ಅಪಘಾತ ಪ್ರಕರಣ: ೦5
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ದುಲ್ ಹಮೀದ್, ಪ್ರಾಯ 33 ರ್ಷ, ತಂದೆ: ದಿ|| ಆದಂ ಬ್ಯಾರಿ,, ವಾಸ: ಪೋಟ್ರ ಮನೆ, ಇಳಂತಿಲ ಅಂಚೆ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 11-04-2021 ರಂದು 08-30 ಗಂಟೆಗೆ ಹೆಸರು ತಿಳಿದ ಬಾರದ ಆರೋಪಿ ಮೋಟಾರ್ ಸೈಕಲ್ ಸವಾರ KA-21-X-0812 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ನ್ನು ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕರಾಯ ಎಂಬಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರ ಮಗಳಿಗೂ ಅಪಘಾತವಾಗಿ, ಮೂಗಿಗೆ ಹಾಗೂ ಹಣೆಗೆ ಗಾಯಗೊಂಡವರನ್ನು ಉಪ್ಪಿನಂಗಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತದ ಬಳಿಕ ಆರೋಪಿ ಸವಾರನು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೇ, ಪೊಲೀಸರಿಗೆ ಮಾಹಿತಿ ನೀಡದೇ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 68/2021 ಕಲಂ: 279, 337 ಐಪಿಸಿ & ಕಲಂ: 134(ಎ)&(ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಇರ್ಷಾದ್ ಕೆ, ಪ್ರಾಯ 28 ರ್ಷ, ತಂದೆ: ದಿ|| ಇಬ್ರಾಹಿಂ, ವಾಸ: ಪಾಪೆತ್ತಡ್ಕ ಮನೆ, ನರಿಮೊಗರು ಅಂಚೆ, ಮುಂಡೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 12-04-2021 ರಂದು 11-30 ಗಂಟೆಗೆ ಆರೋಪಿ ಕಾರು ಚಾಲಕ ರವಿ ಹೆಬ್ಬಾರ ಎಂಬವರು KA-20-P-2163 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಸುಬ್ರಹಣ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಬೆದ್ರಾಳ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡ್ಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಪಾಪೆತ್ತಡ್ಕ ಕಡೆಯಿಂದ ಪುತ್ತೂರು ಕಡೆಗೆ ಸಿದ್ಧಿಕ್ .ಪಿ (14ವರ್ಷ) ಎಂಬವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಚಲಾಯಿಸಿಕೊಂಡು ಹೋಗುತ್ತಿದ್ದ KA-21-Q-3628 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ಗೆ ಅಪಘಾತವಾಗಿ, ಪಿರ್ಯಾದುದಾರರು ಮತ್ತು ಸಿದ್ಧಿಕ್ .ಪಿ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಎಡಕೈ ತಟ್ಟು ಹಾಗೂ ಎಡಕೈಯ ಮಣಿಗಂಟಿನ ಬಳಿ ತರಚಿದ ಹಾಗೂ ಗುದ್ದಿದ ಗಾಯ ಮತ್ತು ಸಿದ್ಧಿಕ್ .