ಅಭಿಪ್ರಾಯ / ಸಲಹೆಗಳು

ಕಾಣೆ ಪ್ರಕರಣ: 1

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗೀತಾ, ಪ್ರಾಯ: 44 ವರ್ಷ, ಗಂಡ: ಮಠದ ಮನೆ, ಲಾಯಿಲ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಮಲ್ಲಿಕಾರ್ಜುನರವರು ಹೊರ ಜಿಲ್ಲೆಯಿಂದ ತರಕಾರಿ ತಂದು ಮಾರಾಟ ಮಾಡುತ್ತಿದ್ದು,  ದಿನಾಂಕ: 04-12-2021 ರಂದು  ಪಿರ್ಯಾದಿದಾರರ ಗಂಡ ಮನೆಯಲ್ಲಿರುವ ಸಮಯ ಗಂಡನ ಸ್ನೇಹಿತ ಪ್ರವೀಣ್ ಎಂಬಾತನು ಕರೆ ಮಾಡಿ ಧರ್ಮಸ್ಥಳದಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದು, ಲಾಯಿಲದಲ್ಲಿ  ಸಿಗು ಎಂದು ತಿಳಿಸಿದಂತೆ  ರಾತ್ರಿ ಸುಮಾರು 08-00 ಗಂಟೆಗೆ ಮಲ್ಲಿಕಾರ್ಜುನರವರು ಸ್ಕೂಟರಿನಲ್ಲಿ ಮನೆಯಿಂದ ತೆರಳಿದವರು ಇದುವರೆಗೆ ವಾಪಾಸು  ಮನೆಗೂ ಬಾರದೇ  ಪೋನ್ ಸಂಪರ್ಕಕ್ಕೂ ಸಿಗದೇ ಸಂಬಂದಿಕರ ಮನೆಗೂ ಹೋಗದೇ  ಕಾಣೆಯಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 106/2021  ಕಲಂ:  ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೆಂಕಪ್ಪ ಗೌಡ, ಪ್ರಾಯ: 40 ವರ್ಷ, ತಂದೆ: ದಿ: ಅಮುಣಿ ಗೌಡ,  ವಾಸ; ಬೀಜದಡಿ ಮನೆ, ಕೊಯ್ಯೂರು ಗ್ರಾಮ,  ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಅವಿವಾಹಿತ ರಾಗಿದ್ದು, ಅವರ ತಂದೆಯ ಹಳೆ ಮನೆಯಲ್ಲಿ ಒಬ್ಬರೇ ವಾಸ್ತವ್ಯ ಇದ್ದು, ಇವರ ತಂದೆಯ ತಮ್ಮ ಲಿಂಗಪ್ಪ ಗೌಡ ಮತ್ತು ಪಿರ್ಯಾದಿದಾರರಿಗೆ ಸುಮಾರು 30 ವರ್ಷಗಳಿಂದಲೂ ಜಾಗದ ತಕರಾರು ಇದ್ದು, ದಿನಾಂಕ: 10-12-2021 ರಂದು ರಾತ್ರಿ 08-45 ಗಂಟೆಗೆ  ಮನೆಯ ಹೊರಗೆ ಜೋರಾಗಿ ಬೊಬ್ಬೆ ಕೇಳಿ  ಹೊರಗೆ ಬಂದು ನೋಡಿದಾಗ ಲಿಂಗಪ್ಪ ಗೌಡರವರ ಮಗ ಪ್ರಮೋದ್ ಎಂಬಾತನು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ದೊಣ್ಣೆಯಿಂದ ಪಿರ್ಯಾದಿದಾರರ ಹಣೆಗೆ ಹೊಡೆದು ರಕ್ತ ಗಾಯ ಮಾಡಿದ್ದಲ್ಲದೇ ಕಾಲಿನಿಂದ ತುಳಿದಿದ್ದು, ಈ ಸಮಯ ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ  ಪಿರ್ಯಾದಿದಾರರ ಅಣ್ಣ ಹಾಗೂ ಇತರರು ಬರುವುದನ್ನು ಕಂಡು ಆರೋಪಿ ನೀನು ಇನ್ನು ಈ ಮನೆಯಲ್ಲಿ ಇದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ  ಅಲ್ಲಿಂದ ಹೋಗಿರುತ್ತಾನೆ..ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 105/2021 ಕಲಂ: 447,504,324,506 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಉಪ್ಪಿನಂಗಡಿ ಪೊಲೀಸ್ ಠಾಣೆ : ದಿನಾಂಕ:11-12-2021 ರಂದು  ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 157/2021  ಕಲಂ  354 324 504 506  ಐ ಪಿ ಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಲೀಲಾವತಿ (50) ಗಂಡ ಪದ್ಮನಾಭ ವಾಸ;  ಮಡಿಮುಗೆರು ಮನೆ ಶಂಭೂರು  ಗ್ರಾಮ ಎಂಬವರ ದೂರಿನಂತೆ ಪಿರ್ಯದುದಾರರು  ಮನೆ ಕೆಲಸ ಮಾಡಿಕೊಂಡಿದ್ದು ಪಿರ್ಯಾದುದಾರರ ಮನೆಯಲ್ಲಿ ಸಂಸಾರದ ಜೊತೆಯಲ್ಲಿ ವಾಸವಾಗಿದ್ದು  ಪಿರ್ಯಾದುದಾರರ ಮಗ ಮೃತ ದಿನೇಶನು ವಿಪರೀತ ಮಧ್ಯಸೇವನೆ ಮಾಡಿಕೊಂಡಿದ್ದು ದಿನಾಂಕ 11.12.2021 ಬೆಳಿಗ್ಗೆ 9.00 ಗಂಟೆಗೆ ಕೂಲಿ ಕೆಲಸಕ್ಕೆ ಹೋಗಿರುತ್ತೇನೆ ಸಾಯಾಂಕಾಲ 7.15 ಗಂಟೆಗೆ  ಪಿರ್ಯಾದುದಾರರ ಮೊಮ್ಮಗಳು  ಪಿರ್ಯಾದುದಾರಿರಗೆ ಮಾವ ದಿನೇಶನು ಮನೆಯ ಒಳಗೆ  ಕೋಣೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದು ಕೂಡಲೇ ಪಿರ್ಯಾದುದಾರರ  ಓಡಿಕೊಂಡು ಬಂದು ಮನೆಯ ಒಳಗೆ ಬಂದಾಗ ದಿನೇಶ ನು ಮನೆಯ ಕೋಣೆಯ ಒಳಗೆ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದನ್ನು ಜೋರಾಗಿ ಬೊಬ್ಬೆ ಹಾಕಿದಾಗ ನೆರೆಯ ಸುಂದರ ಹಾಗೂ ಇತರರು ಬಂದು ಫ್ಯಾನಿಗೆ ಹಾಕಿದ ಸರಿಗೆಯನ್ನು  ತುಂಡರಿಸಿ ನೋಡಿದಾಗ ಆತನು ಮಾತನಾಡದೇ ಇದ್ದು, ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 52-2021 ಕಲಂ 174  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯಶವಂತ (19) ತಂದೆ: ಕೃಷ್ಣಪ್ಪ  ಮೂಲ್ಯ,   ವಾಸ: ಹೊಸಹೊಕ್ಲು  ಮನೆ,  ಸರ್ವಜ್ಞ ನಗರ,  ಹೊಸಂಗಡಿ  ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಾಯಿ ಶ್ರೀಮತಿ  ಪುಷ್ಪ(45) , ಅವರ ತಾಯಿ ಶ್ರೀಮತಿ  ಅಪ್ಪಿಯವರು ಸುಮಾರು  5 ವರ್ಷಗಳ  ಹಿಂದೆ   ತೀರಿಹೋಗಿದ್ದು,  ಹಾಗೂ ಅವರ  ಗಂಡ  ಕೃಷ್ಣಪ್ಪ  ಮೂಲ್ಯ  ರವರು  ಅನಾರೋಗ್ಯದಿಂದ  ಬಳಲುತ್ತಿದ್ದು  ಈ  ವಿಚಾರದಲ್ಲಿ   ಶ್ರೀಮತಿ   ಪುಷ್ಪ  ಇವರು  ಮಾನಸಿಕವಾಗಿ  ನೊಂದುಕೊಂಡಿದ್ದರು, ಹೀಗಿರುತ್ತಾ  ದಿನಾಂಕ:  10-12-2021 ರಂದು   ರಾತ್ರಿ  11:00 ಗಂಟೆಗೆ  ಊಟ  ಮಾಡಿ  