ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸಂದೇಶ (20) ತಂದೆ: ಕುಶಾಲಪ್ಪ ಗೌಡ, ವಾಸ: ಹರ್ತಾಜೆ ಮನೆ, ಇಂದಬೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ: 08-07-2022 ರಂದು ಕೆಎ 70 ಎಚ್‌ 6861 ನೇ ದ್ವಿಚಕ್ರ ವಾಹನವನ್ನು ಅದರ ಸವಾರ ಆನಂದ ಗೌಡರವರು ಕೊಯ್ಯೂರು ಕಡೆಯಿಂದ ಮಲೆಬೆಟ್ಟು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಮದ್ಯಾಹ್ನ 1.45 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಯ್ಯೂರು ಗ್ರಾಮದ ಬಾಸಮೆ ಕ್ರಾಸ್‌ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ಧಿಕ್ಕಿನಿಂದ ಅಂದರೆ ಮಲೆಬೆಟ್ಟು ಕಡೆಯಿಂದ ಕೊಯ್ಯೂರು ಕಡೆಗೆ ಕೆಎ 21 ಬಿ 5434 ನೇ ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಸವಾರ ಆನಂದ ಗೌಡರವರಿಗೆ ಬಲಬದಿಯ ಪಕ್ಕೇಲುಬುಗೆ, ಮೂಗಿಗೆ, ಎರಡು ಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಹಾಗೂ ಆಟೋ ರಿಕ್ಷಾದಲ್ಲಿದ್ದ ಸಹಪ್ರಯಾಣಿಕರಾದ ವೀಣಾರವರು ಹಣೆಗೆ ತರಚಿದ ಗಾಯಗೊಂಡು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ  ಪೈಕಿ ಆನಂದ ಗೌಡರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ದೇರಳಕಟ್ಟೆ ಕೆಎಸ್‌ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 96/2022 ಕಲಂ: 279 337 ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರವಿನಂದನ್, ಪ್ರಾಯ 29 ವರ್ಷ, ತಂದೆ: ರಾಘವ ಹೆಗ್ಡೆ, ವಾಸ: ನಟ್ಟಿಬೈಲು ಮನೆ, ಉಪ್ಪಿನಂಗಡಿ   ಅಂಚೆ & ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 08-07-2022 ರಂದು 19-30 ಗಂಟೆಗೆ ಆರೋಪಿ ಟಾಟಾ ಎಸಿ ಗೂಡ್ಸ್‌ ಟೆಂಪೋ ಚಾಲಕ ವಿ. ದಯಾನಂದ ಕಾಮತ್‌  ಎಂಬವರು KA-19-B-9049 ನೇ ನೋಂದಣಿ ನಂಬ್ರದ ಟೆಂಪೋ ವಾಹನವನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ನೆಲ್ಯಾಡಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ,   ಪುತ್ತೂರು ತಾಲೂಕು ಉಪ್ಪಿನಂಗಡಿ  ಗ್ರಾಮದ ಉಪ್ಪಿನಂಗಡಿ ಎಂಬಲ್ಲಿ ಪದ್ಮವಿದ್ಯಾ ಪೆಟ್ರೋಲ್‌ ಪಂಪ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ರಸ್ತೆಯ ಎಡ ಬದಿಯಲ್ಲಿ ನಿಂತುಕೊಂಡಿದ್ದ ಪಾದಾಚಾರಿ ಮೋನಪ್ಪ ರವರಿಗೆ ಅಪಘಾತವಾಗಿ ಅವರು ರಸ್ತೆಗೆ ಬಿದ್ದು, ತಲೆಗೆ ಹಾಗೂ ಎದೆಯ ಭಾಗಕ್ಕೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಫಸ್ಟ್‌ ನ್ಯೂರೋ  ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  121/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಯೋಗೀಶ ಪ್ರಾಯ: 53 ವರ್ಷ  ತಂದೆ: ಕೆ ಬಾಳಪ್ಪ ಪೂಜಾರಿ ವಾಸ: ಮ್ಯಾನೇಜರ್‌ ಸಾಯಿ ಲಾಡ್ಜ್‌ ಸಾಯಿ ಇಂಟರ್‌ ನ್ಯಾಷನಲ್‌ ಬಿಲ್ಡಿಂಗ್‌ ಕೆ.ಎಸ್‌ . ಆರ್.ಟಿಸಿ ಬಸ್‌ ನಿಲ್ದಾಣದ ಬಳಿ ಪುತ್ತೂರು  ರವರು ಪುತ್ತೂರು ಕೆ.ಎಸ್ . ಆರ್.ಟಿಸಿ ಬಸ್ ನಿಲ್ದಾಣದ ಬಳಿಯ ಸಾಯಿ ಇಂಟರ್ ನ್ಯಾಷನಲ್  ಕಟ್ಟಡದಲ್ಲಿರುವ ಸಾಯಿ ಲಾಡ್ಜ್ ನ ಮ್ಯಾನೇಜರ್ ಆಗಿದ್ದು ದಿನಾಂಕ: 09-07-2022 ರಂದು ಬೆಳಿಗ್ಗೆ ಪಿರ್ಯಾದಿದಾರರು ಲಾಡ್ಜ್ ನ್ನು ಪರಿಶೀಲಿಸಿದಾಗ ಲಾಡ್ಜ್ ನ  ಕೆಳಹಂತಸ್ತಿನಲ್ಲಿ ತೆರೆದ ಸ್ಥಳದಲ್ಲಿದ್ದ  ಕಿಲೋಸ್ಕರ್  ಜನರೇಟರ್ ನ ಬಿಡಿ ಭಾಗ (ಬ್ಯಾಟರಿಯು) ಕಾಣಿಸದೇ ಇದ್ದು  ಸದ್ರಿ ಜನರೇಟರ್ ನ ಬ್ಯಾಟರಿಯನ್ನು ಯಾರೋ ಕಳ್ಳರು  ದಿನಾಂಕ: 08-07-2022 ರಂದು ರಾತ್ರಿ 9:00 ಗಂಟೆಯಿಂದ  ದಿನಾಂಕ: 09-07-2022 ರಂದು ಬೆಳಿಗ್ಗೆ 09:00 ಗಂಟೆಯ  ಮಧ್ಯಾವಧಿಯಲ್ಲಿ  ಕಳ್ಳತನ ಮಾಡಿರುತ್ತಾರೆ. ಕಳವಾದ ಬ್ಯಾಟರಿಯ ಅಂದಾಜು ಮೌಲ್ಯ ಸುಮಾರು 30,000/- ಆಗಬಹುದು ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 58/2022 : ಕಲಂ: 379 ಐ.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎನ್ ಕೆ ನಾಸಿರ್ (35) ತಂದೆ: ಇಬ್ರಾಹಿಂ ವಾಸ: ನಾರ್ಣ ಕೋಡಿ ಮನೆ ಬೋಳಂತ್ತೂರು ಗ್ರಾಮ  ಬಂಟ್ವಾಳ ತಾಲೂಕು ರವರು ದಿನಾಂಕ:08-07-2022 ರಂದು ಬಂಟ್ವಾಳ ತಾಲೂಕು ಬೊಳಂತೂರು ಗ್ರಾಮದ ನಾರ್ಣಕೋಡಿ ಎಂಬಲ್ಲಿರುವ ಪಿರ್ಯಾಧಿದಾರರ ಬಾಬ್ತು ವರ್ಗ ಜಮೀನಿಗೆ ಆರೋಪಿಗಳಾದ ಹಮೀದ್‌, ಇಬ್ರಾಹಿಂ, ಅಬ್ದುಲ್‌ ಖಾದರ್‌ ಎಂಬವರು ಅಕ್ರಮ ಪ್ರವೇಶ ಮಾಡಿ ಸಮಾನ ಉದ್ದೇಶದಿಂದ ಸದ್ರಿ ಜಮೀನಿನಲ್ಲಿದ್ದ ಪಿರ್ಯಾಧಿದಾರರ ಬಾಬ್ತು ಶೆಡ್ಡನ್ನು ,ಅದರಲ್ಲಿದ್ದ ರಾಸಾಯನಿಕ ಗೊಬ್ಬರ ಹಾಗೂ ಅಕ್ಕಿಯನ್ನು ಹಾನಿಗೊಳಿಸಿದ್ದು ಇದರಿಂದ ಪಿರ್ಯಾಧಿದಾರರಿಗೆ ಸುಮಾರು 40,000/- ರೂ ನಷ್ಟ  ಉಂಟಾಗಿರುತ್ತದೆ. ಅಲ್ಲದೇ ಕೃತ್ಯದ ವಿಚಾರ ತಿಳಿದು ಪಿರ್ಯಾಧಿ ಸ್ಥಳಕ್ಕೆ ಹೋದಾಗ ಆಪಾದಿತರುಗಳು ಬೆದರಿಕೆ ಹಾಕಿ ಹೊಗಿರುತ್ತಾರೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 114/2022  ಕಲಂ: 447,427,506 ಜೊತೆಗೆ 34  ಬಾಧಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ತರೆ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರು  ಅಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 09.07.2022 ರಂದು ಪುತ್ತೂರಿನ ಮೀನು ಮಾರ್ಕೆಟ್ ಬಳಿಯಿರುವ ಪುರುಷೋತ್ತಮರವರ ಕ್ಯಾಂಟೀನ್ ನಿಂದ ಮಾರುತಿ ಗುಟ್ಕಾವನ್ನು ತೆಗೆದುಕೊಂಡು ಅಂಗಡಿಯ ಮುಂದೆ ಬಂದಾಗ ಫಿರ್ಯಾದಿದಾರರ ಕೈಯಲ್ಲಿದ್ದ ಗುಟ್ಕಾ ಪ್ಯಾಕೇಟ್ ಕೈಯಿಂದ ಜಾರಿ ಕೆಳಗೆ ಬಿದ್ದಿದ್ದು, ಮುಂದುಗಡೆ ಇದ್ದ  ಫಿರ್ಯಾದಿದಾರರ ಪರಿಚಯದ ಪ್ರಸಾದ್ ಎಂಬಾತನು ಅದನ್ನು ಮೆಟ್ಟಿದ್ದು, ಆಗ ಫಿರ್ಯಾದಿದಾರರು ಆತನಲ್ಲಿ ಕಾಲು ತೆಗಿ ಎಂದು ಹೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ,ಕೈಯಿಂದ ಫಿರ್ಯಾದಿದಾರರಿಗೆ ಹಲ್ಲೆ ನಡೆಸಿದ್ದು ಆಗ ಅಲ್ಲೇ ಪಕ್ಕದಲ್ಲಿದ್ದ ಫಿರ್ಯಾದಿದಾರರ ಹೆಂಡತಿ “ನೀವು ನನ್ನ ಗಂಡನಿಗೆ ಯಾಕೆ ಹಲ್ಲೆ ಮಾಡುತ್ತೀರಿ” ಎಂದು ಹೇಳಿದಾಗ ಆಕೆಯನ್ನು ಕೂಡಾ ಕೈಯಿಂದ ದೂಡಿರುತ್ತಾನೆ. ಆ ಸಮಯ ಫಿರ್ಯಾದಿದಾರರ ತಮ್ಮ ಚಂದ್ರಶೇಖರ ಹಾಗೂ ರಘು ಎಂಬವರು ಹಲ್ಲೆ ಮಾಡುವುದನ್ನು ತಡೆದಿದ್ದು, ಪ್ರಸಾದನು ಫಿರ್ಯಾದಿದಾರರಿಗೆ ಮುಂದಕ್ಕೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾನೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 59/2022 ಕಲಂ:   504,323,354,506 ಐಪಿಸಿ ಮತ್ತು 3(1)( r), 3(1)(s) SC/ST Act 2015 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-07-2022 01:11 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080