ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ಕುಸುಮಾವತಿ ಪ್ರಾಯ: 33 ವರ್ಷ, ಗಂಡ: ಜಾನ್ಸನ್ ಕೆ ವಿ ಪನ್ನೆ ಬೈಲು ಮನೆ, ಕಲ್ಲುಗುಂಡಿ ಪೋಸ್ಟ್,ಸಂಪಾಜೆ ಗ್ರಾಮ ಸುಳ್ಯ ತಾಲೂಕು ದ.ಕ ಜಿಲ್ಲೆ ರವರ ಚಿಕ್ಕಪ್ಪನ ಮಗನಾದ ರಂಜಿತನ ಜೊತೆಯಲ್ಲಿ ಅವನ ಬಾಬ್ತು ಮೋಟಾರ್ ಸೈಕಲ್ ನಂ ಕೆಎ 21 ಆರ್ 7507 ನೇದರಲ್ಲಿ ಮದ್ಯಾಹ್ನ 02:00 ಗಂಟೆಗೆ ಪಂಜ ದಿಂದ ಗುತ್ತಿಗಾರು ಕಡೆಗೆ ಸಂಚರಿಸುತ್ತಾ ಬಳ್ಳಕ್ಕ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಕೆಎ 01 ಎಂ 9275 ನೇ ಜೀಪಿನ ಚಾಲಕ ಇಬ್ರಾಹಿಂ ಎಂಬುವನು ತನ್ನ ಬಾಬ್ತು ಜೀಪನ್ನು ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದಿದಾರರ ತಮ್ಮ ರಂಜಿತನು ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ, ರಂಜಿತನ ಬಲಗಾಲಿನ ಕೊಲು ಕಾಲಿಗೆ ತೀವ್ರತರಹದ ಮುರಿತದ ಗಾಯವಾಗಿದ್ದು ಹಾಗೂ ಎಡ ಗೈ ಹಾಗೂ ತಲೆ ಭಾಗಕ್ಕೆ ಜಜ್ಜಿದ ರಕ್ತದ ಗಾಯವಾಗಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ  : 06-2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿನಯ್ ನಾಯ್ಕ  ಪ್ರಾಯ:32 ವರ್ಷ, ತಂದೆ: ಸುಂದರ ನಾಯ್ಕ, ವಾಸ: ಗಾಳಿಹಿತ್ಲು ಮನೆ,ವಿಟ್ಲ ಗ್ರಾಮ,ಬಂಟ್ವಾಳ ತಾಲೂಕು ರವರು ದಿನಾಂಕ:11.01.2022 ರಂದು ಮೋಟಾರ್ ಸೈಕಲ್ ನಂಬ್ರ ಕೆಎ 19 ಹೆಚ್ ಹೆಚ್ 3703 ನೇದರ  ಬೈಕ್ ನಲ್ಲಿ ಸುಬ್ರಹ್ಮಣ್ಯದಿಂದ ವಿಟ್ಲ ಕಡೆಗೆ ಹೋಗುತ್ತಿರುವ ಸಮಯ ಪುತ್ತೂರು ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ  12:50 ಗಂಟೆ ಸಮಯದಲ್ಲಿ ಕಡಬ ತಾಲೂಕು ಏನೇಕಲ್ಲು ಗ್ರಾಮದ ಬಾಲಾಡಿ ಎಂಬಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ  ಸಮಯ ಪಂಜ ದಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿರುವ ಕೆಎ 47 3432 ನೋಂದಣಿ ನಂಬ್ರದ ಮಿನಿ ಬಸ್ ವಾಹನದ ಚಾಲಕನು ಅಜಾಗರುಕತೆ ಮತ್ತು ನಿರ್ಲಕ್ಷತನದಿಂದ ತೀರಾ ರಸ್ತೆಯ ಬಲದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ಮೋಟಾರ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿಯ ಬಲಕಾಲಿನ ಮೋಣಕಾಲಿನ ಮಂಡಿಗೆ ತೀವ್ರವಾದ ಗಾಯವಾಗಿದ್ದು ಹಾಗೂ ಬಲ ಕಾಲಿನ ಪಾದದ ಹಿಮ್ಮಡಿ ಮತ್ತು ಬೆರಳು ಗಳಿಗೆ ರಕ್ತದ ಗಾಯವಾಗಿರುತ್ತದೆ. ಈ ಬಗ್ಗೆ ಸುಬ್ರಹಣ್ಯ ಪೊಲೀಸ್ ಠಾಣೆ ಅ.