ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸೂರ್ಯಕಾಂತ್, ಪ್ರಾಯ: 42 ವರ್ಷ ತಂದೆ: ದಿ|| ಪದ್ಮನಾಭ ಆಚಾರ್ಯ, ವಾಸ: ಮನೆ.ನಂ 9-91, ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದ ಹತ್ತಿರ ಮನೆ, ಕೆಳಗಿನಪೇಟೆ, ಬಂಟ್ವಾಳ ಕಸಬಾ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 08.09.2022 ರಂದು ಕೆಲಸ ಮುಗಿಸಿ ಮನೆ ಕಡೆಗೆ ನಡೆದುಕೊಂಡು ಬರುತ್ತಾ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಕೆಳಗಿನಪೇಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಬಿ.ಸಿ.ರೋಡ್ ಕಡೆಯಿಂದ KA-70-H-7715 ನೇ ಮೋಟಾರ್ ಸೈಕಲನ್ನು ಅದರ ಸವಾರ ಪ್ರೇಮನಾಥ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬಂಟ್ವಾಳ ಪೆಟೆ ಕಡೆಯಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪಾದಚಾರಿ ವಿಶ್ವನಾಥ ಆಚಾರ್ಯ ರವರಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಮೋಟಾರ್ ಸೈಕಲ್ ಸವಾರನಿಗೆ ಸಣ್ಣ ಪುಟ್ಟ ತರಚಿದ ಗಾಯಗೊಂಡಿದ್ದು, ಪಾದಚಾರಿ ವಿಶ್ವನಾಥ ಆಚಾರ್ಯರವರಿಗೆ ಎಡಕೋಲು ಕಾಲಿಗೆ ಗುದ್ದಿದ ಹಾಗೂ ತರಚಿದ ಗಾಯ, ಹೊಟ್ಟೆಗೆ ಗುದ್ದಿದ ನೋವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 103/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಬಿ.ಇಬ್ರಾಹೀಂ ಪ್ರಾಯ: 46 ವರ್ಷ ತಂದೆ: ಬಿ.ಮೊಹಮ್ಮದ್, ವಾಸ: ಸಿನಾನ್ ಮಂಜಿಲ್, ಗುಡ್ಡೆಯಂಗಡಿ, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 08.09.2022 ರಂದು  ಕೆಲಸ ಮುಗಿಸಿ ಮೋಟಾರ್ ಸೈಕಲಿನಲ್ಲಿ ಮನೆ ಕಡೆಗೆ ಹೋಗುತ್ತಾ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕಾರಾಜೆ ಎಂಬಲ್ಲಿಗೆ ತಲುಪುವಾಗ ಪಿರ್ಯಾದಿದಾರರ ಮುಂದಿನಿಂದ ಅಂದರೆ ಮೇಲ್ಕಾರ್ ಕಡೆಯಿಂದ KA-19-AC-2671 ನೇ ಆಟೋರಿಕ್ಷಾವನ್ನು ಅದರ ಚಾಲಕ ಮಹಮ್ಮದ್ ಕಬೀರ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮಂಚಿ ಕಡೆಯಿಂದ ಬರುತ್ತಿದ್ದ KA-19-EX-7566 ನೇ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಸೈಫುದ್ದೀನ್ ಎಂಬವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯ, ಬಲಕೈಗೆ ತರಚಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 104/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಮಕೃಷ್ಣ ಭಂಡಾರಿ ಪ್ರಾಯ: 48 ವರ್ಷ  ತಂದೆ: ದಿ|| ತಿಮ್ಮಪ್ಪ ಭಂಡಾರಿ ವಾಸ: ಮಾಡತಾಡಿ ಮನೆ,  ಸಜೀಪ ಪಡು ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ರವರು ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನದ ವ್ಯವಸ್ಥಾಪಕರಾಗಿ ಕೆಲಸ ಮಾಡಿಕೊಂಡಿದ್ದು ಎಂದಿನಂತೆ  ದಿನಾಂಕ: 07.09.2022 ರಂದು ರಾತ್ರಿ 8:00 ಗಂಟೆಗೆ ಕೆಲಸ ಮುಗಿಸಿಕೊಂಡು ಹೋಗುವಾಗ 3000/- ನಗದು ಹಣ ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದ ಸ್ಯಾಮ್ ಸಾಂಗ್ ಗ್ಯಾಲೆಕ್ಷಿ A03 ನೇ ಮೊಬೈಲ್ ಹ್ಯಾಂಡ್ ಸೆಟ್.