ಅಪಘಾತ ಪ್ರಕರಣ: ೦3
ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ರೇಖಾ ಪ್ರಾಯ 29 ವರ್ಷ ಗಂಡ:ಚಂದ್ರಶೇಖರ, ವಾಸ: ಬಡೆಕ್ಕಲ ಮನೆ ಅರಸಿನಮಕ್ಕಿ ಅಂಚೆ ಹತ್ಯಡ್ಕ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:10-07-2021 ರಂದು ಮಧ್ಯಾಹ್ನ 12:00 ಗಂಟೆಗೆ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ನೆಲ್ಯಾಡಿ ಹಳ್ಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪಿರ್ಯಾದಿದಾರು ರಿಕ್ಷಾ ಕೆಎ21 ಬಿ 2211 ನೇದರಲ್ಲಿ ತನ್ನ ತಾಯಿ ಉಮಾವತಿ , ತಂಗಿ ಪುಷ್ಪಲತಾ, ತಂಗಿ ಮಗ ತೃಷನ್ ಹಾಗೂ ಪಿರ್ಯಾದಿದಾರರ ಮಗಳು ಸಾಥ್ವಿ ಎಂಬಾಕೆಯೊಂದಿಗೆ ಪ್ರಯಾಣಿಸಿಕೊಂಡು ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿರುವಾಗ ಕೆಎಲ್07 ಬಿಎಂ 9018ನೇ ಕಾರನ್ನು ಅದರ ಚಾಲಕ ನೆಲ್ಯಾಡಿ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸಿಕೊಂಡು ಬರುತ್ತಿದ್ದ ರಿಕ್ಷಾದ ಬಲಬದಿಯಿಂದಾಗಿ ಓವರ್‌ಟೇಕ್ ಮಾಡಿಕೊಂಡು ರಿಕ್ಷಾದ ಮುಂದೆ ಚಲಾಯಿಸಿಕೊಂಡು ಹೋಗುತ್ತಾ ಕಾರನ್ನು ಒಮ್ಮೆಲೆ ಯಾವುದೇ ಸೂಚನೆ ನೀಡದೆ ಎಡಬದಿಗೆ ಚಲಾಯಿಸಿದ ಪರಿಣಾಮ ರಿಕ್ಷಾವು ಕಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಮತ್ತು ಮಗಳು ಸಾಥ್ವಿ ಹಾಗೂ ರಿಕ್ಷಾ ಚಾಲಕ ಚಂದ್ರಹಾಸ್ ರವರಿಗೆ ಗಾಯವಾಗಿರುವುದಲ್ಲದೆ ರಿಕ್ಷಾ ಮತ್ತು ಕಾರಿಗೆ ಜಖಂ ಉಂಟಾಗಿರುವುದಾಗಿದೆ..ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:66 /2021 ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಘ್ನೇಶ್ ಆಚಾರ್ಯ, ಪ್ರಾಯ: 22 ವರ್ಷ, ತಂದೆ: ಶ್ರೀಧರ ಆಚಾರ್ಯ, ವಾಸ; ಹರ್ಷಿತಾ ನಿಲಯ, ನಯನಾಡು ಅಂಚೆ, ಪಿಲಾತಬೆಟ್ಟು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 06.07.2021 ರಂದು ಪಿರ್ಯಾದಿದಾರರು ತನ್ನ ತಂದೆಯ ಬಾಬ್ತು KA19Q7142 ನೇ ಬಜಾಜ್ M80 ದ್ವಿಚಕ್ರ ವಾಹನದಲ್ಲಿ ತಂದೆ ಶ್ರೀಧರ ಆಚಾರ್ಯ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಅಗತ್ಯ ಕೆಲಸದ ನಿಮಿತ್ತ ಪುಂಜಾಲಕಟ್ಟೆಗೆ ಹೊರಟು ಸಮಯ ಸುಮಾರು 09.00 ಗಂಟೆಗೆ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಸರಕಾರಿ ಅಸ್ಪತ್ರೆ ಹತ್ತಿರ ತಲುಪುತ್ತಿದ್ದಂತೆ ಎದುರಿನಿಂದ ಹೋಗುತ್ತಿದ್ದ ಆಟೋ ರಿಕ್ಷಾ ನಂಬ್ರ KA21B7395 ನೇದನ್ನು ಅದರ ಚಾಲಕ ಆದಂ ಎಂಬವರು ಯಾವುದೇ ಮುನ್ಸೂಚನೆ ನೀಡದೇ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹ ಸವಾರ ರಸ್ತೆಗೆ ಬಿದ್ದು, ಸಹಸವಾರರಿಗೆ ಎಡಕಾಲಿಗೆ ಗುದ್ದಿದ ನೋವು ಉಂಟಾಗಿ ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದು . ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 41/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಮಿತ್ ಆಚಾರ್. ವಿ, ಪ್ರಾಯ 43 ವರ್ಷ ತಂದೆ. ಬಿ.ವಿ.ಆಚಾರ್, ವಾಸ: ನಂಬ್ರ: 298 4 ನೇ ಮುಖ್ಯ ರಸ್ತೆ, ಇಸ್ರೋ ಲೇ ಔಟ್ ಬೆಂಗಳೂರು ಎಂಬವರ ದೂರಿನಂತೆ ದಿನಾಂಕ; 09-07-2021ರಂದು ಬೆಳಿಗ್ಗೆ 09.00ಗಂಟೆ ಸಮಯಕ್ಕೆ ಕಡಬ ತಾಲೂಕು ಶಿರಾಡಿ ಗ್ರಾಮದ ಪರೋಟಿಎಂಬಲ್ಲಿ ಪಿರ್ಯಾದಿದಾರರು ತನ್ನ ಬಾಬ್ತು ಕಾರು ಮಹೇಂದ್ರ xuv500 KA 05 MU 8414 ನೇ ಕಾರಿನಲ್ಲಿ ನನ್ನ ತಾಯಿ ನಿರ್ಮಲಾ ಬಿ ಆಚಾರ್, ಪತ್ನಿ ರೇಖಾ ಅಮಿತ್ ರವರನ್ನು ಕುಳ್ಳಿರಿಸಿಕೊಂಡು ಬೆಂಗಳೂರಿನಿಂದ ಹೊರಟು ನಾನು ಕಾರನ್ನು ಬೆಂಗಳೂರು–ಮಂಗಳೂರು ರಾ.ಹೆ.75 ರಲ್ಲಿ ಚಲಾಯಿಸಿಕೊಂಡು ಬರುತ್ತಿರುವಾದ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಕೆಎ 41 ಎಂಸಿ 8618 ನೇ ಹುಂಡೈ ಕಾರು ನೇದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದು ಕಾರಿಗೆ ಡಿಕ್ಕಿ ಹೊಡೆದು ಎರಡೂ ವಾಹನಗಳ ಮುಂಭಾಗ ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 65/2021 ಕಲಂ:279, ಭಾದಂಸಂಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಣೆ ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಣೇಶ್ ತಂದೆ: ದೇವು ಪೂಜಾರಿ, ವಾಸ: ಅಮ್ಟೂರು ಶಾಂತಿಪಲ್ಕೆ ಮನೆ, ಅಮ್ಟೂರು ಗ್ರಾಮಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ತಾಯಿ ವೆಂಕಮ್ಮ ರವರು ದಿನಾಂಕ: 09.07.2021 ರಂದು ಮದ್ದಿಗೆ ಪಾಣೆಮಂಗಳೂರಿಗೆ ಹೋಗುತ್ತೇನೆ ಎಂದು ಆಟೋ ರಿಕ್ಷಾದಲ್ಲಿ ಮನೆಯಿಂದ 10:00 ಗಂಟೆಗೆ ಹೊರಟು ಹೋದವರು ರಾತ್ರಿ 8:30 ಗಂಟೆಯವರೆಗೂ ಪಿರ್ಯಾದಿಯ ತಾಯಿಯವರು ಮನೆಗೆ ಬಾರದಿದ್ದಾಗ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 80/2021 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹ್ಯೂಬರ್ಟ್ ಲೋಬೊ, ಪ್ರಾಯ: 67 ವರ್ಷ, ತಂದೆ: ದಿ| ಲಾರೆನ್ಸ್ ಲೋಬೋ, ವಾಸ: ಕೊಲ್ಪೆದಬೈಲು ಮನೆ, ಮಾಲಾಡಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾಧಿದಾರರಾದ ಹ್ಯೂಬರ್ಟ್ ಲೋಬೊ ರವರ ಮಗ ಅರ್ಮನ್ ಜೋಯ್ಸನ್ ಲೋಬೊ ಈ ಹಿಂದೆ ಫಿರ್ಯಾಧಿದಾರರೊಂದಿಗೆ ವಾಸವಿದ್ದು, ಆತನಿಗೆ ಇತ್ತೀಚೆಗೆ ವ್ಯಾಪಾರದಲ್ಲಿ ತುಂಬಾ ನಷ್ಟವುಂಟಾಗಿದ್ದರಿಂದ ಕೆಲವು ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದು, ಆತನು ಈಗ ಎಲ್ಲಿರುತ್ತಾನೆಂದು ಫಿರ್ಯಾಧಿದಾರರಿಗೆ ಮತ್ತು ಅವರ ಮನೆಯವರಿಗೆ ತಿಳಿದಿರುವುದಿಲ್ಲ. ಫಿರ್ಯಾಧಿದಾರರ ಮಗ ಮನೆಬಿಟ್ಟು ಹೋದ ನಂತರ ಆತನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಕವಿತಾ, ವೈಷ್ಣವಿ, ಗಗನ್, ಅನ್ಸರ್, ಸಂದೀಪ್, ನವೀನ್ ಹಾಗೂ ಇತರರು ಫಿರ್ಯಾಧಿದಾರರ ಮನೆಗೆ ಬಂದು ಬೆದರಿಕೆ ಹಾಕುತ್ತಿರುವುದಲ್ಲದೆ ಫಿರ್ಯಾಧಿದಾರರನ್ನು ಹಿಂಬಾಲಿಸಿಕೊಂಡು ಬಂದು ಜೀವ ಬೆದರಿಕೆ ಹಾಕುತ್ತಿರುವುದಾಗಿದೆ. ದಿನಾಂಕ: 05.07.2021 ರಂದು 11:00 ಗಂಟೆಗೆ ಹಲವು ವ್ಯಕ್ತಿಗಳು ಒಂದು ಪಜೆರೋ ವಾಹನದಲ್ಲಿ ಫಿರ್ಯಾಧಿದಾರರ ಮನೆಗೆ ಬಂದು ಅಕ್ರಮ ಪ್ರವೇಶ ಮಾಡಿ ಫಿರ್ಯಾಧಿದಾರರ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ನೀಡಿದ್ದು, ಫಿರ್ಯಾಧಿದಾರರು ಚರ್ಚ್‌ನಿಂದ ಬರುವಾಗ ಫಿರ್ಯಾಧಿದಾರರ ಸ್ಕೂಟರ್‌ನ್ನು ತಡೆದು ನಿಲ್ಲಿಸಿ ಸದ್ರಿ ವ್ಯಕ್ತಿಗಳು ಅರ್ಮನ್ ಜೋಯ್ಸನ್ ಲೋಬೋ ಎಲ್ಲಿದ್ದಾನೆ? ಅವ ಸಿಗದಿದ್ದರೆ ನಿಮ್ಮನ್ನು ಎತ್ತಿಕೊಂಡು ಹೋಗುತ್ತೇವೆ, ಜೈಲಿಗೆ ಹಾಕುತ್ತೇವೆ, ಆತನ ಪತ್ನಿಯನ್ನು ಕೂಡಾ ಜೈಲಿಗೆ ಹಾಕುತ್ತೇವೆ ಎಂದು ಬೆದರಿಕೆ ನೀಡಿ ಹೋಗಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 42/2021 ಕಲಂ: 341, 448, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦5
ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ:10/07/2021 ರಂದು 08:00 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 39/2021 ಕಲಂ:5,7,11 ಕರ್ನಾಟಕಗೋ ಹತ್ಯೆ ನಿಷೇಧಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ -2020ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 09.07.2021 ರಂದು 14:00 ಗಂಟೆಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 78/2021 ಕಲಂ: 323, 504, 506, 353 