ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಸುಬ್ರಮಣ್ಯ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಸಂತ ಕುಮಾರ್ ಕೆ,  ಪ್ರಾಯ: 60 ವರ್ಷ, ತಂದೆ: ಮುತ್ತಪ್ಪ ಗೌಡ ಕೆದಿಲ,   ವಾಸ: ಕುಮಾರಕೃಪ ಮನೆ, ಕೃಷ್ಣ ನಗರ, ಪಂಜ, ಐವತ್ತೊಕ್ಲು  ಗ್ರಾಮ ಸುಳ್ಯ ತಾಲೂಕು, ದ.ಕ ಜಿಲ್ಲೆ ರವರು ದಿನಾಂಕ: 10-11-2021 ರಂದು ಅಗತ್ಯ ಕೆಲಸ ನಿಮಿತ್ತ ಅವರ ಬಾಬ್ತು ಕಾರು ನಂಬ್ರ ಕೆಎ 21 ಎಮ್ 3716 ನೇ ದರಲ್ಲಿ ಪಂಜದಿಂದ ಬಳ್ಪ ಕಡೆಗೆ ಬರುತ್ತಿರುವ ಸಮಯ ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದ ಪಂಜ ಪೇಟೆಯ ಮಹಾಲಕ್ಷ್ಮಿ ಕಾಂಪ್ಲೆಕ್ಸ್ ಹತ್ತಿರ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಬಳ್ಪ ಕಡೆಯಿಂದ ಕೆಎ 21 ಎಲ್ 7687 ನೇ ಮೋಟಾರ್ ಸೈಕಲ್ ನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರನು ಬೈಕ್ ಸಮೇತ ರಸ್ತೆಗೆ ಮಗುಚಿ ಬಿದ್ದನು. ಆತನನ್ನು ಪಿರ್ಯಾದಿದಾರರು ಮತ್ತು ಅಲ್ಲೇ ಇದ್ದ ಜನಾರ್ಧನ ಗೌಡ ರವರು ಉಪಚರಿಸಿದಲ್ಲಿ ಆತನ ಬೆನ್ನಿಗೆ ಗಾಯವಾಗಿದ್ದು, ಆತನ ಹೆಸರು ವಿಜಿತ್ ಎಂಬುದಾಗಿ ತಿಳಿಸಿರುತ್ತಾನೆ. ಬಳಿಕ ಆತನನ್ನು ಆತನ ಸಂಬಂದಿಕರು ಆ್ಯಂಬುಲೆನ್ಸ್ ನಲ್ಲಿ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯಾಧಿಕಾರಿಯವು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್‌ ಠಾಣಾ ಅ.ಕ್ರ ನಂಬ್ರ  : 81-2021 ಕಲಂ: 279, 337 ಐಪಿಸಿ  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೊಹಮ್ಮದ್ ಶರೀಫ್, ಪ್ರಾಯ : 20 ವರ್ಷತಂದೆ: ಮೊಂತಿಯಾಝ್ ವಾಸ: ಶಹಪುರ ಪಟ್ಟಿ  ಬುಡನ್ ರೋಡ್, ಬುಡನ್ ತಾಲೂಕು, ಮುಝಫರ್ ನಗರ, ಉತ್ತರಪ್ರದೇಶ ರವರು ದಿನಾಂಕ 10-11-2021 ರಂದು ತನ್ನ ಸ್ನೇಹಿತ ಮಜೀದ್ ರವರೊಂದಿಗೆ ದಿನಸಿ ಸಾಮಾಗ್ರಿಗಳನ್ನು ಖರೀದಿಸುವರೇ ಮನೆಯಿಂದ ಹೊರಟು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಗಾಣದ ಪಡ್ಪು ಎಂಬಲ್ಲಿಗೆ ತಲುಪಿದಾಗ ಬೆಳ್ತಂಗಡಿ ಕಡೆಯಿಂದ KA-19-EF-4643 ನೇ ಮೋಟಾರು ಸೈಕಲನ್ನು ಅದರ ಸವಾರ ಮಧುಕರ ಎಂಬವರು ಅತಿ ವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಎಡಕೋಲು ಕಾಲಿಗೆ ಗುದ್ದಿದ ಗಾಯ, ಎಡಬದಿ ಕಿವಿಯ ಬಳಿ, ಬಲಕಣ್ಣಿನ ಬಳಿ, ಬಲ ಭುಜಕ್ಕೆ, ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿದ್ದುದ್ದಲ್ಲದೇ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರನು ಕೂಡಾ ರಸ್ತೆಗೆ ಬಿದ್ದು ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 