ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಜೀವನ್ ಕುಮಾರ್  , ಪ್ರಾಯ: 26 ವರ್ಷ, ತಂದೆ: ರವಿಕುಮಾರ್ ವಾಸ:  ಡೋರ್ ನಂಬ್ರ 42, 9 ನೇ ಕ್ರಾಸ್, ಲಕ್ಷ್ಮಣ ನಗರ, ಸುಂಕದಕಟ್ಟೆ, ಬೆಂಗಳೂರು ರವರು ದಿನಾಂಕ:10-09-2021 ರಂದು ಅವರ ತಂದೆ ರವಿ ಕುಮಾರ್, ಪತ್ನಿ ಮೇಘನಾ, ಮಗಳು ಭಾನವಿ, ತಮ್ಮ ರೋಹಿತ್ ಕುಮಾರ್  ರವರ ಜೊತೆಗೆ ಅವರ ತಂದೆ ಬಾಬ್ತು ಕೆಎ 04 ಎಂ ಆರ್ 0441 ಮಹೀಂದ್ರ ಟಿಯುವಿ ವಾಹನವನ್ನು ಚಲಾಯಿಸಿಕೊಂಡು ಹೊರಟು ಧರ್ಮಸ್ಥಳ, ಸೌತಡ್ಕ ಹೋಗಿ ಕುಕ್ಕೇ ಸುಬ್ರಹ್ಮಣ್ಯ ದೇವಸ್ತಾನಕ್ಕೆ  ಬಂದು ದರ್ಶನ ಮುಗಿಸಿ ವಾಪಾಸು ಬೆಂಗಳೂರಿಗೆ ಹೋಗುತ್ತಿದ್ದಾಗ ಸುಬ್ರಹ್ಮಣ್ಯದಿಂದ ಸುಮಾರು 4 ಕಿಮೀ ದೂರದಲ್ಲಿ ಕುಲ್ಕುಂದ ಎಂಬಲ್ಲಿ ತಲುಪಿದಾಗ  ಎದುರುಗಡೆಯಿಂದ ಅಂದರೆ ಧರ್ಮಸ್ಥಳ ಕಡೆಯಿಂದ  ತಿರುವು ರಸ್ತೆಯಲ್ಲಿ ಒಂದು  ಕಾರನ್ನು  ಅದರ ಚಾಲಕನು  ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ  ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಬಲ ಬದಿ ಸಂಪೂರ್ಣ ಜಖಂ ಗೊಂಡಿರುತ್ತದೆ. ಹಾಗೂ ಡಿಕ್ಕಿ ಹೊಡೆದ ಕಾರು ಕೂಡಾ ಜಖಂ ಗೊಂಡಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ : 63-2021 ಕಲಂ: 279 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಮೊಹಮ್ಮದ್‌ ಹನೀಪ್‌ ಪ್ರಾಯ 19 ವರ್ಷ ತಂದೆ. ದಿ: ಇಸುಬು ಬ್ಯಾರಿ,ವಾಸ:  ಕಾಯರ್‌ ಪಾಡಿ ಮನೆ,. ಇಳಂತಿಲ ಗ್ರಾಮ  ಬೆಳ್ತಂಗಡಿ ತಾಲೂಕು. ರವರು ನೀಡಿದ ದೂರಿನಂತೆ ದಿನಾಂಕ: 09-09-2021 ರಂದು ರಾತ್ರಿ 10.00ಗಂಟೆಯಿಂದ  ದಿನಾಂಕ: 10-09-2021ರಂದು ಬೆಳಿಗ್ಗೆ 06.00ಗಂಟೆಯ ಮದ್ಯದ ಅವಧಿಯಲ್ಲಿ  ಬೆಳ್ತಂಗಡಿ ತಾಲೂಕು  ಇಳಂತಿಲ ಗ್ರಾಮದ  ಕಾಯರ್‌ಪಾಡಿ ಎಂಬಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಹಿಂಬಾಗ ಏಣಿ ಇಟ್ಟು ಮನೆಯ ಮೇಲೆ ಬಂದು ಅಡುಗೆ ಕೋಣೆಯ ಮೇಲ್ಚಾವಣಿಗೆ ಹಾಕಲಾದ ಹಂಚನ್ನು ತೆಗೆದು ಮನೆಯೊಳಗೆ ಪ್ರವೇಶಿಸಿ  ಮನೆಯೊಳಗೆ ಗೋದ್ರೆಜ್‌ನಲ್ಲಿರಿಸಿದ್ದ ಸುಮಾರು 12 ಗ್ರಾಂ ತೂಕದ  ಕಿವಿಯೊಲೆ ಹಾಗೂ ಬಾವನ ಬಾಬ್ತು Tishot  ಕಂಪೆನಿಯ ವಾಚ್‌ ಹಾಗೂ ರೂ. 