ಕ್ರ ನಂಬ್ರ : 07-2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಂಕರ ನಾರಾಯಣ ಭಟ್ ಪ್ರಾಯ 55 ವರ್ಷ ತಂದೆ: ದಿ ತಿರುಮಲೇಶ್ವರ ಭಟ್   ವಾಸ:ಕೋಡಿ ಮಜಲು ಮನೆ ನರಿಕೊಂಬು ಗ್ರಾಮ ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 11-01-2022 ರಂದು ಬೆಳಿಗ್ಗೆ 05.00 ಗಂಟೆಗೆ ಪಿರ್ಯಾಧಿದಾರರ ಮನೆಯಲ್ಲಿನ ನಾಯಿ ಬೊಗಳಿದ್ದ ಸಮಯ ಮನೆಯಲ್ಲಿ ಪಿರ್ಯಾಧಿದಾರರು ಎದ್ದು ತೋಟಕ್ಕೆ ಟಾರ್ಚ್ ಲೈಟ್ ಹಿಡಿದುಕೊಂಡು ಹೋದಾಗ ಆರೋಪಿತರಾದ ಗುಣವತಿ ರವರು  ಅಕ್ರಮ ಪ್ರವೇಶಿಸಿ ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಸದ್ರಿ ತೋಟದಲ್ಲಿ ನೀರಾವರಿ ಸಲುವಾಗಿ ಅಳವಡಿಸಿದ ಸ್ಲಿಂಕ್ಲರ್ ಕುಟ್ಟಿಗಳನ್ನು ಹೊಡೆದು ತುಂಡರಿಸುತ್ತಿರುವುದು ಕಂಡು ಬಂದಿರುತ್ತದೆ.  ಪಿರ್ಯಾಧಿದಾರರು ಸಮೀಪಕ್ಕೆ ಹೋಗುತ್ತಿದ್ದಂತೆ  ಆರೋಪಿತಳು ಜೋರಾಗಿ ಇನ್ನು ಮುಂದೆ ಒಂದೇ ಒಂದು ಸ್ಲಿಂಕ್ಲರ್ ಕುಟ್ಟಿ ಇಡುವುದಿಲ್ಲ ಎಂಧು ಹೇಳುತ್ತಾ ತೋಟದಿಂದ ಅವರ ಮನೆಯ ಕಡೆಗೆ ಹೋಗಿರುತ್ತಾರೆ. ನಂತರ ಬೆಳಕು ಹರಿದ ನಂತರ ಪಿರ್ಯಾಧಿದಾರರು ಹೋಗಿ ನೋಡಲಾಗಿ ಸುಮಾರು 6-7  ಸ್ಲಿಂಕ್ಲರ್ ಕುಟ್ಟಿಗಳನ್ನು ಮುರಿದು ಹಾಕಿರುವುದು ಕಂಡು ಬರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 06/2022  ಕಲಂ: 447, 427, 506 ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಜೋಸ್ ಪ್ರಕಾಶ್  ಪ್ರಾಯ; 46  ವರ್ಷ  ತಂದೆ; ಎನ್ ಜೆ ಫಿಲಿಫ್ ವಾಸ; ನೆಲ್ಲಿವಿಳ ಮನೆ, ಕೋಡಿಂಬಾಳ ಗ್ರಾಮ ಕಡಬ ತಾಲೂಕು ಎಂಬವರು ವಿದ್ಯುತ್‌ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದು ಕಡಬ ಪೇಟೆಯಲ್ಲಿ ಜೆ.ಜೆ ಕಾಂಪ್ಲೇಕ್ಸ್ ಎಂಬ ವಾಣಿಜ್ಯ ಕಟ್ಟಡವನ್ನು ಹೊಂದಿದ್ದು ಸದ್ರಿ ಕಟ್ಟಡದ ಎರಡನೇ ಮಹಡಿಯಲ್ಲಿರುವ ರೂ.