ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜುನೈದ್‌ ಪ್ರಾಯ 24 ವರ್ಷ ತಂದೆ:ಅಬ್ದುಲ್‌ ಖಾದರ ವಾಸ:4-89 ಶಾಂತಿನಗರ ,ಬಜಲ ನಂತೂರು ಮಂಗಳೂರು ರವರು ತನ್ನ ಸ್ನೇಹಿತರಾದ ಸಂಶಿರ್ ಹಸನಬ್ಬ ,ಮಹಮ್ಮದ್‌ ಶಾಜಿ ರವರೊಂದಿಗೆ ಕೆಎ-21-ಪಿ-7582ನೇ ನಂಬ್ರದ ಅಲ್ಟೋ ಕಾರಿನಲ್ಲಿ ಮಡಿಕೇರಿಯ ತನ್ನ ಸಂಬಂಧಿಕರ ಮನೆಗೆ ಹೋಗಲು ದಿನಾಂಕ:08-04-2021 ರಂದು ಮಂಗಳೂರಿನಿಂದ ಹೊರಟು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕೊಡಾಜೆ ಮಸೀದಿಯ ಬಳಿ ಪುತ್ತೂರು ಮಾರ್ಗವಾಗಿ ರಸ್ತೆಯ ಎಡ ಬದಿಯಲ್ಲಿ ಸಂಚರಿಸುತ್ತಿರುವಾಗ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಬಂದ ಕೆಎ-12-ಪಿ-9581ನೇ ನಂಬ್ರದ ಜೀಪಿನ ಚಾಲಕ ಅಭಿಷೇಕ್‌ ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜುನೈದ್‌ ,ಸಂಶಿರ್‌ ಹಸನಬ್ಬ ರವರಿಗೆ ರಕ್ತಗಾಯವಾಗಿದ್ದು. ಕಾರಿನ ಚಾಲಕ ಮಹಮ್ಮದ್‌ ಶಾಜಿಗೆ ನೋವು ಗಾಯವಾಗಿರುತ್ತದೆ. ಅಲ್ಲದೇ ಅಪಘಾತದ ಸಮಯ ಅಪಘಾತಪಡಿಸಿದ ಜೀಪಿಗೆ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಬಂದ ಕೆಎ-51-ಎಸ್‌-2196ನೇ ನಂಬ್ರ ಮೋಟಾರ್‌ ಸೈಕಲ್‌ ಸವಾರ ಸಾಕ್ಷಿತ್ ತನ್ನ ಮೋಟಾರ್‌ ಸೈಕಲ್‌ನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿ ಜೀಪಿನ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಹಾಗೂ ಸಹ ಸವಾರ ವಿನಿತ್‌ ರವರು ಗಾಯಗೊಂಡಿರುವುದಾಗಿದೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 51/2021  ಕಲಂ: 279,337,338  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ  ವಸಂತ ರಾಣಿ ಪ್ರಾಯ 54 ವರ್ಷ ತಂದೆ: ರುಕ್ಮಯ ಬೈರ ವಾಸ: ಪುತ್ರಬೈಲು ಮನೆ, ಲಾಯಿಲ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 09-04-2021 ರಂದು ಕೆಎ 70-0568 ನೇ ಆಟೋ ರಿಕ್ಷಾದಲ್ಲಿ ಪರಿಚಯದ ರಾಮಪ್ಪ, ಬಿ.ಎಲ್ ರಾಮಣ್ಣ ರವರ ಜೊತೆ ಸಹ ಪ್ರಯಾಣಿಕರಾಗಿ ಕುಳಿತುಕೊಂಡು ಆಟೋ ರಿಕ್ಷಾವನ್ನು ಚಾಲಕ ಪ್ರಮೋದ್ ಕುಮಾರ್ ರವರು ಚಲಾಯಿಸಿಕೊಂಡು ಲಾಯಿಲ-ಕಿಲ್ಲೂರು ರಸ್ತೆಯಲ್ಲಿ ಹೋಗುತ್ತಾ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ದುಡುಕುತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಚಾಲಕನ ಚಾಲನಾ ಹತೋಟಿ ತಪ್ಪಿ ಆಟೋ ರಿಕ್ಷಾ ಬಲ ಮಗ್ಗುಲಾಗಿ ಮಗಚಿಬಿದ್ದು ಆಟೋ ರಿಕ್ಷಾ ಜಖಂಗೊಂಡು ಪಿರ್ಯಾದಿದಾರರಿಗೆ ಬಲ ಕೈಗೆ, ಬಲ ದವಡೆಗೆ ಗುದ್ದಿದ ಗಾಯ, ಪ್ರಮೋದ್ ಕುಮಾರ್ ಗೆ ತಲೆಗೆ, ಮುಖಕ್ಕೆ, ಕಣ್ಣಿಗೆ ಗುದ್ದಿದ ರಕ್ತಗಾಯ, ರಾಮಪ್ಪ ರವರಿಗೆ ಬಲಕೆನ್ನೆಗೆ, ಬಲ ಕೈಗೆ ಗುದ್ದಿದ ಗಾಯ, ಬಿ ಎಲ್ ರಾಮಣ್ಣ ರಿಗೆ ಎಡ ಕೈಯ ಮಣಿಗಂಟಿಗೆ ಗುದ್ದಿದ ಗಾಯವಾಗಿದ್ದು ಗಾಯಾಳುಗಳ ಪೈಕಿ ಪಿರ್ಯಾದಿದಾರರು, ರಾಮಪ್ಪ, ಬಿ.ಎಲ್ ರಾಮಣ್ಣ ರವರು ಲಾಯಿಲ ಜ್ಯೋತಿ ಆಸ್ಪತ್ರೆಯಲ್ಲಿ, ಪ್ರಮೋದ್ ಕುಮಾರ್ ರವರು ಮಂಗಳೂರು ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 32/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಜಯ ಕೃಷ್ಣ  ಕೆ, ಪ್ರಾಯ 21 ರ್ಷ, ತಂದೆ: ಗಿರಿಶಂಕರ ಕೆ, ವಾಸ:  ಪುಂಡಿಕಾಯಿ ಮನೆ, ಪೇರಮೊಗರು ಅಂಚೆ,  ಕೆದಿಲ ಗ್ರಾಮ , ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 09-04-2021 ರಂದು ಆರೋಪಿ ಮೋಟಾರ್ ಸೈಕಲ್ ಸವಾರ ಲಕ್ಷ್ಮಣ ಎಂಬವರು KA-19-EA-1848 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ನ್ನು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕೆದಿಲ ಎಂಬಲ್ಲಿ ಶಾಲೆಯ ಬಳಿ ಕಬಕ ಕಡೆಯಿಂದ ಕೆದಿಲ ಕಡೆಗೆ  ಚಲಾಯಿಸಿಕೊಂಡು ಹೋಗಿ ಮುರ-ಪೇರಮೊಗ್ರು ಸಾರ್ವಜನಿಕ ಮುಖ್ಯ ರಸ್ತೆಗೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಮುಖ್ಯ ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಪೇರಮೊಗ್ರು ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದ KA2021-TR-5141W  ನೇ ಹೊಸ ಮೋಟಾರ್ ಸೈಕಲ್ಗೆ ಅಪಘಾತವಾಗಿ, ಆರೋಪಿ ಲಕ್ಷನ ರವರಿಗೆ ಗಾಯವಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಪಿರ್ಯಾದುದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  66/2021 ಕಲಂ: 279, 337  ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜನಾರ್ಧನ, ಪ್ರಾಯ 25 ರ್ಷ, ತಂದೆ: ದಿ||  ಗುರುವ, ವಾಸ:   ಕುಕ್ಕುಕುಮೇರಿ ಮನೆ, ಕೆದಿಲ  ಅಂಚೆ & ಗ್ರಾಮ , ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 10-04-2021 ರಂದು ಆರೋಪಿ ಲಾರಿ ಚಾಲಕ ಮೋಹನ ಗೌಡ ಎಂಬವರು KA-19-AA-243 ನೇ ನೋಂದಣಿ ನಂಬ್ರದ ಲಾರಿಯನ್ನು ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಎಂಬಲ್ಲಿ ಮುಂಡೂರು ಒಳ ರಸ್ತೆಯಿಂದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಹಾಗೂ ನಿಂತು ಮುಂದುವರಿಯುವ ಕ್ರಮವನ್ನು ಪಾಲಿಸದೇ ಏಕಾಏಕಿಯಾಗಿ ಲಾರಿಯನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಸಹಸವಾರರಾಗಿ, ಮಹಮ್ಮದ್‌ ನೌಷಾದ್‌ರವರು ಸವಾರರಾಗಿ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ KA-21-X-7099 ನೇ ನೋಂದಣಿ ನಂಬ್ರದ ಸ್ಕೂಟರ್‌ಗೆ ಲಾರಿ ಅಪಘಾತವಾಗಿ, ಪಿರ್ಯಾದುದಾರರಿಗೆ ಬಲಕಣ್ಣಿನ ಬಳಿ ಊತ ಹಾಗೂ ಬಲಮೊಣಕಾಲಿನಲ್ಲಿ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಸವಾರ ಮಹಮ್ಮದ್‌ ನೌಷಾದ್‌ ರವರಿಗೆ ಕಿವಿಗೆ, ಭುಜಕ್ಕೆ ಗಾಯಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಫಸ್ಟ್‌ ನ್ಯೂರೋ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  67/2021 ಕಲಂ: 279, 337  ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಾರಾಯಣ ಪೂಜಾರಿ(47) ತಿಮ್ಮಪ್ಪ ಪೂಜಾರಿ ಶಿವನಗರ ಸೈಟ್ ಮನೆ, ಬಡಗಬೆಳ್ಳೂರು ಗ್ರಾಮ ರವರು ನೀಡಿದ ದೂರಿನಂತೆ ದಿನಾಂಕ 09.04.2021 ರಂದು 19.15 ರಿಂದ ದಿನಾಂಕ 10.04.2021 ರಂದು ಬೆಳಿಗ್ಗೆ 06.00 ಗಂಟೆಯ ಮಧ್ಯೆ ಬಂಟ್ವಾಳ ತಾಲೂಕು ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲನ ಶ್ರೀ ನಾರಾಯಣ ಗುರು  ಮಂದಿರದ ಬಾಗಿಲಿನ ಬೀಗವನ್ನು  ಯಾರೋ ಕಳ್ಳರು ಯಾವುದೋ ಒಂದು ಸಾಧನದಿಂದ ಮುರಿದು ಮಂದಿರದ ಒಳಗೆ ಇದ್ದ ಕಾಣಿಕೆ ಡಬ್ಬಿಯಿಂದ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವು ಮಾಡಿದ ಹಣ ಸುಮಾರು 10,000/- ಆಗಬಹುದು ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 43 /2021ಕಲಂ:  457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 4