ಪಿ ರವರಿಗೆ ಎಡಕಾಲಿನ ಮಣಿಗಂಟಿಗೆ, ಹಲ್ಲುಗಳಿಗೆ, ತುಟಿ, ಮೂಗಿಗೆ, ಗುದ್ದಿದ ಹಾಗೂ ತರಚಿದ ಗಾಯಗಳಾಗಿ ಪುತ್ತೂರು ಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 69/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಂಬವರ ದೂರಿನಂತೆ ದಿನಾಂಕ 11.04.2021ರಂದು ಫಿರ್ಯಾದಿದಾರರ ಗಂಡನ ಮನೆಯಿಂದ ಸಂಪ್ಯದಲ್ಲಿರುವ ತಾಯಿ ಮನೆಗೆ ಗಂಡನ ಜೊತೆಯಲ್ಲಿ ಬಂದು, ಸಂಪ್ಯ ಸಾದಾತ್ ನಗರದಲ್ಲಿರುವ ದರ್ಗಾದಲ್ಲಿ ನಡೆಯುತ್ತಿದ್ದ ಸಲಾತ್ ಕಾರ್ಯಕ್ರಮಕ್ಕೆ ಫಿರ್ಯಾದಿದಾರರ ಅಕ್ಕ ಸುಮಯ್ಯರವರೊಂದಿಗೆ ಹೋಗಲೆಂದು ಸಂಜೆ ಸಮಯ ಸುಮಾರು 7.30 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಂಪ್ಯ ಮಸೀದಿಯ ಬಳಿಯಲ್ಲಿ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯನ್ನು ದಾಟಿ ಡಾಮಾರು ರಸ್ತೆಯ ಅಂಚಿಗೆ ತಲುಪಿದಾಗ ಪುತ್ತೂರು ಕಡೆಯಿಂದ ಕುಂಬ್ರ ಕಡೆಗೆ ರಿಕ್ಷಾವೊಂದನ್ನು ಅದರ ಚಾಲಕನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮಣ್ಣು ರಸ್ತೆಗೆ ಬಿದ್ದಿದ್ದು, ಪರಿಣಾಮವಾಗಿ ಫಿರ್ಯಾದಿದಾರರ ತಲೆಯ ಹಿಂಬದಿಗೆ ರಕ್ತ ಗಾಯ, ಬಲ ಕೈ ಮತ್ತು ಎಡ ಕೈ ತಟ್ಟಿಗೆ ಗುದ್ದಿದ ರೀತಿಯ ನೋವು ಉಂಟಾಗಿರುತ್ತದೆ. ನಂತರ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಫಿರ್ಯಾದಿದಾರರ ಅಕ್ಕ ಸುಮಯ್ಯರವರು ಫಿರ್ಯಾದಿದಾರರನ್ನು ಉಪಚರಿಸಿ ಆಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಧನ್ವಂತರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 29/2021 ಕಲಂ 279, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶೀನ.ಜಿ, ಪ್ರಾಯ: 36 ವರ್ಷ, ತಂದೆ: ಬಾಬು, ವಾಸ: ನೆಕ್ಕರೆ ಮನೆ, ಚಿಕ್ಕಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 11.04.2021ರಂದು ಬೆಳಿಗ್ಗೆ ಧರ್ಮಸ್ಥಳ ಸಂಘದ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ನೆಕ್ಕರೆ – ಬುಳೇರಿಕಟ್ಟೆ ಸಾರ್ವಜನಿಕ ರಸ್ತೆಯಲ್ಲಿ ನೆಕ್ಕರೆ ಕಡೆಯಿಂದ ಫಿರ್ಯಾದಿದಾರರ ಬಾಬ್ತು ಕೆಎ-21-ಎಸ್-0036ನೇ ನೋಂದಣಿ ಸಂಖ್ಯೆಯ ಮೋಟಾರು ಸೈಕಲನ್ನು ಫಿರ್ಯಾದಿದಾರರು ಚಲಾಯಿಸಿಕೊಂಡು ಬುಳೇರಿಕಟ್ಟೆ ಕಡೆಗೆ ಹೋಗುತ್ತಿದ್ದ ಸಮಯ ಬೆಳಿಗ್ಗೆ ಸುಮಾರು 10.30 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಮಚ್ಚಿಮಲೆ ಎಂಬಲ್ಲಿಗೆ ತಲುಪುವಾಗ ಬುಳೇರಿಕಟ್ಟೆ ಕಡೆಯಿಂದ ಒಂದು ಕಾರನ್ನು ಅದರ ಚಾಲಕನು ರಸ್ತೆಯ ತೀರಾ ರಾಂಗ್ ಸೈಡಿನಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದಾಗ ಫಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಅದೇ ಸಮಯ ಅಲ್ಲಿ ಸೇರಿದವರು ಫಿರ್ಯಾದಿದಾರರನ್ನು ಉಪಚರಿಸಿದ್ದು, ಈ ಅಪಘಾತದಿಂದ ಫಿರ್ಯಾದಿದಾರರ ಹಿಂಬದಿ ತಲೆಗೆ ರಕ್ತ ಗಾಯವಾಗಿದ್ದು, ಅಪಘಾತವುಂಟು ಮಾಡಿದ ಕಾರಿನ ನೋಂದಣಿ ಸಂಖ್ಯೆ ನೋಡಲಾಗಿ ಕೆಎ-19-ಎಮ್ಡಿ-6190 ಆಗಿದ್ದು ಅದರ ಚಾಲಕನ ಹೆಸರು ತಿಳಿಯದೇ ಇದ್ದು, ಅಪಘಾತವುಂಟು ಮಾಡಿದ ಕಾರಿನವರೇ ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಫಿರ್ಯಾದಿದಾರರನ್ನು ಒಂದು ಆ್ಯಂಬುಲೆನ್ಸ್ ನಲ್ಲಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿದ್ದು.ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ 30/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೊರಗಪ್ಪ ಶೆಟ್ಟಿ (67), ತಂದೆ: ಡೊಂಬಯ್ಯ ಶೆಟ್ಟಿ, ವಾಸ: ಕನ್ನಾಜೆ ಮನೆ, ಲಾಯಿಲಾ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 11-04-2021 ರಂದು ಪಿರ್ಯಾದಿದಾರರು ಕೆಎ 21 ಬಿ 0494 ನೇ ಆಟೋ ರಿಕ್ಷಾದಲ್ಲಿ ಪ್ರಯಾಣಿಕರಾಗಿ ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಹೋಗುತ್ತಿರುವ ಸಮಯ ಸುಮಾರು ರಾತ್ರಿ 8.00 ಗಂಟೆಗೆ ಬೆಳ್ರಂಗಡಿ ತಾಲೂಕು ಬೆಳ್ತಂಗಡಿ ಕಸ್ಬಾ ಗ್ರಾಮದ ಚರ್ಚ್ ಕ್ರಾಸ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನಿಂದ ಚಲಾಯಿಸಿ ಒಮ್ಮೇಲೆ ಬಲಕ್ಕೆ ತಿರುಗಿಸಿದ ಪರಿಣಾಮ ಗುರುವಾಯನಕೆರೆ ಕಡೆಯಿಂದ ಬರುತ್ತಿದ್ದ ಕೆಎ 70 ಎಚ್ 4055 ನೇ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆಯಿತು ಪರಿಣಾಮ ಮೋಟಾರು ಸೈಕಲ್ ಸವಾರ ತಾಜುದ್ದೀನ್ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲ ಕೈಗೆ ಗುದ್ದಿದ ಗಾಯವಾಗಿರುತ್ತದೆ, ಹಾಗೂ ರಿಕ್ಷಾ ಕೂಡ ಮಗುಚಿ ಬಿದ್ದು ಪಿರ್ಯಾದಿದಾರರಿಗೆ ಎದೆಗೆ ಮತ್ತು ಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ, ರಿಕ್ಷಾ ಚಾಲಕ ಸುಧಾಕರ್ ರವರಿಗೆ ಮೈ ಕೈಗೆ ಗುದ್ದಿದ ಸಣ್ಣ ಪುಟ್ಟ ಗಾಯವಾಗಿರುತ್ತದೆ,.ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 33/2021, ಕಲಂ; 279,337 ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.
ಜೀವ ಬೆದರಿಕೆ ಪ್ರಕರಣ: ೦1
ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕಲಂದರ್ ಶಾಫಿ , ಪ್ರಾಯ: 21 ವರ್ಷ, ತಂದೆ: ಯಾಕೂಬ್, ವಾಸ: ಬಾರ್ದೊಟ್ಟು ಜಾರಿಗೆದಡಿ ಮನೆ, ತೆಂಕಕಜೆಕಾರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರ ಮನೆ ಸಮೀಪ ಇರುವ ಪಿರ್ಯಾದಿದಾರರ ಬಾಬ್ತು ಜಾಗದಲ್ಲಿ ಪಿರ್ಯಾದಿದಾರರ ತಂದೆ ಹಾಗೂ ತಾಯಿ ಕಟ್ಟಿಗೆಯನ್ನು ಕಡಿಯುತ್ತಿರುವ ಸಮಯ ಆರೋಪಿತರ ಪೈಕಿ ಹಸನಬ್ಬ ಹಾಗೂ ಸಕೀನಾ ಎಂಬವರು ಪಿರ್ಯಾದಿದಾರರ ಬಳಿ ಬಂದು ಅವ್ಯಾಚ ಶಬ್ಧಗಳಿಂದ ಬೈದು ಇದು ನಮ್ಮ ಜಾಗ ನೀವು ಇಲ್ಲಿ ಕಟ್ಟಿಗೆಯನ್ನು ತುಂಡು ಮಾಡಬಾರದು ಎಂದು ಹೇಳಿ ಆರೋಪಿತರಿಬ್ಬರೂ ಪಿರ್ಯಾದಿದಾರರ ತಂದೆಯವರಿಗೆ ಕತ್ತಿಯಿಂದ ಬೀಸಿದಾಗ ಅಲ್ಲಿಯೇ ಇದ್ದ ಪಿರ್ಯಾದಿದಾರರ ಅಣ್ಣ ಬಶೀರ್ ಹಾಗೂ ಪಿರ್ಯಾದಿದಾರರು ತಡೆಯಲು ಹೋದಾಗ ಆರೋಪಿತರ ಪೈಕಿ ಬಶೀರ್ ಎಂಬಾತನು ಪಿರ್ಯಾದಿದಾರರ ತಲೆಗೆ ಹಾಗೂ ಬೆನ್ನಿಗೆ ಮರದ ದೊಣ್ಣೆಯಿಂದ ಹೊಡೆದು ರಕ್ತಗಾಯ ಗೊಳಿಸಿರುವುದಲ್ಲದೇ ಆರೋಪಿಗಳೆಲ್ಲರೂ ಈ ಸಲ ನೀವು ಬದುಕಿದ್ದೀರಾ ಮುಂದಕ್ಕೆ ನಮ್ಮ ಜಾಗಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 21/2021 ಕಲಂ: 324, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್ ರಾಜಕ್ (36) ತಂದೆ: ಇಬ್ರಾಹೀಂ ಹಾಜಿ ವಾಸ: ಕಲ್ಲುಮಡ್ಲು , ಗಾಂಧಿನಗರ ಮನೆ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಆಂಬ್ಯುಲೆನ್ಸ್ ಚಾಲಕರಾಗಿದ್ದು, ಸುಮಾರು 2 ವರ್ಷಗಳಿಂದ ಅಂದಾಜು 60-65 ವರ್ಷ ಪ್ರಾಯದ ಒಬ್ಬ ಗಂಡಸು ವ್ಯಕ್ತಿಯು ಭಿಕ್ಷಾಟನೆ ನಡೆಸಿ ಗಾಂಧಿನಗರ ಹಾಗೂ ಆಸುಪಾಸಿನ ಬಸ್ ನಿಲ್ದಾಣದಲ್ಲಿ ಮಲಗಿಕೊಂಡಿದ್ದವನು,ಆತನಿಗೆ ಎಡಕಾಲು ನೋವವಾಗಿದ್ದು ಅದಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ಕಾಲು ಸೌಖ್ಯಗೊಂಡು ಇರುವುದನ್ನು ಪಿರ್ಯಾದುದಾರರು ನೋಡಿದ್ದು. ಅದರಂತೆ ನಿನ್ನೆ ದಿನ ದಿನಾಂಕ: 11.04.2021 ರಂದು 10:00 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮ ಗಾಂಧಿನಗರ ಬಸ್ಸ ನಿಲ್ದಾಣದಲ್ಲಿ ಕುಳಿತುಕೊಂಡಿದ್ದವನು ಸಮಯ ಸುಮಾರು ರಾತ್ರಿ 20:00 ಗಂಟೆಗೆ ಬಸ್ಸ್ ನಿಲ್ದಾಣದಲ್ಲಿ ಮಲಗಿದ್ದ ಗಂಡಸು ವ್ಯಕ್ತಿ ಮೃತಪಟ್ಟಿರುವುದಾಗಿ ಸಾರ್ವಜನಿಕರು ತಿಳಿಸಿದ ಮೇರೆಗೆ ಪಿರ್ಯಾದುದಾರರು ಬಸ್ಸ ನಿಲ್ದಾಣದ ಬಳಿಗೆ ಹೋಗಿ ತಮ್ಮ ಆಂಬ್ಯುಲೇನ್ಸ್ ನಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶವಗಾರದಲ್ಲಿ ಇಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಅರ್ ನಂಬ್ರ 19/2021 ಕಲಂ 174ಸಿಆರ್ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.