ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭವಾನಿ ಶಂಕರ್, ಪ್ರಾಯ 21 ವರ್ಷ, ತಂದೆ: ಶ್ರೀಧರ ಗೌಡ, ವಾಸ: ಬೊಳ್ಳಾರು ಮಜಲು ಮನೆ, ಕಣಿಯೂರು ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಾದ ಭವಾನಿ ಶಂಕರ್, ಪ್ರಾಯ 21 ವರ್ಷ ತಂದೆ. ಶ್ರೀಧರ ಗೌಡ, ವಾಸ: ಬೊಳ್ಳಾರು ಮಜಲು ಮನೆ, ಕಣಿಯೂರು ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೋಂದಣಿ ಅಂಚೆಯ ಮೂಲಕ ಕಳುಹಿಸಿದ ಲಿಖಿತ ಪಿರ್ಯಾದಿಯನ್ನು ಸ್ವೀಕರಿಸಿಕೊಂಡು ಪರಿಶೀಲಿಸಿದಾಗ ಸಾರಾಂಶವೇನೇಂದರೆ, ದಿನಾಂಕ 30-01-2022 ರಂದು 23-30 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ವಿಜೇತ್ ಎಂಬವರು KA-70-H-8242ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿನಲ್ಲಿ ಬಾಲಕೃಷ್ಣ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಂದಾರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬಂದಾರು ಕಡೆಯಿಂದ ಬೊಳ್ಳಾರ ಮಜಲು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಪರಪ್ಪಾದೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಬೈಕಿನ ಹತೋಟಿ ತಪ್ಪಿ ಬಲ ಮಗ್ಗುಲಾಗಿ ಮುಗುಚಿ ಬಿದ್ದಾಗ, ಹಿಂಬದಿ ಸವಾರ ಬಾಲಕೃಷ್ಣರವರು ರಸ್ತೆಯ ಬದಿಯ ಕಣಿಗೆ ಎಸೆಯಲ್ಪಟ್ಟು ಬೆನ್ನಿಗೆ ಗಂಭೀರ ಗಾಯ, ಆರೋಪಿ ಸವಾರ ವಿಜೇತ್ ರವರಿಗೆ ಬಲ ಕೈಗೆ, ಎಡಕಾಲಿಗೆ ತರಚಿದ ಗಾಯಗಳಾಗಿ, ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಗಂಭೀರ ಗಾಯಗೊಂಡಿದ್ದ ಬಾಲಕೃಷ್ಣರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  27/2022 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವರ್ಷ, ತಂದೆ: ಐತ್ತ, ವಾಸ: ಬನತಳಿಕೆ ಮನೆ, ಕರಾಯ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು.ಎಂಬವರ ದೂರಿನಂತೆ ದಿನಾಂಕ 11-02-2022 ರಂದು 12-30 ಗಂಟೆಗೆ ಆರೋಪಿ ಅಟೋ ರಿಕ್ಷಾ ಚಾಲಕ ಕೃಷ್ಣಪ್ಪ ಎಂಬವರು KA-21-B-1049 ನೇ ನೋಂದಣಿ ನಂಬ್ರದ ಅಟೋ ರಿಕ್ಷಾವನ್ನು ಕಲ್ಲೇರಿ-ಶಿವಗೀರಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಶಿವಗೀರಿ ಕಡೆಯಿಂದ ಕಲ್ಲೇರಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಶಿವಗೀರಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಸಂಪೂರ್ಣ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಕಲ್ಲೇರಿ ಕಡೆಯಿಂದ ಶಿವಗೀರಿ ಬನತಳಿಕೆ ಮನೆ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ಬಾಬುರವರಿಗೆ ಅಪಘಾತವಾಗಿ, ಪಿರ್ಯಾದುದಾರರು ರಸ್ತೆಗೆ ಬಿದ್ದು ಬಲ ಕಾಲಿನ ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತಗಾಯವಾಗಿ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  28/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಿದನಂದಎ (೩೦) ತಂದೆ: ಶ್ರೀಧರ ಗೌಡ ವಾಸ: ಅಡಿಗೈ ಮನೆ, ಉಬರಡ್ಕ ಮಿತ್ತೂರು