ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೇಶವ ಆಚಾರ್ಯ, ಪ್ರಾಯ 37 ವರ್ಷ,ತಂದೆ: ದಿ|| ತಿಮ್ಮಪ್ಪ ಆಚಾರ್ಯ, ವಾಸ: ಕರಾವಳಿ ಸೈಟ್ ಮನೆ, ಕಳ್ಳಿಗೆ ಗ್ರಾಮ , ಬೆಂಜನಪದವು ಅಂಚೆ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 13-02-2022 ರಂದು ಪಿರ್ಯಾದಿದಾರರು ತಮ್ಮ ಗ್ರಾಮದ ದೇವಸ್ಥಾನದ ಬ್ರಹ್ಮ ಕಳಶೋತ್ಸವ ಪ್ರಯಕ್ತ ಸ್ವಚ್ಚತ ಅಭಿಯಾನಕ್ಕೆ ಹೋಗಿ, ಅಭಿಯಾನ ಮುಗಿಸಿ ಅಲ್ಲಿಂದ ವಾಪಾಸು ಮನೆ ಕಡೆ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು 14:45 ಗಂಟೆಗೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ರಾಮನಗರ ಎಂಬಲ್ಲಿಗೆ ತಲುಪುತ್ತಿದ್ದಂತೆ KA-70-E-8545 ನೇ ಸ್ಕೂಟರ್ ಅನ್ನು ಅದರ ಸವಾರ ವಿಜಿತ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಧನ್ವಿತ್ (7) ಬಾಲಕನಿಗೆ ಡಿಕ್ಕಿ ಹೊಡೆದು ಪರಿಣಾಮ ಧನ್ವತ್ ನು ರಸ್ತೆಗೆ ಬಿದ್ದು ಎದೆಗೆ ತಲೆಗೆ ರಕ್ತ ಗಾಯವಾಗಿರುವುದಲ್ಲದೆ ಸ್ಕೂಟರ್ ಸವರನೂ ಗಾಯಗೊಂಡಿರುತ್ತಾನೆ. ಪಿರ್ಯಾದಿದಾರರು ಇಬ್ಬರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಿದ್ದು, ಬಾಲಕ ಧನ್ವಿತ್ ನನ್ನು ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 22/2022 ಕಲಂ 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚಿದಂಬರ @ ಚಿದಾನಂದ, ಪ್ರಾಯ 29 ವರ್ಷ, ತಂದೆ: ಈಶ್ವರ ನಾಯ್ಕ್,  ವಾಸ: ಪೆರಿಯತ್ತೋಡಿ ಮನೆ,  ಕಬಕ ಗ್ರಾಮ,  ನೆಹರೂನಗರ ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 11-02-2022 ರಂದು 23-40 ಗಂಟೆಗೆ ಆರೋಪಿ ದ್ವಿ ಚಕ್ರ ವಾಹನ ಸವಾರ ಅಕ್ಷಿತ್ ಕೆ.ಎಂ ಎಂಬವರು KA-21-EB-3916 ನೇ ನೋಂದಣಿ ನಂಬ್ರದ  ದ್ವಿ ಚಕ್ರ ವಾಹನದಲ್ಲಿ ಓರ್ವ ಸಹಸವಾರನನ್ನು ಕುಳ್ಳಿರಿಸಿಕೊಂಡು ಬೊಳ್ವಾರು-ಪುತ್ತೂರು ಸಾರ್ವಜನಿಕ ಮುಖ್ಯ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಬೊಳುವಾರು ಕಡೆಗೆ ದ್ವಿ ಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು  ಪುತ್ತೂರು ಕಸಬಾ ಗ್ರಾಮದ ಬೊಳ್ವಾರು ಎಂಬಲ್ಲಿ ಪ್ರಗತಿ ಆಸ್ಪತ್ರೆ ಬಳಿ, ಯಾವುದೇ ಸೂಚನೆ ನೀಡದೇ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಎಡಬದಿಯಿಂದ ಬಲಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಸ್ನೇಹಿತ ಲೋಹಿತ್ ಎಂಬವರು ಸವಾರರಾಗಿ, ಬೊಳ್ವಾರು ಕಡೆಯಿಂದ ಪುತ್ತೂರು ಕಡೆಗೆ  ಚಲಾಯಿಸಿಕೊಂಡು ಹೋಗುತ್ತಿದ್ದ KA-21-L-30 ನೇ ನೋಂದಣಿ ನಂಬ್ರದ  ಮೋಟಾರ್ ಸೈಕಲಿಗೆ ಅಪಘಾತವಾಗಿ, ಎರಡೂ ವಾಹನಗಳ ಸವಾರರು ವಾಹನ ಸಮೇತ ರಸ್ತೆಗೆ ಬಿದ್ದಿದ್ದು, ಆ ಸಮಯ ಮೇಲ್ನೋಟಕ್ಕೆ ಯಾವುದೇ ಗಾಯಗಳಾಗದೇ ಇದ್ದು, ಮಾತುಕತೆ ನಡೆಸಿ ಹೋಗಿದ್ದು, ದಿನಾಂಕ 12-02-2022 ರಂದು ಲೋಹಿತ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಜ್ಯೋತಿಯ ಕೆ.