ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ನಿತೀನ್(23), ತಂದೆ:ಶೀನಪ್ಪ ಗೌಡ,ವಾಸ: ಶಾರದಾ ನಗರ, ಕೂಳೂರು,ಮುಂಡಾಜೆ ಗ್ರಾಮ,ಮತ್ತು ಅಂಚೆ,ಬೆಳ್ತಂಗಡಿ ತಾಲೂಕು ರವರು ದಿನಾಂಕ:10.08-2021 ರಂದು ಕೆಎ 70 ಇ 8592 ನೇ ಮೋಟಾರು ಸೈಕಲ್‌ ನಲ್ಲಿ ಸಹ ಸವಾರೆ ಬಾಲಾಕ್ಷಿರವರನ್ನು ಕುಳ್ಳಿರಿಸಿಕೊಂಡು ಕಾಜೂರು ಕಡೆಯಿಂದ ಸೋಮಂತಡ್ಕ ಕಡೆಗೆ ಸವಾರಿ ಮಾಡಿಕೋಂಡು ಹೊಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು  ಮುಂಡಾಜೆ ಗ್ರಾಮದ ಮಂಜುಶ್ರೀ ಭಜನಾ ಮಂದಿರದ ಬಳಿ ತಲುಪುತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಸೋಮಂತಡ್ಕ ಕಡೆಯಿಂದ ಕಾಜೂರುರು ಕಡೆಗೆ ಕೆಎ18ಎನ್‌ 1687 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ಕೊಂಡು ಬಂದು ಮೋಟಾರು ಸೈಕಲ್ ಗೆ ಢಿಕ್ಕಿ ಹೋಡೆದ ಪರಿಣಾಮ ಸಹ ಸವಾರೆ ಬಾಲಾಕ್ಷಿರವರಿಗೆ ಬಲಕೈ ರಟ್ಟೆಗೆ ಹಾಗೂ ಬಲಕಾಲಿನ ಮೊಣಗಂಟಿಗೆ ಗುದ್ದಿದ ಮತ್ತು ತರಚಿದ ಗಾಯವಾಗಿರುತ್ತದೆ ,ಗಾಯಾಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 61/2021, ಕಲಂ; 279,337 ಐಪಿಸಿ ಮತ್ತು ಕಲಂ:134 (ಎ)&(ಬಿ) ಜೋತೆಗೆ187 ಐಎಮ್ ವಿ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಆಶಿಕ್,  ಪ್ರಾಯ: 18 ವರ್ಷ  ತಂದೆ: ದಿ|| ಅಬ್ದುಲ್ ಖಾದರ್ ವಾಸ: ವಳವೂರು ಮನೆ, ತುಂಬೆ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 11-08-2021 ರಂದು ಸಂಬಂಧಿಕರ ಮನೆಗೆ ಹೋಗಿ ವಾಪಾಸು ಬರುವರೇ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಬಿ.ಸಿ.ರೋಡ್ ಕಡೆಯಿಂದ KA-03-NH-5050 ನೇ ಕಾರನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಮಂಗಳೂರು ಕಡೆಗೆ ಅರ್ಥವಾ ಪಾನ್ಸ್ ಮತ್ತು ಶಾಹೀಲ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ MH-13DN-3044ನೇ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಹಾಗೂ ಸಹಸವಾರರು ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಮೋಟಾರ್ ಸೈಕಲ್ ಸವಾರ ಅರ್ಥವಾ ಪಾನ್ಸ್ರವರ ಮುಖಕ್ಕೆ, ತಲೆಗೆ, ಕೈಗೆ ಗಾಯವಾಗಿದ್ದು, ಸಹ ಸವಾರ ಶಾಹೀಲ್ ರವರ ಎಡಕೈ ಮುಂಗೈಗೆ, ತಟ್ಟಿಗೆ ತರಚಿದ ಗಾಯವಾಗಿದ್ದವರು ತುಂಬೆ ಫಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 75/2021  ಕಲಂ 279, 337, ಐಪಿಸಿ & 134(A&B) IMV Act ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಉಮೇಶ್‌ ಕುಲಾಲ್ (36), ತಂದೆ: ಲಕ್ಷ್ಮಣ ಮೂಲ್ಯ, ವಾಸ: ಪಲ್ಕೆ ಹೊಸ ಮನೆ, ಸುಲ್ಕೇರಿ ಮೊಗ್ರು ಗ್ರಾಮ, ಶಿರ್ಲಾಲು ಅಂಚೆ ಬೆಳ್ತಂಗಡಿ ತಾಲೂಕು ರವರು ದಿನಾಂಕ: 11-08-2021 ರಂದು ಕೆಎ 21 ಕೆ 5445 ನೇ ಮೋಟಾರು ಸೈಕಲ್‌ನಲ್ಲಿ ಗುರುವಾಯನಕೆರೆ-ವೇಣೂರು ರಸ್ತೆಯಲ್ಲಿ ಸುಲ್ಕೇರಿಮುಗ್ರು ಕಡೆಗೆ  ಸವಾರಿ ಮಾಡಿಕೊಂಡು ಹೊಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಶಕ್ತಿನಗರ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ಅಂದರೆ ವೇಣೂರು ಕಡೆಯಿಂದ ಗುರುವಾಯನಕೆರೆ ಕಡೆಗೆ ಕೆಎ 13 ಬಿ 6091 ನೇ ಪಿಕ್‌ಆಪ್‌ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದನು ಪರಿಣಾಮ ಪಿರ್ಯಾದಾರರಿಗೆ ಎಡಕಾಲಿನ ಕೋಲು ಕಾಲಿಗೆ ಗುದ್ದಿದ ರಕ್ತಗಾಯವಾಗಿರುತ್ತದೆ, ಎಡಪಾದಕ್ಕೆ ತರಚಿದ ರಕ್ತ ಗಾಯವಾಗಿರುತ್ತದೆ, ಗಾಯಳು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 62/2021, ಕಲಂ; 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಯತ್ನ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಯರಾಮ ಶಾಖಾ ವ್ಯವಸ್ಥಾಪಕರುಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಮಾಣಿಲ ಶಾಖೆ. ಮಾಣಿಲ ಗ್ರಾಮ ಬಂಟ್ವಾಳ ತಾಲೂಕು ರವರು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದಲ್ಲಿರುವ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು. ಸದ್ರಿ ಸಂಘದ ಕಟ್ಟಡದಲ್ಲಿ ಅಡಿಕೆ ,ಕೃಷಿ ಉತ್ಪನ್ನವಾದ ಕಾಳುಮೆಣಸು ಹಾಗೂ ಸೇಪ್‌ ಲಾಕರ್‌ ಒಳಗೆ ನಗದು ಮತ್ತು ಅಡಮಾನದ ಚಿನ್ನವನ್ನು ಮತ್ತು ದಿನಸಿ ಸಾಮಾಗ್ರಿಗಳಾದ ಅಕ್ಕಿ,ಗೋದಿ ಇಡುತ್ತಿರುವುದಾಗಿದೆ ಎಂದಿನಂತೆ ಕೆಲಸ ಮುಗಿಸಿ ದಿನಾಂಕ:10.08-2021 ರಂದು ಸಂಜೆ ಸಮಯ ಸುಮಾರು 5.45 ಗಂಟೆಗೆ ಪಿರ್ಯಾದಿದಾರರು ಕೆಲಸ ಮುಗಿಸಿ  ಸೇವಾ ಸಹಕಾರಿ ಸಂಘದ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು. ದಿನಾಂಕ:11.08.2021 ರಂದು ಬೆಳಿಗ್ಗೆ 09.35 ಗಂಟೆಗೆ ಸೇವಾ ಸಹಕಾರಿ ಸಂಘಕ್ಕೆ ಬಂದು ಬೀಗ ತೆಗೆದು ಒಳಗಡೆ ಪ್ರವೇಶಿಸಿ ನೋಡಿದಾಗ ಸೇವಾ ಸಹಕಾರಿ ಸಂಘ ಮೇಲ್ಚಾವಣಿ ಹಂಚನ್ನು ಯಾರೋ ಕಳ್ಳರು ಕಳವು ಮಾಡುವು ಉದ್ದೇಶದಿಂದ ತೆಗೆದು ಒಳಗಡೆ ಬಂದು ಕಚೇರಿಯ ಕಪಾಟಿನ ಬಾಗಿಲು ತೆಗೆದು ಹುಡುಕಾಡಿದ್ದು ಯಾವುದೇ ಹಣ,ಬೆಲೆ ಬಾಳುವ ವಸ್ತು ಸಿಗದೆ ಕಳವಿಗೆ ಪ್ರಯತ್ನಿಸಿರುವುದಾಗಿದೆ. ಸೇಫ್‌ ಲಾಕರನಲ್ಲಿ ಇದ್ದ ಯಾವುದೇ ಬೆಲೆ ಬಾಳುವ ವಸ್ತುಗಳು ಹಾಗೂ ಅಡಿಕೆ ,ಕೃಷಿ ಕಾಳುಮೆಣಸು ಕಳವಾಗಿರುವುದು ಕಂಡು ಬಂದಿರುವುದಿಲ್ಲ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 106/2021 ಕಲಂ:457, 380, 511 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

 

ಕಡಬ ಪೊಲೀಸ್ ಠಾಣೆ : ಕಡಬ ಪೊಲೀಸ್‌ ಠಾಣೆಯಲ್ಲಿ ಕಲಂ :  354 IPC And U/s 7 .8  POCSO ACT- 2012 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಮಧುಸೂದನ್ ಪ್ರಾಯ;45 ವರ್ಷ ಗೋಪಾಲ ಕೃಷ್ಣ ವಾಸ; ವಲಯ ಅರಣ್ಯ ಅಧಿಕಾರಿ ಉಪ್ಪಿನಂಗಡಿ ವಲಯ ಪುತ್ತೂರು ತಾಲೂಕು  ರವರು ನೀಡಿದ ದೂರಿನಂತೆ   ದಿನಾಂಕ: 09-08-2021 ರಂದು ಬೆಳ್ತಂಗಡಿ ತಾಲೂಕು ಕಳಂಜ ಗ್ರಾಮದ ಕುಡ್ತಲಾಜೆ ಎಂಬಲ್ಲಿ ಸರಕಾರಿ ಜಾಗದಲ್ಲಿ  ಕಳಂಜ ಶಾಖೆಯ ಅರಣ್ಯ ಅಧಿಕಾರಿಯಾದ  ಪ್ರಶಾಂತ್ ಹಾಗೂ ಸಿಬ್ಬಂದಿಯವರು  ಗಸ್ತು ಕತವ್ಯಯದಲ್ಲಿ ಇದ್ದ ಸಮಯ ಗುಂಡಿನ ಶಬ್ಧಕೇಳಿ ಶಬ್ದ ಬಂದಕಡೆ ಹೋದಾಗ ಸುಜಯ್ ಗೌಡ ಎಂಬಾತನು  ಕೈಯಲ್ಲಿ ಕೋವಿಯನ್ನು ಹಿಡಿದುಕೊಂಡಿದ್ದು ಸಮವಸ್ತ್ರದಲ್ಲಿ ಇದ್ದವರನ್ನು ನೋಡಿ  