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 09.07.2021 ರಂದು 14:45 ಗಂಟೆಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 79/2021 ಕಲಂ: 341, 504, 354(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆ : ದಿನಾಂಕ: 09-07-2021 ರಂದು 18:00 ಗಂಟೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ,ಕ್ರ 45/2021 ಕಲಂ; 354(A), 506 IPC , ಕಲಂ: 8, 12 ಪೋಕ್ಸೋ ಕಾಯ್ದೆ-2012 ಹಾಗೂ ಕಲಂ:3(1)(w)(i) SC/ST PA Amandment Act -2015 ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಬ್ರಹ್ಮಣ್ಯ ಪೊಲೀಸ್ ಠಾಣೆ : ದಿನಾಂಕ: 09-07-2021 ರಂದು 18:35 ಗಂಟೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ,ಕ್ರ 46/2021 ಕಲಂ; 427,447, 504 IPC , ಕಲಂ:3(1)(r) SC/ST PA Amandment Act -2015ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಶೋಕ ಪ್ರಾಯ: 36 ವರ್ಷ, ತಂದೆ: ದಿ/ ಬಾಬು ಶೆಟ್ಟಿ ವಾಸ: ಅಕ್ಷಯ ನಗರ ಮನೆ ಕಲ್ಮಂಜ ಗ್ರಾಮ ಮತ್ತು ಅಂಚೆ ಎಂಬವರ ದೂರಿನಂತೆ ಪಿರ್ಯಾದಿದಾರರ ಅಣ್ಣ ಜಗನಾಥ ಎಂಬುವವರು ಸುಮಾರು ಒಂದು ವರ್ಷ ಹಿಂದೆ ಮದುವೆಯಾಗಿ ಕಕ್ಕಿಂಜೆ ಕಡೆಯಲ್ಲಿ ಬಾಡಿಗೆ ಮನೆ ಮಾಡಿ ಟೈಲರಿಂಗ್ ಕೆಲಸ ಮಾಡಿಕೊಂಡಿರುವುದಾಗಿದೆ ಪ್ರಸ್ತುತ ಲಾಕ್ ಡೌನ್ ಇರುವುದರಿಂದ ಬಾಡಿಗೆನೆಲೆಯಲ್ಲಿ ವಾಸವಾಗಿದ್ದ ಬೆಳ್ತಂಗಡಿ ತಾಲೂಕು ಚಿಬಿದ್ರೆ ಗ್ರಾಮದ ಹಾಲಾಜೆ ಎಂಬಲ್ಲಿ ಶ್ರೀ ಮತಿ ಮರಿಯಮ್ಮ ಎಂಬುವವರ ಬಾಬ್ತು ಬಾಡಿಗೆ ಮನೆಯೊಂದರಲ್ಲಿ ಹೊಲಿಗೆ ಯಂತ್ರವನ್ನು ಇಟ್ಟು ಕೊಂಡು ಕೆಲಸ ಮಾಡಿಕೊಂಡಿರುವುದಾಗಿದೆ ಪಿರ್ಯಾದಿದಾರರ ಅಣ್ಣನು ಅನಾರೋಗ್ಯದಿಂದ ಬಳಲುತ್ತಿದ್ದು ಪಿರ್ಯಾದಿದಾರರಿಗೆ ದಿನಾಂಕ 09-07-2021 ರಂದು ನೆರೆಯ ಗಪೂರ್ ಎಂಬುವವರು 20-35 ಗಂಟೆ ಸಮಯಕ್ಕೆ ಕರೆ ಮಾಡಿ ಅಣ್ಣ ಜಗನಾಥನು ನೆನ್ನೆಯಿಂದ ಮನೆಯ ಬಾಗಿಲು ಹಾಕಿ ಮಲಗಿದವರು ಈ ವರೆಗೆ ಬಾಗಿಲು ತೆರೆದಿರುವುದಿಲ್ಲವಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಸ್ಥಳಕ್ಕೆ ಬಂದು ಬಾಗಿಲನ್ನು ತೆರೆದು ನೋಡಲಾಗಿ ಅಣ್ಣ ಜಗನಾಥನು ಮೃತ ಪಟ್ಟಿರುವುದು ಖಚಿತವಾಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು,ಡಿ,ಆರ್ 41/2021 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.