ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಯೋಗೀಶ ಪಿ ಪ್ರಾಯ 36 ವರ್ಷ ತಂದೆ: ಸುಂದರ ಪೂಜಾರಿ ವಾಸ: ಮೇಗಿನ ಪೈರು ಮನೆ, ತೆಂಕಕಜೆಕಾರು ಗ್ರಾಮ  ಬಂಟ್ವಾಳ ತಾಲೂಕು ರವರು ದಿನಾಂಕ: 09-11-2021 ರಂದು ಕೆಎ 19 ಎಫ್‌ 3335 ನೇ ಕೆ ಎಸ್‌ ಆರ್‌ ಟಿ ಸಿ ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಮಡಂತ್ಯಾರು ಕಡೆಯಿಂದ ಗುರುವಾಯನಕೆರೆ ಕಡೆಗೆ ಪ್ರಯಾಣಿಸುತ್ತಾ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಕಿನ್ನಿಗೋಳಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಬಸ್ಸನ್ನು ಅದರ ಚಾಲಕ ಒಮ್ಮೆಲೇ ದುಡುಕುತನದಿಂದ ಚಲಾಯಿಸಿದ ಪರಿಣಾಮ ಬಸ್ಸು ಎಡ ಮಗ್ಗುಲಾಗಿ ಮಗಚಿದ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಪಿರ್ಯಾಧಿದಾರರಿಗೆ ಎಡಕಿವಿಗೆ ಒಳಜಖಂನ ಗಾಯಗೊಂಡು ಮಂಗಳೂರು ಸರಕಾರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 84/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀನಾಥ್ ಬಾಬು .ಎ ಪ್ರಾಯ 33 ವರ್ಷ  ತಂದೆ: ಆದಿಮೂರ್ತಿ ವಾಸ:ನಂಬ್ರ 1282,-13 ನೇ ಕ್ರಾಸ್ ಎಇಸಿಎಸ್ ಲೇಔಟ್ –ಎ ಬ್ಲಾಕ್ ಸಿಂಗಸಂದ್ರ ಬೆಂಗಳೂರು ರವರು ದಿನಾಂಕ:12-11-2021 ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುವರೇ ಸ್ವಿಫ್ಟ್ ಕಾರು ಕೆಎ 01 ಎಮ್ ವಿ 9817 ನೇದರಲ್ಲಿ ತಾನು ಚಾಲಕರಾಗಿ ಜೊತೆಯಲ್ಲಿ ಅವರ ಪತ್ನಿ ಪ್ರಿಯಾಂಕ ಶ್ರೀನಾಥ್ ಮತ್ತು ಮಗಳು ಯಶಿಕಾ ಶ್ರೀನಾಥ್ ಹಾಗೂ ಕಾರಿನ ಹಿಂಬದಿಯಲ್ಲಿ ತಂದೆ ಆದಿಮೂರ್ತಿ ಮತ್ತು  ತಾಯಿ ಸುಬ್ಬುಲಕ್ಷ್ಮಿ ರವರು ಕುಳಿತುಕೊಂಡು ಕಾರನ್ನು  ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದಿನ ಬೆಳಗ್ಗೆ 06.00 ಗಂಟೆಗೆ ಹೊರಟು ಚಲಾಯಿಸಿಕೊಂಡು ಬರುತ್ತಾ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಹಳಿರಾ ಎಂಬಲ್ಲಿ ತಲುಪಿದಾಗ ಪಿರ್ಯಾಧಿದಾರರ ಮಗಳು ಯಶಿಕಾ ಶ್ರೀನಾಥ್ ರವರಿಗೆ ವಾಂತಿ ಬಂದ ಕಾರಣ ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದಾಗ ಹಿಂದುಗಡೆ ಕುಳಿತಿದ್ದ ಪಿರ್ಯಾಧಿದಾರರ ತಂದೆ ಆದಿಮೂರ್ತಿಯವರು ಕೆಳಗೆ ಇಳಿಯುವರೇ ಕಾರಿನ ಹಿಂದಿನ ಬಾಗಿಲು ತೆರೆಯುವ ಸಮಯ ಮಂಗಳೂರು