ಅಪಘಾತ ಪ್ರಕರಣ: ೦4
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ದಾವೂದ್ ಕೆ. ಪ್ರಾಯ: 36 ವರ್ಷ,ತಂದೆ: ಬಡುವಕುಂಞಿ,ವಾಸ: ಸಣಂಗಲ ಮನೆ, ಕೆಯ್ಯೂರು ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 12.01.2022 ರಂದು ನಗರ ಎಂಬಲ್ಲಿ ಕುಂಬ್ರ–ಬೆಳ್ಳಾರೆ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದಾಗ ಬೆಳ್ಳಾರೆ ಕಡೆಗೆ KA 21 S 6215 ನೇ ಸ್ಕೂಟರನ್ನು ಅದರ ಸವಾರೆಯಾದ ಶರಣ್ಯ ಎಂಬವರು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಾ ರಸ್ತೆಯ ತೀರಾ ಎಡ ಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಫಿರ್ಯಾದುದಾರರ ತಂದೆ ಬಡುವಕುಂಞಿಯವರಿಗೆ ಢಿಕ್ಕಿಯುಂಟು ಮಾಡಿದ್ದು, ಈ ಅಪಘಾತದಿಂದಾಗಿ ಬಡುವಕುಂಞಿಯವರು ರಸ್ತೆಗೆ ಬಿದ್ದು, ಸದ್ರಿಯವರ ಎಡ ಬದಿಯ ಕಾಲಿನಲ್ಲಿ ಗುದ್ದಿದ ರೀತಿಯ ಗಾಯ, ತಲೆಯಲ್ಲಿ ಗುದ್ದಿದ ರೀತಿಯ ಗಾಯ, ಬಲ ಕೋಲು ಕೈಯಲ್ಲಿ ರಕ್ತ ಗಾಯ ಉಂಟಾಗಿದ್ದು. ಬಳಿಕ ಫಿರ್ಯಾದುದಾರರು ಮತ್ತು ಹಾರಿಸ್ ಎಂಬವರು ಬಡುವಕುಂಞಿಯವರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರಿನ ಹಿತ ಆಸ್ಪತ್ರೆಗೆ ಕರೆ ತಂದಾಗ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಬಡುವಕುಂಞಿಯವರನ್ನು ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅಕ್ರ: 07/2022 ಕಲo: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಮೋನಪ್ಪ ಎಂ ಪ್ರಾಯ 56 ವರ್ಷ, ತಂದೆ: ಸುಬ್ಬಮೂಲ್ಯ, ವಾಸ: ಮಣಿಮಜಲು ಮನೆ, ಕಳಂಜ ಗ್ರಾಮ ಮತ್ತು ಅಂಚೆ, ಸುಳ್ಯ ತಾಲೂಕು, ದ.