ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮನೋಜ್, 42 ವರ್ಷ, ತಂದೆ: ದಿ|| ಕೊರಗಪ್ಪ ನಾಯ್ಕ, ವಾಸ: ಗುತ್ತಿಗಾರು ಪಂಚಾಯತ್ ಬಳಿ ಮನೆ, ಗುತ್ತಿಗಾರು ಗ್ರಾಮ, ಸುಳ್ಯ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 10-07-2022 ರಂದು ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕು ಕಾಣಿಯೂರು ಗ್ರಾಮದ ಬೈತಡ್ಕ ಎಂಬಲ್ಲಿನ ಸೇತುವೆಗೆ ಕಾರೊಂದು ಅಪಘಾತಗೊಂಡು ಹೊಳೆಗೆ ಬಿದ್ದಿರುವುದಾಗಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ವರದಿ ಬಂದಿರುವುದನ್ನು ನೋಡಿ ಪಿರ್ಯಾದುದಾರರು ಸ್ಥಳಕ್ಕೆ ಬಂದಾಗ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯ ಈಜುಗಾರರು ಹೊಳೆಯ ನೀರಿನಲ್ಲಿ ಹುಡುಕಾಡಿ ಮುಳುಗಿದ್ದ ಕಾರನ್ನು ಅಪರಾಹ್ನ 12-30 ಗಂಟೆಗೆ ಮೇಲಕ್ಕೆ ಎತ್ತಿದ್ದು ಅದರ ನೊಂದಣಿ ಸಂಖ್ಯೆ ನೋಡಲಾಗಿ KA05P8298 ಆಗಿರುತ್ತದೆ. ಸದ್ರಿ ಕಾರನ್ನು ಪಿರ್ಯಾದಿದಾರರ ಅಕ್ಕ ದೇವಕಿಯವರ ಮಗ ಧನುಶ್ 24 ವರ್ಷ, ತಂದೆ: ಚೋಮನಾಯ್ಕ ಎಂಬವರು ಸುಮಾರು 2 ತಿಂಗಳ ಹಿಂದೆ ಖರೀದಿಸಿದ್ದು, ಧನುಷ್ ನ ಮೊಬೈಲ್ ನಂಬರಿಗೆ ಕರೆ ಮಾಡಿದಾಗ ಅದು ಸ್ವಿಚ್ಡ್ ಆಫ್ ಆಗಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. 58/2022 ಕಲಂ 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: ೦1

 

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪ್ರಸಾದ್ ಶೆಟ್ಟಿ ಪ್ರಾಯ: 36 ವರ್ಷ ತಂದೆ: ಸಂಜೀವ ಶೆಟ್ಟಿ ವಾಸ: ನೆಕ್ಕಿಲು ಮನೆ ಬನ್ನೂರು ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ರವರು ದಿನಾಂಕ: 09-07-2022 ರಂದು ಊಟ ಮಾಡಲು ಆಮ್ಲೆಟ್ ತೆಗೆದುಕೊಂಡು ಹೋಗಲು ಪುತ್ತೂರು ಪಿಶ್ ಮಾರ್ಕೆಟ್ ಬಳಿ ಇರುವ ಕ್ಯಾಂಟೀನ್ ಬಳಿ ಬಂದಾಗ ಕ್ಯಾಂಟೀನ್ ನ ಒಳಗೆ ಹೋಗುವ  ಪ್ಯಾಸೆಜ್ ನಲ್ಲಿ  ಪಿರ್ಯಾದಿದಾರರ ಪರಿಚಯದ ನಾಗೇಶ್ ಎಂಬವನು ನಿಂತುಕೊಂಡಿದ್ದು,  ಪಿರ್ಯಾದಿದಾರರು ಆತನನ್ನು ಸ್ವಲ್ಪ ಬದಿಗೆ ಹೋಗುವಂತೆ ತಿಳಿಸಿದಾಗ ಆತನು ನಿನಗೆ ಕಣ್ಣು ಕಾಣುದಿಲ್ಲವಾ ಎಂದು ಹೇಳಿದಾಗ ಪಿರ್ಯಾದಿದಾರರು  ಏನು ಎಂದು ಕೇಳಿದಾಗ  ಆಗ ಆತನು ಮಾರುತಿ ಬಿದ್ದಿರುವುದು ನಿನ್ನ ಕಣ್ಣಿಗೆ  ಕಾಣುವುದಿಲ್ಲವಾ? ಎಂದು ಕೇಳಿದನು. ಆಗ ಪಿರ್ಯಾದಿದಾರರು   ಅದರಲ್ಲಿ ಏನು ಆಗಲಿಕ್ಕೆ ಇದೆ ಎಂದು ಹೇಳಿ ಆತನಿಗೆ ಕ್ಯಾಂಟಿನ್ ನಿಂದ ಹೊಸ ಮಾರುತಿ ತೆಗೆದುಕೊಟ್ಟಿದ್ದು, ಆಗ ಆತನು ಪಿರ್ಯಾದಿದಾರರನ್ನುದ್ದೇಶಿಸಿ ನಿನ್ನನ್ನು ತುಂಬಾ ದಿವಸದಿಂದ ನೋಡುತ್ತಿದ್ದೇನೆ ನಿನ್ನದು ಭಾರಿ ನಡೆಯುತ್ತದೆ ಎಂದು ಹೇಳಿದನು ಆಗ ಪಿರ್ಯಾದಿದಾರರು ಏನು ನಡೆಯುತ್ತದೆ ಎಂದು ಕೇಳಿದಾಗ ನಾಗೇಶ್ ನು ಪಿರ್ಯಾದಿದಾರರ ಟೀ ಶರ್ಟ್ ನ ಕಾಲರ್ ಗೆ ಕೈ ಹಾಕಿ ಎಳೆದನು . ಆಗ ಪಿರ್ಯಾದಿದಾರರು ಆತನ ಕೈಯನ್ನು  ತಪ್ಪಿಸಿಕೊಂಡು ಹೊರಗೆ ಬಂದಾಗ ಆ ಸಮಯ ಅಲ್ಲಿಯೇ ಇದ್ದ ನಾಗೇಶ್ ನ ಅಪ್ಪ ರಘು, ತಮ್ಮಂದಿರಾದ ರಾಜ್ ಶೇಖರ್ @ ಬಾಬಿ , ಚಂದ್ರಶೇಖರ್ @ಚಂದು ರವರು ಏಕಾಏಕಿಯಾಗಿ ಪಿರ್ಯಾದಿದಾರರ ಬಳಿ ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹಾಗೂ ತಲೆಗೆ ಹೊಡೆದರು. ಆ ಸಮಯ ನಾಗೇಶ್ ನು ಆತನ ಕೈಯಲ್ಲಿದ್ದ ರಾಡ್ ನಿಂದ ಪಿರ್ಯಾದಿದಾರರಿಗೆ ಹೊಡೆಯಲು ಬಂದಾಗ ಪಿರ್ಯಾದಿದಾರರು ಬಲ ಕೈಯನ್ನು ಮುಂದಕ್ಕೆ ಚಾಚಿದ್ದು ಆ ಸಮಯ ರಾಡ್ ನ ಪೆಟ್ಟು ಪಿರ್ಯಾದಿದಾರರ ಬಲ  ಕೋಲು ಕೈಗೆ ಬಿದ್ದಿರುತ್ತದೆ . ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಪಿರ್ಯಾದಿದಾರರ ಕೆಲಸದವ ಭವಿಷ್ ರವರು ಬಂದು ಹಲ್ಲೆ ಮಾಡುವುದನ್ನು ತಡೆದಿರುತ್ತಾರೆ . ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 60/2022 ಕಲಂ:  341 , 323, 324, ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಲೋಕೇಶ್ ಪ್ರಾಯ: 42 ವರ್ಷ  ತಂದೆ: ಚನಿಯಪ್ಪ ಗೌಡ ವಾಸ: ಪಲ್ಲೆಗುಂಡಿ ಮನೆ, ಅಮರಪಡ್ನೂರು ಗ್ರಾಮ, ಸುಳ್ಯ ತಾಲೂಕು  ರವರ ತಂದೆ ಚನಿಯಪ್ಪ ಗೌಡರವರಿಗೆ 75 ವರ್ಷ  ಪ್ರಾಯವಾಗಿದ್ದು.   ದಿನಾಂಕ; 10-07-2022 ರಂದು  ಚನಿಯಪ್ಪ ಗೌಡರವರು ಬೆಳಿಗ್ಗೆ 7.30 ಗಂಟೆಯ ವೇಳೆಗೆ  ಅವರ  ಮನೆಯಿಂದ  ಹೊರಗೆ ಹೋಗಿದ್ದು ಪಿರ್ಯಾದಿದಾರರು ಮನೆಯಲ್ಲಿಯೇ ಇದ್ದರು. ಸುಮಾರು 8.00 ಗಂಟೆಯ ವೇಳೆಗೆ ಚಿಕ್ಕಪ್ಪನ ಮಗ ಭವಾನಿಶಂಕರ ಎಂಬಾತನು  ಪಿರ್ಯಾದಿದಾರರಿಗೆ ಫೋನ್‌ಕರೆ ಮಾಡಿ ನಿನ್ನ ತಂದೆ  ಚನಿಯಪ್ಪ ಗೌಡ ರವರು ಚೊಕ್ಕಾಡಿ ಪೇಟೆಯಲ್ಲಿ ರಸ್ತೆ ಬದಿಯಲ್ಲಿ ಬಿದ್ದುಕೊಂಡಿದ್ದಾರೆ ಅವರ ಬಾಯಿಯಿಂದ ನೊರೆ ಬರುತ್ತಿದೆ ನಾನು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ನೀನು ಅಲ್ಲಿಗೆ ಬಾ ಎಂದು ಹೇಳಿದಂತೆ ಪಿರ್ಯಾದಿದಾರರು  ಕೂಡಲೇ ಮನೆಯಿಂದ ಹೊರಟು ಸುಳ್ಯ ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿಗೆ ಚನಿಯಪ್ಪ ಗೌಡರನ್ನು ಭವಾನಿಶಂಕರನು ಕರೆದುಕೊಂಡು ಬಂದಿದ್ದು ವೈದ್ಯರು ಅವರನ್ನು  ಪರೀಕ್ಷಿಸಿ ಮೃತ್ಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ ಯುಡಿಆರ್ ನಂ 21/2022  ಕಲಂ 174 ಸಿಆರ್ ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 11-07-2022 11:22 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080