122/2021  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ  ಕಿಶೋರ್ ಪೂಜಾರಿ(35) ತಂದೆ:ಪದ್ಮನಾಭ  ಪೂಜಾರಿ ವಾಸ:ಅನ್ಯದೋಡಿ ಮನೆ ಸಂಗಬೆಟ್ಟು ಗ್ರಾಮ ಗ್ರಾಮ ಬಂಟ್ವಾಳ  ರವರು ದಿನಾಂಕ 11.11.2021 ರಂದು ಸಂಜೆ ಮನೆಯಲ್ಲಿದ್ದ ಸಮಯ ಪಿರ್ಯಾದುದಾರರ ನೆರೆಯ ಸಂಬಂದಿಯಾದ ಸಂಜೀವ ಪೂಜಾರಿ ಪಿರ್ಯಾದುದಾರರನ್ನು ಮನೆಗೆ ಬರುವಂತೆ  ಹೇಳಿದ್ದು ಪಿರ್ಯಾದುದಾರರು ಕೂಡಲೇ  ಸಂಜೀವ ಪೂಜಾರಿ ಯವರ ಮನೆಗೆ ಹೋಗಿ ಮನೆಗೆ ಕರೆದ ವಿಚಾರ ಏನೆಂದು ಕೇಳಿದಾಗ ಆರೋಪಿ ಸಂಜೀವ ಪೂಜಾರಿ ಪಿರ್ಯಾದುದಾರರನ್ನುದೇಶಿಸಿ ನನ್ನ ಮಗಳನ್ನು ಬೈಕಿನಲ್ಲಿ ಶಾಲಾ ಬಸ್ಸು ನಿಲುಗಡೆ ಜಾಗಕ್ಕೆ ಬಿಡಲು ನೀನು ಯಾರೂ ಎಂದು ಏಕಾ ಏಕಿ ಪಿರ್ಯಾದುದಾರರ ಮೇಲೆ ಪ್ಲಾಸ್ಟಿಕ್ ಚಯರ್ ನಲ್ಲಿ  ಹಲ್ಲೆ  ಮಾಡಿ ನಂತರ ಪಕ್ಕದಲ್ಲೇ ಇದ್ದ ದೊಣ್ಣೆಯನ್ನು ಬೀಸಿದಾಗ ಪಿರ್ಯಾದುದಾರರು ಕೈ ಅಡ್ಡ ಇಟ್ಟಾಗ ಪಿರ್ಯಾದುದಾರರ ಕೈ ಬೆರಳಿಗೆ ಗಾಯವಾಗಿದ್ದು ಆಗ ಪಿರ್ಯಾದುದಾರರು ಜೋರಾಗಿ ಬೊಬ್ಬೆ ಹೊಡೆದಾಗ ಪಿರ್ಯಾದುದಾರರ ತಾಯಿ ಮತ್ತು ಹೆಂಡತಿ ಅಡ್ಡ ಬಂದು ಹಲ್ಲೆ ಮಾಡುವುದನ್ನು ತಡೆದಾಗ ಆರೋಪಿ ಪಿರ್ಯಾದುದಾರರ  ತಾಯಿ ಮತ್ತು ಪತ್ನಿಯೆಂದು ನೋಡದೇ ಅವರಿಗೂ ಹಲ್ಲೆ ಮಾಡಿದ್ದು ಪಿರ್ಯಾದುದಾರರು ಹಲ್ಲೆಯಿಂದ ತಪ್ಪಿಸಿಕೊಂಡು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬಂದು ಅಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಬಿ.ಸಿರೋಡ್ ಸೋಮಾಯಾಜಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದು ಆರೋಪಿ ಹಲ್ಲೆ ಸಮಯ ಇವತ್ತು ನೀನು ತಪ್ಪಿಸಿಕೊಳ್ಳಬಹುದು ಆದರೆ ನಾಳೆ ನಿನ್ನನ್ನು ಕೊಲ್ಲದೇ  ಬಿಡುವುದಿಲ್ಲ ಎಂದುಜೀವ ಬೆದರಿಕೆ ಹಾಕಿರುತ್ತಾನೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 143/2021 ಕಲಂ 324, 506, 354  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಚೆಲುವಮ್ಮ ಪ್ರಾಯ: ಗಂಡ;  ಡೀಕಯ್ಯ   ಗೌಡ ವಾಸ; ಅಪ್ಪಿಲ ಮನೆ ಶಿಶಿಲ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ;08-11-2021 ರಂದು  ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಅಪ್ಪಿಲ ಎಂಬಲ್ಲಿರುವ ತನ್ನ  ಜಮೀನಿನಲ್ಲಿ ದನವನ್ನ ಕಟ್ಟಿ ಹಾಕಿದ ಸಮಯ ಎದ್ರಿಗಳಾದ ಮೋಹನ ಹಾಗೂ ಶಾರದಾ ರವರು ಪಿರ್ಯಾದುದಾರರ ಜಮೀನಿಗೆ  ಅಕ್ರಮವಾಗಿ ಪ್ರವೇಶಿಸಿ ದನವನ್ನು ಬಿಚ್ಚಿ ಬಿಡಲು ನೋಡಿದಾಗ ಪಿರ್ಯಾದುದಾರರು ಪ್ರಶ್ನಿಸಿದಕ್ಕೆ  ಎದ್ರಿ ಮೋಹನ, ಶಾರದಾ, ಕರುಣಾಕರ, ಚಂದಪ್ಪ, ತಮ್ಮಯ್ಯ, ಶೇಖರ, ತನಿಯಪ್ಪ ಗೌಡ , ಹರೀಶ್ ಎಂಬವರುಗಳನ್ನು ಕರೆಯಿಸಿ ಅಕ್ರಮಕೂಟ  ಸೇರಿ  ಮಾರಕ ಆಯುಧಗಳನ್ನು ಹಿಡಿದುಕೊಂಡು ಬಂದು ಅವರಲ್ಲಿ ಮೋಹನ ಹಾಗೂ ಶಾರದಾ ಪಿರ್ಯಾದುದಾರರಿಗೆ ಹಾಗೂ ಪಿರ್ಯಾದುದಾರರ ಗಂಡನಿಗೆ  ಅವ್ಯಾಚ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಮುಂದಾಗಿರುತ್ತಾರೆ. ಅಷ್ಟರಲ್ಲಿ ಪಿರ್ಯಾದುದಾರರು ಹಾಗೂ ಪಿರ್ಯಾದುದಾರರ ಗಂಡ ಪ್ರತಿರೋಧಿಸಿದಾಗ ಎದ್ರಿಗಳೆಲ್ಲರೂ ಸೇರಿಕೊಂಡು ಪಿರ್ಯಾದುದಾರನು ಹಾಗೂ ಪಿರ್ಯಾದುದಾರರ ಗಂಡನನ್ನು ಕೊಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿರುತ್ತಾರೆ. ಅಲ್ಲದೇ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ ಮಾನಭಂಗಕ್ಕೆ ಯತ್ನಿಸಲು ಬಂದವರು ಹಿಂದೆ ಸರಿದಿರುತ್ತಾರೆ ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಅಕ್ರ 69/2021 ಕಲಂ  143,147,148,447,504,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಮ್ಲತ್ (35) ಗಂಡ:  ಮಹಮ್ಮದ್ ವಾಸ;ಅರಬನ ಗುಡ್ಡೆ ಮನೆ  ತುಂಬೆ   ಗ್ರಾಮ ಬಂಟ್ವಾಳ ತಾಲೂಕು ರವರ ಗಂಡ ಮಹಮ್ಮದ್ ರವರು ಹೊರದೇಶದಲ್ಲಿದ್ದವರು ಸುಮಾರು 1½ ವರ್ಷದಿಂದ ಊರಿನಲ್ಲೇ ಇರುವುದಾಗಿದೆ. ಪಿರ್ಯಾದಿದಾರರಿಗೆ ಮದುವೆಯಾಗಿ ಸುಮಾರು 5 ವರ್ಷಗಳಾಗಿದ್ದರು ಮಕ್ಕಳಾಗಿರುವುದಿಲ್ಲ, ಇದೇ ಕೊರಗಿನಲ್ಲಿ ಪಿರ್ಯಾದಿದಾರರ ಗಂಡ ಮಾನಸಿಕವಾಗಿ ನೊಂದುಕೊಂಡಿದ್ದರು. ಪಿರ್ಯಾದಿದಾರರು ದಿನಾಂಕ 10.11.2021 ರಂದು ಬಂಟ್ವಾಳಕ್ಕೆ ಬಂದ ಸಮಯ ರಾತ್ರಿ ಪಿರ್ಯಾದಿದಾರರ ಅಕ್ಕನ ಮಗ ರಾತ್ರಿ 9.00 ಗಂಟೆಗೆ ಊಟ ಕೊಟ್ಟಿದ್ದು, ಅ ಸಮಯ ಪಿರ್ಯಾದಿದಾರರ ಗಂಡ ಅವರಲ್ಲಿ ನನಗೆ ಈಗ ಮತ್ತು ಬೆಳಗ್ಗೆ ಇದೇ ಊಟ ಸಾಕು ಬೆಳಗ್ಗೆ ತಿಂಡಿ ಬೇಡ ಅವನಲ್ಲಿ ಹೇಳಿರುವುದಾಗಿ ತಿಳಿಯಿತು. ದಿನಾಂಕ 11.11.2021 ರಂದು ಮದ್ಯಾಹ್ನದವರೆಗೂ ಬಾಗಿಲು ತೆರೆಯದೇ ಇದ್ದುದರಿಂದ ಮನೆಗೆ ಹೋಗಿ ಕೂಗಿ ಕರೆದರೂ ಬಾಗಿಲು ತೆರೆಯದೆ ಮನೆಯ ಬಾಗಿಲನ್ನು ದೂಡಿ ಒಳಗೆ ಹೋದಾಗ ಮನೆಯ ಒಳಗಡೆ ಕೋಣೆಯೊಳಗೆ ಚೂಡಿದಾರದ ಸಾಲಿನಿಂದ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಹೋಗಿ ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರ ಗಂಡ ಇತ್ತೀಚಿಗೆ ಮಕ್ಕಳಾಗದ ವಿಚಾರದಲ್ಲಿ ಬೇಸರಗೊಂಡು ಮಾನಸಿಕವಾಗಿ ನೊಂದುಕೊಂಡಿದ್ದು, ಇದೇ ಬೇಸರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ಮನೆಯಲ್ಲಿ ಯಾರೂ ಇಲ್ಲದ ಸಮಯ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 49-2021  ಕಲಂ 174 ಸಿಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 12-11-2021 10:38 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080