ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸೀಮಂತ್ ಕುಮಾರ್  ಪ್ರಾಯ 18 ವರ್ಷ ತಂದೆ: ಜಯಕುಮಾರ್ ವಾಸ: ರುಕ್ಮಿಣಿ ನಿವಾಸ, ಚರ್ಚ್ ರಸ್ತೆ, ಬೆಳ್ತಂಗಡಿ ಕಸಬಾ ಗ್ರಾಮ. ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ರವರು ದಿನಾಂಕ: 11-03-2021 ರಂದು ಕೆಎ 21 ಎಮ್ 5046 ನೇ SCORPIO ಕಾರಿನಲ್ಲಿ ಸ್ನೇಹಿತರಾದ ಚನ್ನಬಸವ, ನರಸಿಂಹ, ಸ್ವರೂಪ್, ಪ್ರಶಾಂತ್, ಶರತ್ ರವರೊಂದಿಗೆ ಸಹಪ್ರಯಾಣಿಕರಾಗಿ ಕುಳಿತುಕೊಂಡು SCORPIO ಕಾರನ್ನು ಪಿರ್ಯಾದಿದಾರರ ಸ್ನೇಹಿತ  ಆಕಾಶ್ ರವರು ಚಲಾಯಿಸಿಕೊಂಡು ಸವಣಾಲು ಕಡೆಯಿಂದ ಚರ್ಚ್ ರೋಡ್ ಕಡೆಗೆ ಬರುತ್ತಾ ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿಯ ತಿರುವು ರಸ್ತೆಯಲ್ಲಿ ದುಡುಕುತನದಿಂದ ಚಲಾಯಿಸಿ ಓಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ವಾಹನ ರಸ್ತೆಯ ಬಲಬದಿಗೆ ಬಲಮಗ್ಗುಲಾಗಿ ಮಗಚಿ ಬಿದ್ದು ಕಾರು ಸಂಪೂರ್ಣ ಜಖಂ ಆಗಿ ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಎಡ ಹಣೆಗೆ ಬಲಕೈಯ ಭುಜಕ್ಕೆ ಗುದ್ದಿದ ಗಾಯ, ಚನ್ನಬಸವ ರವರಿಗೆ ಎರಡೂ ಕೈಗೆ, ಮುಖಕ್ಕೆ ಗುದ್ದಿದ ಗಾಯ, ನರಸಿಂಹ ರಿಗೆ ಬಲಕಿವಿಯ ಕೆಳಗೆ, ದವಡೆಗೆ ಗುದ್ದಿದ ಗಾಯ, ಸ್ವರೂಪ್ ಗೆ ಮೂಗಿಗೆ ಗುದ್ದಿದ ಗಾಯ, ಪ್ರಶಾಂತ್ ಗೆ ಎಡ ಕೈಯ ಉಂಗುರ ಬೆರಳಗೆ ತರಚಿದ ಗಾಯಗೊಂಡು ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 22/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ..

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಹೇಮಕುಮಾರ ಆನಂದ್, ಪ್ರಾಯ ;56 ವರ್ಷತಂದೆ; ದಿ// ಆರ್, ಹೆಚ್, ಆನಂದ್  ವಾಸ;2ನೇ ಅಡ್ಡರಸ್ತೆ ಎಸ್ ಡಿ ಸಿ ಸಿ ಬ್ಯಾಂಕ್ ಬಳ್ಳಿ ಕಾಂಪೌಂಡ್ , ಆಶೋಕ್ ನಗರ ಅಂಚೆ ಮಂಗಳೂರು ತಾಲೂಕು ರವರ ಅಣ್ಣನ ಮಗ ಶ್ರೇಯಸ್ ಆನಂದರವರು ದಿನಾಂಕ;12.03.2021 ರಂದು KA-21-Q-5332 ನೇ ಮೋಟರ್ ಸೈಕಲಿನಲ್ಲಿ ಪುತ್ತೂರಿನಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಪುದು ಗ್ರಾಮದ ಫರಂಗಿಪೇಟೆ ರವಳನಾಥ ದೇವಸ್ಥಾನದ ಬಳಿ ತಲುಪಿದಾಗ ಒಳರಸ್ತೆಯಿಂದ KA-37-A-2938 ಟಿಪ್ಪರ್  ವಾಹನವನ್ನು ಅದರ ಚಾಲಕ ಮೊಹಮ್ಮದ್ ಉನೈಸ್ ರವರು  ಅತಿ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕಿ ಮುಖ್ಯರಸ್ತೆಗೆ ಚಲಾಯಿಸಿ KA-21-Q-5332 ನೇ ಮೋಟರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಶ್ರೇಯಸ್ ಆನಂದ ರವರು ರಸ್ತೆಗೆ ಬಿದ್ದು ತಲೆ ,ಎದೆ ಹಾಗೂ  ಕೈ ಕಾಲಿಗೆ ಗಾಯಗೊಂಡವರು ಚಿಕಿತ್ಸೆ ಬಗ್ಗೆ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 27/2021 ಕಲಂ 279,337 ಐಪಿಸಿ  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಆಶ್ವತ್ ಕೆ  ಬಪ್ರಾಯ:32   ವರ್ಷ ತಂದೆ;  ಮೋನಪ್ಪ ಗೌಡ    ವಾಸ ; ಕಡೀರ   ಮನೆ ಗ್ರಾಮ; ಮುರುಳ್ಯ   ಗ್ರಾಮ ಕಡಬ ತಾಲೂಕು  ರವರು  ದಿನಾಂಕ:10..03.2021 ರಂದು  ಚಾರ್ವಾಕದಲ್ಲಿ ಕೆಲಸ ಮಾಡಿಕೊಂಡು ಎಡಮಂಗಲ-ದೋಳ್ಪಾಡಿ ರಸ್ತೆಯಲ್ಲಿ ತನ್ನ ಕಾರಿನಲ್ಲಿ ಮನೆಗೆ ಹೋಗುತ್ತಿರುವ ಸಮಯ ಕಡಬ ತಾಲೂಕು ದೋಳ್ಪಾಡಿ ಗ್ರಾಮದ  ಕಟ್ಟ ಎಂಬಲ್ಲಿಗೆ  ತಲುಪಿದಾಗ ಪಿರ್ಯಾದಿಯ ಎದುರಿನಿಂದ ಒಂದು ಮೋಟಾರ್ ಸೈಕಲ್ ಹೋಗುತ್ತಿದ್ದು  ಆ ಮೋಟಾರ್ ಸೈಕಲ್ ಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಮೋಟಾರ್ ಸೈಕಲ್ ಸವಾರನ ನಿಯಂತ್ರಣ ತಪ್ಪಿ  ಒಮ್ಮೆಲೆ ಬ್ರೇಕ್  ಹಾಕಿದ್ದು ಮೋಟಾರ್ ಸೈಕಲ್ ನ ಸವಾರ ಹಾಗೂ ಹಿಂಬದಿ ಸವಾರ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು ಈ ಕೂಡಲೆ ಪಿರ್ಯಾದಿದಾರರು ತಮ್ಮ ಕಾರನ್ನು ನಿಲ್ಲಿಸಿ ಗಾಯಳುಗಳನ್ನು ಮೇಲೆತ್ತಿ ಉಪಚರಿಸಿ ನೋಡಲಾಗಿ ಪರಿಚಯದ  ಚೇತನ್ ಹಾಗೂ ಸವಾರ ವಿಕ್ರಮ್ ಆಗಿದ್ದು  ಸಹಸವಾರ ಚೇತನ್ ಅವರಿಗೆ ಕಾಲು ಹಾಗೂ ತಲೆಗೆ ಗಾಯವಾಗಿದ್ದು ಸವಾರ ವಿಕ್ರಮ್ ಅವರಿಗೆ ಯಾವುದೇ ಗಾಯವಾಗಿರುವುದಿಲ್ಲ ಅಲ್ಲದೇ ಮೋಟಾರ್ ಸೈಕಲ್ ಜಖಂಗೊಂಡಿದ್ದು ಆ ಕೂಡಲೆ ಪಿರ್ಯಾದುದಾರರು ಗಾಯಳು ಚೇತನ್ ರವರನ್ನು ಕಡಬ ಸಮುದಾಯ ಅಸ್ವತ್ರೆಯಲ್ಲಿ ದಾಖಾಲು ಮಾಡಿ ವೈದ್ಯರಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದು ನಂತರ ದಿನಾಂಕ 11/03/2021 ರಂದು ಚೇತನ್ ಅವರಿಗೆ ಅಪಘಾತದಲ್ಲಿ ಉಂಟಾದ ತಲೆನೋವು ಉಲ್ಬಣಗೊಂಡಿದ್ದರಿಂದ ಮಂಗಳೂರಿನ ಎಜೆ ಆಸ್ವತ್ರೆ ಯಲ್ಲಿ ಚಿಕಿತ್ಸೆಗೆ ದಾಖಾಲು ಮಾಡಿರುವುದಾಗಿದೆ.  ಈ ಬಗ್ಗೆ ಕಡಬ ಠಾಣಾ ಅ.ಕ್ರ 12/2021 ಕಲಂ 279 337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಜೀವಬೆದರಿಕೆ ಪ್ರಕರಣ: 1

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುನೀಶ್ , ಪ್ರಾಯ: 32 ವರ್ಷ ತಂದೆ: ಟಿ. ಜೆ ಪೌಲೋಸ್ , ವಾಸ: ಕಲರ್ಭ ಮನೆ ಇಚಿಲಂಪಾಡಿ ಗ್ರಾಮ ಕಡಬ ತಾಲೂಕು ಎಂಬವರು ದಿನಾಂಕ 11.03.2021 ರಂದು ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಇಚಿಲಂಪಾಡಿ ಜಂಕ್ಷನ್ ಬಳಿ ಇರುವ ಸಮಯ ಪಂಚಾಯತ್ ವತಿಯಿಂದ ದಾರಿ ದೀಪ ಅಳವಡಿಸಲು ಸೊಲಾರ್ ಕಂಟ್ರಾಕ್ಟರ್ ನವರು ಹಾಗೂ ಪಂಚಾಯತ್ ಸದಸ್ಯರಾದ ದಿನೇಶ್ ಪೂಜಾರಿ ಹಾಗೂ ಕುರಿಯ ಕೋಸ್ @ ರೋಹಿ ಟಿ. ಎಂ ಎಂಬವರು ದಾರಿ ದೀಪ ಅಳವಡಿಸಲು ಬಂದವರಲ್ಲಿ ಪಿರ್ಯಾದಿದಾರರು ಈಗಾಗಲೇ ಸದ್ರಿ ಜಂಕ್ಷನ್ ನಲ್ಲಿ ದಾರಿ ದೀಪ ಉರಿಯುತ್ತಿದ್ದು ಆದ್ದರಿಂದ ಇಲ್ಲಿ ದಾರಿ ದೀಪ ಅಳವಡಿಸಿದರೆ ಎನೂ ಪ್ರಯೋಜನ ಎಂದು ಹೇಳಿ ಕತ್ತಲೆ ಇರುವ ದಾರಿಯಲ್ಲಿ ದಾರಿ ದೀಪ ಅಳವಡಿಸಿದರೆ ಜನರಿಗೆ ಉಪಯೋಗ ಆದಿತು ಎಂದು ಸದ್ರಿ ಪಂಚಾಯತ್ ಸದಸ್ಯ ದಿನೇಶ್ ಪೂಜಾರಿ ಹಾಗೂ ಕುರಿಯ ಕೋಸ್ @ ರೋಹಿ ಟಿ.ಎಂ ಎಂಬವರಲ್ಲಿ ಮಾತನಾಡುವ ಸಮಯ ಅಲ್ಲೇ ಪಕ್ಕದ ಅಂಗಡಿ ಬಳಿ ಇದ್ದ ಮಾಜಿ ಪಂಚಾಯತ್ ಸದಸ್ಯೆ ಮಾಧವ @ ಮಾಂಕು ಎಂಬವರು ಪಿರ್ಯಾದಿದಾರರನ್ನು  ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ಭುಜಕ್ಕೆ ಹೊಡೆದು ಇದನ್ನು ನೋಡಿದ ಅಂಗಡಿ ಪಕ್ಕ ಇದ್ದ ಪಿರ್ಯಾದಿದಾರರ ಪರಿಚಯದ ಅಬ್ರಾಹಂ ಹಾಗೂ ಅರುಣ್ ಎಂಬವರು ಪಿರ್ಯಾದಿದಾರರು ಓಡಿ ಬರುತ್ತಿರುವಾಗ ಮಾಧವ @ ಮಾಂಕು ಎಂಬವರು ಪಿರ್ಯಾದಿದಾರರನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಬಿಸಾಡಿ ಹೋಗಿದ್ದು ಇದರಿಂದ ಭುಜಕ್ಕೆ ಗುದ್ದಿದ ಗಾಯ ಹಾಗೂ ಭುಜದ ಎಲುಬು ಜಾರಿ ಇರುತ್ತದೆ .ನಂತರ ಗಾಯಗೊಂಡ ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಅಬ್ರಾಹಂ ಹಾಗೂ ಅರುಣ್ ಎಂಬವರು  ದಾಖಲು ಮಾಡಿರುತ್ತಾರೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 23/20211 ಕಲಂ: 504,506,324,323 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-03-2021 10:28 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080