ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦1

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುಭಾಸ್ ಪ್ರಾಯ: 35 ವರ್ಷ ತಂದೆ: ಭದ್ರಯ್ಯ ಆಚಾರ್ಯ ವಾಸ; ಮಂಜೊಟ್ಟಿ ಮಿತ್ತಪಾದೆ ಮನೆ ನಡ ಗ್ರಾಮ ಬೆಳ್ತಂಗಡಿ ತಾಲೂಕು ರವರು ದಿನಾಂಕ: 12-07-2022 ರಂದು ತನ್ನ ಬಾಬ್ತು ಕೆಎ 21 ಎಸ್ 4652 ನೇ ಮೋಟಾರು ಸೈಕಲ್ ನಲ್ಲಿ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಲಾಯಿಲ ಶೃತಿ ಸರ್ವಿಸ್ ಸ್ಟೇಷನ್ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಉಜಿರೆ ಕಡೆಗೆ ಕೆಎ 19 ಡಿ 2488 ನೇ ಆಟೋರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ಒಮ್ಮೇಲೆ ರಸ್ತೆಯ ಬಲಕ್ಕೆ ತಿರುಗಿಸಿ ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದನು ಪರಿಣಾಮ ಪಿರ್ಯಾದಿದಾರರಿಗೆ ಎಡಕಾಲಿನ ಉಂಗುರ ಬೆರಳಿಗೆ ಮತ್ತು ಎಡಕಾಲಿನ ತೊಡೆಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 97/2022 ಕಲಂ: 279 337 ಭಾ ದಂ ಸಂ,  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ರಶೇಖರ, ಪ್ರಾಯ-27 ವರ್ಷ , ತಂದೆ- ಶ್ರೀಶೈಲ,  ವಾಸ- ಬೂದಿಹಾಳ (ಎಸ್.ಜಿ.) ಬೂದಿಹಾಳ ಗ್ರಾಮ,  ಬೀಳಗಿ  ತಾಲೂಕು,  ಬಾಗಲಕೋಟೆ ಜಿಲ್ಲೆ ಎಂಬವರು   ಸುಮಾರು 6 ವರ್ಷಗಳಿಂದ ಮೆಸ್ಕಾಂನ ಕುಂಬ್ರ ಶಾಖೆಯಲ್ಲಿ ಜ್ಯೂನಿಯರ್ ಪವರ್‌ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:- 12.07.2022ರಂದು ಮಧ್ಯಾಹ್ನ ಫಿರ್ಯಾದುದಾರರು ಮತ್ತು ಮೆಸ್ಕಾಂ ಕುಂಬ್ರ ಶಾಖೆಯ ಪವರ್‌ಮ್ಯಾನ್  ಬಸವರಾಜ ಎಲಿಗಾರ ಎಂಬವರು ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಪರ್ಪುಂಜ ಎಂಬಲ್ಲಿ ಅಡಿಕೆ ತೋಟದ ಬದಿಯಲ್ಲಿ ಇಳಿಜಾರು ಪ್ರದೇಶದಲ್ಲಿ ನೀರಿನ ತೋಡೊಂದರ ಬಳಿಯಲ್ಲಿ ಎಲ್.ಟಿ. ವಿದ್ಯುತ್ ಲೈನಿನ ಬಳಿಯಲ್ಲಿದ್ದ  ಮರದ ಗೆಲ್ಲುಗಳನ್ನು ತೆಗೆಯುವರೇ ಮೆಸ್ಕಾಂನ ಪಿಕಪ್ ಚಾಲಕ ಮೋನಪ್ಪ ಎಂಬವರ ಜೊತೆಯಲ್ಲಿ  ತೆರಳಿದ್ದು, ಮಧ್ಯಾಹ್ನ ಸುಮಾರು 1.45 ಗಂಟೆಗೆ ಪವರ್‌ಮ್ಯಾನ್  ಬಸವರಾಜ ಎಲಿಗಾರ ಎಂಬವರು ಸುಮಾರು ಅರ್ಧ ಭಾಗದವರೆಗೆ ವಿದ್ಯುತ್ ನಿರೋಧಕ ರಬ್ಬರ್ ಕವಚವನ್ನು ಹೊಂದಿರುವ ಅಲ್ಯೂಮಿನಿಯಮ್  Tree Pruner ಸಹಾಯದಿಂದ ಸದ್ರಿ ಸ್ಥಳದಲ್ಲಿದ್ದ ಗಿಡದ ಗೆಲ್ಲನ್ನು ಕತ್ತರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು, ಆ ವೇಳೆ ಅವರ ಕೈಯಲ್ಲಿದ್ದ Tree Pruner  ಎಲ್.ಟಿ. ವಿದ್ಯುತ್ ಲೈನಿನ  ಮೇಲೆ  ಹಾದು ಹೋಗಿದ್ದ ಹೆಚ್.ಟಿ.ವಿದ್ಯುತ್ ಲೈನಿಗೆ ಆಕಸ್ಮಿಕವಾಗಿ  ತಾಗಿ Tree Pruner  ಮೂಲಕ ವಿದ್ಯುತ್ ಪ್ರವಹಿಸಿ, ಬಸವರಾಜ ಎಲಿಗಾರರು ವಿದ್ಯುತ್ ಆಘಾತಕ್ಕೊಳಗಾಗಿ ಕೆಳಗಿದ್ದ ನೀರಿನ ತೋಡಿಗೆ  ಬಿದ್ದಿರುತ್ತಾರೆ. ಆ ವೇಳೆ ಫಿರ್ಯಾದುದಾರರು  ಮತ್ತು ಪಿಕಪ್ ಚಾಲಕ ಮೋನಪ್ಪರವರು ಬಸವರಾಜ ಎಲಿಗಾರರನ್ನು ಆರೈಕೆ ಮಾಡಿ ಬಳಿಕ ಸದ್ರಿ ಸ್ಥಳದಿಂದ ರಸ್ತೆಯವರೆಗೆ ಎತ್ತಿಕೊಂಡು ಬಂದು ಪಿಕಪ್ ವಾಹನದಲ್ಲಿ ಕೂಡಲೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪುತ್ತೂರು ಸರಕಾರಿ  ಆಸ್ಪತ್ರೆಯಲ್ಲಿ ಮಧ್ಯಾಹ್ನ 3.10 ಗಂಟೆಗೆ ಬಸವರಾಜ ಎಲಿಗಾರರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಬಸವರಾಜ ಎಲಿಗಾರರು ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ UDR:   23.-2022 U/S 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಧರ್ಮಸ್ಥಳ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ನಿತಿನ್ , ಪ್ರಾಯ: 31 ವರ್ಷ, ತಂದೆ: ವಿಜಯನ್  ವಾಸ: ಕೆಮ್ಮಟೆ  ಮನೆ, ಪುದುವೆಟ್ಟು ಗ್ರಾಮ, ಬೆಳ್ತಂಗಡಿ ತಾಲೂಕು ರವರ ತಂದೆ ವಿಜಯನ್(60) ಎಂಬವರಿಗೆ ಮೂರು ವರ್ಷಗಳ ಹಿಂದೆ ಪಕ್ಷಪಾಥವಾಗಿದ್ದು ಬಲಗೈ ಮತ್ತು ಬಲಕಣ್ಣಿಗೆ ಸ್ವಲ್ಪ ಸಮಸ್ಯೆಯಿದ್ದು ಔಷದಿ ಮಾಡಿಸಿಕೊಂಡಿದ್ದರು. ಪಿರ್ಯಾದಿದಾರರು ಹಾಗೂ ಅವರ ತಂದೆ ಮತ್ತು ಹರೀಶ್ ಎಂಬವರು ಅಡಿಕೆ ತೋಟದಲ್ಲಿ ಕೆಲಸ ಮಾಡಿ, ನಂತರ ತಂದೆಯವರು ಕಾಯರ್ತ್ತಡ್ಕಕ್ಕೆ ಹೋಗಿ ಬಂದು ಊಟ ಮಾಡಿ ಮಲಗಿದ್ದರು, ದಿನಾಂಕ:12-07-2022 ರಂದು ಬೆಳಿಗ್ಗೆ 6:00 ಗಂಟೆಗೆ ಪಿರ್ಯಾದಿದಾರರ ಅಣ್ಣ  ಎದ್ದು ತಂದೆಯವರು ಯಾವಗಲೂ ಎದ್ದು ಕುಳಿತಿರುವ ಸ್ಥಳದಲ್ಲಿ  ಇಲ್ಲದೆ ಇದ್ದು ತಂದೆಯವರನ್ನು ಪಿರ್ಯಾದಿದಾರರು ಮತ್ತು  ಅಣ್ಣ ಜೀನೀಷ್ ಹಾಗು  ಅತ್ತಿಗೆಯವರು ತಂದೆಯನ್ನು ಹುಡುಕಿಕಾಡುವ ಸಮಯ ಜಮೀನಿನ ಗಡಿ ಗುರುತಿನ ಬಳಿ ಇದ್ದ ಒಂದು ಮರದ ಕೊಂಬೆಯಲ್ಲಿ ನೈಲಾನ್ ಹಗ್ಗದ ಒಂದು ತುದಿಯನ್ನು ಮರದ ಕೊಂಬೆಗೆ ಹಾಗೂ ಮತ್ತೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ನೇತಾಡಿಕೊಂಡಿದ್ದವರನ್ನು ನೋಡಿ ಜೀವಂತವಿರಬಹುದೆಂದು ಬಾವಿಸಿ ಕುತ್ತಿಗೆಯ ಹಗ್ಗದ ಉರುಳನ್ನು ಜಾರಿಸಿ ಕೆಳಗಿಳಿಸಿ ನೋಡಿದಾಗ ವಿಜಯನ್ ರವರು ಮೃತ ಪಟ್ಟಿದ್ದು ತಿಳಿಯಿತು, ಪಿರ್ಯಾದಿದಾರರ ತಂದೆ ವಿಜಯನ್ ರವರು ತನಗೆ ಇದ್ದ ಪಕ್ಷಪಾಥ (ಪಾರ್ಶ್ವವಾಯು) ಖಾಯಿಲೆ ಬಿ,ಪಿ ಮತ್ತು ಸಕ್ಕರೆ ಖಾಯಿಲೆಯಿಂದ ಮನನೊಂದು ಅಥವಾ ಇನ್ನಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 11-07-2022 ರಂದು 22:00 ಗಂಟೆಯಿಂದ ಈ ದಿನ ದಿನಾಂಕ:12-07-2022 ರಂದು 6:00 ಗಂಟೆಯ ಮಧ್ಯೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್ 39/2022 ಕಲಂ: 174 ಸಿಆರ್ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-07-2022 10:40 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080