ಅಭಿಪ್ರಾಯ / ಸಲಹೆಗಳು

ಇತರೆ ಪ್ರಕರಣ: 2

 

ಧರ್ಮಸ್ಥಳ ಪೊಲೀಸ್ ಠಾಣೆ:  ದಿನಾಂಕ: 12.05.2021 ರ ಸಂಜೆ 6.00 ಗಂಟೆಗೆ ಪೊಲೀಸ್ ಉಪ ನಿರೀಕ್ಷಕರು, ಧರ್ಮಸ್ಥಳ ಪೊಲೀಸ್ ಠಾಣೆರವರು  ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ದೋಣಿಗೆ ಅಳವಡಿಸಲಾದ ಡ್ರಜ್ಜಿಂಗ್ ಯಂತ್ರದ ಸಹಾಯದಿಂದ ನದಿಯಿಂದ ಮರಳನ್ನು ತೆಗೆದು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಮರಳು ತೆಗೆದು ಸಾಗಾಟಕ್ಕೆ ಸಂಬಂಧಿಸಿ ಯಾವುದೇ  ದಾಖಲೆ ಪತ್ರಗಳು ಇರುವುದಿಲ್ಲವಾಗಿ ತಿಳಿಸಿರುತ್ತಾರೆ. ಆರೋಪಿಗಳು ಯಾವುದೆ ಪರವಾನಿಗೆ ಇಲ್ಲದೆ ಮರಳನ್ನು ನದಿಯಿಂದ ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಕಂಡು ಬಂದ ಮೇರೆಗೆ ಮುಂದಿನ ಕ್ರಮದ ಬಗ್ಗೆ ಸೊತ್ತು ಸಮೇತ ಸ್ವಾಧೀನಪಡಿಸಿಕೊಂಡಿದ್ದು ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಅಂದಾಜು ಮೌಲ್ಯ ರೂಪಾಯಿ ಮೂವತ್ತು ಲಕ್ಷದ ಮೂವತ್ತಾರು ಸಾವಿರ ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 27/2021 ಕಲಂ; ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994ರ ಉಪ ನಿಯಮ 42, 43, 44 ಮತ್ತು ಎಂ.ಎಂ.(ಆರ್.ಡಿ) ಕಾಯ್ದೆ 1957 ರ 4(1), 4(1)(ಎ) ಮತ್ತು 21(1)(1ಎ) ಮತ್ತು ಕಲಂ: 379 ಐ.ಪಿ.ಸಿ ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ  12.05.2021 ರಂದು  ಪುಂಜಾಲಕಟ್ಟೆ ಪೊಲೀಸ್‌ ಠಾಣಾ ಸಿಬ್ಬಂದಿ ಸಿಪಿಸಿ 2343 ಸಾಬು ಮಿರ್ಜಿ  ರವರು, ಕೋವಿಡ್-19 ರೋಗ ನಿಯಂತ್ರಣದ ಬಗ್ಗೆ ಸರಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಾ ಮೂವಿಂಗ್ ಕರ್ತವ್ಯದಲ್ಲಿದ್ದ ಸಮಯ ಬೆಳಿಗ್ಗೆ 09:00 ಗಂಟೆಗೆ ಬೆಳ್ತಂಗಡಿ ತಾಲೂಕು, ಪಾರೆಂಕಿ ಗ್ರಾಮದ, ಮಡಂತ್ಯಾರು ಪೇಟೆಯಲ್ಲಿನ ಸರಕಾರಿ ಬಸ್ ನಿಲ್ದಾಣದ ಎಡಬಾಗದಲ್ಲಿರುವ ಲಕ್ಷ್ಮೀ ಸೆಲೂನ್ ಎಂಬ  ಕ್ಷೌರದಂಗಡಿಯ ಬಳಿ ಬಂದಾಗ ಸೆಲೂನ್‌ನ ಮಾಲಕ ರಮೇಶ್‌ ಎಂಬಾತನು ಸರಕಾರವು ಕೋವಿಡ್-19 ರೋಗದ ಹಿನ್ನಲೆಯಲ್ಲಿ ಕ್ಷೌರದಂಗಡಿಯನ್ನು ತೆರೆಯದಂತೆ ನಿಷೇದಾಜ್ಞೆ ಹೊರಡಿಸಿದರೂ ಕೂಡಾ ಸರಕಾರ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಕ್ಷೌರದಂಗಡಿಯನ್ನು ತೆರೆದು 02 ಜನರನ್ನು ಕ್ಷೌರದಂಗಡಿಯಲ್ಲಿ ಕುರಿಸಿಕೊಂಡು ಕ್ಷೌರ ತೆಗೆಯುವ ಕೆಲಸ ಮಾಡಿ ಅಪರಾಧವೆಸಿರುತ್ತಾರೆ.ಈ ಪುಂಜಾಲಕಟ್ಟೆ ಠಾಣಾ ಅ.ಕ್ರ 29/2021 ಕಲಂ: ಕಲಂ: 269, 270 ಐಪಿಸಿ ಮತ್ತು ಕಲಂ: 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆಧ್ಯಾದೇಶ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-05-2021 10:58 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080