ನಂ:13 ಸಂಖ್ಯೆಯ ಕೋಣೆಯನ್ನು ಆರೋಪಿತನಾದ  ಅನೀಶ್‌ ಎಂಬಾತನಿಗೆ ಬಾಡಿಗೆಗಾಗಿ ದಿನಾಂಕ:22.10.2020 ರಂದು ಕರಾರು ಮುಖೇನಾ ತಿಂಗಳಿಗೆ 8000/- ಬಾಡಿಗೆಯಂತೆ ನಿಗದಿ ಮಾಡಿ ಬಾಡಿಗೆ ಕೋಣೆಯನ್ನು ನೀಡಿರುತ್ತಾರೆ ಸದ್ರಿ ಆರೋಪಿತನು 2021ನೇ ಜುಲೈ ತಿಂಗಳಿನಿಂದ ಬಾಡಿಗೆಯನ್ನು ನೀಡದೇ ಕೋಣೆಯನ್ನು ಖಾಲಿ ಮಾಡದೇ ಇದ್ದು ಪಿರ್ಯಾದುದಾರರು ಆತನಲ್ಲಿ ಬಾಡಿಗೆ ಕೋಣೆಯನ್ನು ಕರಾರಿನಂತೆ ಬಿಡುವಂತೆ ಕೇಳಿಕೊಂಡರು ಆತನು ಕೋಣೆಯನ್ನು ಖಾಲಿ ಮಾಡುವುದಿಲ್ಲ ನೀವು ಏನು ಮಾಡಿತ್ತೀರಾ ಮಾಡಿ ನಾನು ಮಾದ್ಯಮ ಪ್ರತಿನಿದಿ ಎಂದು ಹೇಳಿ ಬಾಡಿಗೆ ಕೋಣೆಯನ್ನು ಖಾಲಿ ಮಾಡಿ ಎಂದು ಹೇಳಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ ದಿನಾಂಕ:10.01.2022 ರಂದು ರಾತ್ರಿ 02.15 ಗಂಟೆಗೆ ಏಕಾಏಕಿ ಆರೋಪಿತನು  ಬಾಡಿಗೆ ಕೋಣೆಯನ್ನು ಖಾಲಿ ಮಾಡಿ ಸದ್ರಿ ಕೋಣೆಯಲ್ಲಿ ಗೋಡೆಗೆ ಅಳವಡಿಸಿದ್ದ ಎಲೆಕ್ಟ್ರಾನಿಕ್‌ ಸ್ವಿಚ್‌‌ ಬೋರ್ಡ್, ಹಾಗೂ ವಯರ್‌,ಮತ್ತು ಗೋಡೆಗಳಿಗೆ ಹಾನಿಯನ್ನುಂಟು ಮಾಡಿ ಕೋಣೆಯನ್ನು ಖಾಲಿ ಮಾಡಿರುತ್ತಾನೆ. ರಾತ್ರಿ ಮೊಬೈಲ್‌ ಕಾಲ್‌ ಮಾಡಿದ್ದು ಆದರೆ ಪಿರ್ಯಾದುದಾರರು ರಿಸೀವ್‌ ಮಾಡಿರುವುದಿಲ್ಲ ಮರುದಿನ ಬೆಳಗ್ಗೆ ಸುಮಾರು 10.00 ಗಂಟೆಗೆ ಪಿರ್ಯಾದುದಾರರು ಆರೋಪಿತನಿಗೆ ಮೊಬೈಲ್‌ ಕಾಲ್ ಮಾಡಿದಾಗ ಆರೋಪಿತನು ಬಾಡಿಗೆ ಕೋಣೆ ಖಾಲಿ ಮಾಡಿರುವುದಾಗಿ ತಿಳಿಸಿದ್ದು ನಂತರ ಪಿರ್ಯಾದುದಾರರು ಬಾಡಿಗೆ ಕೋಣೆಯ ಸ್ವಿಚ್‌ ಬೋರ್ಡ್ ಮತ್ತು ಪೈಂಟಿಗ್‌ ಹಾಗೂ ಗೋಡೆಯನ್ನು ಈ ಮೊದಲು ಇದ್ದ ಹಾಗೆ ಮಾಡಿಕೊಡಬೇಕೆಂದು ಹೇಳಿದಾಗ ಆತನು ಅವಾಚ್ಯವಾಗಿ ನಿಂದಿಸಿ ಇಲ್ಲಿ ವಾಸಮಾಡಲು ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುತ್ತಾನೆ ಹಾಗೂ ನಾನು ಮಾದ್ಯಮ ಪ್ರತಿನಿದಿ ನಿಮ್ಮನ್ನು ಮಾದ್ಯಮದಲ್ಲಿ ಸುಳ್ಳು ನ್ಯೂಸ್‌ ಮಾಡಿ ಮಾನ ಹಾನಿ ಮಾಡುತ್ತೇನೆಂದು ಹೇಳಿ ಬೆದರಿಕೆ ಹಾಕಿರುತ್ತಾನೆ ಹಾಗೂ ಪಿರ್ಯಾದುದಾರರು ಈ ಬಗ್ಗೆ ಕಡಬ ಠಾಣೆಗೆ ದೂರು ನೀಡುವರೇ ಬೆಳಗ್ಗೆ ಬರುತ್ತಿರುವಾಗ ಸದ್ರಿ ಆಸಾಮಿಯು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಪುನ:ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾನೆ ಆರೋಪಿತನು ಪಿರ್ಯಾದುದಾರರ ಬಾಬ್ತು ಕಟ್ಟಡದ ಕೋಣೆಯ ಎಲೆಕ್ಟ್ರಾನಿಕ್ ಸ್ವೀಚ್‌ ಬೋಡ್ಸ್ ಹಾಗೂ ಗೋಡೆಯ ಬಣ್ಣ ಹಾಗೂ ಕೊಣೆಯ ಶಟರ್‌ಗಳನ್ನು ಹಾಳು ಮಾಡಿ ಸುಮಾರು 50,000/-ನಷ್ಠ ಉಂಟು ಆಗಿರುತ್ತದೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 03/2022 ಕಲಂ. 506, 504, 427, 341 IPC ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಇತರೆ ಪ್ರಕರಣ: 1

 

ದ.ಕ ಮಹಿಳಾ ಪೊಲೀಸ್ ಠಾಣೆ : ದ.ಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕಲಂ: 354,504, 506 IPC &  8 Pocso Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಜಿತ್.ಎಸ್, 30 ವರ್ಷ, ತಂದೆ: ಎ.ಎಂ ಶ್ರೀಧರನ್ ಕಾಣಿ, ವಾಸ: ತಡತ್ತರಿಕತ್ತು ವೀಡು. ಕೂರನಪಾಂಞಕಾಲ, ಮೀನಾಂಘಲ್ ಅಂಚೆ. ವಿದುರ ಗ್ರಾಮ, ತೋಳಿಕೋಡು ವಯ. ನಡುಮಾಂಙಾಡ್ ತಾಲೂಕು. ತಿರುವನಂತಪುರ ಜಿಲ್ಲೆ, ಕೇರಳ ರವರು ಕಡಬ ತಾಲೂಕು ಕುದ್ಮಾರು ಗ್ರಾಮದ ಕುದ್ಮಾರು 10 ನೇ ಕಲ್ಲು ಎಂಬಲ್ಲಿ ನಾರ್ಣಪ್ಪ ಗೌಡ ಎಂಬವರ ಬಾಬ್ತು ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಇದ್ದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವ ಕೇರಳ ಮೂಲದ ಎ.ಎಂ. ಶ್ರೀಧರನ್ ಕಾಣಿ, ಪ್ರಾಯ 55 ವರ್ಷ, ತಂದೆ: ದಿ|| ಈಚನ್ ಕಾಣಿ ಎಂಬವರು ದಿನಾಂಕ 10-01-2022 ರಂದು ಅಪರಾಹ್ನ 2-00 ಗಂಟೆಗೆ ರಬ್ಬರ್ ಶೀಟ್ ಮಾಡಲು ಉಪಯೋಗಿಸುವ ಏಸಿಡ್ ನ್ನು ಸೇವಿಸಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದವರನ್ನು ಜೊತೆಗೆ ಇದ್ದ ರೆಝಿ ಆರ್ ಸೋಮರಾಜ್ ರವರು ಸ್ಥಳೀಯರಿಗೆ ಮಾಹಿತಿ ನೀಡಿ ಸ್ಥಳೀಯರು ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರು ಶ್ರೀಧರನ್ ಕಾಣಿಯವರನ್ನು ಪರೀಕ್ಷೆ ನಡೆಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದಂತೆ ಅಂಬುಲೆನ್ಸ್ ವಾಹನಕ್ಕೆ ಸ್ಥಳಾಂತರಿಸುವ ತಯಾರಿಯಲ್ಲಿರುವ ವೇಳೆ 2-45 ಗಂಟೆಗೆ ಶ್ರೀಧರನ್ ಕಾಣಿಯವರು ಮೃತಪಟ್ಟಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯು.ಡಿ.ಆರ್ 02/2022  ಕಲಂ 174 ಸಿಆರ್ ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 12-01-2022 12:31 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080