ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

 • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಚ್ಚಿದಾನಂದ ಪ್ರಾಯ 31 ವರ್ಷ ತಂದೆ: ದಿ| ಶಾಂತಪ್ಪ ಪೂಜಾರಿ ವಾಸ: ಕೊಪ್ಪರಿಗೆ ಮನೆ, ನೇರಳಕಟ್ಟೆ ಅಂಚೆ ನೆಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 09-04-2022 ರಂದು ಪಿರ್ಯಾದುದಾರರಾದ ಸಚ್ಚಿದಾನಂದರವರು ಅವರ ಬಾಬ್ತು ಹೊಂಡಾ ಆ್ಯಕ್ಟೀವ್ ನಂಬ್ರ ಕೆಎ-19-ಇಪಿ-0188 ನೇದರಲ್ಲಿ ಅವರ ಖಾಸಗಿ ಕಾರ್ಯಕ್ರಮದ ಬಗ್ಗೆ ಮನೆಯಿಂದ ಮಾಣಿಗೆ ಹೋಗುವರೇ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಣಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ರಾತ್ರಿ ಸುಮಾರು 8.30 ಗಂಟೆಗೆ ಬಂಟ್ವಾಳ ತಾಲೂಕು ನೆಟ್ಲ ಮುಡ್ನೂರು ಗ್ರಾಮದ ಪರ್ಲೊಟ್ಟು ಎಂಬಲ್ಲಿಗೆ ತಲುಪಿದಾಗ ಜಯಗೌಡರವರಿಗೆ  ಯಾವುದೊ ಒಂದು ಅಪರಿಚಿತ ವಾಹನದ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಜಯಗೌಡರವರಿಗೆ ಡಿಕ್ಕಿ ಹೊಡೆದು ಮುಖದ ಬಲ ಭಾಗಕ್ಕೆ  ತೀವ್ರ ತರಹದ ಗುದ್ದಿದ, ಹಾಗೂ ರಕ್ತ ಗಾಯ, ಮತ್ತು  ಬಲ ಕಾಲಿಗೆ ತೀವ್ರ ತರಹದ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 10-04-2022 ರಂದು ಸುಮಾರು  20.30 ಗಂಟೆಗೆ  ಮೃತಪಟ್ಟಿರುವುದಾಗಿದೆ. ಅಪಘಾತದ ಬಳಿಕ ಅಪಘಾತ ಪಡಿಸಿದ ಅಪರಿಚಿತ ವಾಹನ ಚಾಲಕನು ಗಾಯಳುವನ್ನು ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗದೇ ಅಲ್ಲದೇ ಠಾಣೆಗೆ ಮಾಹಿತಿ ನೀಡದೇ ಅಪರಿಚಿತ ವಾಹನದೊಂದಿಗೆ ಪರಾರಿಯಾಗಿರುತ್ತಾನೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 61/2022 ಕಲಂ:279 ,304ಎ ಬಾಧಂಸಂ  ಮತ್ತು ಕಲಂ 134 (ಎ)(ಬಿ) ಐಎಮ್ ವಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗೋಕುಲ್ ಕೆ,ಪ್ರಾಯ 22 ವರ್ಷ, ತಂದೆ: ಕೆ. ಶಿವರಾಮ ನಾಯ್ಕ, ವಾಸ: ಶ್ರೀ ನಂದ ಗೋಕುಲ ಮನೆ, ಕಬಕ ಗ್ರಾಮ,  ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ  10-04-2022 ರಂದು 19-20 ಗಂಟೆಗೆ ಹೆಸರು ತಿಳಿದು ಬಾರದ ಆರೋಪಿ ಪಿಕಪ್ ವಾಹನ ಚಾಲಕ  KA-21-A-6271 ನೇ ನೋಂದಣಿ ನಂಬ್ರದ  ಪಿಕಪ್ ವಾಹನವನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಕಬಕ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ತಿರುವು ರಸ್ತೆಯಲ್ಲಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ರಾಂಗ್ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಗೋಕುಲ್ ಕೆ ಎಂಬವರು ಕಬಕ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ KA-21-EB-6704 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆ ಬದಿಯ ಚರಂಡಿಗೆ ಬಿದ್ದು,  ಪಿರ್ಯಾದುದಾರರಿಗೆ ಬಲಭುಜಕ್ಕೆ, ಎಡಕೈಯ ಮೊಣಕೈಗೆ, ಎರಡೂ ಕಾಲುಗಳ ಮಣಿಗಂಟಿಗೆ ರಕ್ತಗಾಯ ಮತ್ತು ಎಡಕೈಯ ಕೋಲು ಕೈಗೆ ಗುದ್ದಿದ ನೋವಾಗಿದ್ದು, ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಅಪಘಾತದ ಬಳಿಕ ಆರೋಪಿ ಚಾಲಕ ಗಾಯಾಳುವನ್ನು ಚಿಕಿತ್ಸೆಗೆ ಬಗ್ಗೆ ಆಸ್ಪತ್ರೆಗೆ ದಾಖಲಿಸದೇ ಮತ್ತು ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  69/2022 ಕಲಂ: 279,337ಐಪಿಸಿ & ಕಲಂ: 134(A)& (B) IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಾಗೇಶ್ ಪ್ರಾಯ:24 ವರ್ಷ. ತಂದೆ:ಪುಟ್ಟಣ್ಣ   ವಾಸ:ಮರಕ್ಕಡ ಮನೆ, ಕೈಮನ   ಗ್ರಾಮ ,ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಆಳವ್ಸ್ ವಿದ್ಯಾಸಂಸ್ಥೆಯಲ್ಲಿ ವಾರ್ಡನ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 06-04-2022  ಸಂಜೆ 19-00 ಗಂಟೆಗೆ ಪಿರ್ಯಾದುದಾರರ ದೊಡ್ಡಪ್ಪನ ಮಗ ಕೃಷ್ಣಪ್ಪ  ಎಂಬುವರು ದೂರವಾಣಿ ಕರೆ ಮಾಡಿ ನಾನು ಕಾಣಿಯುರಿನಿಂದ ಕೆಲಸ ಮುಗಿಸಿಕೊಂಡು  ಮೋಹನ್ ಎಂಬುವರ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಮನೆಗೆ ಹೋಗುತ್ತಿರುವಾಗ   ಕಡಬ ತಾಲೂಕು ಚಾರ್ವಕ ಗ್ರಾಮದ ನೂಜಿ   ಎಂಬಲ್ಲಿಗೆ ಸಂಜೆ 5-30 ಗಂಟೆಗೆ ತಲುಪಿದಾಗ ನಮ್ಮ ಎದುರುಗಡೆಯಿಂದ ಹೋಗುತ್ತಿದ  ದ್ವೀಚಕ್ರ ವಾಹನ KA21EC1754  ನೇದಕ್ಕೆ ಎದುರಿನಿಂದ ಅಂದರೆ ಚಾರ್ವಕ ಕಡೆಯಿಂದ ಕಾಣಿಯುರು ಕಡೆಗೆ  ಆಟೋ ರಿಕ್ಷಾ KA-21-C-2207  ಅದರ ಚಾಲಕನು ತೀರ ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲಬದಿಗೆ ಬಂದು ದ್ವಿಚಕ್ರ ವಾಹನಕ್ಕೆ ಅಪಘಾತ ಉಂಟು ಮಾಡಿದ ಪರಿಣಾಮ ದ್ವಿಚಕ್ರ ವಾಹದ ಸವಾರರ ಸಮೇತ ರಸ್ತೆಗೆ ಬಿದಿದ್ದು. ನಂತರ ನಾವೂ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಪರಿಚಯದ ಸುಬ್ಬಲಕ್ಷೀ ಹಾಗೂ ರಕ್ಷಿತಾ ಎಂಬುವರಾಗಿದ್ದು ದ್ವಿಚಕ್ರ ಸವಾರೆ  ಸುಬ್ಬಲಕ್ಷೀ ಎಂಬುವರಿಗೆ ಬಲ ಕೈ ಹಾಗೂ ಕಾಲುಗಳಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿದ್ದು ಹಾಗೂ ಸಹಸವಾರೆ ರಕ್ಷಿತಾ ಎಂಬುವರಿಗೆ ಹೊಟ್ಟೆಗೆ ಕಾಲಿಗೆ ಗುದ್ದಿದ ಹಾಗೂ ತರಚಿದ ರಕ್ತ ಗಾಯವಾಗಿದ್ದವರನ್ನು  ಒಂದು ಖಾಸಗಿ ವಾಹನದಲ್ಲಿ ಆಸ್ವತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದಂತೆ ಪಿರ್ಯಾದಿಯವರು ಅಸ್ವತ್ರೆಯ ಬಗ್ಗೆ ತಿಳಿದುಕೊಂಡು ಪಿರ್ಯಾದಿಯು ಮಂಗಳೂರು ಫಾದರ್ ಮುಲ್ಲರ್ ಆಸ್ವತ್ರೆಗೆ  ಹೋಗಿ ಒಳರೋಗಿಯಾಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ ಪಿರ್ಯಾದಿಯ ತಂಗಿ ರಕ್ಷಿತಾಳ ಅರೈಕೆಯಲ್ಲಿ ಇದ್ದು.ಈ ಬಗ್ಗೆ ಕಡಬ ಠಾಣಾ ಅ.ಕ್ರ 334/2022 ಕಲಂ. .279 .337 IPC    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಧರ್ಮಸ್ಥಳ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಇಸ್ಮಾಯಿಲ್ ಪ್ರಾಯ;43 ವರ್ಷ ತಂದೆ; ಇಬ್ರಾಹಿಂ  ವಾಸ; ಮದ್ದಡ್ಕ ಅನಿಲ ಮನೆ ಕುವೆಟ್ಟು ಅಂಚೆ ಮತ್ತು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಮರದ ವ್ಯಾಪಾರಿಯಾಗಿದ್ದು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ದಿಡುಂಬಿ ಕರಿಯ ಗೌಡ ಜಾಗದಿಂದ ಮ್ಯಾಂಜಿಯಮ್ ಮರವನ್ನು ಖರೀದಿಸಿದ್ದು ದಿನಾಂಕ: 10-04-2022 ರಂದು ಸದ್ರಿ ಮರಗಳನ್ನು ಕಡಿದ ಸ್ಥಳದಿಂದ ಬೇರೆ ಸ್ಥಳಕ್ಕೆ ಸಾಗಿಸುವರೇ ಕೂಲಿ ಕೆಲಸಕ್ಕೆಂದು ತನ್ನ ಜೊತೆ ಹಮೀದ್, ಶಿಯಾಬ್, ರಾಜೇಶ ಎಂಬವರನ್ನು ಕರೆದುಕೊಂಡು ಬಂದಿದ್ದು ಸದ್ರಿ ಮರಗಳನ್ನು ಕ್ರೇನ್ ಮುಖಾಂತರ ಸ್ಥಳಾಂತರಿಸುವರೇ ತೊಡಗಿದ್ದು ಮಧ್ಯಾಹ್ನ 12.30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ನೋಡು ನೋಡುತ್ತಿದ್ದಂತೆ ಕ್ರೇನ್ ಚಾಲಕ ಇಬ್ರಾಹಿಂ ನು ತಾನು ಚಲಾಯಿಸುತ್ತಿದ್ದ ಕೆ ಎ 43 ಎಮ್ 0566  ಕ್ರೇನ್ ನ್ನು ಸಾಕಾಷ್ಟು ಜಾಗೂರೂಕತೆ ವಹಿಸದೆ ನಿರ್ಲಕ್ಷತನದಿಂದ ಕ್ರೇನ್ ನ ಕೊಕ್ಕೆಯನ್ನು ಒಮ್ಮೆಗೆ ಕೆಳಗೆ ಇಳಿಸಿದ ಪರಿಣಾಮ ಕ್ರೇನ್ ನ ಕೊಕ್ಕೆಯು ಹಮೀದ್ ನ ಕುತ್ತಿಗೆಯ ಭಾಗಕ್ಕೆ ತಾಗಿದ್ದು ಕ್ರೇನ್ ನ ಕೊಕ್ಕೆಯಲ್ಲಿದ್ದ ಮರವು ಹಮೀದ್ ನ ಬೆನ್ನಿಗೆ ಬಿದ್ದ ಪರಿಣಾಮ ಹಮೀದ್ ಗೆ ಗಂಭೀರ ಗಾಯ ಉಂಟಾಗಿದ್ದು ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರು ಉಜಿರೆ ಎಸ್ ಡಿ ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈಧ್ಯರು ಸೂಚಿಸಿದಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈಧ್ಯರು ಪರಿಕ್ಷೀಸಿ ತುರ್ತು ನಿಗಾ ಘಟಕ ದಲ್ಲಿ ದಾಖಲಿಸಿಕೊಂಡಿರುತ್ತಾರೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ 25/2022 ಕಲಂ: 287, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಶ್ವತ್ ಪುಂಜಾಲಕಟ್ಟೆ(36) ತಂದೆ: ಕೃಷ್ಣಪ್ಪ ಪೂಜಾರಿ ವಾಸ: ಅತ್ತಾಜೆ ಮನೆ ಪಿಲಾತಬೆಟ್ಟು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ಈ ದಿನ ದಿನಾಂಕ: 11.04.2022 ರಂದು ರಾತ್ರಿ 20.30 ಗಂಟೆಗೆ ಶ್ರೀರಾಮ ಭಜನಾ ಮಂದಿರದಲ್ಲಿ ರಾಮ ನವಮಿಗೆ ಅಳವಡಿಸಿದ್ದ ಕೇಸರಿ ಬಂಟಿಂಗ್ಸ್ ತೆಗೆಯುತ್ತಿದ್ದ ಸಮಯದಲ್ಲಿ ರಾಷ್ಟ್ರಿಯ ಹೆದ್ದಾರಿ ನಂಬ್ರ 234 ರಲ್ಲಿ ಪ್ರಗತಿ ಹಾರ್ಡ್‌ ವೇರ್ ಅಂಗಡಿಯ ಮುಂಬಾಗದಲ್ಲಿ ಕೆಎ 21 ಎನ್ 8448 ನೇ ಕಾರೊಂದನ್ನು ಅದರ ಚಾಲಕ  ಬಂಟ್ವಾಳದ ಕಡೆಯಿಂದ ಬೆಳ್ತಂಗಡಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ ಎದುರಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಬಂಟ್ವಾಳದ ಕಡೆಗೆ ಹೋಗುತ್ತಿರುವ ದ್ವೀಚಕ್ರ ವಾಹನಗಳಾದ ಕೆಎ 70 ಹೆಚ್ 9472 ಮತ್ತು ಕೆಎ 19 ಇಎಮ್ 5221 ನೇ ಎರಡು ಮೋಟಾರ್ ಸೈಕಲ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ಸವಾರರುಗಳು  ರಸ್ತೆಗೆ ಬಿದ್ದ ಪರಿಣಾಮ ಮೋಟಾರ್ ಸೈಕಲ್ ಸವಾರರುಗಳಿಗೆ ಗಾಯಗಳಾಗಿದ್ದು ಪಿರ್ಯಾದಿದಾರರು ಮತ್ತು ಇತರರು ಸೇರಿ ಉಪಚರಿಸಿ 108 ಅಂಬ್ಯೂಲೇನ್ಸ್ ನಲ್ಲಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 23/2022 ಕಲಂ: 279, 337 ಐಪಿಸಿ ಮತ್ತು 185 ಐಎಮ್ ವಿ ಕಾಯ್ದೆ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಿಮ್ಮಪ್ಪ ಪೂಜಾರಿ, ಪ್ರಾಯ: 54 ವರ್ಷ, ತಂದೆ: ಮಂಗುರ ಪೂಜಾರಿ, ವಾಸ: ಕುತ್ರೋಟ್ಟು  ಮನೆ, ನಡ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರು ಹಾಗೂ ಅವರ ಮಕ್ಕಳು ದಿನಾಂಕ: 08-04-2022 ರಂದು