ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಂಗಯ್ಯ ಗೌಡ (62), ತಂದೆ: ವೆಂಕಪ್ಪ ಗೌಡ, ವಾಸ: ಸುರುಳಿ ಮನೆ, ಮಲವಂತಿಗೆ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 12-07-2021 ರಂದು ತನ್ನ ಬಾಬ್ತು ಕೆಎ 21 ಪಿ 4078 ನೇ ಜೀಪ್‌ನ್ನು ಸೊಮಂತಡ್ಕ ಕಡೆಯಿಂದ ದಿಡುಪೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಸುಮಾರು ಮದ್ಯಾಹ್ನ 1.30 ಗಂಟೆಗೆ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ದೇವಿಗುಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಅಂದರೆ ಸೊಮಂತಡ್ಕ ಕಡೆಯಿಂದ ದಿಡುಪೆ ಕಡೆಗೆ ಕೆಎ 21 ಆರ್‌ 6636 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಜೀಪಿನ ಹಿಂಬದಿಗೆ ಡಿಕ್ಕಿ ಹೊಡೆದನು, ಪರಿಣಾಮ ಬೈಕ್‌ ಸವಾರ ಬೈಕ್‌ ಸಮೇತಾ ರಸ್ತೆಗೆ ಬಿದ್ದು ಆತನ ಕೈಗೆ ತರಚಿದ ಗಾಯವಾಗಿರುತ್ತದೆ, ಗಾಯಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 52/2021, ಕಲಂ; 279,337 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರವಿ ಕುಮಾರ್ ಪ್ರಾಯ: 30 ವರ್ಷ,ತಂದೆ: ವರದರಾಜ್ , ವಾಸ:72 CRC ಕಾಲೋನಿ ಮನೆ, ಸುಂಕದ ಕಟ್ಟೆ ಅಂಚೆ ಐತ್ತೂರು ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರಾದ ರವಿ ಕುಮಾರ್ ಪ್ರಾಯ: 30 ವರ್ಷ,ತಂದೆ: ವರದರಾಜ್ , ವಾಸ:72 CRC ಕಾಲೋನಿ ಮನೆ, ಸುಂಕದ ಕಟ್ಟೆ ಅಂಚೆ ಐತ್ತೂರು ಗ್ರಾಮ ಕಡಬ ತಾಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ದಿನಾಂಕ:11.07.2021 ರಂದು ಪಿರ್ಯಾದುದಾರರು ಮನೆಗೆ ಸಾಮಗ್ರಿಯನ್ನು ತರಲು  ಕಡಬ ಪೇಟೆಗೆ ಹೋಗುವರೇ ಪಿರ್ಯಾದುದಾರರು ತನ್ನ ಮೋಟಾರ್ ಸೈಕಲ್ ನಲ್ಲಿ ಕಾರ್ತಿಕ್ ಎಂಬುವರನ್ನು ಹಿಂಬಾದಿ ಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ ಕಡಬ ತಾಲೂಕು ಐತ್ತೂರು ಗ್ರಾಮದ ಬಜಕೆರೆ ಎಂಬಲ್ಲಿ  ಸಮಯ ಸುಮಾರು 11-30 ಗಂಟೆಗೆ KSRTC ಬಸ್ ಒಂದು ನಿರ್ಲಕ್ಷತನದಿಂದ ಪಿರ್ಯಾದುದಾರರನ್ನು ಒವರ್‌ಟೆಕ್ ಮಾಡಿ ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮುಂದೆ ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೋಡೆದ ಪರಿಣಾಮ ಮೋಟಾರ್ ಸೈಕಲ್ ಡಾಮಾರು ರಸ್ತೆಗೆ ಬಿದ್ದಿದ್ದು  ತಕ್ಷಣ ಪಿರ್ಯಾದುದಾರರು ತನ್ನ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಪರಿಚಯದ  ಮುನೀಶ್ವರ್ ಎಂಬುವರಾಗಿದ್ದು  ಅವರು KSRTC ನೌಕರರಾಗಿದ್ದು ತಕ್ಷಣ ಅವರನ್ನು   ಉಪಚರಿಸಿ ನೋಡಲಾಗಿ ಬಲಬದಿಯ ಬೆನ್ನಿಗೆ ಹಾಗೂ ಬಲ ಕಾಲಿನ ಮಂಡಿಗೆ ಗಾಯವಾಗಿದ್ದು ನಂತರ ಗಾಯಗೊಂಡವರನ್ನು  ಚಿಕಿತ್ಸೆಯ ಬಗ್ಗೆ ಒಂದು ಖಾಸಗಿ ವಾಹನದಲ್ಲಿ ಕಡಬ ಸಾರಕಾರಿ ಅಸ್ವತ್ರೆಗೆ ರಘು ಹಾಗೂ ದಿನೇಶ್ ಎಂಬುವರು ಕರೆದುಕೊಂಡು ಹೋಗಿರುತ್ತಾರೆ  ನಂತರ ಡಿಕ್ಕಿ ಉಂಟು ಮಾಡಿದ KSRTC  ಬಸ್  ನಂಬ್ರ ನೋಡಲಾಗಿ KA-19-F-3302 ನೇದಾಗಿದ್ದು  ಚಾಲಕನ ಹೆಸರು ಆನಂದ ಎಂಬುದಾಗಿ ತಿಳಿದಿರುತ್ತದೆ  ನಂತರ ಅಪಘಾತಗೊಳಗಾದ ಮೋಟಾರ್ ಸೈಕಲ್ ಅನ್ನು ನೊಡಲಾಗಿ KA-21-U-9113 ನೇ ಪ್ಯಾಷನ್ ಪ್ರೋ ಬೈಕ್ ಆಗಿದ್ದು ಅಪಘಾತದಲ್ಲಿ ಬೈಕ್ ಜಖಂಗೊಂಡಿರುತ್ತಾದೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 55/2021 . ಕಲಂ 279 337.  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

ಬಂಟ್ವಾಳ ನಗರ ಪೊಲೀಸ್ ಠಾಣೆ: ದಿನಾಂಕ: 12.07.2021 ರಂದು 19:00 ಗಂಟೆಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 81/2021  ಕಲಂ: 376, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-07-2021 10:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080