ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೋಹನ ಎಲ್ ಪ್ರಾಯ 39 ವರ್ಷ ತಂದೆ: ದೇಜಪ್ಪ ಮೂಲ್ಯ ವಾಸ: ಲವುದಡಿ ಮನೆ, ನಾವೂರ ಗ್ರಾಮ,ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 12-05-2021 ರಂದು ಕೆಎ 21 ಎಸ್ 2676 ನೇ ಮೋಟಾರು ಸೈಕಲ್ ನ್ನು ಅದರ ಸವಾರ ದಿವಾಕರ ಪೂಜಾರಿ ಎಂಬವರು ಕೈಕಂಬ ಕಡೆಯಿಂದ ಫಾರೆಸ್ಟ್ ಬಂಗ್ಲೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 5.00 ಗಂಟೆಗೆ ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಕಾನೆಮಜಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಫಾರೆಸ್ಟ್ ಬಂಗ್ಲೆ ಕಡೆಯಿಂದ ಕೈಕಂಬ ಕಡೆಗೆ ಕೆಎ 21 ಎ 6752 ನೇ ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರು  ಸೈಕಲ್ ಗೆ ಢಿಕ್ಕಿ ಹೊಡದ ಪರಿಣಾಮ ದಿವಾಕರ ಪೂಜಾರಿ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲ ಕಾಲಿನ ಮೊಣಗಂಟಿಗೆ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 44/2021, ಕಲಂ; 279,337 ಭಾದಂಸಂ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆ ಬೆದರಿಕೆ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಲೀಲಾವತಿ ಪ್ರಾಯ 57 ವರ್ಷ ಗಂಡ:ರಾಮಚಂದ್ರ ವಾಸ:ನಿಡ್ಯಾರ ಮನೆ, ಅನಂತಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:13-05-2021 ರಂದು ಬೆಳಿಗ್ಗೆ 09.30 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ನಿಡ್ಯಾರ ಎಂಬಲ್ಲಿ ಪಿರ್ಯಾಧಿದಾರರು ತನ್ನ ತಮ್ಮ ಜಯರಾಮ ಹಾಗೂ ಅಣ್ಣ ಮಗಳು ಸ್ವಾತಿ ಎಂಬವರೊಂದಿಗೆ ಜಯರಾಮರವರ ಜಮೀನಿನಲ್ಲಿರುವ ತೆಂಗಿನ ಮರದಿಂದ ತೆಂಗಿನ ಕಾಯಿ ಕೀಳುತ್ತಿರುವುದನ್ನು ಹೆಕ್ಕುತ್ತಿದ್ದಾಗ ನೆರೆಮನೆಯ ಚಂದ್ರಶೇಖರ ಎಂಬವರು ಪಿರ್ಯಾಧಿ, ಜಯರಾಮ ಹಾಗೂ ಸ್ವಾತಿ ರವರುಗಳನ್ನು ಅವಾಚ್ಯ ಶಬ್ದಗಳಿಂದ ಬೈದು ಒಂದು ಹಿಡಿ ಗಾತ್ರದ ಕಲ್ಲನ್ನು ತೆಗೆದುಕೊಂಡು ಪಿರ್ಯಾಧಿದಾರರ ಕಡೆಗೆ ಗುರಿ ಇಟ್ಟು ಹೊಡೆದು ಸದ್ರಿ ಕಲ್ಲು ಪಿರ್ಯಾಧಿದಾರರ ಎಡ ಕಣ್ಣಿನ ಭಾಗಕ್ಕೆ ತಾಗಿ ರಕ್ತಗಾಯವಾಗಿರುತ್ತದೆ. ಪಿರ್ಯಾಧಿದಾರರನ್ನು ಉದ್ದೇಶಿಸಿ “ಇನ್ನು ಮುಂದಕ್ಕೆ ಈ ಜಮೀನಿಗೆ ಬಂದು ತೆಂಗಿನ ಕಾಯಿ ತೆಗೆದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 70/2021  ಕಲಂ:504,324,506 ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ. 