Feedback / Suggestions

ಅಪಘಾತ ಪ್ರಕರಣ: 1

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗಿರಿವರ್ಧನ್ ಪ್ರಾಯ 33,ತಂದೆ: ಡಿ.ಎಸ್ ನಾಗರಾಜ್,ವಾಸ:ಎಸ್ ಎಲ್ ಎನ್ ಕ್ಲೀವ್, ಮನೆ,ಕೆರೆಹೂಬನ ಹಳ್ಳಿ,ಬೆಂಗಳೂರು ರವರು ತನ್ನ ಬಾಬ್ತು ಕೆಎ 02 ಎಎಫ್‌ 5462 ನೇ ಕಾರಿನಲ್ಲಿ ಉಡುಪಿಗೆ ಹೋಗುವರೇ  ಚಾರ್ಮಾಡಿ-ಉಜಿರೆ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಕಲ್ಮಂಜ ಗ್ರಾಮ ಪಂಚಾಯತ್‌ ಬಳಿ ತಲುಪುತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ KA41 9261 ನೇ ಐಷರ್‌ ಲಾರಿಯನ್ನು ಅದರ ಚಾಲಕ  ದುಡುಕುತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಕಾರಿಗೆ  ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಎಡ ಅಂಗೈಗೆ, ಬಲ ಭುಜಕ್ಕೆ,ಸೊಂಟಕ್ಕೆ ಗುದ್ದಿದ ಗಾಯ,ಸಹ ಪ್ರಯಾಣಿಕರಾದ ಬಾಲಕೃಷ್ಣ ರವರಿಗೆ ಭುಜಕ್ಕೆ,ಬಲಕಾಲಿನ ಕೊಲುಕಾಲಿಗೆ,ಸೊಂಟಕ್ಕೆ ಗುದ್ದಿದ ಗಾಯ ಮತ್ತು ಸರಸ್ವತಿಯವರಿಗೆ ಹಣೆಗೆ ರಕ್ತಗಾಯ ಹಾಗೂ ಭಾವನಳಿಗೆ ಬಲಕಾಲಿನ ಮೋಣಗಂಟಿಗೆ ತರಚಿದ ರಕ್ತಗಾಯ, ಸೋಂಟಕ್ಕೆ ಗುದ್ದಿದ ಗಾಯವಾಗಿದ್ದು ಲಾರಿ ಚಾಲಕ ಮಹಮ್ಮದ್‌ ರಫೀಕ್‌ರವರಿಗೆ ಕೂಡ ಗಾಯಗಳಾಗಿರುತ್ತದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 69/2021, ಕಲಂ; 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಾಲಕೃಷ್ಣ  ಪ್ರಾಯ 49 ವರ್ಷ ತಂದೆ. ದಿ: ಶಿವಪ್ಪ  ಗೌಡ ವಾಸ:  ಓರ್ಕಳಮನೆ, ಕೊಣಾಜೆ ಗ್ರಾಮ  ಪುತ್ತಿಗೆ   ಕಡಬ ತಾಲೂಕು ರವರು ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ) ಉದನೆ ಇದರ ಅದ್ಯಕ್ಷರಾಗಿದ್ದು,  ದಿನಾಂಕ: 10-09-2021 ರಂದು  ಸಂಜೆ 5.30 ಗಂಟೆಯಿಂದ   ದಿನಾಂಕ: 11-09-2021ರಂದು ಬೆಳಿಗ್ಗೆ 08.00 ಗಂಟೆಯ ಮದ್ಯದ ಅವಧಿಯಲ್ಲಿ  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉದನೆ  ಇದರ ವತಿಯಿಂದ ಕಡಬ ತಾಲೂಕು ಕೊಣಾಜೆ ಗ್ರಾಮದ   ಉದನೆ ಪರಶುರಾಮ ಮೈದಾನ ಎಂಬಲ್ಲಿರುವ ಗಣಪತಿ ಕಟ್ಟೆಯ ಒಳಗೆ  ಯಾರೋ ಕಿಡಿಗೇಡಿಗಳು ಅಕ್ರಮ ಪ್ರವೇಶ ಮಾಡಿ  ಗಣಪತಿ ಕಟ್ಟೆಯ ಮೆಟ್ಟಿಲು, ಗೋಡೆ ಆವರಣವನ್ನು ಕಲ್ಲಿನಿಂದ ಗುದ್ದಿ ಧ್ವಂಸಗೊಳಿಸಿ ರೂ 10,000/- ನಷ್ಟವುಂಟುಮಾಡಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 87/2021   ಕಲಂ.  447 427   IPC     ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 12-09-2021 10:37 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080