ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಕಾಶ್ ಬೊರ್ಕರ್  ಪ್ರಾಯ 24 ವರ್ಷ ತಂದೆ : ಪದ್ಮನಾಭ ನಾಯಕ್ ವಾಸ: ಆಡ್ಯನಡ್ಕ ಮನೆ,  ಎಣ್ಮಕಜೆ ಗ್ರಾಮ ಮಂಜೇಶ್ವರ ತಾಲೂಕು  ಕಾಸರಗೋಡು  ಎಂಬವರ ದೂರಿನಂತೆ ಪಿರ್ಯಾಧಿದಾರರು ತನ್ನ ಬಾಬ್ತು ಮೋಟಾರ್‌ ಸೈಕಲ್‌ನಲ್ಲಿ ಈ ದಿನ ದಿನಾಂಕ:12-08-2021 ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಕಡೇಶ್ವಾಲಯಕ್ಕೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಬೆಳಿಗ್ಗೆ ಸುಮಾರು 11.45 ಗಂಟೆಗೆ ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೋಳಿ ಎಂಬಲ್ಲಿಗೆ ತಲುಪಿದಾಗ ಪಿರ್ಯಾಧಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‌ನ ಎದುರುಗಡೆ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಕೆಎ- 19- ಹೆಚ್‌ಬಿ-5923ನೇ ಆಕ್ಟೀವಾ ದ್ವಿಚಕ್ರ ವಾಹನಕ್ಕೆ ಉಪ್ಪಿನಂಗಡಿ ಕಡೆಯಿಂದ ಮಾಣಿ ಕಡೆಗೆ ಬರುತ್ತಿದ್ದ ಲಾರಿ ನಂಬ್ರ ಕೆಎ-47-5910ನೇದರ ಚಾಲಕ ಜಗನ್ನಾಥ್ ಆರ್ ನಾಯ್ಕರವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಲಾರಿಯನ್ನು ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ಆಕ್ಟಿವಾ ದ್ವಿಚಕ್ರ ವಾಹನ ಸವಾರ ಗಣೇಶ ಬಂಗೇರಾರವರ ತಲೆಗೆ ಹಾಗೂ ಶರೀರದ ಇತರ ಭಾಗಗಳಿಗೆ ತೀವ್ರ ತರಹದ ಗಾಯವಾಗಿ ಚಿಕಿತ್ಸೆ ಬಗ್ಗೆ  ಬಂಟ್ವಾಳ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ವೈದ್ಯಾದಿಕಾರಿಯವರು ಪರೀಕ್ಷೀಸಿ ಗಾಯಾಳು ಮೃತಪಟ್ಟಿರುವುದಾಗಿದೆಂದು ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 107/2021 ಕಲಂ:279, 304(ಎ) ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಶ್ವನಾಥ,  ಪ್ರಾಯ: 28 ವರ್ಷ ತಂದೆ: ಡೀಕಯ್ಯ ಮೂಲ್ಯ ,ವಾಸ: ಬಂಟ್ವಾಳ ಬೈಪಾಸ್ ಮನೆ, ಬಿ-ಮೂಡ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 10.08.2021 ರಂದು ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ಅಗತ್ಯ ಕೆಲಸದ ನಿಮಿತ್ತ ಬಿ.