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅಮಣಿ, ಪ್ರಾಯ 50 ವರ್ಷ, ಗಂಡ: ಎಸ್.‌ ಬಾಬು, ವಾಸ: ಶೇಡಿಗುರಿ ಮನೆ, ಕೊಳ್ತಿಗೆ ಗ್ರಾಮ, ಪುತ್ತೂರು ತಾಲೂಕು ರವರ ಗಂಡನರವರಿಗೆ ಮಾನಸಿಕ ಖಾಯಿಲೆ ಇದ್ದು ಈ ಬಗ್ಗೆ ಪುತ್ತೂರಿನ ಮಾನಸಿಕ ತಜ್ಞರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ದಿನಾಂಕ 07.04.2021 ರಂದು ಉಪಾಹಾರ ಸೇವಿಸಿ ಬೆಳಿಗ್ಗೆ 08.30 ಗಂಟೆಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಹೋದವರು ಯಾವಾಗಲೂ ಸಂಜೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದವರು ರಾತ್ರಿಯೂ ಮನೆಗೆ ಬಾರದೇ ಬೆಳಿಗ್ಗೆಯಾದರೂ ಮನೆಗೆ ಬಾರದೇ ಇದ್ದು ಸ್ಥಳೀಯವಾಗಿ ಹಾಗೂ ಸಂಬಂದಿಕರ ಮನೆಯಲ್ಲಿ ಇತರೆ ಕಡೆಗಳಲ್ಲಿ ಹುಡುಕಿದರೂ ಸಿಗದೇ ಇದ್ದು, ದಿನ ದಿನಾಂಕ 10.04.2021 ರಂದು ಪಿರ್ಯಾದಿದಾರರು ಹುಡುಕುತ್ತಿರುವಾಗ ಮದ್ಯಾಹ್ನ 12.30 ಗಂಟೆಯ ಸಮಯಕ್ಕೆ ಕೊಳ್ತಿಗೆ ಗ್ರಾಮದ ಉಳಿಯಡ್ಕ ಎಂಬಲ್ಲಿಯ ಲತಾ ರೈ ಎಂಬವರ ಮನೆಯಲ್ಲಿ ಕೆಲಸ ಮಾಡುವ ಚೋಮ ಎಂಬವರು ಪಿರ್ಯಾದಿದಾರರ ಮನೆಗೆ ಬಂದು ಬಾಬುರವರು ಲತಾ ರೈರವರ ಜಮೀನಿನ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಬಿಗಿದು ನೇತಾಡುತ್ತಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಅಲ್ಲಿಗೆ ಹೋಗಿ ನೋಡಿದಾಗ  ಮರವೊಂದಕ್ಕೆ ಅವರು ಉಟ್ಟಿದ್ದ ಲುಂಗಿಯನ್ನು ಕಟ್ಟಿ ನೇಣು ಬಿಗಿದು ಆತ್ನಹತ್ಯೆ ಮಾಡಿಕೊಂಡಿದ್ದು ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು, ಪಿರ್ಯಾದಿದಾರರ ಗಂಡನು ಅವರಿಗಿದ್ದ ಮಾನಸಿಕ ಖಾಯಿಲೆ ಹಾಗೂ ವಿಪರೀತ ಮಧ್ಯ ಸೇವಿನೆಯಿಂದ ಮಾನಸಿಕ ಖಿನ್ನತೆಗೆ ಒಳಗಾದವರು ದಿನಾಂಕ 07.04.2021 ರಂದು ಬೆಳಿಗ್ಗೆ 08.30 ಗಂಟೆಯಿಂದ  ದಿನಾಂಕ 10.04.2021 ಮದ್ಯಾಹ್ನ 12.00 ಗಂಟೆಯ ಮಧ್ಯ ಅವಧಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 11/2021 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಗಿರೀಶ ಪ್ರಾಯ:25 ವರ್ಷ ತಂದೆ: ಧರ್ಣಪ್ಪ ಗೌಡ,  ವಾಸ: ಬೋವಿನಡಿ ಮನೆ, ಕೊಕ್ಕಡ ಗ್ರಾಮ ಬೆಳ್ತಂಗಡಿ ತಾಲೂಕು  ರವರು ನೀಡಿದ ದೂರಿನಂತೆ ಉಮೇಶ ಪ್ರಾಯ 37 ವರ್ಷ ಎಂಬವರು ದಿನಾಂಕ: 09.04.2021 ರಂದು ರಾತ್ರಿ 11.00 ಗಂಟೆ ಸಮಯಕ್ಕೆ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಬಯಲು ಎಂಬಲ್ಲಿ ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಗಿರೀಶ ಮತ್ತು ಇತರರೊಂದಿಗೆ ಬಿದಿರು ಮತ್ತು ಅಡಿಕೆ ಮರವನ್ನು ಉಪಯೋಗಿಸಿ ದ್ವಾರ ನಿರ್ಮಿಸುವ ಸಮಯ ಉಮೇಶ್ ರವರ ಕೈಯಲ್ಲಿದ್ದ ಬಿದಿರು ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಾಗಿ ಸದ್ರಿಯವರ ದೇಹಕ್ಕೆ ವಿದ್ಯುತ್ ಪ್ರವಹಿಸಿದ್ದು, ಸ್ಮೃತಿ ತಪ್ಪಿದವರನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:28/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಶಿಧರನ್ ಪ್ರಾಯ;55 ವರ್ಷ ತಂದೆ; ಕೆ ಕೆ ಸುಂದರನ್  ವಾಸ: ಹೊಸಮಠ ಮನೆ ಚಾರ್ಮಾಡಿ ಗ್ರಾಮ ಬೆಳ್ತಂಗಡಿ ತಾಲೂಕು ರವರ  ಚಿಕ್ಕಮ್ಮ ಶ್ರೀಮತಿ ಸರೋಜಿನಿ ಎಂಬವರ ಮಗ ಅಭಿಲಾಷ್ ಎಂಬಾತನು ಸುಮಾರು 2 ತಿಂಗಳ ಹಿಂದೆ ಮೃತ ಪಟ್ಟಿದ್ದು ಈ ಕಾರಣದಿಂದ ಶ್ರೀಮತಿ ಸರೋಜಿನಿ ರವರು ಮನನೊಂದಿದ್ದು ಅದೇ ಕಾರಣಕ್ಕಾಗಿ ದಿನಾಂಕ: 10/04/2021 ರಂದು ತನ್ನ ಮನೆಯಲ್ಲಿ ರಬ್ಬರ್ ಗೆ ಮಿಶ್ರಣ ಮಾಡುವ ಆಸಿಡ್ ದ್ರಾವಣವನ್ನು ಕುಡಿದು ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ ಎಮ್ ಸಿ ಆಸ್ಪತ್ರೆಗೆ ದಾಖಲಿಸಿದ್ದು ಸದ್ರಿಯವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 10/04/2021 ರಂದು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ  ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:29/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಂದರ ಪ್ರಾಯ;48 ವರ್ಷ ತಂದೆ; ದಿ// ವೆಂಕಪ್ಪ ಮಲೆ ಕುಡಿಯಾ  ವಾಸ: ಕೊಪ್ಪಳ  ಮನೆ ಅಂತರ ಬೈಲು ತೋಟತ್ತಾಡಿ ಗ್ರಾಮ ಬೆಳ್ತಂಗಡಿ ತಾಲೂಕು ರವರ ತಮ್ಮ ಕೃಷ್ಣಪ್ಪ ಎಮ್‌ ಕೆ ಪ್ರಾಯ 34 ವರ್ಷ ಎಂಬವರು ತನ್ನ ಸ್ನೆಹಿತರೊಂದಿಗೆ ದಿನಾಂಕ: 10/04/2021 ರಂದು ಬೆಳಗ್ಗೆ 11.00  ಗಂಟೆಗೆ ನೆರಿಯಾ ಗ್ರಾಮದ ಪುಲ್ಲಾಜೆ ಎಂಬಲ್ಲಿಗೆ ಮೀನು ಹಿಡಿಯಲು ಹೋಗಿದ್ದು ಮಧ್ಯಾಹ್ನ 12.00 ಗಂಟೆಯಿಂದ 12.30 ಗಂಟೆಯ ಮಧ್ಯಧ ಅವಧಿಯಲ್ಲಿ ಕೃಷ್ಣಪ್ಪ ಎಮ್‌ ಕೆ ರವರು ಆಕಸ್ಮಿಕವಾಗಿ ಕಾಲು ಜಾರಿ ನದಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಈಜು ಬಾರದೆ ಇದ್ದ ಕಾರಣ ಉಸಿರುಗಟ್ಟಿ ಮೃತ ಪಟ್ಟಿರುತ್ತಾರೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯುಡಿಆರ್ ನಂ:30/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತ್ತೀಚಿನ ನವೀಕರಣ​ : 11-04-2021 11:29 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080