ಕೋವಿ ಹಾಗೂ ಮದ್ದು ಗುಂಡುಗಳನ್ನು ಅಲ್ಲೇ ಬಿಸಾಡಿ ಓಡಿತಪ್ಪಿಸಿಕೊಂಡಿರುತ್ತಾನೆ ಸ್ಥಳವನ್ನು ಪರಶೀಲಿಸಲಾಗಿ ಕಾಡು ಹಂದಿನೆಲದಲ್ಲಿ ಸತ್ತು ಬಿದ್ದಿದ್ದು ಅದರ ಮೈ ಮೇಲೆ ಗುಂಡು ತಗುಲಿ ಗಾಯ ಉಂಟಾಗಿರುತ್ತದೆ  ಸ್ವಲ್ಪ ದೂರದಲ್ಲಿ ಎಸ್ಬಿಬಿಎಲ್ ಕೋವಿ ಸಂಖ್ಯೆ 379318 ಬಿಎಲ್ ಟಿ 46/44V ಹಾಗೂ 3 ಸಜೀವ ಮದ್ದುಗುಂಡು ದೊರೆತಿದ್ದು  ಈ ಬಗ್ಗೆ ಉಪ್ಪಿನಂಗಡಿ ವಲಯ ಕಛೇರಿಯಲ್ಲಿ  ಅ ಕ್ರ 16/2021-22 ರಂತೆ ಪ್ರಕರಣ ದಾಖಲುಗೊಂಡಿರುತ್ತದೆ. ಈ ಬಗ್ಗೆ ಮಾನ್ಯ ನ್ಯಾಯಾಧೀಶರು ಎ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ಬೆಳ್ತಂಗಡಿ  ವನ್ಯ ಪ್ರಾಣಿ ಭೇಟೆಗೆ ಉಪಯೋಗಿಸಿದ ಎಸ್ಬಿಬಿಎಲ್ ಕೋವಿ ಸಂಖ್ಯೆ 379318 ಬಿಎಲ್ ಟಿ 46/44V ಹಾಗೂ 3 ಸಜೀವ ಮದ್ದುಗುಂಡು ಮತ್ತು ಉಪಯೋಗಿಸಿದ ಮದ್ದುಗುಂಡು-1 1959 ಶಸ್ತ್ರಾಸ್ತ್ರ ಕಾಯ್ದೆ ಅಡಿ  ಪಿ ಎಸ್ ಐ ಧರ್ಮಸ್ಥಳ ಪೊಲೀಸ್ ಠಾಣಾ ಸುಪರ್ದಿಗೆ ನೀಡುವಂತೆ ಕೋರಿಕೆ ಪತ್ರವನ್ನು ನೀಡಿರುತ್ತದೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ.44/2021 ಕಲಂ:3 ಜೊತೆಗೆ 25(1),(ಬಿ) 30 ಶಸ್ತ್ರಾಸ್ತ್ರ ಕಾಯ್ದೆ 1959 ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಪುತ್ತೂರು ನಗರ  ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚೈತ್ರೇಶ್ ಪ್ರಾಯ 20 ವರ್ಷ ತಂದೆ: ಕೃಷ್ಣಪ್ಪ ಗೌಡ ವಾಸ: ಮಾಡತ್ತಾರು  ಮನೆ ನರಿಮೊಗರು ಗ್ರಾಮ ಪುತ್ತೂರು ತಾಲೂಕು ರವರ ತಂದೆ ಕೃಷ್ಣಪ್ಪ ಗೌಡ, ಪ್ರಾಯ 51 ವರ್ಷ ಎಂಬವರು ದಿನಾಂಕ: 10.08.2021 ರಂದು ಸಂಜೆ ಸಮಯ ಸುಮಾರು 5:00 ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಮಾಡತ್ತಾರು ಎಂಬಲ್ಲಿರುವ ಅವರ ಬಾಬ್ತು ತೋಟದಲ್ಲಿ ಜೀಗುಜ್ಜೆ ಮರಕ್ಕೆ ಹತ್ತಿ ಅಲ್ಯುಮೀನಿಯಂ ಕೊಕ್ಕೆಯನ್ನು ಉಪಯೋಗಿಸಿ ಜೀಗುಜ್ಜೆಯನ್ನು ಕೊಯ್ಯುತ್ತಿರುವ ಸಮಯದಲ್ಲಿ ಅಲ್ಯುಮೀನಿಯಂ ಕೊಕ್ಕೆಯು ಅಕಸ್ಮಾತಾಗಿ ವಿದ್ಯುತ್‌‌ ತಂತಿಗೆ ತಾಗಿ ವಿದ್ಯುತ್‌‌‌ ಪ್ರವಾಹ ಹರಿದ ಕಾರಣ ವಿದ್ಯುತ್‌‌ ಆಘಾತ ಉಂಟಾಗಿ ಕೃಷ್ಣಪ್ಪ ಗೌಡರವರು ಮರದಿಂದ  ನೆಲಕ್ಕೆ ಬಿದ್ದವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ಅಲ್ಲಿಯ ವೈದ್ಯರಲ್ಲಿ ತೋರಿಸಿದಾಗ , ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಪುತ್ತೂರು ನಗರ  ಪೊಲೀಸ್ ಠಾಣೆ ಠಾಣಾ ಯು.