ಅಪಘಾತ ಪ್ರಕರಣ: ೦2
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹಸೈನಾರ್, 55 ವರ್ಷ ತಂದೆ: ಪೊಡಿಯ ಬ್ಯಾರಿ ವಾಸ: ಗೋಳಿಪಡ್ಪ ಮನೆ, ಸಜಿಪ ನಡು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 8.11.21 ರಂದು ಬೆಳಿಗ್ಗೆ ಸುಮಾರು 10.45 ಗಂಟೆಗೆ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ಸುರಬಿ ಬಾರ್ & ರೆಸ್ಟೋರೆಂಟ್ ಬಳಿ ಮೇಲ್ಕಾರ್-ಮುಡಿಪು ಸಾರ್ವಜನಿಕ ರಸ್ತೆಯಲ್ಲಿ ಅಟೋರಿಕ್ಷಾ ನಂ. ಕೆಎ.70.3364 ನೇ ಯದನ್ನು ಅದರ ಚಾಲಕ ಮೇಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಅತನ ಚಾಲನಾ ಹತೋಟಿ ತಪ್ಪಿ ಅಟೋರಿಕ್ಷಾ ಮಗುಚಿ ಬಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ಹಣೆಗೆ, ಮುಖಕ್ಕೆ, ಬಲಭುಜದ ಬಳಿ ತರಚಿದ ಗಾಯಗಳಾಗಿ ಬಿ.ಸಿ.ರೋಡ್ ಸೋಮಯಾಜಿ ಅಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 120/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಹಮದ್ ರಶೀದ್ (30) ತಂದೆ:ಮಹಮ್ಮದ್ ಹಾಜಿ ವಾಸ:ಕುನ್ನಿಕಾನಂ ಮನೆ ಆಲಂಪಾಡಿ ಅಂಚೆ ಮುತ್ತತ್ತೋಡಿ ಗ್ರಾಮ ಕಾಸರಗೋಡು ಎಂಬವರ ದೂರಿನಂತೆ ದಿನಾಂಕ 09-11-2021ರಂದು ಪಿರ್ಯಾದುದಾರರು ತನ್ನ ಬಾಬ್ತು ಕಾರ್ ನಂಬ್ರ ಕೆಎಲ್-31-ಹೆಚ್-7242 ನೇದರಲ್ಲಿ ಶಿಹಾಬ್ ಹಾಗೂ ಫಝಲ್ ರವರನ್ನು ಕರೆದುಕೊಂಡು ಬೆಳಿಗ್ಗೆ ಸುಮಾರು 3.00 ಗಂಟೆಗೆ ಕಾಸರಗೋಡಿನಿಂದ ನಿಂದ ಬೆಂಗಳೂರಿಗೆ ರಾ.ಹೆ. 75ರಲ್ಲಿ, ಚಲಾಯಿಸಿಕೊಂಡು ಹೋಗುತ್ತಾ, ಬೆಳಿಗ್ಗೆ ಸುಮಾರು 6.20 ಗಂಟೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಕೊಡ್ಯಕಲ್ ಎಂಬಲ್ಲಿಗೆ ತಲುಪುತಿದ್ದಂತೆ, ಪಿರ್ಯಾದಿಯ ಎದುರಿನಿಂದ ಅಂದರೆ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಒಂದು ಕೆಎ-07-ಎ-9610ನೇ ಲಾರಿಯನ್ನು ಅದರ ಚಾಲಕ ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು, ಲಾರಿ ಮತ್ತು ಕಾರು ಜಖಂಗೊಂಡು, ಪಿರ್ಯಾದಿದಾರರ ಬಲ ಭುಜಕ್ಕೆ ಕತ್ತು ಹಾಗೂ ಎದೆಯ ಭಾಗಕ್ಕೆ ಗುದ್ದಿದ ನೋವಾಗಿದ್ದು, ಎದುರಿನ ಸೀಟಿನಲ್ಲಿ ಕುಳಿತಿದ್ದ ಪಝಲ್ ರವರಿಗೆ ಎಡದವಡೆ ಭಾಗಕ್ಕೆ ಗುದ್ದಿದ ಗಾಯವಾಗಿದ್ದು ಇನ್ನೋರ್ವ ಶಹಾಲ್ ಎಂಬವರು ಹಿಂಬದಿ ಸೀಟಿನಲ್ಲಿ ಕುಳಿತಿದ್ದು ಅವರ ಬಲ ಭುಜಕ್ಕ ಗುದ್ದಿದ ಗಾಯವಾಗಿರುತ್ತದೆ ನಂತರ ಗಾಯಗೊಂಡ ಪಿರ್ಯಾದಿದಾರರನ್ನು ಹಾಗೂ ಇನ್ನಿಬ್ಬರನ್ನು ಒಂದು ಅಂಬ್ಯುಲೆಂನ್ಸ್ ವಾಹನದಲ್ಲಿ ಸಾರ್ವಜನಿಕರು ಹಾಗೂ ಲಾರಿ ಚಾಲಕ ಕ್ಲೀನರ್ ಸೇರಿ ಉಪಚಿರಿಸಿ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿ ಪಿರ್ಯಾದುದಾರರು ಹಾಗೂ ಇನ್ನಿಬ್ಬರನ್ನು ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ನೀಡಿರುತ್ತಾರೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:132/2021 ಕಲಂ:279, 337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
ನಾಪತ್ತೆ ಪ್ರಕರಣ: ೦1
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಫಿರ್ಯಾದಿದಾರರು: ಪುರುಷೋತ್ತಮ, ಪ್ರಾಯ -32 ವರ್ಷ, ತಂದೆ- ಹುಕ್ರ, ವಾಸ-ಉದಯಗಿರಿ ಮನೆ, ಆರ್ಯಾಪು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರರಾದ ಪುರುಷೋತ್ತಮ, ಪ್ರಾಯ-32 ವರ್ಷ, ತಂದೆ- ಹುಕ್ರ, ವಾಸ- ಉದಯಗಿರಿ ಮನೆ, ಆರ್ಯಾಪು ಗ್ರಾಮ, ಪುತ್ತೂರು ತಾಲೂಕು ಎಂಬವರ ಚಿಕ್ಕಪ್ಪನಾದ ಚನಿಯ ಪ್ರಾಯ: 50 ವರ್ಷ, ತಂದೆ: ಚಾಕಾರು ಎಂಬುವರು ಅವಿವಾಹಿತರಾಗಿದ್ದು, ಆರ್ಯಾಪು ಗ್ರಾಮದ ಉದಯಗಿರಿ ಎಂಬಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಕೂಲಿ ಕೆಲಸ ಮಾಡಿಕೊಂಡು ಇರುತ್ತಾರೆ. ಇವರು ದಿನಾಂಕ 01.11.2021 ರಂದು ತನ್ನ ಮನೆಯಿಂದ ಬೆಳಿಗ್ಗೆ ಕೆಲಸಕ್ಕೆಂದು ಹೋದವರು ವಾಪಸ್ಸು ಮನೆಗೆ ಬಾರದೇ ಇದ್ದು, ಇವರನ್ನು ಕಳೆದ 5 ದಿನಗಳಿಂದ ಸುತ್ತಮುತ್ತ ಹುಡುಕಾಡಿದರೂ ಪತ್ತೆ ಆಗದೇ ಇದ್ದು, ಸಂಬಂಧಿಕರಲ್ಲಿ, ನೆರೆಕೆರೆ ಮನೆಯವರಲ್ಲಿ ವಿಚಾರಿಸಿದಾಗಲೂ ಚನಿಯ ರವರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಠಾಣಾ ಅಕ್ರ: 99/2021, ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦2
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೋಕ್ಷನ್ (26) ಕುಟ್ಟಿ ಪೂಜಾರಿ ವಾಸ: ಮಂಚಕಲ್ಲು ಮನೆ, ಸಂಗಬೆಟ್ಟು ಗ್ರಾಮ ಎಂಬವರ ದೂರಿನಂತೆ ಪಿರ್ಯಾದುದಾರರು ರಿಕ್ಷಾ ಚಾಲಕರಾಗಿದ್ದು ದಿನಾಂಕ 09.11.2021 ರಂದು ಪಿರ್ಯಾದುದಾರರು ಸಿದ್ದಕಟ್ಟೆ ರಿಕ್ಷಾ ಪಾರ್ಕ್ ನಲ್ಲಿ ಇದ್ದ ಸಮಯ ಬೆಳಿಗ್ಗೆ 9.00 ಗಂಟೆಗೆ ಪಿರ್ಯಾದುದಾರರಿಗೆ ಪರಿಚಯವಿರುವ ಅಶ್ವಿತ್ ಎಂಬುವವರು ರಿಕ್ಷಾದ ಬಳಿ ಬಂದು ಮದಂಗೋಡಿಗೆ ಹೋಗಿ ಸಾಮಾನು ತರಲು ಇದೆ ಬಾಡಿಗೆಗೆ ಹೋಗುವ ಎಂದು ಹೇಳಿ ಪಿರ್ಯಾದುದಾರರನ್ನು ಕರೆದುಕೊಂಡು ಹೋಗುತ್ತ ಸಮಯ 9.15 ಗಂಟೆಗೆ ಮದಂಗೋಡಿ ತಲುಪಿದಾಗ ಆ ಸಮಯ ಅಶ್ವಿತ್ ನ ಪರಿಚಯದ ಸುದು ಎಂಬಾತನು ಪಿರ್ಯಾದುದಾರರ ರಿಕ್ಷಾದ ಬಳಿ ಬಂದು ಪಿರ್ಯಾದುದಾರರನ್ನು ಇಳಿಯುವಂತೆ ಹೇಳಿ ಅವಾಚ್ಯ ಶಬ್ದದಿಂದ ಬೈದು ಪಿರ್ಯಾದುದಾರರಿಗೆ ಕೈ ಯಿಂದ ಕೆನ್ನೆಗೆ, ಹೊಟ್ಟೆಗೆ ಮತ್ತು ಕಲ್ಲಿನಿಂದ ಬೆನ್ನಿಗೆ ಹೊಡೆದು ಪಿರ್ಯಾದುಧಾರರ ಅಂಗಿಯನ್ನು ಹರಿದು ಅಶ್ವಿತ್ ಹಾಗೂ ಸುದು ಸೇರಿ ಪಿರ್ಯಾದುದಾರರನ್ನು ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದು ಇನ್ನೂ ಮುಂದಕ್ಕೆ ನಮ್ಮ ವಿಚಾರಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 141/2021 ಕಲಂ 506,504,323,324 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಲೀಲಾ ಮಜಲೋಡಿ ಮನೆ, ಸಂಗಬೆಟ್ಟು ಗ್ರಾಮ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 09-11-2021 ರಂದು ಬೆಳಿಗ್ಗೆ 9.30 ಗಂಟೆ ಸಮಯಕ್ಕೆ ಪಿರ್ಯಾದುದಾರರು ಅವರ ಮನೆಯಾದ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಮಜಲೋಡಿ ಎಂಬಲ್ಲಿರುವ ಸಮಯ ಮಂಚಕಲ್ಲು ನಿವಾಸಿ ಮೋಕ್ಷನ್ ಎಂಬಾತನು ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರ ಮನೆಯಲ್ಲಿದ್ದ ಸುದರ್ಶನ್ ನ ಜೊತೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಮುಂದಾದಾಗ ಪಿರ್ಯಾದುದಾರರು ಮತ್ತು ಅವರ ಮಗಳು ,ಮಗ ತಡೆಯಲು ಮುಂದಾದಾಗ ಪಿರ್ಯಾದುದಾರರು ಮತ್ತು ಪಿರ್ಯಾದುದಾರರ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರಿಗೆ ಮತ್ತು ಅವರ ಮಗಳಿಗೆ ಜೀವಬೆದರಿಕೆ ಹಾಕಿ ಊರಿನಲ್ಲಿ ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತೇನೆ ಎಂದು ಹೇಳಿ ಹೋಗಿರುತ್ತಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 142/2021 ಕಲಂ 448,504,509,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: ೦3
ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ: 09-11-2021 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಕ್ರ 68/2021 ಕಲಂ 447,504,506,509, 354, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿಡಿಓ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರು ಉಪ್ಪಿನಂಗಡಿ ಪಂಚಾಯತ್ ಪಿ ಡಿ ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 08-11-2021 ರಂದು 03.20 ಗಂಟೆಗೆ ಪಿರ್ಯಾದುದಾರರು ಹಾಗೂ ಪಂಚಾಯತ್ ಸಿಬ್ಬಂದಿಗಳಾದ ಇಸಾಕ್ ಇಕ್ಬಾಲ್ ರಕ್ಷಿತ್ ಸುಂದರ ಆನಂದ ರವರುಗಳ ಜೊತೆಗೆ ಉಪ್ಪಿನಂಗಡಿ ಪೇಟೆಯಲ್ಲಿ ಕೆ ಎ 21 ಬಿ 5170 ರಲ್ಲಿ ಅನಧಿಕೃತವಾಗಿ ಹಣ್ಣು ಹಂಪಲು ವ್ಯಾಪಾರ ಮಾಡುತ್ತಿರುವ ವ್ಯಕ್ತಿಗೆ ವಾಹನವನ್ನು ಇಲ್ಲಿಂದ ತೆರವುಗೊಳಿಸಿ ವಾಹನ ಸಮೇತವಾಗಿ ಪಂಚಾಯತ್ ಗೆ ಹೋಗಿ ದಂಡ ಪಾವತಿಸಲು ಸೂಚಿಸಿ ಪಂಚಾಯತ್ ಸಿಬ್ಬಂದಿ ಸುಂದರರವರಲ್ಲಿ ವಾಹನವನ್ನು ಪಂಚಾಯತ್ ಕಛೇರಿಗೆ ಕೊಂಡು ಹೋಗಲು ತಿಳಿಸಿ ಪಿರ್ಯಾದುದಾರರು ಹಾಗೂ ಇತರ ಸಿಬ್ಬಂದಿಗಳನ್ನು ಕರೆದುಕೊಂಡು ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತೆರಳಿದ್ದು ಆ ಸಮಯ ಪಂಚಾಯತ್ ಸಿಬ್ಬಂದಿ ಸುಂದರರವರನ್ನು ಕೆ.ಎ 21 ಬಿ 5170 ರಲ್ಲಿ ಸುಬ್ರಹ್ಮಣ್ಯ ಕ್ರಾಸ್ ಬಳಿಯ ಕಟ್ಟಡದ ಬಳಿ ಬಿಟ್ಟಿರುವ ವಿಚಾರ ಪಿರ್ಯಾಧಿದಾರರಿಗೆ ತಿಳಿದು ಪಿರ್ಯಾದುದಾರರು ಅಲ್ಲಿಗೆ ತೆರಳಿ ಸದ್ರಿ ಅನಧಿಕೃತ ಹಣ್ಣಿನ ವ್ಯಾಪಾರಿಗೆ ದಂಡ ಪಾವತಿಸಲು ತಿಳಿಸಿದಲ್ಲಿ ಪಿರ್ಯಾದುದಾರರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ದಂಡನೆಯನ್ನು ಪಾವತಿಸಿರುವುದಿಲ್ಲ, ನಂತರ ಸುಂದರರವರನ್ನು ಪಿರ್ಯಾದುದಾರರು ತನ್ನ ವಾಹನದಲ್ಲಿ ವಾಪಾಸು ಕರೆದುಕೊಂಡು ಬಂದಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:133/2021 ಕಲಂ:353 ಭಾದಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಡಾ/ ಅಶೋಕ್ ಕುಮಾರ್ ರೈ ಪ್ರಾಯ: 52 ವರ್ಷ ವೈದ್ಯಾಧಿಕಾರಿಯವರು ಪುತ್ತೂರು ಸಾರ್ವಜನಿಕ ಆಸ್ಪತ್ರೆ ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿಯವರು ಆಸ್ಪತ್ರೆಯಲ್ಲಿ ದಿನಾಂಕ: 09-11-2021 ರಂದು ಸಾಯಂಕಾಲ ಕರ್ತವ್ಯದಲ್ಲಿದ್ದ ಸಮಯ ತಮ್ಮ ಆಸ್ಪತ್ರೆಗೆ ತನ್ನ ತಾಯಿಯವರ ಜೊತೆ ಚಿಕಿತ್ಸೆಗೆ ಬಂದಿದ್ದ ಕುಮಾರಿ ಆಶಾ (16) ರವರನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಸಂಜೆ ಸುಮಾರು 6:00 ಗಂಟೆಗೆ ಬಂದ ಕುಮಾರಿ ಆಶಾ ರವರ ತಂದೆ ಆನಂದ ಕೌಡಿಚಾರ್ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಏಕವಚನದಲ್ಲಿ ಹಾಗೂ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದ ಸಮಯ ಪಿರ್ಯಾದಿದಾರರ ಜೊತೆ ಕರ್ತವ್ಯದಲ್ಲಿದ್ದ ಡಾ| ಯದುರಾಜ್ ದಾದಿಯವರಾದ ಶ್ರೀಮತಿ ಮೊಹಲತಾ, ಶ್ರೀಮತಿ ಗೀತಾ, ಡಿ ಗ್ರೂಪ್ ನೌಕರರಾದ ಅಖಿಲ್ ಮತ್ತು ಪುರಂದರರವರು ಆನಂದ ಕೌಡಿಚಾರ್ ರವರನ್ನು ಸಮಧಾನಪಡಿಸಿದಾಗ ಅವರೆಲ್ಲರನ್ನು ಉದ್ದೇಶಿಸಿ ಏಕವಚನದಲ್ಲಿ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಬಳಿಕ ಪಿರ್ಯಾದಿದಾರರನ್ನುದ್ದೇಶಿಸಿ ತುಳು ಭಾಷೆಯಲ್ಲಿ ಏಕವಚನದಲ್ಲಿ ಬೈದು ಜೀವಬೆದರಿಕೆಯನ್ನು ಹಾಕಿ ಪಿರ್ಯಾದಿದಾರರ ಹಾಗೂ ಪಿರ್ಯಾದಿದಾರರ ಜೊತೆಯಲ್ಲಿ ಕರ್ತವ್ಯದಲ್ಲಿದ್ದ ವರ ಸಾರ್ವಜನಿಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅಕ್ರ 89/2021 ಕಲಂ: 504, 506, 353 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಾಯ:38 ವರ್ಷ ತಂದೆ: ದಿ/ ತಿಮ್ಮಪ್ಪ ಗೌಡ ವಾಸ;ಮೈಕೆ ಮನೆ ಪಟ್ರಮೆ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ತಾಯಿ ಸುಮಾಲತಾ (56)ರವರು ಕಿಡ್ನಿ ವೈಪಲ್ಯ ಹಾಗೂ ಸಕ್ಕರೆ ಖಾಯಿಲೆ , ಬಿ ಪಿ ಇರುವುದರಿಂದ ವಾರಕ್ಕೆ ಎರಡು ಸಲ ಡೈಯಾಲಿಸಿಸ್ ಮಾಡಿಸುತ್ತಿದ್ದು . ಡಯಾಲಿಸಿಸ್ ಮಾಡಿದ ಬಳಿಕ ಪಿರ್ಯಾದುದಾರರ ತಾಯಿಗೆ ವಿಪರೀತ ನೋವು ಉಂಟಾಗುತ್ತಿದ್ದು ದಿನಾಂಕ;09-11-2021 ರಂದು 12.30 ಗಂಟೆಗೆ ತಾಯಿಯು ವಾಂತಿ ಮಾಡುತ್ತಿದುದ್ದದನು ಕಂಡ ಪಿರ್ಯಾದುದಾರರು ಯಾಕೇ ನೀವು ವಾಂತಿ ಮಾಡುತ್ತೀರಿ ಎಂದು ಕೇಳಿದಾಗ ಪಿರ್ಯಾದುದಾರರ ತಾಯಿಯು ನಾನು ಡಯಾಲಿಸಿಸ್ ನಿಂದ ಉಂಟಾಗುವ ನೋವುನ್ನು ತಡಯಲಾರದೇ ಸಾಯುದೆಂದು ನಿರ್ಧಿರಿಸಿ 11.30 ಗಂಟೆಗೆ ಮೈಲ್ ತುತನ್ನು ಸೇವಿಸಿರುತ್ತೇನೆ ಎಂದು ಹೇಳಿರುತ್ತಾರೆ. ಕೂಡಲೇ ಪಿರ್ಯಾದುದಾರರು ಹಾಗೂ ಭಾವ ಶಿವಪ್ಪ ಗೌಡ ರವರಿಗೆ ಈ ವಿಚಾರವನ್ನು ದೂರವಾಣಿ ಮುಖಾಂತರ ತಿಳಿಸಿದ್ದು ಕೂಡಲೇ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ;09-11-2021 ರಂದು 3.50 ಗಂಟೆಗೆ ಸಮಯಕ್ಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್ 54/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.