ತಮ್ಮ ಕೆಲಸಕ್ಕೆ ಹೋದ ಬಳಿಕ ಪಿರ್ಯಾದಿದಾರರ ಪತ್ನಿ ಬೆಳಿಗ್ಗೆ 10-30 ಗಂಟೆಗೆ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಕುತ್ರೋಟ್ಟು ಎಂಬಲ್ಲಿನ ಪಿರ್ಯಾದಿದಾರರ ಮನೆಗೆ ಬೀಗ ಹಾಕಿ ಭದ್ರತೆ ಮಾಡಿಕೊಂಡು ಬೆಳ್ತಂಗಡಿ ಪೇಟೆಗೆ ಹೋಗಿ ವಾಪಸು ಮದ್ಯಾಹ್ನ 13-30 ಗಂಟೆಗೆ ಮನೆಗೆ ಬಂದು ಎದುರಿನ ಬೀಗ ತೆಗೆದಾಗ ಬಾಗಿಲು ಮುಂದಕ್ಕೆ ಹೋಗದೆ ಮನೆಯ ಒಳಗಿನಿಂದ ಚಿಲಕ ಹಾಕಿದ್ದು, ಕೂಡಲೇ ನೆರೆಕೆರೆಯವರ ಸಹಾಯದಿಂದ  ಒಳಗೆ ಹೋಗಿ ನೋಡಿದಾಗ ಮನೆಯ ಒಳಗೆ ಯಾರೂ ಇಲ್ಲದೇ ಇದ್ದು, ನೋಡಲಾಗಿ ಮೇಲ್ಚಾವಣಿಯ ಹಂಚು ತೆಗೆದಿರುವುದು ಕಂಡುಬಂದಿದ್ದು, ಬಳಿಕ ಕೊಣೆಯೊಳಗೆ ನೋಡಲಾಗಿ ಗಾಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು ಒಟ್ಟು 17.240 ಗ್ರಾಂ ತೂಕದ ಚಿನ್ನಾಭರಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ  55,000/- ರೂ ಆಗಬಹುದು. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ  25/2022   ಕಲಂ: 454,380 ಐ.ಪಿ,ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ:11-04-2022 ರಂದು ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 48/2022 ಕಲಂ:376(2)n ಭಾ ದಂ ಸಂ, Pocso 5(J)(ii),6 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರವೀಣ,ಪ್ರಾಯ: 27 ವರ್ಷ, ತಂದೆ: ದಿ||ವೆಂಕಪ್ಪ ನಾಯ್ಕಕರಿಂಕ ಮನೆ,ಅನಂತಾಡಿ ಗ್ರಾ,ಮ ಬಂಟ್ವಾಳ ತಾಲ್ಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:11-04-2022 ರಂದು ತನ್ನ ವೈಯಕ್ತಿಕ ಕೆಲಸಕ್ಕೆ ಮಾಣಿಯಿಂದ ಕೊಡಾಜೆ ಕಡೆಗೆ ಹೋಗುವಾಗ ಸಂಜೆ ಸಮಯ ಸುಮಾರು 6.00 ಗಂಟೆಗೆ ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಕೊಡಾಜೆಯ ನೌಫಾಲ್‌ ಟಿಂಬರ್ಸ್‌ ಎಂಬಲ್ಲಿ ತಲುಪಿದಾಗ ಅಲ್ಲಿ ಇದ್ದ ಸರಕಾರಿ ಗುಡ್ಡದ ಬಳಿ ಜೆಸಿಬಿ ಕೆಸಲದವರೊಬ್ಬರು ಏನೋ ಒಂದು ಕೊಳೆತ ದುರ್ವಾಸನೆ ಬರುತ್ತಿರುವುದಾಗಿ ತಿಳಿಸಿದಂತೆ ಪಿರ್ಯಾಧಿದಾರರು ಗುಡ್ಡ ಜಾಗಕ್ಕೆ ಹೋಗಿ ನೋಡಿದಾಗ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಉತ್ತರ ದಿಕ್ಕಿಗೆ ಸುಮಾರು 100 ಮೀಟರ್ ದೂರದಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಅಂದಾಜು ಪ್ರಾಯ 40-45 ವರ್ಷದ ಅಪರಿಚಿತ ಗಂಡಸಿನ ಮೃತ ದೇಹವೊಂದು ಅಕೇಶಿಯಾ ಮರದ ಕೊಂಬೆಗೆ ಬಟ್ಟೆಯ ಶಾಲಿನಿಂದ ನೇಣು ಬಿಗಿದುಕೊಂಡು ನೇತಾಡುವ ಸ್ಥಿತಿಯಲ್ಲಿದ್ದುದಲ್ಲದೆ ಮೃತ ದೇಹದಲ್ಲಿ ಹುಳುಗಳು ಇದ್ದು ಗುರುತಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಸದ್ರಿ 40-45 ವರ್ಷದ ಅಪರಿಚಿತ ಗಂಡಸು ಸುಮಾರು 15 ದಿನಗಳ ಹಿಂದೆ ಆತ್ಮ ಹತ್ಯೆ ಮಾಡಿಕೊಂಡಿರಬಹುದಾಗಿದೆ. ಮೃತ ದೇಹದ ಮೇಲೆ ಆಕಾಶ ನೀಲಿ ಬಣ್ಣದ ಅರ್ದ ತೋಳಿನ ಅಂಗಿ ,ಕಪ್ಪು ಬಣ್ಣದ ಲುಂಗಿಯನ್ನು ಉಟ್ಟುಕೊಂಡಿರುವ ಸ್ಥಿತಿಯಲ್ಲಿರುತ್ತದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 09/2022  ಕಲಂ 174(3)(iv) ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರವೀಣ್ ಎನ್ ( 45 )ತಂದೆ: ರಘುರಾಮ  ನಾಯ್ಕ್‌  ವಾಸ: ಕೊಟ್ಟಿಬೆಟ್ಟು ನೂಜಿ ಮನೆ , ತೆಂಕಿಲ ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ  ತಂದೆ  ರಘುನಾಥ ನಾಯ್ಕ್‌  ಪ್ರಾಯ 74 ವರ್ಷ ಎಂಬವರು ಪುತ್ತೂರು ಕಸಬಾ ಗ್ರಾಮದ ತೆಂಕಿಲ ಎಂಬಲ್ಲಿ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದು, ಮೊನ್ನೆ ದಿನಾಂಕ 09.04.2022  ರಂದು ಮಧ್ಯಾಹ್ನವರೆಗೆ ಪಿರ್ಯಾದಿದಾರರ  ತಾಯಿಯವರು ಪಕ್ಕದಲ್ಲಿ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಿದ್ದು,  ವಾಪಸು ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ಸುಮಾರು 2.45  ಗಂಟೆಗೆ ಮನೆಗೆ ಬಂದಾಗ ಪಿರ್ಯಾದಾರರ ತಂದೆಯವರು ವಾಂತಿ ಮಾಡುತ್ತಾ ಬಿದ್ದಿರುವುದನ್ನು ಕಂಡು ಪಿರ್ಯಾದಿದಾರರಿಗೆ  ಮಾಹಿತಿ ನೀಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದಾಗ  ಪಿರ್ಯಾದಿದಾರರ ತಂದೆಯವರು ಯಾವುದೋ ವಿಷ ಸೇವನೆಯಿಂದ ಅಸೌಖ್ಯಗೊಂಡಿರುವುದಾಗಿ ತಿಳಿಸಿ ಚಿಕಿತ್ಸೆ ನೀಡಿರುತ್ತಾರೆ. ಈ ದಿನ ದಿನಾಂಕ 11.04.2022 ರಂದು ಮಧ್ಯಾಹ್ನ 12.50 ಗಂಟೆಗೆ ಸಮಯಕ್ಕೆ ಪಿರ್ಯಾದಿದಾರರ ತಂದೆಯವರು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.  ಈ ಬಗ್ಗೆ ಪುತ್ತೂರು ನಗರ ಠಾಣಾ  ಯುಡಿಆರ್‌: 10/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-04-2022 11:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080