ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅವಿನಾಶ್  (32), ತಂದೆ:ನಾಣ್ಯಪ್ಪ ಪೂಜಾರಿ, ವಾಸ: ಸುರುಳಿ ಮನೆ, ಬರೆಮೇಲು ಮನೆ, ನಾವೂರ ಗ್ರಾಮ, ಬೆಳ್ತಂಗಡಿ ತಾಲೂಕು ರವರು ದಿನಾಂಕ: 12-07-2021 ರಂದು ತನ್ನ ಬಾಬ್ತು ಕೆಎ 21 ಎಕ್ಸ್ 4668ನೇ ದ್ವಿ ಚಕ್ರ ವಾಹನದಲ್ಲಿ ಸಹ ಸವಾರ ವಿನಯ್ ರವ್ರನ್ನು ಕುಳ್ಳರಿಸಿಕೊಂಡು ಕೈಕಂಬ ಕಡೆಯಿಂದ ಕುದುರೆಮುಖ ಕಡೆಗೆ ಸವಾರಿಮಾಡಿಕೊಂಡು ಹೋಗುತ್ತಿರುವ ಸಮಯ ಬೆಳ್ತಂಗಡಿ ತಾಲೂಕು ನಾವೂರ ಗ್ರಾಮದ ಪರಾರಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಕುದುರೆಮುಖ ಕಡೆಯಿಂದ ಕೈಕಂಬ ಕಡೆಗೆ  ಕೆಎ 21 ಎ 3920 ನೇ ಆಟೋ ರಿಕ್ಷಾವನ್ನು ಅದರ ಸವಾರ ದುಡುಕುತನದಿಂದ ಚಲಾಯಿಸಿಕೊಂಡು  ಬಂದು  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದನು, ಪರಿಣಾಮ ದ್ವಿ ಚಕ್ರ  ಸವಾರ ಹಾಗೂ ಸಹಸವಾರ  ದ್ವಿ ಚಕ್ರ  ಸಮೇತಾ ರಸ್ತೆಗೆ ಬಿದ್ದು ದ್ವಿಚಕ್ರ ಸಹ ಸವಾರ ವಿನಯ್ ರವರ ಬಲಕಾಲಿನ ಪಾದ ಹಾಗೂ ತೋಡೆಗೆ ಗುದ್ದಿದ ಗಾಯವಾಗಿದ್ದು  ಗಾಯಳು ವಿನಯ್ ರವರು ಚಿಕಿತ್ಸೆ ಬಗ್ಗೆ ಮಂಗಳೂರು ಕೆ ಎಮ್ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 53/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀಮತಿ  ಸುಲೋಚನ ಪ್ರಾಯ 45 ವರ್ಷ ತಂದೆ: ಪ್ರಕಾಶ್ ಎಲ್ ವಾಸ: ವೆಂಕಟೇಶ್ವರ ನಗರ ಹುನ್ಸೆಬೈಲು ಗ್ರಾಮ ತನಿಗೆಬೈಲು ಪೋಸ್ಟ್ ತರಿಕೆರೆ ತಾಲೂಕು ಚಿಕ್ಕಮಂಗಳೂರು ಜಿಲ್ಲೆ ರವರು ದಿನಾಂಕ: 13.07.2021 ರಂದು ತನ್ನ ಮಗ ಭರತ್‌, ಗಂಡ: ಪ್ರಕಾಶ್‌ ಎಲ್‌, ಅತ್ತಿಗೆ ಗೌರಿ ಬಾಯಿ ಎಂಬವರೊಂದಿಗೆ ಮಂಗಳೂರಿನಲ್ಲಿರುವ ತನ್ನ ಮಗಳ ಮನೆಯಿಂದ  ವಾಪಾಸು ಊರಿಗೆ ಹೋಗುವರೇ ಮಾರುತಿ ಓಮಿನಿ ಕಾರು ನಂಬ್ರ  KA18P3857 ನೇದರಲ್ಲಿ ಮಂಗಳೂರು-ಕಡೂರು ಮಾರ್ಗವಾಗಿ ಪ್ರಯಾಣಿಸುತ್ತಿರುವಾಗ ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಕಾವಳಕಟ್ಟೆ ಎಂಬಲ್ಲಿಯ ತಿರುವು ರಸ್ತೆಯಲ್ಲಿ ಬರುತ್ತಿದ್ದಂತೆ ಎದುರಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಕಾರು KA19MJ8114 ನೇದನ್ನು ಅದರ ಚಾಲಕ ಮಹಮ್ಮದ್ ಅಕ್ಬರ್ ಎಂಬವರು ನಿರ್ಲಕ್ಷ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿದಾರರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಕಾರಿನ ಮುಂಬಾಗ ಭಾಗಶಃ ಜಖಂಗೊಂಡಿದ್ದಲ್ಲದೆ,  ಫಿರ್ಯಾಧಿದಾರರು ಪ್ರಯಾಣಿಸುತ್ತಿದ್ದ ಕಾರನ್ನು ಚಲಾಯಿಸುತ್ತಿದ್ದ ಫಿರ್ಯಾಧಿದಾರರ ಮಗ, ಕಾರಿನಲ್ಲಿದ್ದ ಫಿರ್ಯಾಧಿದಾರರ ಗಂಡ, ಅತ್ತಿಗೆಗೆ ರಕ್ತಗಾಯವಾಗಿದ್ದು, ಗಾಯಗೊಂಡವರನ್ನು ಸ್ಥಳೀಯರು ಉಪಚರಿಸಿ ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪಿರ್ಯಾಧಿದಾರರಿಗೆ ಬಲ ಕಾಲಿಗೆ ಗುದ್ದಿದ ಗಾಯವಾಗಿರುವುದರಿಂದ ಯಾವುದೇ ಚಿಕಿತ್ಸೆಯನ್ನು ಪಡದುಕೊಂಡಿರುವುದಿಲ್ಲ ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 43/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರಶಾಂತ (35) ತಂದೆ:ದಿ/ ಅಪ್ಪು ಆಚಾರ್ಯ  ವಾಸ:  ಮಜಲಡ್ಡ ಮನೆ,  ಸಾವ್ಯ  ಗ್ರಾಮ  ಬೆಳ್ತಂಗಡಿ  ತಾಲೂಕು ರವರು ದಿನಾಂಕ: 12.07.2021 ರಂದು ತನ್ನ ಬಾಬ್ತು  KA 21 Q 9951 ನೇ ದ್ವಿಚಕ್ರ ವಾಹನದಲ್ಲಿ ಅಣ್ಣು ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಸಾವ್ಯದಿಂದ ಗುರುವಾಯನಕೆರೆ ಕಡೆಗೆ ಹೊರಟು  ವಾಹನವನ್ನು ಚಲಾಯಿಸಿಕೊಂಡು ಬರುತ್ತಾ ಬೆಳ್ತಂಗಡಿ ತಾಲೂಕು ಬಡಗಕಾರಂದೂರು ಗ್ರಾಮದ ಅಳದಂಗಡಿ ಪೇಟೆಯ ಜಂಕ್ಷನ್ ತಲುಪುವಾಗ ತನ್ನ ಎದುರಿನಿಂದ ಅಂದರೆ  ಗುರುವಾಯನಕೆರೆ ಕಡೆಯಿಂದ ಭಾಗ್ಯಶ್ರೀ ಎಂಬವರು  KA 21 S 9624 ನೇ ದ್ವಿಚಕ್ರ ವಾಹನವನ್ನು ಚಾಲಾಯಿಸಿಕೊಂಡು ಬಂದು, ಯಾವುದೇ ಸೂಚನೆ ನೀಡದೆ ಒಮ್ಮಲೆ ವೇಗವಾಗಿ ನಿರ್ಲಕ್ಷ ತನದಿಂದ ರಸ್ತೆಯ ಬಲ ಭಾಗಕ್ಕೆ ತಿರುಗಿಸಿ ಚಲಾಯಿಸಿ ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿರುವುರಿಂದ ಪಿರ್ಯಾದಿದಾರರಿಗೆ ತಲೆಯ ಎಡಭಾಗಕ್ಕೆ, ಮತ್ತು ತುಟಿಗೆ ರಕ್ತದ ಗಾಯವಾಗಿರುತ್ತದೆ. ಅಲ್ಲದೇ ಡಿಕ್ಕಿ ಹೊಡೆದ ದ್ವಿಚಕ್ರ ವಾಹನದ ಚಾಲಕಿ ಭಾಗ್ಯಶ್ರೀ ಎಂಬವರಿಗೆ ಕೂಡಾ ತರಚಿದಂತೆ ಗಾಯವಾಗಿರುತ್ತದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 48-2021 ಕಲಂ: 279,337 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರತ್ನಾಕರ  (55) ತಂದೆ: ದಿ ಅಣ್ಣಿ ಪೂಜಾರಿ ವಾಸ: ಆರೋದ್ದು ಮನೆ, ಕೊಕ್ರಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ರವರ ಮಗ ರಕ್ಷಿತ್ ಎಂಬವನು ಎಸ್ ಡಿ ಎಂ ಕಾಲೇಜು ಉಜಿರೆಯಲ್ಲಿ ಅಂತಿಮ ವರ್ಷದ ಬಿ ಕಾಂ ವ್ಯಾಸಂಗ ಮಾಡುತ್ತಿದ್ದು ಪ್ರಸ್ತುತ ಕೊರೋನಾ ಹಿನ್ನೆಲೆಯಲ್ಲಿ ತರಗತಿಗಳು ಇಲ್ಲದೇ ಆನ್ ಲೈನ್ ಮೂಲಕ ವಿದ್ಯಾಬ್ಯಾಸ ಮಾಡುತ್ತಾ ಮನೆಯಲ್ಲಿದ್ದು, ದಿನಾಂಕ 13-07-2021 ರಂದು ಆನ್ ಲೈನ್ ಕ್ಲಾಸ್ ಇರುವುದಾಗಿ ಹೇಳಿ ಆತನ ಮೊಬೈಲ್ ಸೆಟ್ ನೊಂದಿಗೆ ಮನೆಯ ಕೋಣೆಯೊಂದಕ್ಕೆ ಹೋಗಿದ್ದು ಮನೆ ಮಂದಿಯೆಲ್ಲಾ ಕೃಷಿ ಕೆಲಸ ಮತ್ತು ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರು ಮದ್ಯಾಹ್ನ 1-00 ಗಂಟೆಗೆ ಆತನನ್ನು ಆತನ ತಾಯಿ ರತ್ನ  ಕರೆಯಲು ಹೋದಾಗ ಬಾಗಿಲ ಚಿಲಕ ಒಳಗಿನಿಂದ ಹಾಕಿಕೊಂಡಿದ್ದು ಆತನ ಮೊಬೈಲ್ ಗೆ ಕರೆ ಮಾಡಿದಾಗ ಸ್ವೀಚ್ ಆಪ್ ಬಂದಿದ್ದು ಎಲ್ಲರೂ ಸೇರಿ ತಕ್ಷಣ ಕೋಣೆಯ ಕಿಟಕಿಯ ಗ್ಲಾಸನ್ನು ಒಡೆದು ನೋಡಿದಾಗ ರೂಮ್ ಗೆ ಸ್ಲಾಪ್ ಗೆ ಅಳವಡಿಸಿದ್ದ 2 ಹುಕ್ಸ್ ನಲ್ಲಿ ಇದ್ದ ಹಗ್ಗದ ಮದ್ಯೆ ಸೀರೆಯನ್ನು ಕಟ್ಟಿ ಈ ಸೀರೆಗೆ ಮತ್ತು ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದು ತಕ್ಷಣ ನೇಣಿನಿಂದ ಕೆಳಗಿಳಿಸಿ ನಾರಾವಿ ಆಸ್ಪತ್ರಗೆ ಕರೆದುಕೊಂಡು ಬಂದಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ  ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ಪರೀಕ್ಷಿಸಿದ  ವೈದ್ಯರು ಮೃತಪಟ್ಟ ಬಗ್ಗೆ ತಿಳಿಸಿರುತ್ತಾರೆ. ರಕ್ಷಿತ್ ನು  ಯಾವುದೋ ವೈಯುಕ್ತಿಕ ವಿಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 18-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 14-07-2021 11:15 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080