ಕಡೆಯಿಂದ ಮಾಣಿ ಕಡೆಗೆ ಒಂದು ಕೆಎ-19-ಝೆಡ್-7641 ಇನ್ನೋವಾ ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಒಂದು ವಾಹನವನ್ನು ಓವರ್ ಟೇಕ್ ಮಾಡಿ ಪಿರ್ಯಾಧಿದಾರರ ಕಾರಿನ ಹಿಂದಿನ ಬಲಬದಿ ಬಾಗಿಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರ ತಂದೆಯ ಕಾರಿನ ಒಳಗೆ ಬಿದ್ದು ಹಣೆಗೆ, ಮುಖದ ಗಲ್ಲಕ್ಕೆ ರಕ್ತ ಗಾಯ ಮತ್ತು ಬಲಕಾಲಿಗೆ ಮಣಿಗಂಟಿಗೆ ಹಾಗೂ ಕುತ್ತಿಗೆಯ ಹಿಂಬದಿ ಗುದ್ದಿದ ಗಾಯವಾಗಿರುತ್ತದೆ. ಇನ್ನೋವಾ ಕಾರಿನ ಚಾಲಕನ ಹೆಸರು ಕೇಳಿ ತಿಳಿಯಲಾಗಿ ಇಮ್ರಾನ್.ಯು  ಎಂಬುದಾಗಿ ತಿಳಿಯಿತು. ಗಾಯಾಳು ಆದಿಮೂರ್ತಿ ಚಿಕಿತ್ಸೆ ಬಗ್ಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 146/2021  ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಸುಮಿತ್ರಾ ಪ್ರಾಯ 28 ವರ್ಷ, ಗಂಡ: ದಿ: ಶಶಿಕುಮಾರ್,ವಾಸ: ಪಳ್ಳತ್ತಾರು ಮನೆ, ಬೆಳಂದೂರು ಗ್ರಾಮ,ಕಡಬ ತಾಲೂಕು, ದ.ಕ. ಜಿಲ್ಲೆ ರವರು ನೀಡಿದ ದೂರೇನೆಂದರೆ ದಿನಾಂಕ 03.11.2021 ರಂದು ಸಂಜೆ 15-00 ಗಂಟೆಗೆ ಆರೋಪಿ ಸವಾರ ನವೀನ ರವರು ಮೋಟಾರು ಸೈಕಲ್ ನಂಬ್ರ ಕೆಎ-21-ಜೆ-9059 ನೇಯದರಲ್ಲಿ ತನ್ನ ಮಾವ ಜೋಗಿ ರವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸವಣೂರು ಪೇಟೆ ಕಡೆಯಿಂದ ಬೆಳಂದೂರು ಕಡೆಗೆ ಅಜಗಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗಿ ಕಡಬ ತಾಲೂಕು ಕುದ್ಮಾರು ಗ್ರಾಮದ ಕುದ್ಮಾರು ಎಂಬಲ್ಲಿ ಹೆದ್ದಾರಿಯಲ್ಲಿ ನಾಯಿಯೊಂದು ಅಡ್ಡ ಬಂದು ಮೋಟಾರು ಸೈಕಲ್ ಸವಾರನ ಹತೋಟಿ ತಪ್ಪಿ ರಸ್ತೆ ಬದಿ ಮಗುಚಿಬಿದ್ದು, ಹಿಂಬದಿ ಸವಾರ ಜೋಗಿ ರವರಿಗೆ ತೀವ್ರ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಪುತ್ತೂರಿಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ 12.11.2021 ರಂದು ಬೆಳಿಗ್ಗೆ 07-40 ಗಂಟೆಗೆ ಆಸ್ಪತೆಯಲ್ಲಿ ಮೃತಪಟ್ಟಿರುವುದಾಗಿ ಫಿರ್ಯಾದಿದಾರರ ಮಗಳು ಸುಮಿತ್ರಾ ಎಂಬಾಕೆ ನೀಡಿದ ಲಿಖಿತ ದೂರಿನ ಸಾರಾಂಶ ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ. ಅ.