ಗ್ರಾಮ ಸುಳ್ಯತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ಅಣ್ಣ ಪ್ರಕಾಶ್ (32) ಎಂಬಾತನ್ನು ಆತನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ 21 ಕೆ 4634 ನೇದರಲ್ಲಿ ಆತನ ಮನೆಯಾದ ಸುಳ್ಯ ತಾಲೂಕು ಉಬರಡ್ಕ ಮಿತ್ತೂರಿನಿಂದ  ಸುಳ್ಯಕ್ಕೆ ಬರುವರೇ ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ಗ್ರಾಮದ ಕುತ್ತಮೊಟ್ಟೆ ಎಂಬಲ್ಲಿಗೆ ಸಮಯ ಸುಮಾರು ಬೆಳಿಗ್ಗೆ 06:15 ಗಂಟೆಗೆ ತಲುಪುತ್ತಿದ್ದಂತೆ ಎದುರಿನಿಂದ ಬಂದ ಅಂದರೆ ಸುಳ್ಯ ಕಡೆಯಿಂದ ಉಬರಡ್ಕ ಮಿತ್ತೂರು ಕಡೆಗೆ ಟ್ಯಾಕ್ಟರ್ ನಂಬ್ರ ಕೆಎ 21 ಟಿ 203 ನೇದರ ಚಾಲಕ ದೇವಿಪ್ರಸಾದ್ ಎಂಬಾತನು ಟ್ಯಾಕ್ಟರ್ ರನ್ನು ಅಜಾರೂಕತೆ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ಅಣ್ಣ ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಪ್ರಕಾಶ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಲಗೈ ಮದ್ಯದ ಬೆರಳು, ಬಲಕಾಲು ತೋಡೆ ಬಲಭುಜಕ್ಕೆ ರಕ್ತಗಾಯವಾದವನ್ನು ಪ್ರಕಾಶ್ ನ ಹಿಂಬದಿಯಿಂದ ಮೋಟಾರ್ ಸೈಕಲ್ ನ್ನು ಸವಾರಿಮಾಡಿಕೊಂಡು ಬರುತ್ತಿದ್ದ ಅಶ್ವತ್ ಎಂಬಾತನು ಉಪಚರಿಸಿ ನಂತರ ಪಿರ್ಯಾದುದಾರರಿಗೆ ಪೋನ್ ಮುಖಾಂತರ ತಿಳಿಸಿದಂತೆ ಪಿರ್ಯಾದುದಾರರು ಸದ್ರಿ ಸ್ಥಳಕ್ಕೆ ಹೋಗಿ ಪ್ರಕಾಶ್ ನನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ.ಕ್ರ 21/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

 • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಶ್ವೇತಾ (35) ಗಂಡ: ಪರಮೇಶ್ವರ ಮಂಜುನಾಥ, ವಾಸ: ಲಕ್ಷ್ಮಿ  ನಿವಾಸ, ಅಡ್ಯರಗುರಿ, ಅಂಡಿಂಜೆ ಗ್ರಾಮ, ಬೆಳ್ತಂಗಡಿ ತಾಲೂಕು,ಎಂಬವರ ದೂರಿನಂತೆ ದಿನಾಂಕ 10.2.2022 ರಂದು ಫಿರ್ಯಾದಿದಾರರು ತನ್ನ ಬಾಬ್ತು ಸ್ಕೂಟಿಯಲ್ಲಿ ಕೊಕ್ರಾಡಿ-ಸಾವ್ಯ ರಸ್ತೆಯಲ್ಲಿ ಹೋಗುತ್ತಿರುವ ಸಮಯ ಸಂಜೆ ಸುಮಾರು 5:15 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ಅಯ್ಯಪ್ಪ ಮಂದಿರದ ಬಳಿ ಆಪಾದಿತನು ಫಿರ್ಯಾದಿದಾರರರ ಸ್ಕೂಟಿಯನ್ನು ಅಕ್ರಮವಾಗಿ ತಡೆದು ನಿಲ್ಲಿಸಿ 15ನೇ ಹಣಕಾಸು ಯೋಜನೆಯಡಿ ಮಂಜೂರಾದ ರಸ್ತೆಯ ಕಾಮಗಾರಿಯ  ಜಮೀನಿನ ವಿವಾದದ ಬಗ್ಗೆ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ಮಾತಿನ ಗಲಾಟೆ ಮಾಡುತ್ತಿದ್ದ ಸಮಯ ಅದೇ ರಸ್ತೆಯಾಗಿ ನಡೆದುಕೊಂಡು ಬರುತ್ತಿದ್ದ ಶ್ರೀಮತಿ ಸರೋಜಾ ಮತ್ತು ಶಶಿಧರ  ಎಂಬುವವರನ್ನು ಕಂಡು ನೀನು ಇವತ್ತಲ್ಲ ನಾಳೆಯಾದರೂ ಸಿಗುತ್ತೀಯ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 10-2022 ಕಲಂ :341,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ: 11.02.2022 ರಂದು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 30/2022 ಕಲಂ:323.498 ಎ 506 34 ಭಾದಂಸಂ  ಮತ್ತು ಕಲಂ 3 ವರದಕ್ಷಿಣೆ ನಿಷೇದ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-02-2022 12:24 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080