ಅಪಘಾತ ಪ್ರಕರಣ: ೦2
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ರಾಜೇಶ್ ಪ್ರಾಯ.31 ವರ್ಷ ತಂದೆ: ನೋಣಯ್ಯ ಗೌಡ ವಾಸ: ಅಲ್ಲಗಾರು ಮನೆ, ಬಿಳಿಯೂರು ಅಂಚೆ ಮತ್ತು ಗ್ರಾಮ, ಬಂಟ್ವಾಳ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 13-05-2022 ರಂದು 07-20 ಗಂಟೆಗೆ ಆರೋಪಿ ಕಾರು ಚಾಲಕ ತೋಮಸ್ ಪಿ.ಜೆ ಎಂಬವರು KA-51-N-7680ನೇ ನೋಂದಣಿ ನಂಬ್ರದ ಕಾರನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಬಿಳಿಯೂರು ಕ್ರಾಸ್ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್ ಸೈಡ್ ಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ರಾಜೇಶ್ ರವರು ಕರ್ವೆಲು ಕಡೆಯಿಂದ ಪೆರಮೊಗರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಅಟೋರಿಕ್ಷಾ ನೋಂದಣಿ ನಂಬ್ರ KA-21-C-2693 ನೇಯದಕ್ಕೆ ಕಾರು ಅಪಘಾತವಾಗಿ, ಅಟೋರಿಕ್ಷಾ ಪಲ್ಟಿಯಾಗಿ ಪಿರ್ಯಾದುದಾರರಿಗೆ ಹಣೆಗೆ, ಎಡ ಕೈ ಮಣಿಗಂಟಿಗೆ, ಎಡ ಕಾಲಿನ ಮೊಣಗಂಟಿಗೆ, ತುಟಿಗೆ ಗುದ್ದಿದ ರಕ್ತಗಾಯವಾಗಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 92/2022 ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರತೀಕ್ ಎ ಪ್ರಾಯ. 26 ವರ್ಷ ತಂದೆ : ಪ್ರಸನ್ನ ಕುಮಾರ್ ವಾಸ: ಅಡೆಂಜ ಮನೆ, ಕಣಿಯೂರು ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 12-05-2022 ರಂದು 22-00 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ KA-21-Q-9920ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಕುಪ್ಪೆಟ್ಟಿ-ಬಂದಾರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬಂದಾರು ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಗಾಡಕೋಡಿ ಎಂಬಲ್ಲಿ, ಗಾಡಕೋಡಿ ಬಸ್ ನಿಲ್ದಾಣದ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ಪದ್ಮುಂಜ ಕಡೆಯಿಂದ ಕುಪ್ಪೆಟ್ಟಿ ಕಡೆಗೆ ರಸ್ತೆಯ ಎಡ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರ ದೊಡ್ಡಪ್ಪ ಪ್ರಕಾಶ್ ಅಜ್ಜೀರಿ ರವರಿಗೆ ಹಿಂದಿನಿಂದ ಮೋಟಾರ್ ಸೈಕಲ್ ಅಪಘಾತವಾಗಿ, ಪ್ರಕಾಶ್ ಅಜ್ಜೀರಿ ರವರಿಗೆ ತಲೆಗೆ ಗುದ್ದಿದ ಹಾಗೂ ರಕ್ತಗಾಯವಾಗಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಪಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 93/2022 ಕಲಂ:279, 337 ಐಪಿಸಿ ಮತ್ತು 134 (ಎ&ಬಿ) MV Act ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೆ ಪ್ರಕರಣ: ೦2
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಯಶ್ವಿತ್ ಪ್ರಾಯ 27 ವರ್ಷ ತಂದೆ: ಚಂದಪ್ಪ ಪೂಜಾರಿ ಸಜಿಪ ಮುನ್ನೂರು ಗ್ರಾಮ ಬಂಟ್ವಾಳ ತಾಲೂಕು ರವರು ಕೆಲಸ ಮುಗಿಸಿಕೊಂಡು ದಿನಾಂಕ 12-05-2022 ರಂದು ರಾತ್ರಿ 11.30 ಗಂಟೆಗೆ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ಮಡಿವಾಳ ಪಡ್ಪು ಹತ್ತಿರ ತನ್ನ ಬಾಬ್ತು ಬೈಕಿನಲ್ಲಿ ಹೋಗುತ್ತಿರುವಾಗ ಪಿರ್ಯಾಧಿದಾರರಿಗೆ ಗುರುತು ಪರಿಚಯವಿಲ್ಲದ ಅಪರಿಚಿತ 3 ಜನರು ಪಿರ್ಯಾಧಿದಾರರ ಎದುರಿನಿಂದ ಬೈಕಿನಲ್ಲಿ ಬಂದು ಪಿರ್ಯಾಧಿದಾರ ಎದುರುಗಡೆ ಹತ್ತಿರಕ್ಕೆ ಬೈಕನ್ನು ಚಲಾಯಿಸಿಕೊಂಡು ಬಂದು ಮಾರಕಾಯುಧವಾದ ತಲವಾರಿನಿಂದ ಪಿರ್ಯಾಧಿದಾರರ ಬಳಿಗೆ ವೇಗವಾಗಿ ಬೀಸಿರುತ್ತಾರೆ ಇದರಿಂದ ಗಲಿಬಲಿಗೊಂಡು ಪಿರ್ಯಾಧಿದಾರರು ತಪ್ಪಿಸಿಕೊಂಡಿರುತ್ತಾರೆ, ಆಗ ನಿಯಂತ್ರಣ ತಪ್ಪಿ ಪಿರ್ಯಾಧಿದಾರರು ತನ್ನ ಬಾಬ್ತು ಬೈಕಿನ ಸಮೇತ ರಸ್ತೆಯ ಬದಿಯಲ್ಲಿ ಬಿದ್ದಿರುತ್ತಾರೆ. ಪಿರ್ಯಾಧಿದಾರರ ಮೇಲೆ ಹಲ್ಲೆ ಮಾಡಲು ಯತ್ನಿಸಿದವರು ನೀಲಿ ಬಣ್ಣದ ಬಜಾಜ್ ಪಲ್ಸರ್ ಬೈಕಿನಲ್ಲಿ ಬಂದಿರುವುದಾಗಿದೆ ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 48/2022 ಕಲಂ: 341, 352, 506 ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅಫಾನ್ ಅಬ್ದುಲ್ ರಹಿಮಾನ್ ಪ್ರಾಯ 34 ವರ್ಷ : ಅಬ್ದುಲ್ ರಹಿಮಾನ್ ವಾಸ: ರೆಡ್ ರೋಸ್ ಅಪಾರ್ಟೆ ಮೆಂಟ್, ತುಂಬೆ ಗ್ರಾಮ, ಬಂಟ್ವಾಳ ತಾಲೂಕು ರವರು ತುಂಬೆ ಗ್ರಾಮದ ರೆಡ್ ರೋಸ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ಪ್ಲಂಬಿಂಗ್ ಕೆಲಸ ಮಾಡುತ್ತಿದ್ದು ತಾನು ವಾಸವಾಗಿರುವ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಊರಿಗೆ ಹೋಗಿದ್ದಲ್ಲಿ ತಾನೇ ಸೆಕ್ಯೂರಿಟಿ ಕೆಲಸ ಮಾಡುತ್ತಿರುವುದಾಗಿದೆ, ದಿನಾಂಕ: 08.05.2022ರಿಂದ ಸದ್ರಿ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿಯವರು ಊರಿಗೆ ಹೋಗಿದ್ದರಿಂದ ಸದ್ರಿ ಅಪಾರ್ಟ್ ಮೆಂಟ್ ನ ಅಸೋಸಿಯೇಷನ್ ನ ತೀರ್ಮಾನದಂತೆ ಪಿರ್ಯಾದುದಾರರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ: 12.305.2022 ರಂದು ಸೆಕ್ಯೂರಿಟಿ ಗಾರ್ಡ್ ಕೆಲಸದಲ್ಲಿದ್ದಾಗ ರಾತ್ರಿ ಸುಮಾರು 9.40 ಗಂಟೆಗೆ ಅಪಾರ್ಟ್ ಮೆಂಟ್ ನ ಪಾರ್ಕ್ ಬಳಿ ಬೊಬ್ಬೆ ಹಾಕುವ ಶಬ್ದ ಕೇಳಿ ವಿಚಾರವೇನೆಂದು ಹತ್ತಿರ ಹೋಗಿ ನೋಡಲಾಗಿ ಪ್ಲಾಟ್ ನಂಬ್ರ: 133ರಲ್ಲಿ ವಾಸಿಸುವ ಮಹಮ್ಮದ್ ಸಾದಿಕ್ ಎಂಬವರ ಬಳಿ ಸುಮಾರು 5-6 ಮಂದಿ ಜೋರಾಗಿ ಮಾತನಾಡಿ ಗಲಾಟೆ ಮಾಡು ಮಹಮ್ಮದ್ ಸಾದಿಕ್ ರವರಿಗೆ ಬೈಯುತ್ತಿದ್ದುದನ್ನು ಕಂಡು ಪಿರ್ಯಾದಿದಾರರು ಇಲ್ಲಿ ಗಲಾಟೆ ಮಾಡಬೆಡಿ, ಹೊರಗೆ ಹೋಗಿ ಎಂದು ಹೇಳಿದ್ದು ಆ ಸಮಯ ಆರೋಪಿಗಳಾದ ಆಸೀಫ್ ಶರೀಫ್, ಆಸೀಪ್ ನ ಬಾವ ಸಾದಿಕ್, ಆಸೀಫ್ ನ ಅಕ್ಕ ನಸೀಮಾರ ಇಬ್ಬರು ಮಕ್ಕಳು ಮತ್ತು ಮುಸ್ತಾ @ ಮಿಚ್ಚಾರವರು ಪಿರ್ಯಾದುದಾರರ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು ಕಬ್ಬಿಣದ ರಾಡ್ ನಿಂದ ಎಡಕಣ್ಣು ಮತ್ತು ಕಿವಿಯ ಮದ್ಯಭಾಗಕ್ಕೆ ಹೊಡೆದುದಲ್ಲದೆ, ಆಸೀಫ್ ನ ಬಾವ ಸಾದಿಕ್ ಆತನ ಕೈಯಲ್ಲಿದ್ದ ಕಬ್ಬಿಣದ ಪಂಚ್ ರೀತಿಯ ವಸ್ತುವಿನಿಂದ ಎಡಕೈಗೆ, ಬೆನ್ನಿಗೆ ಹೊಡೆದು ರಕ್ತಗಾಯವನ್ನುಂಟುಮಾಡಿರುವುದಲ್ಲದೇ, ಮುಸ್ತಾ @ ಮಿಚ್ಚಾ ಮತ್ತು ಶರೀಫ್ ರವರು ಸೇರಿ ಪಿರ್ಯಾದುದಾರರ ಮರ್ಮಾಂಗದ ಬಳಿ ಕಾಲಿನಿಂದ ತುಳಿದಿರುತ್ತಾರೆ ಆಗ ಮಹಮ್ಮದ್ ಸಾದಿಕ್ ರವರು ಬಿಡಿಸಲು ಬಂದಾಗ ಅವರಿಗೆ ಆಸೀಫ್ ನು ರಾಡ್ ನಿಂದ ಹೊಡೆದಿದ್ದು ಆ ಸಮಯ ಬೊಬ್ಬೆ ಕೇಳಿ ಅಸೋಷಿಯೇಷನ್ ರವರು ಬರುತ್ತಿರುವುದನ್ನು ಕಂಡು ನೀವು ಈ ಬಗ್ಗೆ ದೂರು ನೀಡಿದಲ್ಲಿ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ: 33/2022 ಕಲಂ: 143, 147, 148, 504, 324, 323, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ
ಅಸ್ವಾಭಾವಿಕ ಮರಣ ಪ್ರಕರಣ: ೦2
ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಾಗವೇಣಿ ಪ್ರಾಯ 56 ವರ್ಷ ಗಂಡ: ದಿ ಸೇಸಪ್ಪ ಪೂಜಾರಿ ವಾಸ: ಉಮ ಶಿವ ಕ್ಷೇತ್ರದ ಎದುರು ಮನೆ ಗೋಳ್ತಮಜಲು ಗ್ರಾಮ ಬಂಟ್ವಾಳ ತಾಲೂಕು ರವರು ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಬೊಂಡಲದ ಕಾಪಿ ಕಾಡು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪಿರ್ಯಾಧಿದಾರರ ಮಗಳು ಮಲ್ಲಿಕಾ ಸುಮಾರು 10 ವರ್ಷದಿಂದ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಂಗಳೂರು ಹಾಗೂ ಪಳನೀರ ಕಡೆಗಳಲ್ಲಿ ಚಿಕಿತ್ಸೆ ಮಾಡಿಸುತ್ತಿರುವುದಾಗಿದೆ. ದಿನಾಂಕ 13-05-2022 ರಂದು ಪಾಣೆಮಂಗಳೂರು ಕೆಲಸಕ್ಕೆಂದು ಕಿರಿಯ ಮಗಳು ಹಾಗು ಪಿರ್ಯಾಧಿದಾರರು ಮನೆ ನಿರ್ಮಾಣ ನೋಡಿ ಬರಲು