ಅಪಘಾತ ಪ್ರಕರಣ: ೦2
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೊರಗಪ್ಪ ನಾಯ್ಕ್ ತಂದೆ: ಬಾಬು ನಾಯ್ಕ್, ವಾಸ: ಬಿ ಆರ್ ನಗರ, ಗೋಳ್ತಮಜಲು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 09.03.2021 ರಂದು ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಕೈಕಂಬ ಎಂಬಲ್ಲಿ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ KA-19-HA-9420 ನೇ ಮೋಟಾರ್ ಸೈಕಲನ್ನು ಅದರ ಸವಾರ ಯತೀಶ್ ಎಂಬವರು ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತಲೆಗೆ ಹಾಗೂ ಬಲಕಾಲಿಗೆ ರಕ್ತಗಾಯವಾದವರು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 24/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮಹಮ್ಮದ್ ಗೌಸ್ ಎಂ ಜೆ, ಪ್ರಾಯ 37 ವರ್ಷ, ತಂದೆ: ಮೌಲಾಲಿ, ವಾಸ: KSRTC ಕ್ವಾಟ್ರಸ್, ಮುಕ್ರಂಪಾಡಿ, ಪುತ್ತೂರು, ದ.ಕ. ಬಿ.ಸಂ: 73/10696, KSRTC, ರವರು ನೀಡಿದ ದೂರೇನೆಂದರೆ ದಿನಾಂಕ 10-03-2021 ರಂದು ಆರೋಪಿ ಅಟೋರಿಕ್ಷಾ ಚಾಲಕ ವಿನಯ ಎಂಬವರು ಅಟೋರಿಕ್ಷಾ ನೋಂದಣಿ ನಂಬ್ರ KA-21-B-9978 ನೇದನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕೋಡಿಂಬಾಡಿ ಎಂಬಲ್ಲಿ ಕೋಡಿಂಬಾಡಿ ಪಂಚಾಯತ್ ಬಳಿ ತಿರುವು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಅಟೋರಿಕ್ಷಾ ಚಾಲಕನ ಹತೋಟಿ ತಪ್ಪಿ ಪಲ್ಟಿಯಾಗಿ ಜಾರಿಕೊಂಡು ಬಂದು ಪಿರ್ಯಾದುದಾರರು ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-F-2937 ನೇ ನೋಂದಣಿ ನಂಬ್ರದ KSRTC ಬಸ್ನ ಮುಂಭಾಗಕ್ಕೆ ಅಪಘಾತವಾಗಿ ಎರಡೂ ವಾಹನಗಳು ಜಖಂಗೊಂಡು, ಆರೋಪಿ ಚಾಲಕನಿಗೆ ತಲೆಗೆ ಮತ್ತು ಮುಖಕ್ಕೆ ಗಾಯವಾಗಿದ್ದು, ಅವರಿಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿದೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 44/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦2
ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹಂಝ ಮುರ ಉಮ್ಮರ್(53) ತಂದೆ; ಆದಂ , ವಾಸ:ಮಿತ್ತೂರು ಮನೆ, ಇಡ್ಕಿದು ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 09-03-2021 ರಂದು ಪುತ್ತೂರಿನಲ್ಲಿ ಕಾರ್ಯಕ್ರಮಕ್ಕೆ ತನ್ನ ಸಂಬಂಧಿಕರು ಹಾಗೂ ಅವರವರ ಮಕ್ಕಳೊಂದಿಗೆ ಹೋಗಿ ರಾತ್ರಿ ಸುಮಾರು 11.00 ಗಂಟೆ ಸಮಯಕ್ಕೆ ಉಳಕೊಳ್ಳಲು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ಪಿರ್ಯಾಧಿದಾರರ ಮನೆಗೆ ಬಂದು ಬಳಿಕ ಪಿರ್ಯಾಧಿಯ ಮನೆಯ ಕೆಳಮಹಡಿಯ ಕೋಣೆಯಲ್ಲಿ ಬಂದಿದ್ದ ಸಂಬಂಧಿಕರು ಮಲಗಿದ್ದು ಅಲ್ಲದೆ ಹೆಂಡತಿ ಕೂಡಾ ಅದೇ ಕೋಣೆಯಲ್ಲಿ ಮಲಗಿರುತ್ತಾಳೆ. ಪಿರ್ಯಾಧಿದಾರರು ಮೇಲಿನ ಮಹಡಿಯ ಕೋಣೆಯಲ್ಲಿ ಮಲಗಿದ್ದು, ಬೆಳಗ್ಗಿನ ಜಾವ 4.00 ಗಂಟೆಯ ಸಮಯಕ್ಕೆ ಪಿರ್ಯಾಧಿದಾರರ ಹೆಂಡತಿಯು ಎಚ್ಚರಗೊಂಡು ಎದ್ದು ಮನೆಯ ಹಿಂಬದಿಗೆ ಬಂದಾಗ ಹಿಂಬಾಗಿಲು ತೆರೆದುಕೊಂಡಿದ್ದು ಪಿರ್ಯಾಧಿದಾರರ ಹೆಂಡತಿ ಮಲಗಿದ್ದ ಕೋಣೆಯಲ್ಲಿ ಮಲಗಿದ್ದ ಸಂಬಂಧಿ ಮಿಸ್ರಿಯಾಳು ಧರಿಸಿದ್ದ 14 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್, 10 ಗ್ರಾಂ ತೂಕದ ಚಿನ್ನದ ಬಳೆ ಹಾಗೂ 22 ಗ್ರಾಂ ತೂಕದ ಚಿನ್ನದ ಕಾಲುಚೈನ್, ತಹಿಸಿಯಾ ಭಾನು ಧರಿಸಿದ್ದ 16 ಗ್ರಾಂ ತೂಕದ ಚಿನ್ನದ ಕೈ ಬ್ರಾಸ್ ಲೆಟ್ ಹಾಗೂ 25 ಗ್ರಾಂ ತೂಕದ ಚಿನ್ನದ ಕಾಲು ಚೈನ್ ಹಾಗೂ ಮೈಮೂನಾರವರು ಧರಿಸಿದ್ದ ತಲಾ 10 ಗ್ರಾಂ ತೂಕದ ಚಿನ್ನದ ಬಳೆ-2ನ್ನು ಮನೆಯ ಮಹಡಿಯ ಹಿಂಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಬಲತ್ಕಾರವಾಗಿ ತೆರೆದು ಒಳಪ್ರವೇಶಿಸಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು 107 ಗ್ರಾಂನಷ್ಟು ಚಿನ್ನ ಕಳವಾಗಿದ್ದು ಅಂದಾಜು ಮೌಲ್ಯ 4,28,000=00 ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅ.ಕ್ರ 38/2021 ಕಲಂ: 457,380 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಮಧುರಾ ಪ್ರಾಯ 30 ವರ್ಷ ಗಂಡ:ಪ್ರಶಾಂತ ವಾಸ:ನಂ 668 ಗ್ರೌಂಡ್ ಪ್ಲೋರ್ ,4ನೇ ಕ್ರಾಸ್ ,1ಎ ಮೈನ್ ರೋಡ್ ,ಕೆಂಪೆಗೌಡ ಲೇಔಟ್, ಬಿಎಸ್ಕೆ 3ನೇ ಸ್ಟೇಜ್ ಬೆಂಗಳೂರು ರವರ ತಂದೆ ತಾಯಿ ತೀರ್ಥಯಾತ್ರೆಗೆ ಹೋಗಿದ್ದು ದಿನಾಂಕ 10-03-2021 ರಂದು ಸುಬ್ರಹ್ಮಣ್ಯದ ತಂದೆ ತಾಯಿಯ ಮನೆಯ ನೆರೆಯವರಾದ ಉಷಾರವರು ದೂರವಾಣಿ ಕರೆಮಾಡಿ ಪಿರ್ಯಾದಿದಾರರ ತಂದೆಯವರ ಮನೆಯ ಬಾಗಿಲು ತೆರೆದಂತಿರುತ್ತದೆ ಎಂದು ತಿಳಿಸಿದ ಮೇರೆಗೆ ಬೆಂಗಳೂರಿನಿಂದ ಬಂದು ಮನೆಯನ್ನು ನೋಡಲಾಗಿ ಮನೆಯ ಎದುರಿನ ಬಾಗಿಲಿನ ಬೀಗ ಒಡೆದ ಸ್ಥಿತಿಯಲ್ಲಿದ್ದು ಒಳಹೋಗಿ ನೋಡಲಾಗಿ ಯಾರೋ ಕಳ್ಳರು ಮನೆಯ ಬೆಡ್ ರೂಂನ ಕಪಾಟಿನಲ್ಲಿರಸಿದ್ದ 8 ಗ್ರಾಂ ತೂಕದ ಚಿನ್ನದ ಚೈನು ಮತ್ತು 2 ಗ್ರಾಂ ತೂಕದ ಚಿನ್ನದ ಉಂಗುರ ಒಟ್ಟು 10 ಗ್ರಾಂ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಚಿನ್ನದ ಅಂದಾಜು ಮೌಲ್ಯ ರೂ 30,000/- ಆಗಬಹುದು ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಅ.ಕ್ರ ನಂಬ್ರ :15-2021 ,ಕಲಂ: 380,454,457 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಇತರೆ ಪ್ರಕರಣ: 01
ಧರ್ಮಸ್ಥಳ ಪೊಲೀಸ್ ಠಾಣೆ : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ವಯಸ್ಸಿನ ಬಾಲಕಿ ದಿನಾಂಕ 10.03.2021 ರಂದು ಸಂಜೆ ಶಾಲೆ ಮುಗಿಸಿ ಬಸ್ಸಿನಲ್ಲಿ ಮನೆಗೆ ಬರುತ್ತಿರುವ ಸಮಯ ಸಂತ್ರಸ್ಥೆಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಆರೋಪಿತನು ಅದೇ ಬಸ್ಸಿಗೆ ಹತ್ತಿ ಸಂತ್ರಸ್ಥೆಯ ಪಕ್ಕದ ಸೀಟಿನಲ್ಲಿ ಕುಳಿತು ಆಕೆಗೆ ಲೈಂಗಿಕ ದೌರ್ಜನ್ಯ ವೆಸಗಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 354 ಐ.ಪಿ.ಸಿ ಮತ್ತು ಕಲಂ: 7,8 ಪೋಕ್ಸೋ ಕಾಯ್ದೆ-2012 ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಪುಪ್ಷಾವತಿ ಪ್ರಾಯ 20 ವರ್ಷ ಗಂಡ ; ಆನಂದ ವಾಸ ;ಪರಪ್ಪು ಮನೆ ಕೊಯಿಲಾ ಗ್ರಾಮ ಕಡಬ ತಾಲೂಕು ರವರ ಗಂಡ ಆನಂದ ಹಾಗೂ ಪಿರ್ಯದಿಯ ದೊಡ್ಡಪ್ಪನ ಮಗ ತಾರನಾಥರವರು ದಿನಾಂಕ 09.03.2021 ರಂದು 11-00 ಗಂಟೆಗೆ ಕುಮಾರಧಾರ ಹೊಳೆಯಾದ ಪರಪ್ಪು ಎಂಬಲ್ಲಿ ಮೀನು ಹಿಡಿದುಕೊಂಡು ಬರುತ್ತೇವೆ ಎಂದು ಹೇಳಿ ಹೋಗಿದ್ದು ಸಮಯ ಸಂಜೆ 4-15 ಗಂಟೆಗೆ ಪಿರ್ಯದಿಯ ತಮ್ಮ ತಾರನಾಥನು ಮನೆಗೆ ಓಡಿ ಬಂದು, ನಾವು ವಾಪಸ್ಸು ಮನೆಗೆ ಬರುತ್ತಿರುವಾಗ ಕುಮಾರಧಾರ ಹೊಳೆಯ ಪರಪ್ಪು ಎಂಬಲ್ಲಿ ಹೊಳೆ ದಾಟಿ ಬರುತ್ತಿರುವ ಸಮಯ ಬಾವ ಆನಂದರವರ ಕಾಲಿನ ಚಪ್ಪಲಿ ಜಾರಿ ನೀರಿನಲ್ಲಿ ಹೋಗುತ್ತಿರುವ ಸಮಯ ಅದನ್ನು ಹಿಡಿಯಲು ಪ್ರಯತ್ನಿಸಿದ್ದು ಆನಂದರವರು ನೀರಿನಲ್ಲಿ ಮುಳುಗಿ ಮೇಲೆ ಏಳದೆ ನೀರಿನಲ್ಲಿ ಕಾಣೆಯಾದ ಬಗ್ಗೆ ಪಿರ್ಯಾದಿಯಲ್ಲಿ ತಿಳಿಸಿದ್ದು, ದಿನಾಂಕ:10.03.2021 ರಂದು ನೆರೆಕರೆಯ ನಿವಾಸಿಗಳಾದ ಸುರೇಶ್, ಲೋಕೇಶ್ ಹಾಗೂ ಇತರರು ಸೇರಿ ಕುಮಾರಧಾರೆ ಹೊಳೆಯ ಬದಿಯಲ್ಲಿ ಹಾಗೂ ನೀರಿನಲ್ಲಿ ಹುಡುಕಾಡಿದಲ್ಲಿ ಮುಳುಗಿದ ಸ್ಥಳದಿಂದ ಸ್ವಲ್ಪ ಕೆಳಗಡೆ ಹೊಳೆಯ ನೀರಿನಲ್ಲಿ ಮೃತ ಶರೀರವು ತೇಲುತ್ತಿರುವುದನ್ನು ಸುರೇಶ್ರವರು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ನೋಡಿದ್ದು ನಂತರ ಮೃತ ದೇಹವನ್ನು ನೀರಿನಿಂದ ಮೇಲಕ್ಕೆತ್ತಿ ದಡದಲ್ಲಿ ಇರಿಸಿರುವುದನ್ನು ಪಿರ್ಯಾದಿಯು ನೋಡಿ ಗುರುತಿಸಿದ್ದು ಮೃತ ದೇಹವು ಪಿರ್ಯಾದಿಯ ಗಂಡ ಆನಂದರವರದಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 05/2021 ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕಿಶೋರ್ ಕುಮಾರ್ (24 ವರ್ಷ),ತಂದೆ: ಕೃಷ್ಣಪ್ಪ ನಾಯ್ಕ, ವಾಸ: ಉದಯಗಿರಿ ಮನೆ, ಮುಂಡೂರು ಗ್ರಾಮ, ಪುತ್ತೂರು ತಾಲೂಕು ರವರ ತಂದೆಯವರು ಸುಮಾರು 4 ವರ್ಷಗಳಿಂದ ಬಿಪಿ ಮತ್ತು ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು, ಎರಡು ತಿಂಗಳ ಹಿಂದೆ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಶುಗರ್ ಖಾಯಿಲೆಯಿಂದಾಗಿ ಬಲ ಕಾಲಿನ ಪಾದಕ್ಕೆ ಆಪರೇಶನ್ ಮಾಡಿಸಿಕೊಂಡು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದವರು, ಫಿರ್ಯಾದಿದಾರರು ಗ್ಯಾರೇಜ್ನಲ್ಲಿದ್ದ ಸಮಯ ಫಿರ್ಯಾದಿದಾರರ ತಾಯಿ ಫಿರ್ಯಾದಿದಾರರಿಗೆ ಫೋನು ಮಾಡಿ ತಂದೆ ಕೃಷ್ಣಪ್ಪ ನಾಯ್ಕರವರು ಮನೆಯ ಒಳಗಡೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ಅದರಂತೆ ಫಿರ್ಯಾದಿದಾರರು ಮನೆಗೆ ಬಂದು ನೋಡಿದಾಗ ಮನೆಯ ಹಾಲ್ನಲ್ಲಿ ಎತ್ತರಕ್ಕೆ ಅಳವಡಿಸಿದ್ದ ಕಬ್ಬಿಣದ ಅಡ್ಡಕ್ಕೆ ಹಸಿರು ಮತ್ತು ನೀಲಿ ಚೌಕುಳಿಯು ಪಂಚೆಗೆ ಕೇಸರಿ ಮತ್ತು ಕೆಂಪು ಬಣ್ಣದ ಶಾಲನ್ನು ಒಂದಕ್ಕೊಂದು ಜೋಡಿಸಿ ಅದರ ಒಂದು ತುದಿಯನ್ನು ಅಡ್ಡಕ್ಕೆ ಕಟ್ಟಿ ಅದರ ಇನ್ನೊಂದು ತುದಿಯನ್ನು ಕುಣಿಕೆಯನ್ನಾಗಿ ಮಾಡಿ ಕುತ್ತಿಗೆಗೆ ಬಿಗಿದು, ಎರಡೂ ಕಾಲುಗಳು ನೆಲದಲ್ಲಿ ಅರ್ಧ ಕುಳಿತಿರುವ ಭಂಗಿಯಲ್ಲಿ ನೇತಾಡುತ್ತಿದ್ದು, ದೇಹದಲ್ಲಿ ಯವುದೇ ಚಲನೆ ಕಂಡು ಬರದೇ ಇದ್ದು, ಫಿರ್ಯಾದಿದಾರರ ತಂದೆ ಕೃಷ್ಣಪ್ಪ ನಾಯ್ಕರವರು ಬಿಪಿ ಮತ್ತು ಶುಗರ್ ಖಾಯಿಲೆಯಿಂದ ಬಳಲುತ್ತಿದ್ದವರಿಗೆ ಆಪರೇಶನ್ ಮಾಡಿಸಿ, ಔಷಧಿಯನ್ನು ಮಾಡಿದ್ದರೂ ಕೂಡಾ ಗುಣಮುಖರಾಗದೇ ಇದ್ದುದ್ದರಿಂದ ಮನನೊಂದು ಫಿರ್ಯಾದಿದಾರರ ಮನೆಯಲ್ಲಿ ಯಾರೂ ಇಲ್ಲದ ಸಮಯ ಬೆಳಿಗ್ಗೆ 10.00 ಗಂಟೆಯಿಂದ 11.00 ಗಂಟೆಯ ನಡುವೆ ಪಂಚೆ ಮತ್ತು ಶಾಲುಗಳನ್ನು ಒಂದಕ್ಕೊಂದು ಜೋಡಿಸಿ ಅದರ ಒಂದು ತುದಿಯನ್ನು ಮನೆಯ ಹಾಲ್ನಲ್ಲಿರುವ ಕಬ್ಬಿಣದ ಅಡ್ಡಕ್ಕೆ ಕಟ್ಟಿ ಇನ್ನೊಂದು ತುದಿಯನ್ನು ಕುಣಿಕೆಯನ್ನಾಗಿ ಮಾಡಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಯು ಡಿ ಆರ್ ಸಂಖ್ಯೆ : 10/21 ಕಲo: 174 ಸಿಅರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.