ಕ. ಜಿಲ್ಲೆ ರವರು ದಿನಾಂಕ 10-01-2022 ರಂದು ಆತನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ-21-ಜೆ-9270 ನೇಯದರಲ್ಲಿ ಕಲ್ಪಣೆಗೆ ಹೋಗುತ್ತಿರುವಾಗ ಸುಳ್ಯ ತಾಲೂಕು ಬಾಳಿಲ ಗ್ರಾಮದ ಪಂಜಿಗಾರು ಎಂಬಲ್ಲಿಗೆ ಬೆಳಿಗ್ಗೆ 10-30 ಗಂಟೆಗೆ ತಲುಪಿದಾಗ ಪಂಜಿಗಾರು-ಕಲ್ಪಣೆ ರಸ್ತೆಯಲ್ಲಿ ಕಲ್ಪಣೆ ಕಡೆಯಿಂದ ಬೆಳ್ಳಾರೆ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ನಂಬ್ರ ಕೆಎ-21-ಬಿ-0735 ನೇಯದಕ್ಕೆ ಓಮ್ನಿ ಕಾರು ನಂಬ್ರ ಕೆಎ-21-ಪಿ-6994 ನೇಯದರ ಚಾಲಕ ಜಗನ್ನಾಥ ಪೂಜಾರಿ ಓಮ್ನಿ ಕಾರನ್ನು ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಚಾಲಕ ಹುಕ್ರಪ್ಪ ರವರಿಗೆ ಕುತ್ತಿಗೆಯ ಭಾಗಕ್ಕೆ ತೀವ್ರ ರೀತಿಯ ಗುದ್ದಿದ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ 05/2022 ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅನ್ಸಾರ್ ಪ್ರಾಯ; 22 ವರ್ಷ ತಂದೆ; ಅಬ್ದುಲ್ ವಾಸ;ಕೋಚಕಟ್ಟೆ ಮನೆ, ಪೆರಾಬೆ ಗ್ರಾಮ ಕಡಬ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ:11.01.2022 ರಂದು ಪಿರ್ಯಾದುದಾರರ ತಂದೆ ಕೆ ಅಬ್ದುಲ್ಲಾ ರವರು ತಮ್ಮ ಬಾಬ್ತು KA 21 V 4786 ನೇ ಆ್ಯಕ್ಟಿವಾ ಹೊಂಡ ಸ್ಕೂಟರ್ ನಲ್ಲಿ ಖಾಸಗಿ ಕೆಲಸದ ನಿಮಿತ್ತ ಆಲಂಕಾರು ಕಡೆಗೆ ಹೋಗಿದ್ದು, ಸಂಜೆ ಸಮಯ 6:10 ಗಂಟೆಗೆ ಪಿರ್ಯಾದುದಾರರ ತಂದೆ ಅಬ್ದುಲಾ ರವರು ಬಾಬ್ತು KA 21 V 4786 ನೇ ಆ್ಯಕ್ಟಿವಾ ಹೊಂಡ ಸ್ಕೂಟರ್ ನಲ್ಲಿ ಆಲಂಕಾರು ಕಡೆಯಿಂದ ಚಲಾಯಿಸಿಕೊಂಡು ಮನೆಗೆ ಬರುವಾಗ ಪೆರಾಬೆ ಗ್ರಾಮದ ಮಾವಿನ ಕಟ್ಟೆ ಎಂಬಲ್ಲಿ ಉಪ್ಪಿನಂಗಡಿ –ಕಡಬ ರಾಜ್ಯ ರಸ್ತೆಯಲ್ಲಿ ಬಂದು ಬಲಬದಿಯ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸುತ್ತೀರುವ ಸಮಯ ಅದೇ ಮಾರ್ಗವಾಗಿ ಆಲಂಕಾರು ಕಡೆಯಿಂದ ಕಡಬ ಕಡೆಗೆ ಹಿಂಬದಿಯಿಂದ ಬರುತ್ತಿದ್ದ ಓಮ್ನಿ ಕಾರಿನ ಚಾಲಕನು ಕಾರನ್ನು ಅಜಾಗರೂಕತೆ ಹಾಗೂ ತೀರ ನಿರ್ಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ತಂದೆ ಅಬ್ದುಲ್ಲಾ ಚಲಾಯಿಸುತ್ತಿದ್ದ ಆ್ಯಕ್ಟಿವಾ ಹೊಂಡಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ತಂದೆಯವರು ಡಾಮರು ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದುದಾರರು ಹಾಗೂ ಪಿರ್ಯಾದುದಾರರ ಅಂಗಡಿಗೆ ಸಾಮಾನು ಖರೀದಿಸಲು ಬಂದಿದ್ದ ಅಶ್ರಪ್ ಮತ್ತು ಪಿರ್ಯಾದುದಾರರ ತಾಯಿ ಖತೀಜ ರವರು ಸೇರಿಕೊಂಡು ಗಾಯಗೊಂಡ ಪಿರ್ಯಾದುದಾರರ ತಂದೆ ಅಬ್ದುಲ್ಲಾ ರವರನ್ನು ಉಪಚರಿಸಿ ಅಬುಲ್ಲಾರವರಿಗೆ ಎಡ ಕೈ ಬುಜಕ್ಕೆ, ಎಡ ಕೈ ಮೊನಗಂಟಿಗೆ ಗುದ್ದಿದ ನೋವುಂಟಾಗಿದ್ದು, ಎರಡು ಕಾಲುಗಳ ಮಂಡಿಗೆ ರಕ್ತಗಾಯ ಹಾಗೂ ಮೂಗಿಗೆ ರಕ್ತ ಗಾಯವಾಗಿರುತ್ತದೆ. ಅಪಘಾತ ಉಂಟು ಮಾಡಿದ ಓಮ್ನಿ ಕಾರಿನ ನಂಬ್ರವನ್ನು ನೋಡಲಾಗಿ KA 21 P 3589 ಆಗಿದ್ದು, ಅದರ ಚಾಲಕ ತುಕರಾಜ್ ಕರ್ಕರ ಎಂಬುವರಾಗಿದ್ದು, ನಂತರ ಪಿರ್ಯಾದುದಾರರು ತನ್ನ ತಂದೆಯ ಚಿಕತ್ಸೆಯ ಬಗ್ಗೆ ಪಿರ್ಯಾದುದಾರರಾದ ಅನ್ಸಾರ್ ಹಾಗೂ ಅಶ್ರಪ್ ಒಂದು ಖಾಸಗಿ ವಾಹನದಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆ ಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪಿರ್ಯಾದುದಾರರ ತಂದೆಯಾದ ಅಬ್ದುಲ್ಲಾ ರವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 04/2022 ಕಲಂ. 279,337 IPC ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಇಬ್ರಾಹಿಂ ಪ್ರಾಯ; 62 ವರ್ಷ ತಂದೆ; ದಿ. ಮಹಮ್ಮದ್ ವಾಸ;ಚಾಕೋಟೆಕೆರೆ ಮನೆ, ಬಂಟ್ರ ಗ್ರಾಮ ಕಡಬ ತಾಲೂಕು ರವರು ದಿನಾಂಕ 11-01-2022 ರಂದು ಮದ್ಯಾಹ್ನ 3-00 ಗಂಟೆಯ ಸಮಯ ಮನೆಯ ಅಂಗಳದಲ್ಲಿ ನಿಂತಿದ್ದ ಸಮಯ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಡಾಮಾರು ರಸ್ತೆಯಲ್ಲಿ ಮರ್ದಾಳ ಕಡೆಯಿಂದ ಪೇರಡ್ಕ ಕಡೆಗೆ ಹೋಗುತ್ತಿದ್ದ ಒಂದು ಆಟೋ-ರಿಕ್ಷಾದ ಚಾಲಕನು ತೀರಾ ನಿರ್ಲಕ್ಷತನ ಹಾಗೂ ಅಜಾಗರುಕತೆಯಿಂದ ಚಾಲಯಿಸಿಕೊಂಡು ಬರುತ್ತಿದ್ದು ಅಟೋರಿಕ್ಷಾದಿಂದ ಪ್ರಯಾಣಿಕರೋರ್ವರು ಆಯತಪ್ಪಿ ರಸ್ತೆಯ ಅಂಚಿನಲ್ಲಿರುವ ಮಣ್ಣಿನ ರಸ್ತೆಗೆ ಆಟೋ ರಿಕ್ಷಾದಿಂದ ಕೆಳಗೆ ಬಿದ್ದಿದ್ದು ತಕ್ಷಣ ಅಲ್ಲೆ ನಿಂತಿದ್ದ ಪಿರ್ಯಾದುದಾರರು ಕೂಡಲೇ ಅಟೋರಿಕ್ಷಾದ ಹತ್ತಿರ ಬಂದು ಬಿದ್ದವರನ್ನು ಉಪಚರಿಸಿ ನೋಡಲಾಗಿ ಬಲಕಾಲು ಹಾಗೂ ಬಲಕೈಗೆ ಗುದ್ದಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ್ದ ಬಶೀರ್ ಮತ್ತು ಮಹಮ್ಮದ್ ಎಂಬುವವರೊಂದಿಗೆ ಸೇರಿಕೊಂಡು ಗಾಯಗೊಂಡ ಮಹಮ್ಮದ್ ಕಬೀರ್ ಎಂಬುವವರನ್ನು 108 ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರು ಹೈಲ್ಯಾಂಡ್ ಆಸ್ವತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಗಿ ದಾಖಲು ಮಾಡಿದ್ದು ನಂತರ ಅಪಘಾತ ಉಂಟು ಮಾಡಿದ ವಾಹನವನ್ನು ನೊಡಲಾಗಿ KA-21-C-1039 ನೇ ಆಟೋರಿಕ್ಷಾ ವಾಗಿದ್ದು ಅದರ ಚಾಲಕನ ಹೆಸರು ತಿಳಿಯಲಾಗಿ ಅಬ್ದುಲ್ ರಶೀದ್ ಎಂಬುದಾಗಿ ತಿಳಿದಿದ್ದು ಈ ಅಪಘಾತಕ್ಕೆ KA-21-C-1039 ನೇ ಆಟೋರಿಕ್ಷಾ ಚಾಲಕ ಅಬ್ದುಲ್ ರಶೀದ್ ಎಂಬಾತನ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿರುವುದೇ ಕಾರಣವಾಗಿರುತ್ತದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 05/2022 ಕಲಂ. 279, 337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: 01
ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಸಂತ ದೇವಾಡಿಗ ಪ್ರಾಯ 44 ವರ್ಷ ತಂದೆ:ಆನಂದ ದೇವಾಡಿಗ ವಾಸ:ನೇಂಜ ಮನೆ ಬಿಳಿಯೂರು ಗ್ರಾಮ ಬಂಟ್ವಾಳ ತಾಲೂಕು ರವರು ಕೃಷಿಕನಾಗಿದ್ದು ಮನೆಯ ಬಳಿ ಸುಮಾರು ಎರಡು ವರೆ ಎಕರೆ ಅಡಿಕೆ ಕೃಷಿ ಮಾಡುತ್ತಿದ್ದು. ಸದ್ರಿ ಅಡಿಕೆ ಕೃಷಿಯಿಂದ ಬಂದ ಅಡಿಕೆಯನ್ನ ಪಿರ್ಯಾದಿಯ ಅಂಗಳದಲ್ಲಿ ಮತ್ತು ಸೋಲಾರ್ ನಲ್ಲಿ ಒಗಣಗಿಸಿದ್ದು ದಿನಾಂಕ:11..01.2022 ರಂದು ಸಂಜೆ 6 .00 ಗಂಟೆಗೆ ಪಿರ್ಯಾದಿದಾರರು ಸೋಲರ್ ನಲ್ಲಿ ಹಾಕಿದ ಅಡಕೆಯನ್ನು 6 ಗೋಣಿಯಲ್ಲಿ ತುಂಬಿಸಿ ಕಟ್ಟಿ ಅಂಗಳದಲ್ಲಿ ಇರಿಸಿದ್ದು, ಅಂಗಳದಲ್ಲಿ ಒಣಗಲು ಹಾಕಿದ ಸುಮಾರು 8 ಗೋಣಿಯಷ್ಟು ಅಡಿಕೆಗೆ ಪ್ಲಾಸ್ಟಿಕ್ ಹೊದಿಸಿ. ಪಿರ್ಯಾದಿದಾರರು ರಾತ್ರಿ ಊಟ ಮಾಡಿ 10.00 ಗಂಟೆಗೆ ಮಲಗಿದ್ದು. ಬೆಳಿಗ್ಗೆ 06.00 ಗಂಟೆಗೆ ಎದ್ದು ನೋಡಿದಾಗ ಯಾರೋ ಕಳ್ಳರು ಗೋಣಿಚೀಲದಲ್ಲಿ ಕಟ್ಟಿದ ಹಾಗೂ ಒಣಗಲು ಹಾಕಿದ ಒಟ್ಟು ಸುಮಾರು 150 ಕೆಜಿ ಯಷ್ಟು ಅಡಿಕೆ ಕದ್ದುಕೊಂಡು ಹೋಗಿದ್ದು. ಸದ್ರಿ ಕಳವಾದ ಅಡಿಕೆಯ ಅದಾಂಜು ಮೌಲ್ಯ ರೂ 70.000 ಆಗಬಹುದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 10/2022 ಕಲಂ:379ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವಬೆದರಿಕೆ ಪ್ರಕರಣ: ೦1
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀ ಪ್ರವೀಣ್ ಶೆಟ್ಟಿ ಪ್ರಾಯ 40 ವರ್ಷ ತಂದೆ ರಾಧಕೃಷ್ಣ ಶೆಟ್ಟಿ. ವಾಸ ಮುಕುಡ ಮನೆ ಪಂಜಿಕಲ್ಲು ಗ್ರಾಮ ಬಂಟ್ವಾಳ ತಾಲೂಕು ರವರು ಕೃಷಿ ಕೆಲಸ ಮಾಡಿಕೊಂಡು ಬರುತ್ತಿದ್ದು, ದಿನಾಂಕ 29.12.2021 ರಂದು ಹೆಕ್ಟರ್ ಮೆಂಡೋನ್ಸಾರವರಿಂದ ಪಂಜಿಕಲ್ಲು ಗ್ರಾಮದಲ್ಲಿರುವ ಸರ್ವೆ ನಂ 115/3 ರಲ್ಲಿ ಇರುವ ಕೃಷಿ ಜಾಗವನ್ನು ಖರೀದಿಸಿ ಅದರಲ್ಲಿರುವ ಮನೆಯಲ್ಲಿ ವಾಸವಾಗಿರುತ್ತಾರೆ .ಹೀಗಿರುತ್ತಾ ದಿನಾಂಕ 12.01.2022 ರಂದು ಬೆಳಿಗ್ಗೆ 10.00 ಗಂಟೆ ಸಮಯಕ್ಕೆ ಪಿರ್ಯಾದುದಾರರು ಮನೆಯಲ್ಲಿರುವ ಸಮಯ ಪಾಸ್ಕೆಲ್ ಡೊನಾಲ್ಡ್ ಪಿಂಟೋ ಮತ್ತು ಇತರ ಮೂರು ಜನರು ಏಕಾಏಕಿ ಪಿರ್ಯಾದುದಾರರ ಮನೆಯೊಳಗೆ ಬಂದು ಜಾಗ ಖರೀದಿ ಮಾಡಿದ ಬಗ್ಗೆ ನೀಡಬೇಕಾದ ಉಳಿದ ಹಣವನ್ನು ಯಾಕೆ ಕೊಡುವುದಿಲ್ಲ ಈಗಲೇ ಕೊಡಬೇಕು, ಅಲ್ಲದೆ ನನಗೆ ಪ್ರತ್ಯೇಕ ಹಣ ಕೊಡಬೇಕು. ಕೊಡದೇ ಇದ್ದಲ್ಲಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ .ಕೊಡದೇ ಹೇಗೆ ಇಲ್ಲಿ ವಾಸ ಮಾಡುತ್ತಿ ನೋಡುತ್ತೇನೆ” ಎಂದು ಎಲ್ಲರು ಸೇರಿ ಪಿರ್ಯಾದುದಾರರಿಗೆ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 04-2022 ಕಲಂ 448,504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕುಮಾರ ಪ್ರಾಯ:45 ವರ್ಷ ತಂದೆ ;ಚೋಮ ವಾಸ; ಬೆದ್ರಾಜೆ ಮನೆ, ಕೋಡಿಂಬಾಳ ಗ್ರಾಮ.ಕಡಬ ತಾಲೂಕು ಎಂಬವರು ನೀಡಿದ ದೂರಿನಂತೆ ಪಿರ್ಯಾದುದಾರರು ಕೂಲಿ ಕೆಲಸ ಮಾಡಿಕೊಂಡಿದ್ದು .ಪಿರ್ಯಾದುದಾರರ ಪತ್ನಿಯಾದ ಲಲಿತಳಳು ಆರೋಗ್ಯದ ಸಮಸ್ಯೆಯಿದ್ದು ಎಲ್ಲೂ ಕೆಲಸಕ್ಕೆ ಹೋಗದೇ ಮನೆಯಲ್ಲಿಯೋ ದನಕರುಗಳ ಸಾಕಾಣಿಕೆ ಮಾಡಿಕೊಂಡಿದ್ದು ಹೀಗಿರುವಾಗ ದಿನಾಂಕ; 12.01.2022 ರಂದು ಪಿರ್ಯಾದುದಾರರು ಬೆಳಗ್ಗೆ 08;30 ಗಂಟೆಗೆ ಹಮೀದ್ ಎಂಬವರ ಮನೆಗೆ ಕೂಲಿ ಕೆಲಸಕ್ಕೆ ಹೋಗಿದ್ದು ನಂತರ ಪಿರ್ಯಾದಿದಾರರು ಹಮೀದ್ ರವರ ಮನೆಯಿಂದ ಮಧ್ಯಾಹ್ನ 01;15 ಗಂಟೆಗೆ ಊಟ ತೆಗೆದು ಕೊಂಡು ಮನೆಗೆ ಹೋದಾಗ ಮನೆಯಲ್ಲಿ ಪಿರ್ಯಾದಿದಾರರಾ ಪತ್ನಿ ಲಲಿತಾಳು ಮನೆಯ ನಿರ್ಮಾಣಕ್ಕೆ ಉಪಯೋಗಿಸಿದ ಕಬ್ಬಿಣದ ಪೈಪಿಗೆ ಹಗ್ಗದಿಂದ ನೇಣು ಬಿಗಿದು ಕೊಂಡು ನೇತಾಡುತ್ತಿದ್ದನ್ನು ಕಂಡು ಬೊಬ್ಬೆ ಹಾಕಿದಾಗ ಅಲ್ಲಿ ಕೆಲಸ ಮಾಡುತ್ತಿದ್ದ, ರಶೀದ್ ಎಂಬಾತನು ಸ್ಥಳಕ್ಕೆ ಬಂದಿದ್ದು ನಂತರ ರಶೀದ್ ಮತ್ತು ಪಿರ್ಯಾದಿದಾರರು ಸೇರಿಕೊಂಡು ಲಲಿತಾಳು ನೇಣು ಬಿಗಿದುಕೊಂಡಿದ್ದ ಹಗ್ಗವನ್ನು ಕತ್ತಿಯಿಂದ ಕತ್ತರಿಸಿ ಲಲಿತಾಳ ದೇಹವನ್ನು ಕೆಳಗಿಳಿಸಿ ನೋಡಲಾಗಿ ಮೃತ ಲಲಿತಾಳ ಜೀವ ಹೋಗಿರುವುದಾಗಿ ತಿಳಿದಿದ್ದು . ಪಿರ್ಯಾದುದಾರರ ಪತ್ನಿಯು ಈ ಮೊದಲಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದು ಮಾನಸಿಕವಾಗಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ;05/2022 ಕಲಂ. 174 Crpc ಯಂತೆ ಪ್ರಕರಣ ದಾಖಲಾಗಿರುತ್ತದೆ.