ಮಲಗಿದ್ದು, ಈ  ದಿನ  ಬೆಳಿಗ್ಗೆ  06:00 ಗಂಟೆಗೆ ನೋಡಲಾಗಿ  ಪುಷ್ಪರವರು ಕಾಣದೇ  ಇದ್ದುದರಿಂದ  ಹುಡುಕಾಡಿದಾಗ  ಅವರ  ವಾಸ್ತವ್ಯದ  ಮನೆಯ  ಹತ್ತಿರದಲ್ಲಿರುವ  ಬಾವಿಯ  ನೀರಿನಲ್ಲಿ  ಮೃತ  ದೇಹ ಕಂಡು  ಬಂದಿದ್ದು  ಅವರ  ಯಾವುದೋ  ಕಾರಣದಿಂದ  ಮಾನಸಿಕವಾಗಿ  ನೊಂದು  ಜೀವನದಲ್ಲಿ  ಜೀಗುಪ್ಸೆಗೊಂಡು  ನಿನ್ನೆ   ರಾತ್ರಿ  11:00  ಗಂಟೆಯಿಂದ  ಈ  ದಿನ ಬೆಳಿಗ್ಗೆ  06:00 ಗಂಟೆಯ  ಮದ್ಯ ಕಾಲದಲ್ಲಿ   ಬಾವಿಯ  ನೀರಿಗೆ  ಹಾರಿ   ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ:30-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಆರತಿ ಪ್ರಾಯ:37 ವರ್ಷ ಗಂಡ; ಸುಧಾಕರ ಕೊಟ್ಯಾನ್ ವಾಸ: ಮೊಡಂಗಲ್ ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ;11-12-2021 ರಂದು ಬೆಳಿಗ್ಗೆ 08.15 ಗಂಟೆ ಸಮಯಕ್ಕೆ  ಬೆಳ್ತಂಗಡಿ  ತಾಲೂಕು ಧರ್ಮಸ್ಥಳ ಗ್ರಾಮದ  ಮೊಡಂಗಲ್ ಎಂಬಲ್ಲಿಂದ ಪಿರ್ಯಾದುದಾರರ ಗಂಡ  ಸುಧಾಕರ ಕೊಟ್ಯಾನ್ (45) ಆಟೋ ರಿಕ್ಷಾದಲ್ಲಿ ಮಗಳನ್ನು ಶಾಲೆಗೆ ಹಾಗೂ ಪಿರ್ಯಾದುದಾರರನ್ನು ರಜತಾದ್ರಿ ವಸತಿ ಗೃಹಕ್ಕೆ ಕೆಲಸಕ್ಕೆ ಬಿಟ್ಟು  ಅಲ್ಲಿಂದ ಹೋಗಿರುತ್ತಾರೆ.11.00 ಗಂಟೆ ಸಮಯಕ್ಕೆ ಪಿರ್ಯಾದುದಾರರ ಮಗ ಪ್ರಥಮ್  ತಾಯಿಯ ತವರು ಮನೆಯಾದ   ಮೊಡಬಿದ್ರೆಯಿಂದ ಮನೆಗೆ ಬಂದು ನೋಡಿದಾಗ ಆಟೋ ರಿಕ್ಷಾ ಮನೆಯ ಶೆಡ್ ನಲ್ಲಿದ್ದು   ಸಂಶಯಗೊಂಡು ಹುಡುಕಾಡಿದಲ್ಲಿ ಮನೆಯ ಪಕ್ಕದಲ್ಲಿರುವ ಕಾಡು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣುಬಿಗಿದು ನೇತಾಡುವ  ಸ್ಥಿತಿಯಲ್ಲಿ  ಕಂಡುಬಂದಿದ್ದು ಕೂಡಲೇ ಮಗ ಪಿರ್ಯಾದುದಾರರಿಗೆ ಕರೆಮಾಡಿ ತಿಳಿಸಿದ್ದು ಅದರಂತೆ ಜೊತೆಯಲ್ಲಿ  ಕೆಲಸ ಮಾಡುತ್ತಿದ್ದ ಇತರರೊಂದಿಗೆ ಮನೆಗೆ ಬಂದು ನೋಡಿದಾಗ ಮನೆಯ ಪಕ್ಕದಲ್ಲಿ ಇರುವ  ಕಾಡು ಮರದ  ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣುಬಿಗಿದು ನೇತಾಡುವ ಸ್ಥಿತಿಯಲ್ಲಿ ಕಂಡುಬಂದಿರುತ್ತದೆ. ಪಿರ್ಯಾದುದಾರರ ಗಂಡನು ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಯು ಡಿ ಆರ್  59/2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-12-2021 11:26 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080