ಅಪಘಾತ ಪ್ರಕರಣ: ೦4
ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದೀಲಿಪ್ ಕುಮಾರ್ (32) ತಂದೆ: ದಿ/ ಕೇಶವ ಗೌಡ, ವಾಸ: ಗಡದಕೋಡಿ ಮನೆ ವಿಟ್ನ ಪಡ್ನೂರು ಗ್ರಾಮ ಎಂಬವರ ದೂರಿನಂತೆ ಫಿರ್ಯಾಧಿದಾರರು ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಪಬ್ಲಿಕ್ ರಿಲೇಷನ್ ಆಪೀಸರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 12.09.2021 ರಂದು ತನ್ನ ಬಾಭ್ತು ಕಾರು ಕೆಎ 19 ಎಂ ಜೆ 3290 ನೇದರಲ್ಲಿ ತನ್ನ ಪತ್ನಿ ಶ್ರೀಮತಿ ಸೌಮ್ಯ ಮಗು ವಿಯಾನ್ಶ್ , ಅತ್ತೆ ಶ್ರೀಮತಿ ಸುಶೀಲ ಮಾವ ಸಂಜೀವ ಗೌಡ ಮತ್ತು ನಾದಿನಿ ಸುಪ್ರೀತ ಎಂಬರೊಂದಿಗೆ ಬಳ್ಳಮಂಜ ದೇವಸ್ಥಾನಕ್ಕೆ ಹೋಗಿದ್ದು ದೇವಸ್ಥಾನದಿಂದ ವಾಪಾಸು ಹೊರಟು ಮಡಂತ್ಯಾರು ಕಡೆಗೆ ಬರುತ್ತಾ ಸಮಯ ಸುಮಾರು 15.00 ಗಂಟೆಗೆ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಸ್ನೇಹಗಿರಿ ಕ್ರಾಸ್ ಎಂಬಲ್ಲಿ ತಲುಪುತಿದ್ದಂತೆ ಮಡಂತ್ಯಾರು ಕಡೆಯಿಂದ ಮಚ್ಚಿನ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಕೆ19 ಎಬಿ 5349 ನೇ ಅದರ ಚಾಲಕನು ನಿರ್ಲಕ್ಷತನದಿಂದ ಚಾಲಯಿಸಿಕೊಂಡು ಬಂದು ಪಿರ್ಯಾದಿದಾರರ ಬಾಬ್ತು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡ ಕೈ ಮದ್ಯದ ಬೆರಳಿಗೆ ಜಖಂ ಉಂಟಾಗಿದ್ದು, ಕಾರಿನಲ್ಲಿದ್ದ ಶ್ರೀಮತಿ ಸುಶೀಲಾರವರ ಮುಖದ ಭಾಗಕ್ಕೆ ಗಾಯವಾಗಿದ್ದು, ಮೈಗೆ ಗುದ್ದಿದ ಗಾಯವಾಗಿರುತ್ತದೆ. ನಾದಿನಿ ಸುಪ್ರಿತಾ ಹಾಗೂ ಮಾವ ಸಂಜೀವ ಗೌಡರವರಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 59/2021 ಕಲಂ: 279, 337,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಿರೀಕ್ಷ ಪ್ರಾಯ: 29 ವರ್ಷ ತಂದೆ: ಚಂದ್ರಹಾಸ ಪೂಜಾರಿ ಸಾಂತೂರು ಕೊಪ್ಪಲಪದವು ಮನೆ, ಕಾರ್ಕಳ ತಾಲೂಕು ಉಡುಪಿ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ :12-09-2021 ರಂದು ಅವರ ಬಾಬ್ತು KA 19 ME 1495 ನೇ ಕಾರಿನಲ್ಲಿ ಅವರ ತಾಯಿಯೊಂದಿಗೆ ಪುತ್ತೂರಿಗೆ ಹೋದವರು ಅಲ್ಲಿಂದ ವಾಪಾಸು ಕಾರನ್ನು ಚಲಾಯಿಸಿಕೊಂಡು ಮಂಗಳೂರಿಗೆ ಬರುತ್ತಾ ಸಮಯ ಸುಮಾರು 15:30 ಗಂಟೆಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ KA 19 ME 6950 ನೇ ಕಾರನ್ನು ಅದರ ಚಾಲಕ ವೆಂಕಟೇಶ್ ಎಂಬವರು ಅತೀವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರ ತಾಯಿಯವರಿಗೆ ಎಡಭುಜಕ್ಕೆ ಗುದ್ದಿದ ನೋವುಂಟಾಗಿರುವುದಲ್ಲದೇ ಕಾರು ಜಖಂಗೊಂಡಿರುತ್ತದೆ. ಅಪಘಾತನಂತರ ಕಾರು ಚಾಲಕ ಕಾರನ್ನು ಸ್ಥಳದಿಂದ ತೆಗೆದುಕೊಂಡು ಹೋಗಿದ್ದು, ಬಳಿಕ ಪಿರ್ಯಾದಿದಾರರು ಗಾಯಗೊಂಡ ತಾಯಿಯವರನ್ನು ಮಂಗಳೂರು ಕೊಲಾಸೋ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 92/2021 ಕಲಂ 279,337 ಐಪಿಸಿ & 134 ( ಎ & ಬಿ ) ಮೋ ವಾ ಕಾಯ್ದೆ.ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅನಿಲ್ ಪ್ರಾಯ: 33ವರ್ಷ ತಂದೆ: ದಿ|| ಪೂವಪ್ಪ ಪೂಜಾರಿ ವಾಸ: ಕೊಳತ್ತಮಜಲು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ :12-09-2021 ರಂದು ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಪುಂಚಮೆಯ ರಿಲೆಕ್ಸ್ ಹಾರ್ಡ್ ವೇರ್ ಅಂಗಡಿಯಲ್ಲಿ ಪರಿಚಯದ ವಾಮನ ಪೂಜಾರಿ ಯವರನ್ನು ಕಾಯುತ್ತಾ ನಿಂತಿದ್ದ ಸಮಯ ಬೆಳಿಗ್ಗೆ 09:30 ಗಂಟೆಗೆ ಪೊಳಲಿ ಕಡೆಯಿಂದ ವಾಮನ ಪೂಜಾರಿಯವರು ಅವರ ಬಾಬ್ತು KA 19 EF 3662 ನೇ ಸ್ಕೂಟರ್ ನಲ್ಲಿ ಬಂದು ರಸ್ತೆಯ ಬಲಬದಿಯಲ್ಲಿರುವ ರಿಲೆಕ್ಸ್ ಹಾರ್ಡ್ ವೇರ್ ಅಂಗಡಿ ಕಡೆಗೆ ತಿರುಗಿಸಿದಾಗ ಪೊಳಲಿ ಕಡೆಯಿಂದ KA 19 HF 3082 ನೇ ಸ್ಕೂಟರ್ ನ್ನು ಅದರ ಸವಾರ ಅಶ್ವಿನ್ ಎಂಬವರು ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ವಾಮನ ಪೂಜಾರಿ ಯವರ ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಎರಡು ಸ್ಕೂಟರ್ ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು ಗಾಯಾಳು ವಾಮನ ಪೂಜಾರಿಯವರನ್ನು ಪಿರ್ಯಾದಿ ಹಾಗೂ ಸಾರ್ವಜನಿಕರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕರೆದೊಯ್ಯದು ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 91/2021 ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹೈದರ್ ಪ್ರಾಯ: 37 ವರ್ಷ ತಂದೆ ದಿ. ಅಬೂಬಕ್ಕರ್ ವಾಸ : ಬಾಣಬೆಟ್ಟು ಮನೆ ಬಿಳಿಯೂರು ಎಂಬವರ ದೂರಿನಂತೆ ಫಿರ್ಯಾದಿದಾರರಾದ ಹೈದರ್ ರವರು ದಿನಾಂಕ: 12-09-2021 ರಂದು ವೈಯಕ್ತಿಕ ಕೆಲಸದ ನಿಮಿತ್ತ ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆಎ 19 ಕ 2489 ನೇದರಲ್ಲಿ ಮನೆಯಿಂದ ಹೊರಟು ಉಪ್ಪಿನಂಗಡಿಗೆ ಬಂದು ಕೆಲಸ ಮುಗಿಸಿ,ನಂತರ ಮನೆಗೆ ಹೋಗುವರೇ ಬೆಂಗಳೂರು – ಮಂಗಳೂರು ರಾ.ಹೆ.75 ರಲ್ಲಿ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿಗೆ 13-00 ಗಂಟೆಗೆ ತಲುಪುತ್ತಿದ್ದಂತೆ ನನ್ನ ಹಿಂದಿನಿಂದ ಅಂದರೆ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಓಮಿನಿ ಕಾರು ನಂಬ್ರ ಕೆಎ 05 ಎಂಸಿ 0439 ನೇದನ್ನು ಅದರ ಚಾಲಕನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರು ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಮೊಣಗಂಟಿಗೆ ತರಚಿದ ಸಾಮನ್ಯ ಸ್ವರೂಪದ ಗಾಯವಾದವರು, ಎದ್ದು ನಿಂತು ಕೊಂಡಾಗ, ಆರೋಪಿ ಓಮಿನಿ ಕಾರು ಚಾಲಕ ಅಬೂಬಕ್ಕರ್ ಸತ್ತಿಕಲ್ಲು ಎಂಬಾತನು ಕಾರಿನಿಂದ ಕೆಳಗೆ ಇಳಿದು ಕಾರಿನೊಳಗಿಂದ ಒಂದು ಕಬ್ಬಿಣದ ರಾಡನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೊಂಡಿರುವಾಗ,ಬಿದ್ದಿದ್ದ ಫಿರ್ಯಾದಿದಾರರನ್ನು ಕಂಡು ಅಲ್ಲಿಗೆ ಬಂದ ಹಕೀಮ್ ಮತ್ತು ಸಿರಾಜುದ್ದೀನ್ ರವರನ್ನು ಕಂಡ ಆರೋಪಿ ನಿನ್ನನ್ನು ಈ ಸಲ ಬಿಟ್ಟುಬಿಡುತ್ತೇನೆ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಕಾರನ್ನು ಚಲಾಯಿಸಿಕೊಂಡು ಪೆರ್ನೆ ಕಡೆಗೆ ಹೋಗಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ 88/2021 ಕಲಂ:504,506,279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಣೆ ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಮರ್ಥ್ ನಾಯಕ್ ಪ್ರಾಯ 30 ವರ್ಷ ತಂದೆ: ಸುರೇಂದ್ರ ನಾಯಕ್, ವಾಸ, ಅಜಿತ್ ನಗರ, ಉಜಿರೆ ಎಂಬವರ ದೂರಿನಂತೆ ಪಿರ್ಯಾದಿದಾರರು ಐಸ್‌ಕ್ರೀಂ ಫ್ಯಾಕ್ಟರಿ ಯಲ್ಲಿ ಸುಮಾರು 15 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ನಾಗೇಶ್(65) ಎಂಬವರು ದಿನಾಂಕ:27.08.2021 ರಂದು ಮಧ್ಯರಾತ್ರಿ 1.18 ಗಂಟೆಗೆ ಐಸ್‌ಕ್ರೀಂ ಫ್ಯಾಕ್ಟರಿಯ ಶೆಡ್ಡಿನಿಂದ ಹೊರಟು ಹೋಗಿದ್ದು ವಾಪಾಸ್ಸು ಮನೆಗೆ ಬಾರದೇ, ಸಂಬಂದಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಕಾಣೆಯಾದ ನಾಗೇಶ್(65) ರನ್ನು ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಗದೇ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 69/2021 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦2
ಸುಳ್ಯ ಪೊಲೀಸ್ ಠಾಣೆ : ದಿನಾಂಕ 12.09.2021 ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 67/2021 376(2),(i) IPC, 4,12 POCSO Act 2012ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ : ದಿನಾಂಕ 12.09.2021 ರಂದು ಸುಳ್ಯ ಠಾಣೆಯಲ್ಲಿ ಅ.ಕ್ರ 68/2021 ಕಲಂ: Sec: 6,7,12 The Karnataka Prevention of slaughter and cattle Act 2020 ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦1
ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕರುಣಾಕರ(42) ತಂದೆ:ನಾಣ್ಯಪ್ಪ ವಾಸ:ಕೆರಳೆಕೋಡಿ ಮನೆ, ಬೆಳ್ತಂಗಡಿ ಕಸಬಾ ಗ್ರಾಮ ಎಂಬವರ ದೂರಿನಂತೆ ದಿನಾಂಕ:11.09.2021 ರಂದು 11.00 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಭಾರತ್ ಕೋಲ್ಡ್ ಹೌಸ್‌ನ ಎದುರು ರಸ್ತೆ ಬದಿಯಲ್ಲಿ ಸುಮಾರು 58 ವರ್ಷ ಪ್ರಾಯದ ಓರ್ವ ಅಪರಿಚಿತ ವ್ಯಕ್ತಿಯು ಬಿದ್ದು ನರಳಾಡುತ್ತಿದ್ದವನನ್ನು 108 ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಸದ್ರಿ ಅಪರಿಚಿತ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ದಿ:11.09.2021 ರಂದು 17.00 ಗಂಟೆಗೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ: 29/2021 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.