ಸಿರೋಡಿಗೆ ಬಂದವರು ವಾಪಾಸು ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು  21:45 ಗಂಟೆಗೆ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ವಸ್ತಿ ಅಪಾರ್ಟ್ ಮೆಂಟ್ ಬಳಿ ತಲುಪುವಾಗ ವಗ್ಗ ಕಡೆಯಿಂದ KL-57-S-2043 ನೇ ಕಾರನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೆಲೆ ರಿವರ್ಸ್ ತೆಗೆಯುವ ಸಮಯ ಅದರ ಹಿಂದಿನಿಂದ ಬರುತ್ತಿದ್ದ KA-70E-3760 ನೇ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಅಪಘಾತದ ಪರಿಣಾಮ ಮೋಟಾರ್ ಸೈಕಲ್  ಸವಾರ ದೀಕ್ಷಿತ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಗಾಯಗೊಂಡು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 76/2021  ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಿಶೋರ್‌ ಕುಮಾರ್ ಪ್ರಾಯ 44 ವರ್ಷ, ತಂದೆ: ದಿವಂಗತ. ಕೊರಗಪ್ಪ ಪೂಜಾರಿ, ವಾಸ:  ಹಾಲಿ: ಸ್ವಾಗತ್‌ ವೈ.ಎಂ.ಕೆ.ಯುನಿವರ್ಸಲ್‌  ಟಯರ್‌ ಎದುರು ಜೆಪುಬಪ್ಪಾಲ್‌, ಮಂಗಳೂರು ಎಂಬವರ ದೂರಿನಂತೆ ದಿನಾಂಕ 12-08-2021 ರಂದು 07-00 ಗಂಟೆಗೆ ಆರೋಪಿ ಮಿನಿಗೂಡ್ಸ್‌ ವಾಹನ ಚಾಲಕ ಧ್ಯಾನೇಶ್ವರ ಕುಲಗೋಡು ಎಂಬವರು KA-35-C-8051 ನೇ ನೋಂದಣಿ ನಂಬ್ರದ ಮಿನಿಗೂಡ್ಸ್‌ ವಾಹನವನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರುನಗರ ಜಂಕ್ಷನ್‌ನಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಹಾಲ್ಟ್‌ ಮತ್ತು ಪ್ರೋಸಿಡ್‌ ನಿಯಮ ಪಾಲಿಸದೇ ಬನ್ನೂರು ಕಡೆಗೆ ಹೋಗುವ ಒಳ ರಸ್ತೆಗೆ ಒಮ್ಮಲೇ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರಾದ ಕಿಶೋರ್‌ ಕುಮಾರ್‌ ಎಂಬವರು ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-27-M-3816 ನೇ ನಂಬ್ರದ ಕಾರಿಗೆ ಅಪಘಾತವಾಗಿ, ಪಿರ್ಯಾದುದಾರರಿಗೆ ಹಣೆಗೆ ಗಾಯವಾಗಿ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತಾರೆ. ಹಾಗೂ ಮಿನಿ ಗೂಡ್ಸ್‌ ವಾಹನ ಚಾಲಕ ಧ್ಯಾನೇಶ್ವರ ಕುಲಗೋಡು ಮತ್ತು ಅದರಲ್ಲಿದ್ದ ಶ್ರೀಧರ ಎಂಬವರಿಗೆ ಗಾಯಗಳಾಗಿ ಪತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಮತ್ತು ಮಿನಿಗೂಡ್ಸ್‌ ವಾಹನದಲ್ಲಿದ್ದ ಬಾಬು ಪಕ್ರುದ್ದೀನ್‌ ಎಂಬವರಿಗೆ ಗುದ್ದಿದ ಗಾಯಗಳಾಗಿ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ. ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  104/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲೋಹಿತ್ ಹೆಚ್ ಎನ್ (20) ತಂದೆ: ನಾರಾಯಣ ವಾಸ: ಪೈಲಾರು ಮನೆ, ಅಮರಮೂಡ್ನೂರು ಗ್ರಾಮ,ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 11.08.2021 ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಬಸ್ ನಿಲ್ದಾಣದ ಎದುರು ( ಮಾಣಿ- ಮೈಸೂರು ಹೆದ್ದಾರಿ) ರಸ್ತೆ ಬದಿಯಲ್ಲಿ ಸಮಯ ಸುಮಾರು 22:15 ಗಂಟೆಗೆ ನಿಂತುಕೊಂಡಿರುವಾಗ,ಗಾಂಧಿನಗರ ಕಡೆಯಿಂದ ಶ್ರೀರಾಮ್ ಪೇಟೆ ಕಡೆಗೆ ಕೆಎ 19 ಇಝಡ್ 1526 ನೇದರ ಸ್ಕೂಟರ್ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿವುಂಡು ಮಾಡಿದ ಪರಿಣಾಮ ವ್ಯಕ್ತಿಯ ರಸ್ತೆಗೆ ಬಿದ್ದಗಾ ಪಿರ್ಯಾದುದಾರರು ಆತನ ಬಳಿಗೆ ಹೋಗಿ ಉಪಚರಿಸಿ ನೋಡಲಾಗಿ ಎಡಕಣ್ಣಿಗೆ,ಎಡಕಾಲಿಗೆ ರಕ್ತಗಾಯ ಮತ್ತು ಹಣೆಯ ಬಳಿ ತರಚಿತ ಗಾಯವಾಗಿದ್ದವನ್ನು ಚಿಕಿತ್ಸೆಯ ಬಗ್ಗೆ  ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯ ಹೆಸರು ಸತ್ಯನಾರಾಯಣ ಎಂಬುದಾಗಿ,ಅಪಘಾತವುಂಟು ಮಾಡಿದ ಸ್ಕೂಟರ್ ಸವಾರನ ಹೆಸರು ಅಬ್ದುಲ್ ರಶೀದ್ ಎಂಬುದಾಗಿ ನಂತರ ತಿಳಿದು ಬಂದಿದ್ದು, ಸ್ಕೂಟರ್ ಸವಾರನಿಗೂ ಸಹ ಸಣ್ಣಪುಟ್ಟ ಗಾಯವಾಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಅ ಕ್ರ 58/2021 ಕಲಂ 279 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ. 12.08.2021  ರಂದು ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 92-2021 ಕಲಂ 448 504 323 506 376 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಮಹಿಳಾ ಪೊಲೀಸ್ ಠಾಣೆ : ದಿನಾಂಕ: 12-08-2021 ರಂದು ದ.ಕ ಮಹಿಳಾ ಪೊಲೀಸ್‌ ಠಾಣಾ ಅ.ಕ್ರ 25/2021 ಕಲಂ: 498(ಎ), 504, 506, 307 ಜೊತೆಗೆ 34 ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂಜೀವಿ ಪ್ರಾಯ 51 ವರ್ಷ ತಂದೆ: ಗಂಡ: ಶೀನಪ್ಪ ರೈ ವಾಸ: ಕಿನ್ಯಾನ ಮನೆ, ಕೆಯ್ಯೂರು ಗ್ರಾಮ ಪುತ್ತೂರು ಎಂಬವರ ದೂರಿನಂತೆ ದಿನಾಂಕ 12.08.2021 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿರವರು ಮಾಡಾವು ಪೇಟೆಗೆ ಹೋಗಿದ್ದು ವಾಪಾಸು ಬೆಳಿಗ್ಗೆ 11.00 ಗಂಟೆಗೆ ಬಂದಾಗ ಮಗ ಸುಜೇತನು ಮನೆಯ ಕೋಣೆಯಲ್ಲಿ ಹಾಕಿರುವ ಬಿದಿರಿನ ಅಡ್ಡಕ್ಕೆ ಸೀರೆಯನ್ನು ಕಟ್ಟಿ ಇನ್ನೊಂದು ತುದಿಯನ್ನು ಕುಣಿಕೆಯಾಗಿ ಮಾಡಿ ಕುತ್ತಿಗೆ ಬಿಗಿದು ನೇತಾಡುತ್ತಿದ್ದವನನ್ನು ಹಿಡಿದು ನೋಡಿದಾಗ ದೇಹದಲ್ಲಿ ಯಾವುದೇ ಚಲನ ವಲನಗಳು ಕಂಡು ಬಾರದೇ ಮೃತಪಟ್ಟಿದ್ದು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಯುಡಿಅರ್ ನಂಬ್ರ 29/21  ಕಲo: 174 ಸಿಅರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-08-2021 10:26 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080