ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅನುಶ್ ಕುಮಾರ ಶೆಟ್ಟಿ ಪ್ರಾಯ: 28 ವರ್ಷ ತಂದೆ: ಲೊಕೇಶ ಶೆಟ್ಟಿ ವಾಸ: ಹೊಸಗದ್ದೆ ಮನೆ ಕೊಳ್ತಿಗೆ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿರವರು ದಿನಾಂಕ 11.04.2022 ರಂದು ಸುರತ್ಕಲ್ ಗೆ ಹೋಗಿ ವಾಪಾಸು ಮಾಣಿ – ಮೈಸೂರು ಹೆದ್ದಾರಿಯಲ್ಲಿ ಕೆಎ-02-ಜೆಆರ್-1875 ನೇ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 5.15 ಗಂಟೆಗೆ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಎಂಬಲ್ಲಿಗೆ ತಲುಪಿದಾಗ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಕೆಎ-05-ಕೆಬಿ-3861 ನೇ ಮೋಟಾರು ಸೈಕಲನ್ನು ಅದರ ಸವಾರ ಜಿತೇಂದ್ರ ಎಂಬವರು ಹಿಂಬದಿಯಲ್ಲಿ ಕವನ್ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ಬಲ ಬದಿಗೆ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ಡಾಮರು ರಸ್ತೆಗೆ ಬಿದ್ದಾಗ ಫಿರ್ಯಾದಿದಾರರ ಪರಿಚಯದ ಗಣೇಶ್ ಮತ್ತು ಇತರರು ಫಿರ್ಯಾದಿದಾರರ ನ್ನು ಎಬ್ಬಿಸಿ ಉಪಚರಿಸಿ ನೋಡಿದಾಗ ಸದ್ರಿಯವರ ಬಲ ಕೈಯ  ಮೊಣ ಗಂಟಿಗೆ  ಗುದ್ದಿದ ಗಾಯ, ಬಲ ಕಾಲಿನ ಬೆರಳುಗಳಿಗೆ ಗುದ್ದಿದ ಗಾಯ, ಮತ್ತು ರಕ್ತ ಗಾಯವಾಗಿದ್ದು, ಎಡ ಭುಜ ಮತ್ತು ಎಡ ಎದೆಗೆ ಗುದ್ದಿದ ಗಾಯವಾಗಿದ್ದು ಕವನ್ ರವರ ಬಲ ಕಾಲಿನ ಮೊಣ ಗಂಟಿಗೆ ಹಾಗೂ ಬಲ ಕೋಲು ಕಾಲಿಗೆ ಗುದ್ದಿದ ರೀತಿಯ ಗಾಯ, ಹಾಗೂ ಜಿತೇಂದ್ರರವರ ಕೈ ಕಾಲುಗಳಿಗೆ ತರಚಿದ ಗಾಯವಾಗಿದ್ದವರನ್ನು ಗಣೇಶ್ ರವರು ಆಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದಂತೆ, ಫಿರ್ಯಾದಿದಾರರನ್ನು ಅವರ ಸಂಬಂಧಿ ಸಂಪತ್ ರವರು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಕವನ್ ರವರನ್ನು ಸಿಟಿ ಆಸ್ಪತ್ರೆಯಲ್ಲಿಯೇ ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು.ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಅಕ್ರ 49/2022 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರತೀಶ್ ಪ್ರಾಯ 19 ವರ್ಷ ತಂದೆ: ಜಯಾನಂದ ಗೌಡ ವಾಸ: ಕಡಿತ್ತ್ಯಾರು ಮನೆ, ಇಂದಬೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ದಿನಾಂಕ: 12-04-2022 ರಂದು ಕೆಎ 51 HQ 5458 ನೇ ನಾಲ್ಕು ಚಕ್ರದ ಸ್ಕೂಟಿಯಲ್ಲಿ ಸವಾರ ಶ್ರೀನಿವಾಸ ಎಂಬವರು ಸಹ ಸವಾರರನ್ನಾಗಿ ಗಿರಿಜಾ, ಗಣೇಶ ಎಂಬವರನ್ನು ಕುಳ್ಳಿರಿಸಿಕೊಂಡು ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ  ಸಮಯ ಸುಮಾರು ರಾತ್ರಿ 7.50 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಉಜಿರೆ  ಬೆಳಾಲು ಕ್ರಾಸ್‌ ಎಂಬಲ್ಲಿ ಸ್ಕೂಟಿಯ ಬಲ ಇಂಡಿಕೇಟರ್‌ ಹಾಕಿ ಸ್ಕೂಟಿಯನ್ನು ಬಲಬದಿಗೆ ಅಂದರೆ ಬೆಳಾಲು ರಸ್ತೆ ಕಡೆಗೆ ತಿರುಗಿಸುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಕೆಎ 21 ಎ 9028 ನೇ ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಸವಾರ ಮತ್ತು ಸಹ ಸವಾರರು ಸ್ಕೂಟಿಯೊಂದಿಗೆ ರಸ್ತೆಗೆ ಬಿದ್ದು ಸ್ಕೂಟಿ ಸವಾರ ಶ್ರೀನಿವಾಸ ರವರು ತಲೆಗೆ ಗುದ್ದಿದ ರಕ್ತಗಾಯ, ಸಹ ಸವಾರರಾದ ಗಿರಿಜಾ ರವರಿಗೆ ಬಲಕಣ್ಣಿನ ಮೇಲ್ಬಾಗ, ಎಡ ಕೈ ಅಂಗೈಗೆ ರಕ್ತಗಾಯ, ಗಣೇಶ ರವರಿಗೆ ಎಡ ಕೈ ಮಣಿಗಂಟಿಗೆ ತರಚಿದ ಗಾಯವಾಗಿದ್ದು ಗಾಯಾಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಕೊಂಡು ಹೋಗಿರುವುದಾಗಿದೆ..ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 56/2022 ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 12-04-22 ರಂದು ಬೆಳ್ಳಾರೆ  ಪೊಲೀಸ್ ಠಾಣೆಯಲ್ಲಿ 29/2022 ಕಲಂ  447,427,504,354,506 ಜೊತೆಗೆ 149 ಭಾ.ಧಂ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 12-04-22 ರಂದು ಬೆಳ್ಳಾರೆ  ಪೊಲೀಸ್ ಠಾಣೆಯಲ್ಲಿ ಅ.ಕ್ರ 30/2022 ಕಲಂ 323,354,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ  ಸುಮಿತ್ರ ಗಂಡ: ಗೋಪಣ್ಣ  ಪೂಜಾರಿ , ವಾಸ: ಡೆಪ್ಪುನಿ ಮನೆ, ಕುಕ್ಕೇಡಿ  ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು  ಬೆಳಿಗ್ಗೆ  08:30 ಗಂಟೆಗೆ ಕೂಲಿ ಕೆಲಸದ ಬಗ್ಗೆ  ಹೋಗಿ  ಮದ್ಯಾಹ್ನ  01:00 ಗಂಟೆಗೆ  ವಾಪಾಸು ಮನೆಗೆ  ಬಂದಾಗ   ಪಿರ್ಯಾದಿದಾರರ  ಗಂಡ ತನ್ನ   ವಾಸ್ತವ್ಯದ  ಮನೆಯಲ್ಲಿ  ಯಾವುದೋ ವೈಯಕ್ತಿಕ  ಕಾರಣಗಳಿಂದ  ಮನನೊಂದು  ಕೃಷಿಗೆ  ಉಪಯೋಗಿಸಲು ತಂದು  ಇಟ್ಟಿದ್ದ  ಕೀಟನಾಶಕವಾದ ಪ್ಯಾರಡನ್  ಎಂಬ  ವಿಷ  ಪದಾರ್ಥವನ್ನು  ಸೇವಿಸಿ   ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 11-2022 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಯರಾಮ ಶೆಟ್ಟಿ (34) ತಂದೆ: ಸಂಜೀವ ಶೆಟ್ಟಿ ವಾಸ: ಕೊಪ್ಪಳ ಮನೆ ಕಾಶಿಮಠ ವಿಟ್ಲ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:12.03.2022 ರಂದು ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಕಾಶಿಮಠ ಎಂಬಲ್ಲಿರುವಾಗ ಬೆಳಿಗ್ಗೆ ಸುಮಾರು 6 ಸುಮಾರಿಗೆ ಎಂದಿನಂತೆ ಪಿರ್ಯಾಧಿಯ ತಂದೆ ಸಂಜೀವ ಶೆಟ್ಟಿರವರು ಎದ್ದಿರುವುದನ್ನು ಪಿರ್ಯಾಧಿಯ ತಾಯಿ ಸುನಂದಾರವರು ನೋಡಿದ್ದು. ಪಿರ್ಯಾಧಿ ಸುಮಾರು 7 ಗಂಟೆಗೆ ಎದ್ದು ಮುಖ ತೊಳೆಯಲು ನೀರಿನ ಟ್ಯಾಂಕ್ ಬಳಿ ಹೋದಾಗ ಅಲ್ಲಿಂದ ಸುಮಾರು 10 ಅಡಿ ದೂರದಲ್ಲಿರುವ ಹುಣಸೆ ಹಣ್ಣಿನ ಮರವಿದ್ದು, ಸದ್ರಿ ಮರಕ್ಕೆ ಪಿರ್ಯಾಧಿಯ ತಂದೆ ಸಂಜೀವ ಶೆಟ್ಟಿ(65)ರವರು ಲುಂಗಿಯಿಂದ ನೇಣು ಹಾಕಿಕೊಂಡು ಒದ್ದಾಡುತ್ತಿರುವುದನ್ನು ಪಿರ್ಯಾಧಿದಾರರು ನೋಡಿ ಕೂಡಲೇ ಬೊಬ್ಬೆ ಹಾಕಿ ಅಕ್ಕಪಕ್ಕದವರನ್ನು ಕೂಗಿ ಕರೆದಾಗ ಬಾವ ಶರತ್ ಬಂದು ಮರ ಹತ್ತಿ ಕತ್ತಿಯಿಂದ ನೇಣನ್ನು ಕಡಿದು ತಂದೆಯವರನ್ನು ಕೆಳಗೆ ಇಳಿಸಿ ಉಪಚರಿಸಿ ಒಂದು ಅಂಬುಲೆನ್ಸನ್ನು ತರಿಸಿ ಅದರಲ್ಲಿ ತಂದೆಯವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. 03 ದಿನಗಳ ಹಿಂದೆ ತಂದೆಯವರಿಗೆ ಕಾಶಿಮಠದಲ್ಲಿರುವ ಮನೆಯ ಹತ್ತಿರ ಇರುವಾಗ ಗೂಳಿಯು ಸೊಂಟದ ಭಾಗಕ್ಕೆ ಗುದ್ದಿದ್ದರಿಂದ ತಂದೆಯವರ ಸೊಂಟದ ಭಾಗಕ್ಕೆ ಗುದ್ದಿದ ಗಾಯವಾಗಿದ್ದು. ನಂತರ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಿದ್ದು. ತಂದೆಯವರಿಗೆ ಗೂಳಿ ಗುದ್ದಿದ ನೋವಿನಿಂದ ಮಾನಸಿಕವಾಗಿ ನೊಂದು ಲುಂಗಿಯಿಂದ ಹುಣಸೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆ ಯುಡಿಆರ್‌ ನಂಬ್ರ 10/202 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-04-2022 11:03 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080