ಎಂ.ಸಿ. ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ.  ಪಿರ್ಯಾದುದಾರರು ಮತ್ತು ಗಾಯಾಳು ಲೋಹಿತ್ ರವರ ತಮ್ಮ ಪುನೀತ್ ರವರು ಗಾಯಾಳುವಿನ ಆರೈಕೆಯಲ್ಲಿದ್ದು,.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  30/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಂದೀಪ್ ಕೆ, (28) ತಂದೆ: ಸಂಜೀವ ನಾಯಕ್ ವಾಸ: ಕುಕ್ಕಂದೂರು ಮನೆ, ಸೋಣಗೇರಿ ಅಂಚೆ., ಜಾಲ್ಸೂರು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ರಥಬೀದಿಯಲ್ಲಿ ಮಹಾಲಕ್ಷ್ಮೀ ಇಲಿಕ್ಟ್ರಿಕಾಲ್ಸ್ ಅಂಗಡಿಯನ್ನು ಹೊಂದಿದ್ದು, ದಿನಾಂಕ: 12.02.2022 ರಂದು ಸುಮಯ ಸುಮಾರು 19:30 ಗಂಟೆಗೆ ಅಂಗಡಿಯ ಎದುರು ನಿಂತುಕೊಂಡಿರುವಾಗ ಕೆಎ 21 ಎಸ್ 5994 ನೇದರ ಮೋಟಾರ್ ಸೈಕಲ್ ಸವಾರ ಕೌಶಿಕ್ ಎಂಬಾತನು ಚನ್ನಕೇಶವ ದೇವಾಸ್ಥಾನದ ಕಡೆಯಿಂದ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಕೆಎ 21 ಜೆ 7807 ನೇ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಗೋಪಾಲಕೃಷ್ಣ (52) ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದವರನ್ನು , ಅಲೇ ನಿಂತಿದ್ದ ಪಿರ್ಯಾದುದಾರರು ಇಬ್ಬರನ್ನು ಉಪಚರಿದಲ್ಲಿ ಗೋಪಾಲಕೃಷ್ಣ ರವರಿಗೆ ತಲೆ, ಮೂಗಿಗೆ, ತುಟಿಗೆ ಹಾಗೂ ಕೌಶಿಕ್ ಗೆ ಅಂಗೈಗೆ, ಹಣೆಗೆ ,ಬಲಕಾಲಿಗೆ ರಕ್ತಗಾಯವಾಗಿದ್ದವರನ್ನು  ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ, ಈ ಅಪಘಾತದಲ್ಲಿ ಎರಡು ವಾಹನಗಳು ಜಖಂ ಆಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ.ಕ್ರ 22/2022 ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಂತೋಷ್ ಕುಮಾರ್ (31)ತಂದೆ: ವಿಠ್ಠಲ ಶೆಟ್ಟಿ  ವಾಸ: ನಂದಿಬೆಟ್ಟ ಮನೆ ಗರ್ಡಾಡಿ ಗ್ರಾಮ & ಅಂಚೆ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ:12-02-2022 ರಂದು ಪಾದಚಾರಿ ಸಂಜೀವ ಭಂಡಾರಿ ಎಂಬುವರು ಗರ್ಡಾಡಿ ಕಡೆಯಿಂದ ನಂದಿಬೆಟ್ಟ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸಮಯ ಸುಮಾರು ಸಂಜೆ 6:45 ಗಂಟೆಗೆ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಂದಿಬೆಟ್ಟ ಎಂಬಲ್ಲಿಗೆ ತಲುಪುತ್ತಿದ್ದಂತೆ ಸಂಜೀವ ಭಂಡಾರಿ ಅವರ ಹಿಂದಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ಕೆಎ 70 4295 ನೇ ಪಿಕ್ ಅಪ್ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ಸಂಜೀವ ಭಂಡಾರಿ ಅವರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಅವರು ಅಲ್ಲಿಯೇ ಬಿದ್ದು ಬಲಕಾಲಿನ ಪಾದಕ್ಕೆ ರಕ್ತಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 26/2022 ಕಲಂ; 279,337ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ದ.ಕ ಮಹಿಳಾ ಪೊಲೀಸ್ ಠಾಣೆ : ದಿನಾಂಕ:  13-02-2022 ರಂದು ದ.ಕ ಮಹಿಳಾ ಪೊಲೀಸ್‌ ಠಾಣೆ ಪುತ್ತೂರು ಇಲ್ಲಿ ಅ.ಕ್ರ: 08/2022 ಕಲಂ:498 (A)323,506,R/w /34 IPC ಮತ್ತು 3&4 D.p Act1961ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಹೇಮಾವತಿ ಪ್ರಾಯ:36 ವರ್ಷ, ಗಂಡ: ನಾರಾಯಣ ಗೌಡ ವಾಸ; ಕುಂಕುಂಜ   ಮನೆ, ಕಣಿಯೂರುಗ್ರಾಮ. ಬೆಳ್ತಗಂಡಿ ತಾಲೂಕು ಎಂಬವರ ದೂರಿನಂತೆ ಶ್ರೀಮತಿ ಹೇಮಾವತಿ  ಪ್ರಾಯ 36 ವರ್ಷ ಎಂಬವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರು, ಮನೆ ವಾರ್ತೆ ಕೆಲಸ ಮಾಡಿಕೊಂಡಿದ್ದು ಪಿರ್ಯಾದಿದಾರರ ತಂದೆಗೆ 3 ಜನ ಮಕ್ಕಳಿದ್ದು ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದು. ಮನೆಯಲ್ಲಿ ತಂದೆ,ತಾಯಿ ಹಾಗೂ ತಮ್ಮ ಲೋಕೇಶ ರವರು ವಾಸವಿದ್ದು.ಪಿರ್ಯಾದಿದಾರರ ತಂದೆಯವರಾದ ಮೃತ ಶೇಸಪ್ಪ ಗೌಡ ರವರು ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದು. ನಿನ್ನೆ ದಿನಾಂಕ:12.02.2022 ರಂದು ಸಂಜೆ ಸಮಯ 05.00 ಗಂಟೆಗೆ ಮನೆಯಿಂದ ಹೋದವರು ಮನೆಗೆ ಬಾರದೇ ಇದ್ದು ಈ ದಿನ ದಿನಾಂಕ.13.02.2022 ರಂದು ಕಡಬ ತಾಲೂಕು ಆಲಂಕಾರು ಗ್ರಾಮದ ಬಸ್ಸು ನಿಲ್ದಾಣ ದಲ್ಲಿ ನಿನ್ನೆ ದಿನ ರಾತ್ರಿ ಹೊತ್ತು ಮಲಗಿದವರು ಮಲಗಿದ್ದ ಸ್ಥಿತಿಯಲ್ಲಿ ಮೃತ ಪಟ್ಟಿರುವ ವಿಷಯವನ್ನು ಪಿರ್ಯಾದಿದಾರರ ಚಿಕ್ಕಪ್ಪನ ಮಗನಾದ ಜಯರಾಮ ಎಂಬವರು ಪಿರ್ಯಾದಿದಾರರಿಗೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಹೋಗಿ ನೋಡಲಾಗಿ ಪಿರ್ಯಾದಿದಾರರ ತಂದೆಯವರು ಮೃತಪಟ್ಟಿದ್ದು. ಪಿರ್ಯಾದಿದಾರರ ತಂದೆಯವರು ಕೆಲವು ವರ್ಷಗಳಿಂದ ವಿಪರೀತ ಮಧ್ಯಪಾನ ಸೇವಿಸುವ  ಅಭ್ಯಾಸ ಹೊಂದಿದ್ದು ಸರಿಯಾಗಿ ಆಹಾರ ಸೇವಿಸದೇ ಇರುತ್ತಿದ್ದು ನಿನ್ನೆ ದಿನ ದಿನಾಂಕ;12.02.2022 ರಂದು ಮನೆ ಬಿಟ್ಟು ಹೋದವರು ಈ ದಿನ ದಿನಾಂಕ;13.02.2022 ರಂದು ಬೆಳಗ್ಗೆ 10 ಗಂಟೆಯ ಮಧ್ಯದೊಳಗಡೆ ಮೃತಪಟ್ಟಿದ್ದು.ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ;05/2022 ಕಲಂ. 174 Crpc   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-02-2022 10:04 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080