ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದೇವಿದಾಸ ಬಿ ಪ್ರಾಯ 36 ವರ್ಷ ತಂದೆ: ಬಾಬು ಅಜಿಲ ಅಜಲಾಡಿ ಕುರಿಯ ಮನೆ ಕುರಿಯ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ದಿನಾಂಕ 08.08.2021 ರಂದು ಕೆಲಸ ನಿಮಿತ್ತ ಬೆಳ್ಳಾರೆಗೆ ಹೋಗಿ ವಾಪಾಸು ಕುಂಬ್ರ  ಕಡೆಗೆ ಬರುತ್ತಿರುವ ಸಮಯ ರಾತ್ರಿ 9.50 ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ಆರಿಯಡ್ಕ ಗ್ರಾಮದ ಕೊಲ್ಲಾಜೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ ಜುಪಿಟರ್ ಸ್ಕೂಟರ್ ಅನ್ನು ಅದರ ಸವಾರರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಕುಂಬ್ರ ಕಡೆಯಿಂದ ಸವಾರಿ ಮಾಡಿಕೊಂಡು ಬರುತ್ತಿರುವಾಗ ಬೀದಿ ನಾಯಿಯೊಂದು ರಸ್ತೆಗೆ ಏಕಾಏಕಿ ಅಡ್ಡ ಬಂದಾಗ ಸ್ಕೂಟರ್ ಸವಾರರು ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ ಮೋಟಾರ್ ಸೈಕಲನ್ನು ನಿಲ್ಲಿಸಿ ಹೋಗಿ ಉಪಚರಿಸಿ ನೋಡಲಾಗಿ ಪಿರ್ಯಾದಿದಾರರ ಪರಿಚಯದ ಪ್ರಶಾಂತ್ ಎಂಬವರಾಗಿದ್ದು ಸದ್ರಿಯವರ ತಲೆಗೆ ರಕ್ತಗಾಯ ಹಾಗೂ ದೇಹದ ಇತರ ಭಾಗಗಳಿಗೆ  ರಕ್ತಗಾಯ ಹಾಗೂ ಗುದ್ದಿದ ಗಾಯವಾಗಿದ್ದು, ಜುಪಿಟರ್ ಸ್ಕೂಟರ್ ನಂಬ್ರ ಕೆಎ-21-ಈಎ-9067 ನೇ ಆಗಿದ್ದು, ಗಾಯಗೊಂಡ ಪ್ರಶಾಂತ್‌ರವರನ್ನು ಒಂದು ಅಂಬ್ಯುಲೆನ್ಸ್‌ ನಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಸಂಬಂಧ ರವಿನಾಥ್‌ ಎಂಬವರೊಂದಿಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ ಆ.ಕ್ರ 71/21 ಕಲಂ: 279,337  ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೋಹನ್ ದಾಸ್ ಎ , ಪ್ರಾಯ: 32 ವರ್ಷ ತಂದೆ: ದಿ|| ನಾರಾಯಣ ಸಾಲಿಯಾನ್ , ವಾಸ: ಅಂಕದಡ್ಕ  ಮನೆ, ವೀರಕಂಭ ಗ್ರಾಮ ಮತ್ತು  ಅಂಚೆ,  ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 09.08.2021 ರಂದು ಪಿರ್ಯಾದಿದಾರರು ಮಂಗಳೂರಿಗೆ ಕೆಲಸದ ನಿಮಿತ್ತ ತನ್ನ ಬಾಬ್ತು KA 19 EU 8210 ನೇ ಮೋಟರ್ ಸೈಕಲಿನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಸುಮಾರು ಬೆಳಿಗ್ಗೆ 06:30 ಗಂಟೆಗೆ  ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ ಎಂಬಲ್ಲಿಗೆ ತಲುಪಿದಾಗ ಕಲ್ಲಡ್ಕ ಜಂಕ್ಷನ್ ಕಡೆಯಿಂದ KA 70 0113 ನೇ ಆಟೋರಿಕ್ಷವನ್ನು ಅದರ ಚಾಲಕ ನಝೀರ್ ರವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡಿಗೆ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿಯು ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಬಿ.ಸಿ.ರೋಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 74/2021  ಕಲಂ 279, 337, ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಸಂದೀಪ್‌ಕುಮಾರ ಶೆಟ್ಟಿ ಪೊಲೀಸ್‌ ಉಪನಿರೀಕ್ಷಕರು (ಕಾ&ಸು) ವಿಟ್ಲ ಪೊಲೀಸ್ ಠಾಣೆರವರು ದಿನಾಂಕ; 09.08.2021 ರಂದು 09.00 ಗಂಟೆಗೆ ಠಾಣೆಯಲ್ಲಿದ್ದ ಸಮಯ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಬಳ್ಪಾದೆ ಎಂಬಲ್ಲಿ ಕಾನೂನು ಬಾಹಿರವಾಗಿ ಕೋಳಿ ಅಂಕ ಜೂಜು ಆಟ ಅಡುತ್ತಿರುವಲ್ಲಿಗೆ ಸಿಬ್ಬಂದಿಗಳೊಂದಿಗೆ 11.00 ಗಂಟೆಗೆ ಮೇಲಿನ ಸ್ಥಳಕ್ಕೆ ದಾಳಿ ಮಾಡಲಾಗಿ 1] ಸಂದೀಪ್‌ ಶೆಟ್ಟಿ 2]ರೋಹಿತ್‌ ಪೂಜಾರಿ 3]ನವೀನ್‌ ಕುಮಾರ್‌ 4] ಚಂದ್ರಹಾಸ ಪರವ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದು, ಕೋಳಿ ಅಂಕ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ 950/-ರೂ ಹಾಗೂ ವಿವಿಧ ಜಾತಿಯ ಹುಂಜಾ ಕೋಳಿ-18 ಅದರ ಮೌಲ್ಯ 5400/-ರೂ  ಹಾಗೂ ಕೋಳಿ ಬಾಳುವಿನ ಮೌಲ್ಯ 50/- ರೂ ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ 6400/-ರೂ ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 105/2021 ಕಲಂ: 87,93 ಕರ್ನಾಟಕ ಪೊಲೀಸ್‌ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಚಂದ್ರ ಎ (61) ತಂದೆ: ಕುಂಞಣ್ಣ ಗೌಡ ವಾಸ: ಅಲಂಕಲ್ಯ ಮನೆ, ಮಂಡೆಕೋಲು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಅಜ್ಜಾವರ ಮಂಡೆಕೋಲು ಪರಿಸರದಲ್ಲಿ ಸುಮಾರು 20 ವರ್ಷ ಕೆಲಸಮಾಡಿಕೊಂಡಿದ್ದ ಗಂಗಾಧರ (55) ವರ್ಷ ಎಂಬವರು ಕಳೆದು 25 ದಿನಗಳಿಂದ ಪಿರ್ಯಾದುದಾರರ ತೋಟದ ಮನೆಯಾದ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಅಂಬ್ರೋಟಿ ಎಂಬಲ್ಲಿ  ಉಳಕೊಂಡಿದ್ದವರು ದಿನಾಂಕ 09.08.2021 ರಂದು ಬೆಳಿಗ್ಗೆ 05:30 ಗಂಟೆಗೆ ಅಪ್ಪಚಿ ಯಾನೆ ಜೋಸ್ ಎಂಬವರೊಂದಿಗೆ  ತೋಟದ ಮನೆಯಲ್ಲಿ ಚಾ ಕುಡಿಯುತ್ತಿರುವ ಸಮಯ ಗಂಗಾಧರನು ಎದೆನೋವು ಎಂದು ಬಿದ್ದವನನ್ನು ಆಡುಗೆ ಕೆಲಸ ಮಾಡುತ್ತಿದ್ದ ವಾಸದೇವ ಎಂಬವರಿಗೆ ತಿಳಿಸಿ ಪಿರ್ಯಾದುದಾರರು ಹಾಗೂ ವಾಸದೇವರವರು ಗಂಗಾಧರನನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ತಪಾಸಣೆ ಮಾಡಿ ಸದ್ರಿ ಗಂಗಾಧರನ್ನು 07:15 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ. UDR No 33/2021 Sec: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದೊಡ್ಡಣ್ಣ ಪೂಜಾರಿ (68) ತಂದೆ: ದಿ/ ಪುಟ್ಟು ಪೂಜಾರಿ        ವಾಸ: ಕಂಬಳದಡ್ಡ ಮನೆ, ಕಾಶಿಪಟ್ನ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು   ಎಂಬವರ ದೂರಿನಂತೆ  ಮೃತ ರಾಮಪ್ಪ ಪೂಜಾರಿಯವರು  ಸುಮಾರು  3 ವರ್ಷಗಳಿಂದ ಪಾರ್ಶ್ವವಾಯು  ಖಾಯಿಲೆ ಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೇ ಇದ್ದು, ಮತ್ತು ಈತನು ಮಕ್ಕಳು ಬಿಟ್ಟುಹೋಗಿದ್ದು ನಂತರ ಪಿರ್ಯಾದಿದಾರರ ಮನೆಯಲ್ಲೇ ಇದ್ದವರು  ದಿನಾಂಕ 09-08-2021 ರಂದು, ಬೆಳಿಗ್ಗೆ 08-00 ಗಂಟೆಯಿಂದ 08-30 ರ ಮದ್ಯಕಾಲದಲ್ಲಿ ತನ್ನ ವಾಸ್ತವ್ಯದ ಮನೆಯ ಗದ್ದೆಯ ಬಳಿ ಇರುವ ಕೆರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ : 19/2021 ಕಲಂ: 174 ಸಿ ಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 10-08-2021 07:07 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080