13.05.2021  ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 62/2021  ಕಲಂ  269,270,271ಐ.ಪಿ.ಸಿ ಮತ್ತು 5(1),5(3)  ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಫಿರ್ಯಾದಿದಾರರಾದ ಕಮಲ, ಓಟೆತ್ತಿಮಾರ್ ಮನೆ, ಕುರಿಯ ಗ್ರಾಮ ಪುತ್ತೂರು ತಾಲೂಕುರವರು  ಕುರಿಯ ಗ್ರಾಮದ ಮಾವಿನಕಟ್ಟೆ ಅಂಗನವಾಡಿ  ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಆರ್ಯಾಪು ಗ್ರಾಮ ಪಂಚಾಯತ್ ನ  COVID 19 ಟಾಸ್ಕ್ ಫೋರ್ಸ್ ನ ಸದಸ್ಯೆಯಾಗಿರುವುದರಿಂದ COVID 19 ಗೆ ಸಂಬಂಧಿಸಿದಂತೆ ಕುರಿಯ ಗ್ರಾಮದಲ್ಲಿ  ಕರ್ತವ್ಯದ ನಿಮಿತ್ತ  ದಿನಾಂಕ 13.05.2021 ರಂದು ಬೆಳಿಗ್ಗೆ ಓಟೆತ್ತಿಮಾರ್‌- ಅಜಲಾಡಿ ರಸ್ತೆಯಲ್ಲಿ ಅಜಲಾಡಿಯಿಂದ ಓಟೆತ್ತಿಮಾರ್‌ಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಾ ಬೆಳಿಗ್ಗೆ 10.00 ಗಂಟೆಗೆ ಕುರಿಯ ಗ್ರಾಮದ ಅಜಲಾಡಿ ಎಂಬಲ್ಲಿರುವ ಶ್ರೀನಿವಾಸ ನಾಯ್ಕರ ಮನೆಯ ಬಳಿಗೆ ತಲುಪಿದಾಗ ಓಟೆತ್ತಿಮಾರ್‌- ಅಜಲಾಡಿ ಸಾರ್ವಜನಿಕ  ರಸ್ತೆಯಲ್ಲಿ  ಅಜಲಾಡಿಯ ನೌಫಾಲ್, ಅಬ್ರಾಝ್, ಸಾದಿಕ್, ಆಸೀಫ್, ಫಯೀಝ್ ಮತ್ತು ಇತರ ಕೆಲವು ಜನ ಯುವಕರು ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೇ, ಮುಖಕ್ಕೆ ಮಾಸ್ಕ್ ಧರಿಸದೇ ಗುಂಪಾಗಿ ನಿಂತುಕೊಂಡಿರುವುದನ್ನು ನೋಡಿ ಪಿರ್ಯಾದಿದಾರರು ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮುಖಕ್ಕೆ ಮಾಸ್ಕ್ ಧರಿಸುವಂತೆ  ಮತ್ತು ಸಾಮಾಜಿಕ ಅಂತರವನ್ನು ಪಾಲಿಸುವಂತೆ ತಿಳಿ ಹೇಳಿದರೂ ಮುಖಕ್ಕೆ ಮಾಸ್ಕ್ ಧರಿಸಿರುವುದಿಲ್ಲ ಮತ್ತು ಯಾವುದೇ ಸಾಮಾಜಿಕ ಅಂತರವನ್ನು ಪಾಲಿಸದೇ ನಿರ್ಲಕ್ಷ  ವಹಿಸಿದ್ದು, ಸದ್ರಿಯವರ ಈ ಕೃತ್ಯದಿಂದ ಪ್ರಾಣಕ್ಕೆ ಹಾನಿಯನ್ನುಂಟು ಮಾಡುವ ಸಾಂಕ್ರಾಮಿಕ ರೋಗವಾದ COVID 19 ಸೋಂಕು  ಹರಡುವ ಸಾಧ್ಯತೆ ಇರುವುದರಿಂದ  ಆರೋಪಿಗಳ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಆ.ಕ್ರ 42/21 ಕಲಂ: 269  ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-05-2021 11:17 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080