ಅಭಿಪ್ರಾಯ / ಸಲಹೆಗಳು

ಇತರೆ ಪ್ರಕರಣ: 3

 

ಸುಳ್ಯ ಪೊಲೀಸ್ ಠಾಣೆ : ಪೊಲೀಸ್‌ ವೃತ್ತ ನಿರೀಕ್ಷಕರು ಸುಳ್ಯ ವೃತ್ತ  ರವರು ದಿನಾಂಕ: 10.05.2021 ರಂದು ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ ವಾಸವಿರುವ ದಿವಾಕರ ಆಚಾರಿ ಸಿ ಹೆಚ್ ಎಂಬಾತನು ತನ್ನ ಕಬ್ಬಿಣ ಸಾಮಗ್ರಿ ತಯಾರು ಮಾಡುವ ಶೆಡ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಬಂದೂಕು ಕೋವಿಯನ್ನು ತನ್ನ ವಶದಲ್ಲಿ ಇಟ್ಟುಕೊಂಡಿರುತ್ತಾನೆ ಎಂಬ ಬಗ್ಗೆ ಮಾಹಿತಿ ಪಡೆದು ಸಿಬ್ಬಂದಿಗಳನ್ನು ಹಾಗೂ ಪಂಚಾಯತುದಾರರನ್ನು ಬರಮಾಡಿಕೊಂಡು. ಸದ್ರಿ ವಿಳಾಸಕ್ಕೆ ದಾಳಿ ನಡೆಸಿದಾಗ ಯಾವುದೇ ಪರವಾನಿಗೆ ಇಲ್ಲದ ಅಕ್ರಮ ಅಗ್ನಿ ಅಸ್ತ್ರ ಬಂದೂಕನ್ನು ಹಾಗೂ ಒಂದು ಸಜೀವ ತೋಟೆಯನ್ನು ವಶದಲ್ಲಿಟ್ಟುಕೊಂಡಿದ್ದು, ಸದ್ರಿ ಸೊತ್ತುಗಳನ್ನು ಹಾಗೂ ಬಂದೂಕುಗಳನ್ನು ತಯಾರಿ ಮಾಡಲು ಉಪಯೋಗಿಸಿದ ಸಾಮಗ್ರಿಗಳನ್ನು ಮಹಜರು ಮುಖೇನ ಸ್ವಾಧೀನ ಪಡಿಸಿಕೊಳ್ಳಲಾಗಿದೆ.  ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಈ ಹಿಂದೆ ಕೂಡ ಎರಡು ಕೋವಿಗಳನ್ನು ಪರಿಚಯದ ಕಾರ್ತಿಕ್  ನೂಚಿಲ ಮತ್ತು ಅಶೋಕ್ ಬಿಳಿನೆಲೆ ಎಂಬವರಿಗೆ ಮಾರಾಟ ಮಾಡಿರುತ್ತೇನೆ ಎಂದು ತಿಳಿಸಿದ್ದು ಆರೋಪಿಯು ಯಾವುದೇ ಪರವಾನಿಗೆ ಇಲ್ಲದೇ ಅಗ್ನಿಅಸ್ತ್ರವನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ವಶದಲ್ಲಿಟ್ಟುಕೊಂಡು ಅಪರಾಧವೆಸಗಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ ನಂಬ್ರ :27/2021, ಕಲಂ: 3,7,20,25(1)(a),29 Arms Act -1959   ಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ : ಪೊಲೀಸ್ ಉಪ ನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ. ರವರು ಕರ್ತವ್ಯದಲ್ಲಿರುವ ಸಮಯ ಕಡಬ ತಾಲೂಕು ಸವಣೂರು ಗ್ರಾಮದ ಸವಣೂರು ಎಂಬಲ್ಲಿರುವ ಪುದ್ದೊಟ್ಟು ಜನರಲ್ ಸ್ಟೋರ್ ನ ಮಾಲಕ ನಝೀರ್, ಬಿನ್: ಯೂಸುಫ್, ವಾಸ: ಮುಕ್ಕೂರು ಮನೆ, ಪೆರುವಾಜೆ ಗ್ರಾಮ, ಸುಳ್ಯ ತಾಲೂಕು ರವರು ದಿನಾಂಕ 10-05-2021 ರಂದು ಬೆಳಗ್ಗೆ 08-45 ಗಂಟೆಗೆ ತನ್ನ ಅಂಗಡಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸುಮಾರು 15 ರಿಂದ 20 ಮಂದಿ ಗ್ರಾಹಕರನ್ನು ಗುಂಪಾಗಿ ಸೇರಿಸಿ ವ್ಯಾಪಾರ ಮಾಡುತ್ತಿದ್ದು, ಆರೋಪಿಯು ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದ ಸೋಂಕು ಉಲ್ಬಣವಾಗಬಹುದು ಎಂಬುದಾಗಿ ಅರಿವಿದ್ದರೂ, ತೀರಾ ನಿರ್ಲಕ್ಷ್ಯವಹಿಸಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ತಡೆಯುವ ಸಲುವಾಗಿ ಹೊರಡಿಸಿದ ಮಾರ್ಗಸೂಚಿ ಆದೇಶಗಳನ್ನು ಉಲ್ಲಂಘಿಸಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಅ.ಕ್ರ 23/2021, ಕಲಂ : 269 IPC & Sec 5(4) The Karnataka Epidemic Diseases Act 2020. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪೊಲೀಸ್‌ ಉಪನಿರೀಕ್ಷಕರು ಪುತ್ತೂರು ಗ್ರಾಮಾಂತರ ಠಾಣೆ ರವರು ದಿನಾಂಕ 10.05.2021 ರಂದು ಠಾಣೆಯಲ್ಲಿರುವ ಸಮಯ ದೊರೆತ ವರ್ತಮಾನದಂತೆ ಸಿಬ್ಬಂದಿಗಳ ಹಾಗೂ ಪಂಚರುಗಳ ಜೊತೆ ಪುತ್ತೂರು ತಾಲೂಕು ಕುರಿಯ ಗ್ರಾಮದ  ಅಜಲಾಡಿ ಬಳ್ಳಮಜಲು ಎಂಬಲ್ಲಿರುವ  ಸರಕಾರಿ  ಗುಡ್ಡಪ್ರದೇಶಕ್ಕೆ ತಲುಪಿ  ಗಿಡಗಳ ಮರೆಯಿಂದ ಗಮನಿಸಲಾಗಿ ಸದ್ರಿ ಗುಡ್ಡ ಪ್ರದೇಶದಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಹಾಗೂ ಯಾವುದೇ ಮುನ್ನಚ್ಚರಿಕಾ  ಕ್ರಮವನ್ನು ವಹಿಸದೇ ಗುಂಪಾಗಿ ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜು ಆಡುತ್ತಿದ್ದವರನ್ನು ಕಂಡು  ಸುತ್ತುವರಿದು, ಪಂಚರ ಸಮಕ್ಷಮ ಅಲ್ಲಿ ಕೋಳಿ ಅಂಕ ಜೂಜು ಆಡುತ್ತಿದ್ದವರ ಪೈಕಿ 3 ಜನರನ್ನು ವಶಕ್ಕೆ ಪಡೆದುಕೊಂವು ಅವರ ಹೆಸರು ಕೇಳಲಾಗಿ ಉಮೇಶ ರೈ, ಜಗದೀಶ,  ನಾರಾಯಣ ,  ಎಂಬುದಾಗಿ ತಿಳಿಸಿದ್ದು, ಸ್ಥಳದಿಂದ  ಓಡಿ ಹೋದ ಆರೋಪಿಗಳ ಬಗ್ಗೆ ಈ ಮೇಲಿನ ಆರೋಪಿಗಳಲ್ಲಿ ವಿಚಾರಿಸಲಾಗಿ ಚಿದಾನಂದ ಗೌಡ ಬೂಡಿಯಾರು, ರಾಘವ ಪೂಜಾರಿ ಕುರಿಯ ಉಳ್ಳಾಲ, ವಸಂತ ಗೌಡ ಚಿಂಗಾಣಿ,  ಸೀತಾರಾಮ ಶೆಟ್ಟಿ ಬಳ್ಳಮಜಲು, ಜಯಪ್ರಕಾಶ ಹೊಸಮಾರು, ವಿನಯ ಕುರಿಯ, ಶರತ್ ಪೂಜಾರಿ ಅಜಲಾಡಿ ಎಂಬವರಾಗಿರುವುದಾಗಿ  ತಿಳಿಸಿದ್ದು, ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳು ಹಣವನ್ನು ಪಣವಾಗಿ ಕೋಳಿ ಅಂಕ ಜೂಜಾಟ ಆಡುತ್ತಿದ್ದುದು ಸಾಬೀತಾದುದರಿಂದ ಜೂಜಿಗೆ ಬಳಸಿದ ಕೋಳಿಗಳಾದ ಮೈಪ  ಜಾತಿಯ  ಹುಂಜ ಕೋಳಿ 1,  