ನ್ನು ಟೇಬಲ್  ಡ್ರವರಿನಲ್ಲಿಟ್ಟು  ಫಿರ್ಯಾದಿದಾರರ ಜೊತೆಯಲ್ಲಿ ಕಛೇರಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಯಕ್ಷತ್ ರವರು ಸೇವಾ ಕೌಂಟರಿನ ಬಾಗಿಲು ಲಾಕ್ ಮಾಡಿ ಮನೆಗೆ ಹೋಗಿರುವುದಾಗಿದೆ. ಫಿರ್ಯಾದಿದಾರರು ದಿನಾಂಕ: 8.09.2022 ರಂದು ಸೇವಾ ಕೌಂಟರ್ ಕರ್ತವ್ಯಕ್ಕೆ ಬೆಳಿಗ್ಗೆ 8:30 ಗಂಟೆಗೆ ಹಾಜರಾದ ಸಮಯ ಡ್ರವರಿನಲ್ಲಿ 3,000/- ರೂಪಾಯಿ ಹಾಗೂ ಮೊಬೈಲ್ ಪೋನ್ ಕಾಣೆಯಾಗಿರುವ ವಿಚಾರವನ್ನು ಯಕ್ಷತ್ ರವರು  ಫಿರ್ಯಾದಿದಾರರಿಗೆ ತಿಳಿಸಿರುತ್ತಾರೆ. ನಂತರ  ಸೇವಾ ಕೌಂಟರ್ ನಲ್ಲಿ ಹಾಗೂ ಎಲ್ಲಾ  ಸ್ಥಳಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ದಿನಾಂಕ: 09.09.2022 ರಂದು  ಫಿರ್ಯಾದಿದಾರರು ಹಾಗೂ ಯಕ್ಷತ್ ನಮ್ಮ ಸೇವಾಕೌಂಟರಿನಲ್ಲಿ ಅಳವಡಿಸಿದ ಸಿ.ಸಿ.ಕ್ಯಾಮಾರದ ಪೊಟೆಜ್ ನ್ನು ನೋಡಲಾಗಿ ಓರ್ವ ಅಪರಿಚಿತ  ವ್ಯಕ್ತಿಯು ದಿನಾಂಕ: 07.09.2022 ರಂದು ರಾತ್ರಿ  ಸುಮಾರು 11:39 ಗಂಟೆಗೆ ಸೇವಾ ಕೌಂಟರಿಗೆ  ಬಾಗಿಲು ತೆಗೆದು ಒಳ ಪ್ರವೇಶಿಸಿ ಡ್ರವರಿನಲ್ಲಿರಿಸಿದ್ದ 3,000/- ರೂಪಾಯಿಯನ್ನು ಹಾಗೂ  ಮೊಬೈಲ್ ಹ್ಯಾಂಡ್ ಸೆಟ್ ನ್ನು ಕಳವು ಮಾಡುತ್ತಿರುವ ದೃಶ್ಯ ಕಂಡು ಬಂದಿರುವುದರಿಂದ ಕಳವು ಆದ ಮೊಬೈಲ್ ಹ್ಯಾಂಡ್ ಸೆಟ್ ನ ಮೌಲ್ಯ ಸುಮಾರು 7,000/- ರೂಪಾಯಿ ಡ್ರವರಿನಲ್ಲಿ ಇರಿಸಿದ್ದ ನಗದು ರೂ 3,000/- ರೂಪಾಯಿ ಒಟ್ಟು ಮೌಲ್ಯ 10.000/- ಆಗಿದ್ದು ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ. ಕ್ರ: 86/2022 ಕಲಂ:  380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹರೀಶ್ ಪ್ರಾಯ 24 ವರ್ಷ, ತಂದೆ: ಅಚ್ಚುತ ಪೂಜಾರಿ, ವಾಸ: ಕಜ್ಜೆಕೊಡಿ ಮನೆ, ಹಿರೇಬಂಡಾಡಿ ಗ್ರಾಮ ಪುತ್ತೂರು ತಾಲೂಕು ರವರು ಹಾಗೂ ತಾಯಿ ಶ್ರೀಮತಿ ಗುಲಾಬಿ ಎಂಬುವರು ದಿನಾಂಕ: 09-09-2022 ರಂದು ಬೆಳಿಗ್ಗೆ 08-30 ಗಂಟೆ ಸಮಯಕ್ಕೆ ಕೂಲಿ ಕೆಲಸಕ್ಕೆ ಮನೆಯಿಂದ ಹೋಗಿದ್ದು ಮನೆಯಲ್ಲಿ ತಂದೆ ಮಾತ್ರ ಇದ್ದರು. ಸಂಜೆ 05.00 ಗಂಟೆಗೆ ತಾಯಿ  ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯ ಬಾಗಿಲು ಅರ್ಧ ತೆರೆದಿದ್ದು ಒಳಗೆ ಹೋಗಿ ನೋಡಿದಾಗ ತಂದೆ ಅಚ್ಚುತ ಪೂಜಾರಿ ( 47) ಎಂಬುವರು  ಮಲಗುವ ಕೊಠಡಿಯಲ್ಲಿ ಅಳವಡಿಸಿದ ಪ್ಯಾನ್ ಗೆ ನೈಲಾನ್ ಸೀರೆಯನ್ನು ಕಟ್ಟಿ ಕುತ್ತಿಗೆ ಗೆ ನೇಣು ಬಿಗಿದ್ದು ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿರುತ್ತದೆ. ತಂದೆಯವರಿಗೆ ಆರೋಗ್ಯದಲ್ಲಿ ಏರುಪೇರು ಹಾಗೂ ಸಾಲ ಭಾದೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 27/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 10-09-2022 11:32 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080