ಅಪಘಾತ ಪ್ರಕರಣ: ೦2
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ ನೀಲಮ್ಮ (31) ಗಂಡ: ಷಣ್ಮುಖಪ್ಪ ವಾಸ: ಕಾಳಿಕಾ ದೇವಿ ರಸ್ತೆ ನ್ಯಾಮತಿ ತಾಲೂಕು ದಾವಣಗೆರೆ ಜಿಲ್ಲೆ ರವರು ದಿನಾಂಕ: 13-03-2022 ರಂದು KA 19 D 0713 ನೇ ಕಾರಿನಲ್ಲಿ ಇತರರ ಜೊತೆಗೆ ಸಹಪ್ರಯಾಣಿಕರಾಗಿ ಕುಳಿತುಕೊಂಡು ಧರ್ಮಸ್ಥಳಕ್ಕೆ ಹೊರಟಿದ್ದು ಕಾರು ಚಾಲಕ ವಿಜಯ್ ಮೂಡಗೆರೆ-ಉಜಿರೆ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಪಾಂಡಿಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ಅದರ ಚಾಲಕ ದುಕುತನದಿಂದ ಚಲಾಯಿಸಿ ಚಾಲಕನ ಚಾಲನಾ ಹತೋಟಿ ತಪ್ಪಿ ಕಾರು ರಸ್ತೆ ಬದಿ ಎಡಬದಿಯ ಹೊಂಡಕ್ಕೆ ಬಿದ್ದಿರುತ್ತದೆ ಪರಿಣಾಮ ಪಿರ್ಯಾದಿದಾರರಿಗೆ ಎಡಕೈ ರಟ್ಟೆಗೆ, ಬಲಕೋಲು ಕಾಲಿಗೆ ಕುತ್ತಿಗೆಗೆ ಗುದ್ದಿದ ಗಾಯವಾಗಿರುತ್ತದೆ. ಸಹಪ್ರಯಾಣಿಕರಾದ ಶೀಮತಿ ಅರುಣಾ ರವರಿಗೆ ಎಡಕಾಲಿಗೆ ಗುದ್ದಿದ ಗಾಯ ಮೂಗಿಗೆ ತರಚಿದ ಗಾಯವಾಗಿರುತ್ತದೆ. ಅನುಷಾ ರವರಿಗೆ ಎಡ ಬದಿ ಗಲ್ಲಕ್ಕೆ ಬಲಕಾಲಿನ ಹೆಬ್ಬೆರಳಿಗೆ ತರಚಿದ ರಕ್ತಗಾಯ ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಕಾರು ಚಾಲಕ ವಿಜಯ್ ರವರಿಗೆ ಎಡಕಾಲಿಗೆ ಸೊಂಟಕ್ಕೆ ಗುದ್ದಿದ ಗಾಯ, ಹಣೆಗೆ ತರಚಿದ ಗಾಯವಾಗಿದ್ದು, ಗಾಯಾಳುಗಳ ಪೈಕಿ ಪಿರ್ಯಾದಿದಾರರಾದ ಶ್ರೀಮತಿ ನೀಲಮ್ಮ, ಶ್ರೀಮತಿ ಅರುಣಾ ಮತ್ತು ವಿಜಯ್ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮತ್ತು ಅನುಷಾ ಉಜಿರೆಯ ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 44/2022 ಕಲಂ; 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ವಿನ್ನಿ ಸಿಂಥಿಯಾ ಡಿ ಸೋಜಾ ಪ್ರಾಯ: 52 ವರ್ಷ ಗಂಡ: ಚಾರ್ಜ್ ಪಿಂಟೋ. ವಾಸ: ಮರಿಯಾ ಕೃಪಾ ಮನೆ, ಲೊರೆಟ್ಟೊ ಅಂಚೆ ಅಮ್ಟಾಡಿ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ 12-03-2022 ರಂದು ತನ್ನ ಬಾಬ್ತು KA-19EP-2005 ನೇ ಸ್ಕೂಟರಿನಲ್ಲಿ ತನ್ನ ಚಿಕ್ಕಮ್ಮ ಐರಿನ್ ನೊರೊನ್ಹಾರವರನ್ನು ಸಹಸವಾರಿಣಿಯಾಗಿ ಕುಳ್ಳಿರಿಸಿಕೊಂಡು ಮನೆಯಿಂದ ಬಡಗಬೆಳ್ಳೂರು ಗರ್ಗಲ್ ಕಡೆಗೆ ಹೋಗುತ್ತಾ ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದ ಕುರಿಯಾಳ ಎಂಬಲ್ಲಿಗೆ ತಲುಪಿದಾಗ ತನ್ನ ಮುಂದಿನಿಂದ ಹೋಗುತ್ತಿದ್ದ KA-19P-8872 ನೇ ಓಮ್ನಿ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೆ ಒಮ್ಮೆಲೆ ಬಲಕ್ಕೆ ತಿರುಗಿಸಿ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸಹಸವಾರಿಣಿ ಐರಿನ್ ನೊರೊನ್ಹಾರವರು ದ್ವಿಚಕ್ರದೊಂದಿಗೆ ರಸ್ತೆಗೆ ಬಿದ್ದು ಅಪಘಾತವಾಗಿದ್ದು, ಅಪಘಾತದಲ್ಲಿ ಪಿರ್ಯಾದಿದಾರರ ಬಲ ಕೈಯ ಮೊಣಗಂಟಿಗೆ ಗುದ್ದಿದ ಗಾಯ, ಬಲಹಣೆಗೆ, ಬಲಮುಖಕ್ಕೆ, ತುಟಿಗೆ, ಎಡಕಾಲಿಗೆ, ಎಡಕೈ ಮೊಣಗಂಟಿಗೆ ತರಚಿದ ಗಾಯವಾಗಿದ್ದು, ಐರಿನ್ ನೊರೊನ್ಹಾರವರ ಎಡ ಭುಜಕ್ಕೆ ಗುದ್ದಿದ ಗಾಯ, ಎಡ ಹಣೆಗೆ, ಬಲಕಾಲಿನ ಪಾದಕ್ಕೆ ತರಚಿದ ಗಾಯವಾಗಿದ್ದು, ಗಾಯಾಳುಗಳು ಬಂಟ್ವಾಳ ಸರಕಾರಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ0020ಅ.ಕ್ರ 32/2022 ಕಲಂ 279,337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ: ೦1
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ ಗೋಪಾಲಕೃಷ್ಣ ರಾವ್ (67) ತಂದೆ: ದಿ. ರಾಮ ರಾವ್ ವಾಸ: ಅನ್ನಪೂರ್ಣ ಪಂಜಿಗುಡ್ಡೆ ಪಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರು ಪಿಗ್ಮಿ ಸಂಗ್ರಹಕರಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 12.03.2022 ರಂದು ಎಂದಿನಂತೆ ತನ್ನ ಮೋಟಾರು ಸೈಕಲ್ ಕೆಎ 19 ಡಬ್ಲ್ಯೂ 4966 ನೇದರಲ್ಲಿ ಪಿಗ್ಮಿ ಸಂಗ್ರಹಣೆ ಮಾಡಿಕೊಂಡಿದ್ದು, ಬೊಳ್ವಾರಿನ ನವದುರ್ಗಾ ಸ್ವೀಟ್ಸ್ ಅಂಗಡಿಯ ಎದುರು ತನ್ನ ಮೋಟಾರು ಸೈಕಲನ್ನು ನಿಲ್ಲಿಸಿ ಕೀಯನ್ನು ಅದರಲ್ಲೇ ಇಟ್ಟು, ಬೊಳ್ವಾರಿನ ಸುತ್ತಮುತ್ತ ಅಂಗಡಿಗಳ ಪಿಗ್ಮಿ ಸಂಗ್ರಹಣೆ ಮಾಡಿ ವಾಪಾಸು ಬಂದು ನೋಡಿದಾಗ ಫಿರ್ಯಾದಿದಾರರು ನಿಲ್ಲಿಸಿದ ಮೋಟಾರು ಸೈಕಲು ಕಳುವಾಗಿದ್ದು, ಸದ್ರಿ ಮೋಟಾರು ಸೈಕಲಿನಲ್ಲಿ ಫಿರ್ಯಾದಿದಾರರ ಎರಡು ಸಂಸ್ಥೆಯ ಪಿಗ್ಮಿ ಮಿಶಿನ್ ಕೂಡಾ ಇರುತ್ತದೆ. ಕಳವಾದ ಮೋಟಾರು ಸೈಕಲಿನ ಅಂದಾಜು ಮೌಲ್ಯ 10,000/- ರೂ ಆಗಬಹುದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ:14/2022 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ: ೦1
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಿಶಾಂತ್, ಪ್ರಾಯ: 18 ವರ್ಷ, ತಂದೆ: ದಿ.ಸದಾಶಿವ,ವಾಸ: ಗುತ್ತು ಮನೆ, ತಿಂಗಳಾಡಿ ಕೆದಂಬಾಡಿ ಗ್ರಾಮ, ಪುತ್ತೂರು ತಾಲೂಕು ರವರು ದಿನಾಂಕ 12.03.2022 ರಂದು ರಾತ್ರಿ ತಿಂಗಳಾಡಿ ಜಂಕ್ಷನಲ್ಲಿ ಇರುವ ಸಮಯ ಕೆಯ್ಯೂರು ಕಡೆಯಿಂದ ಸರ್ವೆಯ ಅಬೂಬಕ್ಕರ್ ಮತ್ತು ಖಾಸಿಂ ಎಂಬವರು ಬಿಳಿ ಬಣ್ಣದ ಡಿಯೋ ಸ್ಕೂಟರ್ ನಲ್ಲಿ ಪಿರ್ಯಾಧಿಯ ಬಳಿಗೆ ಬಂದು ಅವರ ಪೈಕಿ ಖಾಸಿಂ ನು ಪಿರ್ಯಾದಿಯನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿದ್ದು. ಆವೇಳೆ ಅಬೂಬಕ್ಕರನು ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದಿದ್ದು ಇದನ್ನು ನೋಡಿದ ಪಕ್ಕದ ಅಂಗಡಿಯ ಬಳಿಯಲ್ಲಿದ್ದ ಸುದೀನ್, ದಿನೇಶ್, ಹರೀಶ್, ನಿಕ್ಷಿತ್, ನಿತೇಶ್ ಹಾಗೂ ಪ್ರತೀಕ್ ರವರು ಪಿರ್ಯಾದಿಯ ಬಳಿಗೆ ಬರುವುದನ್ನು ಕಂಡು ಖಾಸಿಂ ಪಿರ್ಯಾದಿಯನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ, ಅವರಿಬ್ಬರು ಬಂದಿದ್ದ ಸ್ಕೂಟರಿನಲ್ಲಿ ಸ್ಥಳದಿಂದ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 34/2022, ಕಲಂ 341, 504, 506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦1
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎನ್ ಎಸ್ ಸುಲೋಚನ ಪ್ರಾಯ: 64 ವರ್ಷ ಗಂಡ: ಎನ್ ಎಸ್ ಸುರೇಶ್ ರಾವ್ ವಾಸ: ಲಲಿತ ನಿವಾಸ 11-220/6ಎ, ಕೈಕುಂಜೆ ಪೂರ್ವ ಬಡಾವಣೆ ಮನೆ ಬಿ ಮೂಡ ಗ್ರಾಮ ಬಂಟ್ವಾಳ ತಾಲೂಕು ರವರು ದಿನಾಂಕ:13-03-2022 ರಂದು ಮನೆಯಿಂದ ಹೊರಟು ಕೈಕುಂಜೆಯಲ್ಲಿರುವ ಭಾರತಿಯವರ ಮನೆಗೆ ಹೋಗಿ ಹೊಲಿಯಲು ಕೊಟ್ಟ ಬಟ್ಟೆಯನ್ನು ಪಡೆದುಕೊಂಡು ವಾಪಾಸು ಬರುತ್ತಿರುವ ಸಮಯ ಬಿ ಮೂಡ ಗ್ರಾಮದ ಕೈಕುಂಜೆ ಪೂರ್ವ ಬಡಾವಣೆಯ ಬಳಿ ಹಳದಿ ಗೇಟ್ ನ ಎದುರಿಗೆ ತಲುಪಿದಾಗ ಎದುರಿಗೆ ಒಂದು ಮೋಟಾರ್ ಸೈಕಲ್ ಬಂದಿದ್ದು, ಅದರಲ್ಲಿ ಇಬ್ಬರು ಇದ್ದು, ಹಿಂಬದಿ ಸವಾರನು ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ 28 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿರುತ್ತಾರೆ. ಮಾಂಗಲ್ಯ ಸರದ ಅಂದಾಜು ಮೌಲ್ಯ ರೂ.1,00,000/- ಆಗಬಹುದು ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 26/2022 ಕಲಂ:392 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦1
ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪಿ ರಮೇಶ್ ರೈ ಪ್ರಾಯ: 57 ವರ್ಷ, ತಂದೆ ಸಂಜೀವ ರೈ ವಾಸ: ರಕ್ಷೀತ್ ನಿಲಯ ಅರೋಳ್ತ್ತಡಿ ಮನೆ ,ಮೂಡ್ನೂರು ಗ್ರಾಮ, ಪುತ್ತೂರು ತಾಲೂಕು. ರವರ, ತಂದೆಯವರು ಒಂದು ವರ್ಷದ ಹಿಂದೆ ಮೃತ್ತಪಟ್ಟಿದ್ದು ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳಿದ್ದು ಅಕೆಯ ಹೆಸರು ಜಯಂತಿ ಎಮ್ ಶೆಟ್ಟಿಯಾಗಿದ್ದು ಇವರು ತಂದೆಯ ಮನೆಯ ಪಕ್ಕದಲ್ಲೇ ಅವಳ ಗಂಡನಾದ ಮದನ್ ಶೆಟ್ಟಿ ಪ್ರಾಯ 65 ವರ್ಷ ಎಂಬುವರೊಂದಿಗೆ ಸಂಸಾರದೊಂದಿಗೆ ವಾಸವಿದ್ದು ಪಿರ್ಯಾದಿಯ ತಂದೆಯವರು ಮೃತ ಪಟ್ಟ ಬಳಿಕ ತಾಯಿಯವರು ಮನೆಯಲ್ಲಿ ಒಬ್ಬರೇ ಆಗಿದ್ದುದರಿಂದ ಅವರನ್ನು ತಮ್ಮ ಶಶೀಂದ್ರ ಆತನ ಮನೆಯಾದ ಮಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಈ ನಡುವೆ ಶಶೀಂದ್ರನಿಗೂ ಹಾಗೂ ಜಯಂತಿಯವರಿಗೂ ತಂದೆ ಮೃತಪಟ್ಟ ಬಳಿಕ ಒಬ್ಬರಿಗೊಬ್ಬರು ಮಾತನಾಡದೇ ಇದ್ದು ಹೀಗಿರುವಾಗ ನಾಲ್ಕು ತಿಂಗಳ ಹಿಂದೆ ಪಿರ್ಯಾದಿಯ ತಾಯಿಯನ್ನು ತಮ್ಮನಾದ ಶಶೀಂದ್ರ ಅಕ್ಕನ ಮನೆಯ ಅಂಗಳದಲ್ಲಿ ಬಿಟ್ಟು ಹೋಗಿದ್ದು ಈ ವಿಚಾರದಲ್ಲಿ ಅಥಾವ ಬೇರೆ ಯಾವೂದೋ ವಿಚಾರಕ್ಕೆ ಮನನೊಂದು ಭಾವ ಮದನ್ ಶೆಟ್ಟಿ ದಿನಾಂಕ 13-03-2022 ಬೆಳಿಗ್ಗೆ ಸುಮಾರು 08.00 ಗಂಟೆಯ ಸಮಯಕ್ಕೆ ಅಡಿಕೆ ತೋಟಕ್ಕೆ ಹೋಗಿ ಬರುತ್ತೆನೆ ಎಂದು ಅಕ್ಕ ಜಯಂತಿರವರಲ್ಲಿ ಹೇಳಿ ಹೋದವರು ಗಂಟೆ ಸಮಯ 09-30 ಆದರು ಮನೆಗೆ ಬಾರದೇ ಇದ್ದಾಗ ಹುಡುಕಾಡಿಕೊಂಡು ಹೋದಾಗ ತೋಟದಲ್ಲಿ ಹಲಸಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿ ನೇತಾಡಿಕೊಂಡಿರುವುದಾಗಿ ಅಕ್ಕ ಜಯಂತಿ ಮೋಬೈಲ್ ಕರೆ ಮಾಡಿ ತಿಳಿಸಿದ್ದು ಕೂಡಲೇ ಪೆರಾಬೆಗೆ ಬಂದು ಅಡಿಕೆ ತೋಟದಲ್ಲಿ ನೋಡಿದಾಗ ಮದನ್ ಶೆಟ್ಟಿಯವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ;10/2022 ಕಲಂ. 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.