಿ ಬಿಟ್ಟು ಹೋಗಿದ್ದು ನಂತರದಲ್ಲಿ ದಿನಾಂಕ 09-03-2022 ರ ವರೆಗೆ ದಿವಾಕರ ಗೌಡರವರ ತೋಟದ ಆಸು ಪಾಸಿನಲ್ಲಿ ಶಿರಾಡಿ ಪೇಟೆಯಲ್ಲಿ ಹಾಗೂ ಪಿರ್ಯಾಧುದಾರರ ಸಂಬಂದಿಕರ ಮನೆಯಲ್ಲಿ ಹುಡುಕಾಡಿದಲ್ಲಿ ಹಾಗೂ ಕಾಣೆಯಾದ ಸಂದೇಶನ ಸ್ನೇಹಿತರಲ್ಲಿ ಈತನ ಬಗ್ಗೆ ವಿಚಾರಿಸಿದಲ್ಲಿ ,ಪತ್ತೆಯಾಗದೇ ಇದ್ದು, ಪಿರ್ಯಾದಿ ತಮ್ಮ ಸಂಧೇಶ ಪ್ರಾಯ 25 ವರ್ಷರವರು ದಿವಾಕರ ಗೌಡ ರವರ ಮನೆಗೂ ಹಾಗೂ ಪಿರ್ಯಾದುದಾರರ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 38/2022 ಕಲಂ:ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-03-2022 09:59 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080