ಕುಪ್ಪುಳ  ಜಾತಿಯ  ಹುಂಜ ಕೋಳಿ -1 , ಕೆಮ್ಮೈರ ಜಾತಿಯ  ಹುಂಜ ಕೋಳಿ 1  ಇವುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಕೋಳಿಗಳ ತಲಾ ರೂಪಾಯಿ  500/- ರಂತೆ ಒಟ್ಟು 3 ಹುಂಜ ಕೋಳಿಗಳ ಒಟ್ಟು ಅಂದಾಜು ಬೆಲೆ ರೂಪಾಯಿ 1500/- ಅಗಿದ್ದು, ಮತ್ತು ಅರೋಪಿಗಳು  ಆಟಕ್ಕೆ ಬಳಸಿದ ನಗದು ಹಣ ಒಟ್ಟು ರೂಪಾಯಿ 5190/- ಆಗಿದ್ದು, ,  ಮುಂದಿನ ಕ್ರಮಕ್ಕಾಗಿ 3 ಜನ ಆರೋಪಿಗಳು, 3 ಕೋಳಿ ಹುಂಜ  ನಗದು ರೂಪಾಯಿ 5190/- ನ್ನು ಪಂಚರ ಸಮಕ್ಷಮದಲ್ಲಿ ಯನ್ನು ಸ್ವಾಧೀನಪಡಿಸಿಕೊಂಡು ಪುತ್ತೂರು ಗ್ರಾಮಾಂತರ ಠಾಣಾ ಅ.ಕ್ರ. 41/2021 ಕಲಂ:-269 ಐಪಿಸಿ ಮತ್ತು ಕಲಂ 87 ಕೆ.ಪಿ. ಆ್ಯಕ್ಟ್‌ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಮಾಧವ (38) ತಂದೆ: ದಿ. ತನಿಯಪ್ಪ ವಾಸ”: ಪೇರಮೊಗರು ಮನೆ ಕೆದಿಲ ಗ್ರಾಮ ಬಂಟ್ವಾಳ ತಾಲೂಕು ರವರ ತಮ್ಮ ಪ್ರಕಾಶ ಪ್ರಾಯ 34 ವರ್ಷ ಎಂಬಾತನು ಮಧ್ಯ ಸೇವನೆ ಮಾಡುವ ಚಟ ಹೊಂದಿದ್ದು, ದಿನಾಂಕ: 06.05.2021 ರಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು, ಮಧ್ಯ ಸೇವನೆ ಮಾಡದೆ ಕೈಕಾಲು ನಡುಗುತ್ತಿತ್ತು. ದಿನಾಂಕ:09.05.2021 ರಂದು ಸಂಜೆ ಸ್ನಾನ ಮಾಡಿ ರಾತ್ರಿ 8.30 ಗಂಟೆಗೆ ಊಟ ಮಾಡಿ ಆತನು ಮಲಗುವ ಕೋಣೆಯಲ್ಲಿ ಮಲಗಿದನು. ನಂತರ ರಾತ್ರಿ 10.00 ಗಂಟೆಗೆ ಮೂತ್ರ ಶಂಕೆಗೆಂದು ಎದ್ದು ನನಗೆ ಮಧ್ಯ ಸೇವನೆ ಮಾಡದೆ ನಿದ್ದೆ ಬರುವುದಿಲ್ಲ ತಲೆ ನೋವಾಗತ್ತಿದೆ ಎಂದು ಫಿರ್ಯಾದಿದಾರರಲ್ಲಿ ಹೇಳುತ್ತಾ ವಾಪಾಸು ಹೋಗಿ ಆತನ ಕೋಣೆಯಲ್ಲಿ ಮಲಗಿದನು, ದಿನಾಂಕ: 10.05.2021 ರಂದು ಬೆಳಿಗ್ಗೆ 7.00 ಗಂಟೆಗೆ ಫಿರ್ಯಾದಿದಾರರ ತಮ್ಮ ಕೋಣೆಯ ಬಾಗಿಲನ್ನು ಒಳಗಿನ ಚಿಲಕದಿಂದ ಮುಚ್ಚಿದ್ದು ನಂತರ ಮನೆಯ ಹಿಂಬದಿಯಿಂದ ಹೋಗಿ ಕಿಟಕಿಯ ಮೂಲಕ ನೋಡಿದಾಗ ಫಿರ್ಯಾದಿದಾರರ ತಮ್ಮ ಸಿಮೆಂಟ್ ಚಾವಣಿಗೆ ಅಳವಡಿಸಿದ ಕಬ್ಬಿಣದ ರಾಡಿಗೆ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಈ ಬಗ್ಗೆ ಪುತ್ತೂರು ನಗರ ಠಾಣಾ ಯುಡಿಆರ್‌ ನಂಬ್ರ 15/2021 ಕಲಂ: 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-05-2021 11:09 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080