ಡಿ.ಆರ್ ನಂ:  23/2021 ಕಲಂ: 174 ಸಿ.ಆರ್.ಪಿ.ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸುಚಿತ್ರಾ, ಪ್ರಾಯ: 34 ವರ್ಷ, ಗಂಡ: ಸುಭಾಶ್ಚಂದ್ರ   ವಾಸ: ಪರಾರಿ ಮನೆ  ಸುಲ್ಕೇರಿ ಗ್ರಾಮ ಬೆಳ್ತಂಗಡಿ ತಾಲೂಕು ಇವರ  ಮಗಳು   ದೃತ್ವಿ, ಪ್ರಾಯ: 2ವರ್ಷ ಇವಳನ್ನು  ದಿನಾಂಕ  10-08-2021 ರಂದು  ಮದ್ಯಾಹ್ನ 13:45 ಗಂಟೆಗೆ ಪಿರ್ಯಾದಿದಾರರು  ತನ್ನ  ಮಗಳನ್ನು  ಪಿರ್ಯಾದಿದಾರರ  ತಂದೆಯ  ಜೊತೆಯಲ್ಲಿ  ಮನೆಯಲ್ಲಿ ಬಿಟ್ಟು  ದನಗಳಿಗೆ  ಹುಲ್ಲು ತರುವರೇ ಹೋಗಿ  ವಾಪಾಸ್   14:30 ಗೆ ಮನೆಗೆ  ಬಂದಿದ್ದು  ಈ  ಸಮಯದಲ್ಲಿ  ತನ್ನ   ಮಗು  ದೃತ್ವಿ ವಾಸ್ತವ್ಯದ  ಮನೆಯಿಂದ   ಕಾಣೆಯಾಗಿರುತ್ತದೆ.     ಹುಡುಕಾಡಿದಲ್ಲಿ  ಪತ್ತೆಯಾಗದೇ ಇದ್ದುದ್ದರಿಂದ  ವೇಣೂರು  ಠಾಣೆಯಲ್ಲಿ  ದೂರು  ನೀಡಿದ್ದು  ಅದರಂತೆ  ಠಾಣಾ   ಅಕ್ರ ನಂ 52-2021 ಕಲಂ 363 ಐಪಿಸಿ ಯಂತೆ  ಪ್ರಕರಣ  ದಾಖಲಾಗಿರುತ್ತದೆ.   ದಿನಾಂಕ  11-08-2021 ರಂದು ಕಾಣೆಯಾದ ಬಾಲಕಿಯ ಬಗ್ಗೆ ಹುಡುಕಾಡಿದಾಗ ಮನೆಯಿಂದ  ಸುಮಾರು 800 ಮೀಟರ್  ದೂರದಲ್ಲಿ  ಹೊಳೆಯ  ನೀರಿನಲ್ಲಿ   ಬಾಲಕಿಯ  ಮೃತ  ದೇಹ ಪತ್ತೆಯಾಗಿರುತ್ತದೆ.   ಸದ್ರಿ  ಬಾಲಕಿ  10-08-2021 ರಂದು  ಮದ್ಯಾಹ್ನ  13:45 ರಿಂದ ಈ  ದಿನ 11-08-2021 ಬೆಳಿಗ್ಗೆ 08:30 ರ ಮದ್ಯ  ಕಾಲದಲ್ಲಿ  ತನ್ನ  ವಾಸ್ತವ್ಯದ  ಮನೆಯ  ಬಳಿ  ಹಾದು  ಹೋಗುವ   ಹೊಳೆಯ  ನೀರಿನಲ್ಲಿ  ಕೊಚ್ಚಿ  ಹೋಗಿ  ಮೃತ  ಪಟ್ಟಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ : 20/2021 ಕಲಂ: 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 12-08-2021 11:07 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080