ಬೆಳಿಗ್ಗೆ 8.30 ಗಂಟೆಗೆ ಮನೆಯಿಂದ ಹೋಗಿರುತ್ತಾರೆ, ಮನೆಯಲ್ಲಿ ಮಲ್ಲಿಕಾ ಒಬ್ಬಳೆ ಇರುವುದಾಗಿದೆ. ನಂತರ ಸಮಯ 10.30 ಗಂಟೆಗೆ ಪಿರ್ಯಾಧಿದಾರರು ಮನೆಗೆ ಬಂದಾಗ ಮನೆಯಲ್ಲಿ ಮಲ್ಲಿಕಾ ಇಲ್ಲದಿದ್ದು, ಹುಡುಕಾಡಿದ ಬಳಿಕ ಬಾವಿ ಕಡೆ ನೋಡಿದಾಗ ಬಾವಿಯಲ್ಲಿ ಪಿರ್ಯಾಧಿದಾರರ ಮಗಳು ಮುಳುಗಿರುವುದು ಕಂಡು ಇತರರನ್ನು ಕರೆದಾಗ ಒಂದು ಬಿದಿರಿನ ಉದ್ದದ ಕೊಕ್ಕೆಯನ್ನು ಹಾಕಿದಾಗ ದೇಹ ಮೇಲೆ ಬಂದಿರುತ್ತದೆ. ಪಿರ್ಯಾಧಿದಾರರ ಮಗಳಿಗಿದ್ದ ಮಾನಸಿಕ ಅಸ್ವಸ್ಥೆಯಿಂದ ನೊಂದು ಸಾಯುವ ಉದ್ದೇಶದಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 20-2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸತೀಶ, ಪ್ರಾಯ: 32 ವರ್ಷ, ತಂದೆ: ದಿ| ಕೃಷ್ಣಪ್ಪ ನಾಯ್ಕ, ವಾಸ: ಮುಳ್ಯ ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ರವರ ತಾಯಿ ಶ್ರೀಮತಿ ಸುಂದರಿ, ಪ್ರಾಯ: 62 ವರ್ಷ ಎಂಬವರೊಂದಿಗೆ ತನ್ನ ಮನೆಯಾದ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮುಳ್ಯ ಎಂಬಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ: 13.05.2022 ರಂದು 9:00 ಗಂಟೆಗೆ ತನ್ನ ಬೈಕ್ ರಿಪೇರಿ ಮಾಡಿಸುವರೇ ಸುಳ್ಯ ಪೇಟೆಗೆ ಬಂದು 13:00 ಗಂಟೆಗೆ ವಾಪಾಸು ಮನೆಗೆ ಹೋದಾಗ ಮನೆಯಲ್ಲಿ ತಾಯಿ ಸುಂದರಿಯವರು ಕಾಣಿಸದೇ ಇದ್ದು, ನೆರೆಕರೆಗೆ ಹೋಗಿರಬಹುದೆಂದು ಪಿರ್ಯಾದಿದಾರರು ಭಾವಿಸಿ ಮನೆಯಲ್ಲಿ ಕಟ್ಟಿಗೆ ಕೆಲಸ ಮಾಡಿಕೊಂಡಿದ್ದು, 16:00 ಗಂಟೆಯಾದರೂ ಪಿರ್ಯಾದಿದಾರರ ತಾಯಿಯವರು ಮನೆಗೆ ಬಾರದೇ ಇದ್ದು, ಗೇರುಬೀಜ ಹೆಕ್ಕಲು ಮನೆ ಪಕ್ಕದ ಗುಡ್ಡೆಗೆ ತಾಯಿಯವರು ಹೋಗಿರಬಹುದೆಂದು ಅವರನ್ನು ಹುಡುಕಿಕೊಂಡು ಸುಮಾರು 16:30 ಗಂಟೆಗೆ ಪಿರ್ಯಾದಿದಾರರು ಗೇರು ಬೀಜದ ಗುಡ್ಡಕ್ಕೆ ಹೋದಾಗ ಪಿರ್ಯಾದಿದಾರರ ತಾಯಿ ಸುಂದರಿಯವರು ಗೇರುಮರದ ಗೆಲ್ಲಿಗೆ ಹಾಗೂ ಅವರ ಕುತ್ತಿಗೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರ ತಾಯಿ ಸುಂದರಿಯವರು ಸುಮಾರು 5 ವರ್ಷಗಳಿಂದ ಕ್ಯಾನ್ಸರ್ ಮತ್ತು ಕೆಮ್ಮು ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಮಾಡಿಸಿದರೂ ಗುಣಮುಖವಾಗದೇ ಇದ್ದುದರಿಂದ ಅದೇ ಕಾರಣದಿಂದ ಜೀವನದಲ್ಲಿ ಜಿಗುಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಸುಳ್ಯ ಠಾಣಾ ಪೊಲೀಸ್ ಠಾಣಾ ಯುಡಿಆರ್ ನಂಬ್ರ 20/2022 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.