ಅಭಿಪ್ರಾಯ / ಸಲಹೆಗಳು

ಇತರೆ ಪ್ರಕರಣ: ೦3

ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 11.05.2021 ರಂದು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ: 56/2021 ಕಲಂ:504,354(A),323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ:11-05-2021 ರಂದು 14.00 ಗಂಟೆಗೆ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಬೊಳ್ಮನಾರ್ ಹೊಳೆಯ ಕಿನಾರೆಯಲ್ಲಿ ಪವನ ನಾಯಕ್ ಪೊಲೀಸ್ ಉಪ  ನಿರೀಕ್ಷಕರು ಧರ್ಮಸ್ಥಳ ಪೊಲೀಸ್ ಠಾಣೆರವರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಆರೋಪಿಗಳು ಹಣವನ್ನು ಪಣ ವಾಗಿಟ್ಟು ಉಲಾಯಿ-ಪಿದಾಯಿ ಎಂಬ ಅದೃಷ್ಟದ ಜೂಜಾಟ ಆಡುತ್ತಿದ್ದು, ಅವರ  ಪೈಕಿ 1 ಜನ ಓಡಿ ಹೋಗಿದ್ದು, 5 ಜನ ಆರೋಪಿಗಳು ಮತ್ತು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿಗಳು  ರಾಜ್ಯ ಸರಕಾರದ  ನಿರ್ದೇಶನದಂತೆ  ಮಾರಕ ಸಾಂಕ್ರಾಮಿಕ  ರೋಗ ನೊವೆಲ್ ಕೊರೋನಾ ವೈರಸ್ ಹರಡದಂತೆ  ಮಾನ್ಯ  ಜಿಲ್ಲಾಧಿಕಾರಿಯವರ ಆದೇಶವಿದ್ದರೂ ಪ್ರಾಣಕ್ಕೆ  ಅಪಾಯಕಾರಿಯಾದ ಸೋಂಕನ್ನು ಹರಡುವ ಕೃತ್ಯವನ್ನು ನಿರ್ಲಕ್ಯದಿಂದ ಮಾಡಿ ಮಾನ್ಯ ದ.ಕ ಜಿಲ್ಲಾಧಿಕಾರಿಯವರು ವಿದ್ಯುಕ್ತವಾಗಿ ಪ್ರಸ್ತಾಪಿಸಿದ ಆದೇಶವನ್ನು  ಉಲ್ಲಂಘಿಸಿದ ಆರೋಪಿಗಳ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 26-2021 ಕಲಂ;87  ಕರ್ನಾಟಕ ಪೊಲೀಸ್‌ ಕಾಯ್ದೆ ಮತ್ತು ಕಲಂ;269 ಜೊತೆಗೆ 34 ಐಪಿಸಿ ಮತ್ತು ಕಲಂ5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ ಕಾಯ್ದೆಯಂತೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ 11.05.2021 ರಂದು ಜಂಬೂರಾಜ್‌ ಮಹಾಜನ್‌ ಪೊಲೀಸ್‌ ಉಪ ನಿರೀಕ್ಷಕರು ಪುತ್ತೂರು ನಗರ ಠಾಣೆರವರು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ 07.45 ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ಕಬಕ  ಗ್ರಾಮದ ಕಬಕ ಪೇಟೆಯಲ್ಲಿರುವ ಕಸ್ತೂರಿ ಜನರಲ್‌ ಸ್ಟೋರ್‌ನಲ್ಲಿ  ಸುಮಾರು10 ರಿಂದ 15 ಜನರುಗಳು ಗುಂಪು ಗುಂಪಾಗಿ ಸೇರಿಸಿಕೊಂಡು ಯಾವುದೇ ಸಾಮಾಜಿಕ ಅಂತರವನ್ನು ಪಾಲಿಸದೇ, ಅಂಗಡಿಯ ಎದುರುಗಡೆ ಗಿರಾಕಿಗಳಿಗೆ ನಿಲ್ಲಲು ವೃತ್ತಾಕಾರದ ಗುರುತನ್ನು ಹಾಕದೇ ಬಂದ ಗಿರಾಕಿಗಳಿಗೆ ಕೈಗೆ ಹಾಕಲು ಸ್ಯಾನಿಟೈಸರ್‌ನ್ನು  ನೀಡದೆ ಅಲ್ಲದೇ ಗಿರಾಕಿಗಳು ಮುಖಕ್ಕೆ ಸರಿಯಾಗಿ ಮಾಸ್ಕ್‌ ನ್ನು ಹಾಕದೆ ಕಸ್ತೂರಿ ಜನರಲ್‌ ಸ್ಟೋರ್‌ನ ಮಾಲಕರಾದ ಮಹಮ್ಮದ್‌ ಶರೀಫ್‌ರವರು ಜನರುಗಳನ್ನು ಸೇರಿಸಿಕೊಂಡು ಮಾನ್ಯ ಸರಕಾರದ ಕೋವಿಡ್‌ -19ರ ನಿಯಮಾವಳಿಗಳನ್ನು  ಉಲ್ಲಂಘಿಸಿ ಜನರನ್ನು ಸೇರಿಸಿ ಯಾವುದೇ ಸಾಮಾಜಿಕ ಅಂತರವನ್ನು  ಪಾಲಿಸದೇ ಪ್ರಾಣಕ್ಕೆ ಅಪಾಯಕಾರಿಯಾದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಿಳಿದ್ದಿದ್ದರೂ ಕೂಡ ನಿರ್ಲಕ್ಷತೆಯಿಂದ  ವ್ಯಾಪಾರ ನಡೆಸಿ  ಕೋವಿಡ್‌ -19 ರ ನಿಯಮಾವಳಿಗಳನ್ನು ಉಲ್ಲಂಘಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 37/2021 ಕಲಂ: 269 ಐಪಿಸಿ ಮತ್ತು ಕಲಂ: 5(4) THE KARNATAKA EPIDEMIC DISEASES ACT, 2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-05-2021 12:31 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080