ಕ್ರ 57/2021 ಕಲಂ 279, 304(ಎ) ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಂದ್ರಶೇಖರ ಬಿ (29ವರ್ಷ) ತಂದೆ: ದಿ|| ನಾರಾಯಣ ಆಚಾರ್ಯ,  ವಾಸ: 1-193, ಜನತಾ ಕಾಲೊನಿ ಬನ್ನೂರು, ನೀರಿನ ಟ್ಯಾಂಕ್ ಬಳಿ, ಬನ್ನೂರು ಅಂಚೆ & ಗ್ರಾಮ, ಪುತ್ತೂರು ತಾಲೂಕು ರವರು ನೀಡಿದ ದೂರೇನೆಂದರೆ ದಿನಾಂಕ 12-11-2021 ರಂದು ಆರೋಪಿ ಪಿಕ್ಅಪ್ ವಾಹನ ಚಾಲಕ ಚೇತನ್ ಎಂಬವರು KA-09-B-0764 ನೇ ನೋಂದಣಿ ನಂಬ್ರದ ಪಿಕ್ಅಪ್ ವಾಹನವನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ನೆಹರೂನಗರ ಕಾನೂನು ಕಾಲೇಜ್ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಚಂದ್ರಶೇಖರ್ ಎಂಬವರು ಚಾಲಕರಾಗಿ ನವ್ಯ ಎಂಬವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಬಸ್ನಿಲ್ದಾಣ ಕಡೆಯಿಂದ ನೆಹರೂನಗರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-B-2742 ನೇ ನೋಂದಣಿ ನಂಬ್ರದ ಅಟೋರಿಕ್ಷಾಗೆ ಹಿಂದಿನಿಂದ ಅಪಘಾತವಾಗಿ, ಅಟೋರಿಕ್ಷಾ ಪಲ್ಟಿಯಾಗಿ ರಸ್ತೆಗೆ ಬಿದ್ದು, ಅಟೋಚಾಲಕ ಚಂದ್ರಶೇಖರ್ ಬಿ ರವರಿಗೆ ಬಲಕಾಲಿನ ಪಾದಕ್ಕೆ, ಬಲ ಕೈ ಭುಜಕ್ಕೆ, ಬಲ ಕೈ ಮಣಿಗಂಟಿಗೆ ಗುದ್ದಿದ ಮುಖಕ್ಕೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಪ್ರಯಾಣಿಕರಾದ ನವ್ಯರವರಿಗೆ ಹಣೆಗೆ ಮತ್ತು ದೇಹಕ್ಕೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  139/2021 ಕಲಂ: 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿಕೇಶ್ ಕೆ ಜಿ  ಪ್ರಾಯ:21 ವರ್ಷ ತಂದೆ; ಕೇಶವ ಗೌಡ ವಾಸ: ಕಲ್ಲದಂಬೆ ಮನೆ ಕಳಂಜ ಗ್ರಾಮ ಬೆಳ್ತಂಗಡಿ ತಾಲೂಕು ರವರು ಮೊಡಬಿದ್ರೆಯ ಮೈಟ್ ಕಾಲೇಜಿನಲ್ಲಿ  ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿಕೊಂಡಿದ್ದು  ಪ್ರತಿ ದಿನ ಬೆಳಿಗ್ಗೆ 07.30 ಗಂಟೆ ಸಮಯಕ್ಕೆ  ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಖಾಸಗಿ ಬಸ್ಸು ನಿಲ್ದಾಣದ  ಶೌಚಾಲಯದ ಹತ್ತಿರ  ಮೋಟಾರ್ ಸೈಕಲ್ ನಂಬ್ರ ಕೆಎ 21 ಎಲ್ 3981 ನೇ ನಿಲ್ಲಿಸಿ   ಹೋಗುತ್ತಿರುವುದಾಗಿದೆ. ದಿನಾಂಕ;11-11-2021 ರಂದು ಬೆಳಿಗ್ಗೆ 7.30 ಗಂಟೆ ಸಮಯಕ್ಕೆ  ಶೌಚಾಲಯದ ಬಳಿ ನಿಲ್ಲಿಸಿ  ಶಾಲೆಗೆ ಹೋಗಿದ್ದು ಪಿರ್ಯಾದುದಾರರು ಶಾಲೆ ಬಿಟ್ಟು ವಾಪಾಸು ಸಂಜೆ 04.30 ಗಂಟೆಗೆ    ಬಂದು ನೋಡಿದಾಗ ನಿಲ್ಲಿಸಿದ  ಸ್ಥಳದಲ್ಲಿ  ಮೋಟಾರ್ ಸೈಕಲ್ ಇಲ್ಲದೇ ಇದ್ದು ಸುತ್ತಮುತ್ತ ಪರಿಸರದಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ಪಿರ್ಯಾದುದಾರರು ನಿಲ್ಲಿಸಿದ ಸ್ಥಳದಿಂದ ದ್ವಿ ಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಕಳುವಾದ ದ್ವಿ ಚಕ್ರ ವಾಹನದ ಅಂದಾಜು ಮೌಲ್ಯ 10,000 ಆಗಬಹುದು ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಅಕ್ರ 70/2021 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸೀತಾರಾಮ ಗೌಡ  ಪ್ರಾಯ 51 ವರ್ಷ, ತಂದೆ ;ಕೃಷ್ಣಪ್ಪ ಗೌಡ   , ವಾಸ: ಶರವೂರು  ಮನೆ ಅಲಂಕಾರು ಗ್ರಾಮ ಕಡಬ ತಾಲೂಕು ರವರ ಅಣ್ಣ ಮಾಧವ ಗೌಡ ಪ್ರಾಯ 54 ವರ್ಷ ಎಂಬವರು ಅವರ ಸಂಸಾರದೊಂದಿಗೆ ಪ್ರತ್ಯಕವಾಗಿ ವಾಸವಿದ್ದು ಕೃಷಿ ಕೆಲಸ ಮಾಡಕೊಂಡಿದ್ದರು ಅವರ ಬಾಬ್ತು ತೋಟದಲ್ಲಿದ್ದ ಕೆರೆಯಿಂದ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಇದ್ದು ದಿನಂಪ್ರತಿ ಬೆಳಿಗ್ಗೆ ಪಂಪು ಆನ್ ಮಾಡಲು ಕೆರೆಗೆ ಹೋಗುತ್ತಿದ್ದರು ದಿನಾಂಕ: 12.11.2021 ರಂದು ಬೆಳಿಗ್ಗೆ 06-00 ಗಂಟೆಗೆ ಕೆರೆಯ ಬಳಿ ಪಂಪು ಆನ್ ಮಾಡಲು ಹೋದವರು ವಾಪಾಸು ಮನೆಗೆ ಬಾರದೇ ಇರುವುದರಿಂದ ಪಿರ್ಯಾದಿಯ ಅಣ್ಣನ ಮಗಳು ರಮ್ಯರವರು ಕರೆಮಾಡಿ ವಿಚಾರ ತಿಳಿಸಿ ತನ್ನ ತಂದೆಯ ಬಗ್ಗೆ ಕೇಳಿದಾಗ ಪಿರ್ಯಾದಿಯು ಕೂಡಲೇ ಕೆರೆಯ ಬಳಿ ಹೋಗಿ ನೋಡಿದಾಗ ಕೆರೆಯ ನೀರಿನ ಒಳಗಿನಿಂದ ಗುಳ್ಳೆಗಳು ಬರುವುದನ್ನು ಹಾಗೂ ನೀರಿನಲ್ಲಿ ಚಪ್ಪಲಿ ತೇಲುತ್ತಿರುವುದನ್ನು ಗಮನಿಸಿ, ದಡದಲ್ಲಿ ಕಾಲು ಜಾರಿದ ಗುರುತು ಇರುವುದನ್ನು ಕಂಡು ಸಂಶಯಗೊಂಡ ಪಿರ್ಯಾದಿಯು ತನ್ನ ತಮ್ಮ ಶೇಖರನನ್ನು ಬರಲು ತಿಳಿಸಿ ಅವನೊಂದಿಗೆ ಸೇರಿಕೊಂಡು ನೀರಿನಲ್ಲಿ ಮುಳುಗಿ ಹುಡುಕಾಡಿ ನೋಡಿದಾಗ ಪಿರ್ಯಾದಿಯ ಅಣ್ಣ ಮಾಧವ ಗೌಡರು ನೀರಿನ ಆಳದಲ್ಲಿ ಮುಳಗಿದ್ದವರನ್ನು ಮೇಲಕ್ಕೆತ್ತಿ ದಡದಲ್ಲಿ ಮುಲಗಿಸಿ ನೋಡಿದಾಗ ದೇಹವು ಬಿಸಿಯಾಗದ್ದರಿಂದ ಚಿಕಿತ್ಸೆಯ ಬಗ್ಗೆ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆತಂದಲ್ಲಿ ವೈದರು ಪರೀಕ್ಷಿಸಿ ಮಾಧವ ಗೌಡರು ಮೃತ ಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂಬ್ರ 27/2021 ಕಲಂ: 174  ಸಿಆರ್‌ಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-11-2021 11:49 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080