ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಗಿರಿವರ್ಧನ್ ಪ್ರಾಯ 33,ತಂದೆ: ಡಿ.ಎಸ್ ನಾಗರಾಜ್,ವಾಸ:ಎಸ್ ಎಲ್ ಎನ್ ಕ್ಲೀವ್, ಮನೆ,ಕೆರೆಹೂಬನ ಹಳ್ಳಿ,ಬೆಂಗಳೂರು ರವರು ತನ್ನ ಬಾಬ್ತು ಕೆಎ 02 ಎಎಫ್‌ 5462 ನೇ ಕಾರಿನಲ್ಲಿ ಉಡುಪಿಗೆ ಹೋಗುವರೇ  ಚಾರ್ಮಾಡಿ-ಉಜಿರೆ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಕಲ್ಮಂಜ ಗ್ರಾಮ ಪಂಚಾಯತ್‌ ಬಳಿ ತಲುಪುತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಉಜಿರೆ ಕಡೆಯಿಂದ ಚಾರ್ಮಾಡಿ ಕಡೆಗೆ KA41 9261 ನೇ ಐಷರ್‌ ಲಾರಿಯನ್ನು ಅದರ ಚಾಲಕ  ದುಡುಕುತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಕಾರಿಗೆ  ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಎಡ ಅಂಗೈಗೆ, ಬಲ ಭುಜಕ್ಕೆ,ಸೊಂಟಕ್ಕೆ ಗುದ್ದಿದ ಗಾಯ,ಸಹ ಪ್ರಯಾಣಿಕರಾದ ಬಾಲಕೃಷ್ಣ ರವರಿಗೆ ಭುಜಕ್ಕೆ,ಬಲಕಾಲಿನ ಕೊಲುಕಾಲಿಗೆ,ಸೊಂಟಕ್ಕೆ ಗುದ್ದಿದ ಗಾಯ ಮತ್ತು ಸರಸ್ವತಿಯವರಿಗೆ ಹಣೆಗೆ ರಕ್ತಗಾಯ ಹಾಗೂ ಭಾವನಳಿಗೆ ಬಲಕಾಲಿನ ಮೋಣಗಂಟಿಗೆ ತರಚಿದ ರಕ್ತಗಾಯ, ಸೋಂಟಕ್ಕೆ ಗುದ್ದಿದ ಗಾಯವಾಗಿದ್ದು ಲಾರಿ ಚಾಲಕ ಮಹಮ್ಮದ್‌ ರಫೀಕ್‌ರವರಿಗೆ ಕೂಡ ಗಾಯಗಳಾಗಿರುತ್ತದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 69/2021, ಕಲಂ; 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಾಲಕೃಷ್ಣ  ಪ್ರಾಯ 49 ವರ್ಷ ತಂದೆ. ದಿ: ಶಿವಪ್ಪ  ಗೌಡ ವಾಸ:  ಓರ್ಕಳಮನೆ, ಕೊಣಾಜೆ ಗ್ರಾಮ  ಪುತ್ತಿಗೆ   ಕಡಬ ತಾಲೂಕು ರವರು ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ) ಉದನೆ ಇದರ ಅದ್ಯಕ್ಷರಾಗಿದ್ದು,  ದಿನಾಂಕ: 10-09-2021 ರಂದು  ಸಂಜೆ 5.30 ಗಂಟೆಯಿಂದ   ದಿನಾಂಕ: 11-09-2021ರಂದು ಬೆಳಿಗ್ಗೆ 08.00 ಗಂಟೆಯ ಮದ್ಯದ ಅವಧಿಯಲ್ಲಿ  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉದನೆ  ಇದರ ವತಿಯಿಂದ ಕಡಬ ತಾಲೂಕು ಕೊಣಾಜೆ ಗ್ರಾಮದ   ಉದನೆ ಪರಶುರಾಮ ಮೈದಾನ ಎಂಬಲ್ಲಿರುವ ಗಣಪತಿ ಕಟ್ಟೆಯ ಒಳಗೆ  ಯಾರೋ ಕಿಡಿಗೇಡಿಗಳು ಅಕ್ರಮ ಪ್ರವೇಶ ಮಾಡಿ  ಗಣಪತಿ ಕಟ್ಟೆಯ ಮೆಟ್ಟಿಲು, ಗೋಡೆ ಆವರಣವನ್ನು ಕಲ್ಲಿನಿಂದ ಗುದ್ದಿ ಧ್ವಂಸಗೊಳಿಸಿ ರೂ 10,000/- ನಷ್ಟವುಂಟುಮಾಡಿರುವುದಾಗಿದೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 87/2021   ಕಲಂ.  447 427   IPC     ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-09-2021 10:37 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080