5000/-  ನಗದನ್ನು ಕಳವು ಮಾಡಿಕೊಂಡು ಹೊಗಿದ್ದು ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ . 40,000 ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 86/2021   ಕಲಂ. 457 380  IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹರೀಶ್ ಕೆ  , ಪ್ರಾಯ: 40 ವರ್ಷ, ತಂದೆ: ದಿ|| ಪರಮೇಶ್ವರ ಗೌಡ,    ವಾಸ: ಕೋಡುಕಜೆ ಮನೆ ,ಗುತ್ತಿಗಾರು ಗ್ರಾಮ ಸುಳ್ಯ ತಾಲೂಕು .ದ.ಕ ಜಿಲ್ಲೆ  ರವರು ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಕೋಡುಕಜೆ ಮನೆ ಎಂಬಲ್ಲಿ ತಾಯಿ ಕೆಂಚಮ್ಮ, ತಮ್ಮಂದಿರಾದ ದುರ್ಗಾದಾಸ್ ಮತ್ತು ವಿಶ್ವನಾಥರೊಂದಿಗೆ ವಾಸವಾಗಿದ್ದು, ದುರ್ಗಾದಾಸನು ಆತನ 2 ನೇ ಪತ್ನಿ ಮತ್ತು 3 ಹೆಣ್ಣುಮಕ್ಕಳೊಂದಿಗೆ ಪ್ರತ್ಯೇಕವಾಗಿ ಅಡುಗೆ ಮಾಡಿಕೊಂಡು ವಾಸವಾಗಿದ್ದನು. ದಿನಾಂಕ: 09-09-2021 ರಂದು ರಾತ್ರಿ ಸುಮಾರು 10:00 ಗಂಟೆಗೆ ಪಿರ್ಯಾದಿದಾರರ ತಮ್ಮ ದುರ್ಗಾದಾಸನು ವಿಪರೀತ ಅಮಲು ಪದಾರ್ಥ ಸೇವಿಸಿ ರೂಮಿನೊಳಗೆ ಒಬ್ಬರೇ ಮಲಗಿದ್ದವರು ದಿನಾಂಕ: 10.09.2021 ರಂದು ಬೆಳಿಗ್ಗೆ 07:00 ಗಂಟೆಯಾದರೂ ಏಳದೇ ಇರುವುದನ್ನು ನೋಡಿ ಪಿರ್ಯಾದಿದಾರರು ಮತ್ತು ಅವರ ತಾಯಿ ಕಿಟಕಿಯಿಂದ ನೋಡಲಾಗಿ ದುರ್ಗಾದಾಸನು ರೂಮಿನೊಳಗಿದ್ದ ಫ್ಯಾನಿಗೆ ಬಟ್ಟೆಯನ್ನು ಬಿಗಿದು ಅದರ ಮತ್ತೊಂದು ತುದಿಯಿಂದ ಕುತ್ತಿಗೆಗೆ ಬಿಗಿದುಕೊಂಡು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಮೃತ ದುರ್ಗಾದಾಸನು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 09-09-2021 ರಂದು ರಾತ್ರಿ 10:00 ಗಂಟೆಯಿಂದ ಈ ದಿನ ದಿನಾಂಕ: 10-09-2021 ರಂದು ಬೆಳಿಗ್ಗೆ 07:00 ಗಂಟೆಯ ಮದ್ಯೆ ಕುತ್ತಿಗೆಗೆ ನೇಣುಬಿಗಿದುಕೊಂಡು ಮೃತಪಟ್ಟಿರಬಹುದಾಗಿದೆ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಯು.ಡಿ.ಆರ್ : 13-2021 ಕಲಂ: 174 ಸಿಆರ್ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 11-09-2021 10:40 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080